ಕನ್ನಡದಲ್ಲಿ ಮತ್ತೊಂದು ಭರವಸೆ ಸಿನಿಮಾ (Agnyathavasi Teaser Release) ತಯಾರಾಗಿದೆ. ಈ ಚಿತ್ರಕ್ಕೆ ಹೆಸರು ಕೂಡ ವಿಶೇಷವಾಗಿಯೇ ಇಡಲಾಗಿದೆ. ಗುಳ್ಟುದಂತಹ ಚಿತ್ರಕೊಟ್ಟ ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕವಲುದಾರಿ (Promising Teaser Release) ಚಿತ್ರ ಕೊಟ್ಟ ಡೈರೆಕ್ಟರ್ ಹೇಮಂತ್ ಈ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಹೀಗೆ ಹಲವು ವಿಶೇಷತೆಗಳ ಈ ಚಿತ್ರಕ್ಕೆ ಅಜ್ಞಾತವಾಸಿ ಅನ್ನೋ ಹೆಸರಿಟ್ಟಿದ್ದಾರೆ. ಚಿತ್ರದ ಟೀಸರ್ ಅನ್ನ (Agnyathavasi Movie) ಕೂಡ ಸ್ಪೆಷಲ್ ಆಗಿಯೆ ಸಿನಿಮಾ ತಂಡ ರಿಲೀಸ್ (Agnyathavasi Movie Teaser) ಮಾಡಿದೆ. ಈ ಎಲ್ಲ ವಿಶೇಷತೆಗಳ ಒಂದು ಸ್ಟೋರಿ ಇಲ್ಲಿದೆ ಓದಿ.
ಟೀಸರ್ ರಿಲೀಸ್‌ಲ್ಲೂ ಹೊಸತನ ತೋರಿದ ಟೀಮ್
ಕನ್ನಡದ ಅಜ್ಞಾತವಾಸಿ ಸಿನಿಮಾ ಹೊಸ ಭರವಸೆ ಮೂಡಿಸಿದೆ. ಟೀಸರ್ ಮೂಲಕವೇ ಸಿನಿಮಾದ ಝಲಕ್ ಈಗ ಸಿಕ್ಕಿದೆ. ಚಿತ್ರ ತಂಡವೂ ಈ ಒಂದು ಟೀಸರ್ ಅನ್ನ ಸುಮ್ನೆ ರಿಲೀಸ್ ಮಾಡಿಲ್ಲ. ಸ್ಪೆಷಲ್ ಆಗಿಯೇ ರಿಲೀಸ್ ಮಾಡಿ ಗಮನ ಸೆಳೆದಿದೆ.
ಚಿತ್ರದ ಟೀಸರ್ ಲಿಂಕ್ ಅನ್ನ ಎಲ್ಲರಿಗೂ ಏಕಕಾಲಕ್ಕೆ ವಾಟ್ಸ್ ಅಪ್ ಮೂಲಕ ಕಳಿಸಿದೆ. ಹಾಗೆ ಈ ಟೀಸರ್ ಈಗ ರಿಲೀಸ್ ಆಗಿದೆ. ಚಿತ್ರದ ಟೀಸರ್ ಅನ್ನ ನಾವು ಹೇಗೆ ರಿಲೀಸ್ ಮಾಡಿದ್ದೇವೆ ಅನ್ನೋದನ್ನ ಕೂಡ ಹೇಳಲು ಇಡೀ ಟೀಮ್ ಒಂದು ವಿಡಿಯೋ ಮಾಡಿ ಗಮನ ಸೆಳೆದಿದೆ.
ಅಜ್ಞಾತವಾಸಿ ಸಿನಿಮಾದಲ್ಲಿ ಮರ್ಡರ್ ಮಿಸ್ಟರಿ ಕಥೆ
ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ತಮ್ಮ ಈ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟರಿ ಕಥೆ ಹೇಳುತ್ತಿದ್ದಾರೆ. ನಟ ಸಿದ್ದು ಮೂಲಿಮನಿ ಈ ಚಿತ್ರದಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ರಂಗಾಯಣ ರಘು ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿಯೇ ಅಭಿನಯಿಸಿದ್ದಾರೆ.
ಈ ಮೂಲಕ ರಂಗಾಯಣ ರಘು ಅವರು ತಮ್ಮ ಸಿನಿ ಜರ್ನಿಯಲ್ಲಿ ಅಜ್ಞಾತವಾಸಿ ಅನ್ನೋ ಈ ಒಂದು ಸ್ಪೆಷಲ್ ಸಿನಿಮಾ ಮಾಡಿ ತುಂಬಾನೇ ಖುಷಿಪಟ್ಟಿದ್ದಾರೆ. ಅಜ್ಞಾತವಾಸಿ ಚಿತ್ರದಲ್ಲಿ ಸಾಕಷ್ಟು ಥ್ರಿಲ್ ಇದ್ದಂತೆ ಕಾಣುತ್ತದೆ. ಅದನ್ನ ಕಲಾವಿದರು ಇಲ್ಲಿ ಸಹಜವಾಗಿಯೇ ಅಭಿನಯಿಸಿದ್ದಾರೆ.
ಸರಳ ಸಹಜ-ಅಜ್ಞಾತವಾಸಿ ಸಿನಿಮಾ ಟೀಸರ್ ರಿಲೀಸ್
ಚಿತ್ರದಲ್ಲಿ ಎಲ್ಲೂ ಗ್ಲಾಮರ್ ಟಚ್ ಇದ್ದಂತೇ ಕಾಣೋದೇ ಇಲ್ಲ. ಇಡೀ ಸಿನಿಮಾ ಸಹಜವಾಗಿಯೇ ಕಣ್ಮುಂದೆ ಸಾಗೋ ರೀತಿಯಲ್ಲಿಯೇ ಇದೆ. ಹಾಗಂತ ಟೀಸರ್ ಚಿತ್ರದ ಝಲಕ್ ಅನ್ನ ಕೊಟ್ಟು ಹೊಸ ಭರವಸೆಯನ್ನ ಮೂಡಿಸುತ್ತಿದೆ.
ಅಜ್ಞಾತವಾಸಿ ಸಿನಿಮಾದಲ್ಲಿ ಏನೋ ಹೊಸ ವಿಚಾರವನ್ನ ಹೇಳಾಗಿದೆ ಅಂತಲೂ ಒಂದೊಮ್ಮೆ ಅನಿಸುತ್ತದೆ. ಮರ್ಡರ್ ಮಿಸ್ಟರಿ ಕಥೆಯಲ್ಲಿ ಹೊಸದೇನೊ ಇರುತ್ತದೆ ಅಂತಲೂ ಅನಿಸಬಹುದು. ಆದರೆ ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ ಈ ಚಿತ್ರದ ಕಥೆಯನ್ನ ನೈಜವಾಗಿಯೇ ತೋರಿದಂತೆ ಕಾಣುತ್ತಿದೆ.
ಅಜ್ಞಾತವಾಸಿ ಸಿನಿಮಾ ಹಿಂದಿನ ಶಕ್ತಿ ಇವರೇ ನೋಡಿ
ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಕೂಡ ಇಲ್ಲಿ ವಿಶೇಷಾಗಿಯೇ ಕಾಣಿಸುತ್ತದೆ. ಚರಣ್ ರಾಜ್ ಸಂಗೀತದ ಈ ಚಿತ್ರದಲ್ಲಿ ಸ್ಟಾರ್ ಕಾಸ್ಟ್ ಕೂಡ ಜಬರ್‌ದಸ್ತ್ ಆಗಿಯೇ ಇದೆ. ರಂಗಾಯಣ ರಘು, ಪಾವನಾ ಗೌಡ, ರವಿಶಂಕರ್ ಗೌಡ, ಶರತ್ ಲೋಹಿತಾಶ್ವ ಹಾಗೂ ಸಿದ್ದು ಮೂಲಿಮನಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸದ್ಯಕ್ಕೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ನೋಡಿದವ್ರು, ಸಿನಿಮಾದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮತ್ತು ನಿರ್ಮಾಪಕ ಹೇಮಂತ್ ರಾವ್ ಅವರ ಹೆಸರಿದೆ ಅಂದ್ಮೇಲೆ ಚಿತ್ರ ಸೂಪರ್ ಆಗಿರುತ್ತದೆ ಅನ್ನೋದನ್ನ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Komal Movie: ಕೋಮಲ್‌ಗೆ ಉಂಡೆನಾಮ ಹಾಕಿರೋದ್ಯಾರು? ಟ್ರೈಲರ್‌ನಲ್ಲಿ ರಿವೀಲ್ ಆಗಿದ್ದೇನು?
ಒಟ್ಟಾರೆ, ಅಜ್ಞಾತವಾಸಿ ಸಿನಿಮಾ ಕನ್ನಡದ ಹೊಸ ಭರವಸೆ ಸಿನಿಮಾ ಆಗುವ ಲಕ್ಷಣವನ್ನ ಈಗ ಬಿಟ್ಟುಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ