ಕನ್ನಡ ಕಿರುತೆರೆಯ ಖ್ಯಾತ ನಟಿ ಮತ್ತು ಕನ್ನಡ ಬಿಗ್ ಬಾಸ್ 8ರ (Bigg Boss) ಸ್ಪರ್ಧಿ ವೈಷ್ಣವಿ ಗೌಡ ಅವರು ಸಾಮನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯವಾಗಿರುತ್ತಾರೆ. ಅಲ್ಲದೇ ತಮ್ಮ ಫೋಟೋ (Photo) ಹಾಗೂ ಯೋಗದ ಕುರಿತ ಅನೇಕ ವಿಡಿಯೋಗಳನ್ನೂ (Video) ಹಂಚಿಕ್ಕೊಳ್ಳುತ್ತಿರುತ್ತಾರೆ. ಸದ್ಯ ಅವರು ತಮ್ಮ ಕನಸಿನ ಮನೆಯ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗಿದೆ. ಹೌದು, ವೈಷ್ಣವಿ ಗೌಡ ಅವರು ಬೆಂಗಳೂರಿನಲ್ಲಿ ತಮ್ಮ ಕನಸಿನ ಮನೆಯನ್ನು ಖರೀಧಿಸಿದ್ದಾರೆ. ಈ ಮನೆಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಮೇ 8 ರಂದು ವೈಷ್ಣವಿ ಗೌಡ (Vaishnavi Gowda) ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭವು ಸಾಂಪ್ರಧಾಯಿಕವಾಗಿ ನೆರವೇರಿದೆ. ಅಲ್ಲದೇ ವೈಷ್ಣವಿ ಅವರ ಮನೆ ಗೃಹಪ್ರವೇಶಕ್ಕೆ ಬಿಗ್ ಬಾಸ್ ಸೀಸನ್ 8ರ ಎಲ್ಲಾ ಸ್ಪರ್ಧಿಗಳು ಕೂಡ ಪಾಲ್ಗೊಂಡಿದ್ದರು. ಈ ವೇಳೆ ನಟಿ ವೈಷ್ಣವಿ ರೇಷ್ಮೆ ಸೀರೆಯುಟ್ಟು ಟ್ರೆಡಿಶನಲ್ ಲುಕ್ನಲ್ಲಿ ಸಖತ್ ಆಗಿ ಮಿಂಚಿದ್ದಾರೆ.
ಹೊಸ ಮನೆಗೆ ಬಂದ ದೊಡ್ಮನೆ ಮಂದಿ:
ಇನ್ನು, ನಟಿ ವೈಷ್ಣವಿ ಗೌಡ ಅವರ ಮನೆ ಗೃಹ ಪ್ರವೇಶಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 8ರ ಎಲ್ಲಾ ಸ್ಪರ್ಧಿಗಳು ಸಹ ಪಾಲ್ಗೊಂಡಿದ್ದರು. ಸೀಮಿತ ಆಪ್ತರನ್ನು ಮಾತ್ರ ಆಹ್ವಾನಿಸಿದ್ದ ವೈಷ್ಣವಿ, ತಮ್ಮ ಸೋಶಿಯಲ್ ಮಿಡಿಯಾ (Social media) ಇನ್ಸ್ಟಾಗ್ರಾಮ್ನಲ್ಲಿ ದೊಡ್ಮನೆ ಮಂದಿಯೊಂದಿಗಿನ ಪೋಟೋ ವನ್ನು ಹಂಚಿಕೊಂಡಿದ್ದರು. ನಟ ರಾಜೀವ್, ದಿವ್ಯ ಉರುಡುಗ, ಅರವಿಂದ್ ಕೆಪಿ, ರಘು, ಪ್ರಶಾಂತ್ ಸಂಬರಗಿ ಸೇರಿದಂತೆ ಹಲವರು ಮಂದಿ ಪಾಲ್ಗೊಳ್ಳುವ ಮೂಲಕ ವೈಷ್ಣವಿ ಅವರಿಗೆ ಶುಭ ಹಾರೈಸಿದರು. ಅಲ್ಲದೇ ನಟ ವಿಜಯ್ ಸೂರ್ಯ ಅವರು ಕೂಡ ವೈಷ್ಣವಿ ಗೌಡ ಅವರ ಮನೆಯ ಗೃಹ ಪ್ರವೆಶಕ್ಕೆ ಆಗಮಿಸಿ ಶುಭಾಷಯ ತಿಳಸಿದ್ದಾರೆ.
ವೈಷ್ಣವಿಗೆ ಶುಭ ಕೋರಿದ ಬಿಗ್ ಬಾಸ್ ಸರ್ಧಿಗಳು:
ಇನ್ನು, ವೈಷ್ಣವಿ ಗೌಡ ಅವರ ಮನೆ ಪ್ರವೇಶದ ಸಮಾರಂಭಕ್ಕೆ ಆಗಮಿಸಿದ್ದ ಬಿಗ್ ಬಾಸ್ ಸೀಸನ್ 8ರ ಸರ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ವೈಷ್ಣವಿ ಅವರಿಗೆ ಅಭಿನಂದನೆಗಳು. ಗೃಹ ಪ್ರವೇಶ ಸಮಾರಂಭ ಅದ್ಭುತವಾಗಿತ್ತು. ನಿಮ್ಮ ಇಡೀ ಕುಟುಂಬಕ್ಕೆ ನನ್ನ ಶುಭಾಶಯಗಳು. ಅನೇಕ ದಿನಗಳ ಬಳಿಕ ಸ್ನೇಹಿತರನ್ನು ಭೇಟಿ ಮಾಡಿದ್ದು ಖುಷಿಯಾಯಿತು ಎಂದು ನಟ ರಾಜೀವ್ ಇನ್ಸ್ಟಾಗ್ರಾಂ ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಶುಭ ಹಾರಯಸಿದ್ದಾರೆ.
ಇದನ್ನೂ ಓದಿ: Lock Upp Winner: ಎಲ್ರನ್ನೂ ಕಾಮಿಡಿ ಮಾಡಿ ನಗಿಸ್ತಾ ಇದ್ದವನು ಕೋಟಿ ಕೋಟಿ ಗಣ ಗೆದ್ದ ಇಂಟರೆಸ್ಟಿಂಗ್ ಕತೆ ಇದು!
ಇದಲ್ಲದೇ ರಘು ವೈನ್ ಸ್ಟೋರ್ ಅವರು ನಾವೆಲ್ಲರೂ ಆಗಾಗ ಭೇಟಿಯಾಗುತ್ತಿರಬೇಕು. ಮುಂದೆ ಇನ್ನೊಂದು ಫಂಕ್ಷನ್ಗೆ ಕಾಯಬೇಕು ಅನ್ಸುತ್ತೆ ಎಂದು ಬರೆಯುವ ಮೂಲಕ ವಿರ್ಶ ಮಾಡಿದ್ದಾರೆ. ಅಲ್ಲದೇ ಅನೇಕ ಅಭಿಮಾನಿಗಳು ಸಹ ಅವರಿಗೆ ವಿಶ್ ಮಾಡುತ್ತಿದ್ದಾರೆ.
ಕಿರುತೆರೆ ನಟ -ನಟಿಯರು:
ಇನ್ನು, ಕೇವಲ ದೊಡ್ಮನೆ ಮಂದಿ ಅಲ್ಲದೇ, ಕಿರುತೆರೆಯ ನಟಿ - ನಟಿಯರೂ ಸಹ ಈ ವೇಳೆ ಹಾಜರಿದ್ದರು. ಕನ್ನಡತಿ ಸೀರಿಯಲ್ ನ ಖ್ಯಾತ ನಟಿ ಚಿತ್ಕಳಾ ಬಿರಾದಾರ, ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್ ಸೂರ್ಯ, ನಟಿ ಕಾವ್ಯಾ ಶಾ ಸೇರಿದಂತೆ ಅನೇಲ ನಟ- ನಟಿಯರು ಕೂಡ ಹಾಜರಾಗಿದ್ದರು.
ಇದನ್ನೂ ಓದಿ: Doresani: ಕುತೂಹಲ ಘಟ್ಟ ತಲುಪಿದ ದೊರೆಸಾನಿ ಸೀರಿಯಲ್, ನಡೆಯುತ್ತಾ ಆನಂದ್ - ದೀಪಿಕಾ ಮದುವೆ?
ಕಿರುತೆರೆಯಿಂದ ಪರಿಚಿತರಾದ ವೈಷ್ಣವಿ:
ನಟಿ ವೈಷ್ಣವಿ ಗೌಡ ಅವರು ಕಿರುತೆರೆಯಿಂದ ಕನ್ನಡಿಗರಿಗೆ ಹೆಚ್ಚು ಪರಿಚಿತರಾದವರು. ಇವರ ಮತ್ತು ನಟ ವಿಜಯ್ ಸೂರ್ಯ ಕಾಂಬಿನೇಷನ್ ನ ಅಗ್ನಿಸಾಕ್ಷಿ ಸೀರಿಯಲ್ ಸೂಪರ್ ಹಿಟ್ ಆಗಿತ್ತು. ಈ ಜೋಡಿಯನ್ನು ನೋಡಿದ ಅದೆಷ್ಟೋ ಮಂದಿ ರೀಲ್ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ನಲ್ಲೂ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದಲ್ಲದೇ ನಂತರದಲ್ಲಿ ಕನ್ನಡದ ಬಿಗ್ ಬಾಸ್ 8ರಲ್ಲಿ ಸರ್ಧಿಸುವ ಮೂಲಕ ಮತ್ತೆ ಹೆಚ್ಚು ಮನೆಮಾತಾದರು. ಇದಲ್ಲದೇ ಬಿಗ್ ಬಾಸ್ ನಲ್ಲಿ ಮೂರನೇ ರನ್ನರ್ ಅಪ್ ಸ್ಥಾನವನ್ನೂ ಸಹ ಪಡೆದರು. ವೈಷ್ಣವಿ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಾರೆ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ