ಬೆಳ್ಳಿ ತೆರೆಯ ಬಂಗಾರದ ಕಥೆಗಳು (Kannada Films UnKnown Fact) ನಿಜಕ್ಕೂ ಸೂಪರ್. ಪ್ರತಿ ಚಿತ್ರದ ಹಿಂದೆ ಒಂದೊಂದು ಕಥೆ ಇರುತ್ತವೆ. ಪ್ರತಿ ಕಲಾವಿದನ ಹಿಂದೇನೂ ಒಂದು ಇಂಟ್ರಸ್ಟಿಂಗ್ ವಿಷಯ ಇರೋದು ಗ್ಯಾರಂಟಿ. ಆದರೂ ಲಕ್ (Vinaya Prasad Unknown Facts) ಇರಬೇಕು ಅನ್ನೋದು ಅಷ್ಟೇ ಸತ್ಯ. ಆದರೆ ನಾಯಕಿಯರು ಅಂತ ಬಂದ್ರೆ ಅವರು ಮದುವೆ ಆಗದೇ ಇದ್ರೇನೆ ಅವರಿಗೆ (Kannada Actress Vinaya Prasad) ಅವಕಾಶ ಅನ್ನೋ ಕಾಲ ಆಗಿನಿಂದಲೂ ಇದೆ, ಈಗಲೂ ಇದೆ. ಆದರೆ ಈ ವಿಷಯದಲ್ಲಿ ಕನ್ನಡದ (Vinaya Prasad Film Journey) ನಟಿಯೊಬ್ಬರು ಮದುವೆ ಆಗಿ, ಮಗು ಆದ್ಮೇಲೆನೆ ಹೀರೋಯಿನ್ ಆಗಿದ್ದಾರೆ. ಇದು ನಿಜಕ್ಕೂ ಇಂಟ್ರಸ್ಟಿಂಗ್ ಮ್ಯಾಟರ್ ಅಲ್ವೇ? ಈ ವಿಷಯದ ಸುತ್ತವೇ ಒಂದಷ್ಟು ಮಾಹಿತಿ ಇದೆ.
ನಾಯಕರ ಲೆಕ್ಕ ಬೇರೆ-ನಾಯಕಿಯರ ಲೆಕ್ಕವೇ ಬೇರೆ
ಸಿನಿಮಾರಂಗವೇ ಹಾಗೆ. ಇಲ್ಲಿ ಮದುವೆ ಆದ ನಟಿಗೆ ಚಾನ್ಸ್ ಕಡಿಮೆ. ಮದುವೆ ಆಗದೇ ಹೀರೋಯಿನ್ ಆಗಿ ಮಿಂಚಿದವ್ರೇ ಹೆಚ್ಚು. ಒಂದು ವೇಳೆ ಟಾಪ್ ಅಲ್ಲಿದ್ದ ನಟಿಯರು ಮದುವೆ ಆದ್ರೋ ಅಲ್ಲಿಗೆ ಮುಗಿತು ನೋಡಿ. ಡೌನ್ ಫಾಲ್ ಶುರು.
ಹೌದು, ಯಾವುದೇ ಚಿತ್ರರಂಗವಿದ್ದರೂ ಸರಿಯೇ. ಒಮ್ಮೆ ನಾಯಕಿ ಮದ್ವೆ ಆದ್ರೋ ಅವರಿಗೆ ಅವಕಾಶಗಳೇ ಸಿಗೋದಿಲ್ಲ. ಪ್ರತಿಭೆ ಇದ್ದರೂ ಸರಿಯೇ, ಏನೂ ವರ್ಕ್ ಆಗೋದಿಲ್ಲ. ಮತ್ತೊಮ್ಮೆ ಚಾನ್ಸ್ ಸಿಗೋದೇ ಕಡಿಮೆ. ಮದುವೆ ಆಗಿ ವಾಪಸ್ ಬಂದ್ರೂ ಹೀರೋಯಿನ್ ಆಗೋಕೆ ಆಗೋದಿಲ್ಲ.
ಮದ್ವೆ ಆಗಿ ವಾಪಸ್ ಬಂದ ನಾಯಕಿಗೆ ಬೇಡಿಕೆ ಕಡಿಮೆ
ಪೀಕ್ ಅಲ್ಲಿರೋ ಟಾಪ್ ಹೀರೋಯಿನ್ ಮದ್ವೆ ಆದ್ರೆ ಮುಗಿತು ನೋಡಿ. ಅವರಿಗೆ ಆ ಹೀರೋಯಿನ್ ಪಟ್ಟ ಕಳೆದೆ ಹೋಗುತ್ತದೆ. ವಾಪಸ್ ಬಂದ್ರೂ ಪೋಷಕ ಪಾತ್ರಕ್ಕೇನೆ ಸೀಮಿತ ಆಗ್ಬೇಕು. ಆ ಮಟ್ಟಿಗೆ ಇಲ್ಲಿ ಆ ವ್ಯವಸ್ಥೆ ಇದೆ.
ಇದಕ್ಕೆ ಏನೇನೋ ಕಾರಣಗಳು ಇವೆ. ಗ್ಲಾಮರ್ ಕಡಿಮೆ ಆಗುತ್ತದೆ ಅದೇನೋ ವಿಚಿತ್ರ ನಂಬಿಕೆ ಇದೆ. ಮದುವೆ ಅನ್ನೋದು ನಮ್ಮಲ್ಲಿ ಒಂದು ಅತಿ ದೊಡ್ಡ ಗೌರವ ಅನ್ನೋದು ಅಷ್ಟೇ ಸತ್ಯ.
ಅದಕ್ಕೋ ಏನೋ, ಮದುವೆ ಆಗಿ ಬಂದ ನಟಿಯನ್ನ ಯಾರೂ ನೋಡಲ್ಲ ಅನ್ನೋ ಲೆಕ್ಕಾಚಾರವೋ ಏನೋ, ಗೊತ್ತಿಲ್ಲ. ನಾಯಕಿ ನಟಿಗೆ ಮತ್ತೆ ಆ ಪಟ್ಟ ಸಿಗೋದೇ ಇಲ್ಲ.
ಕನ್ನಡದ ಒಂದು ಕಾಲದ ನಾಯಕಿ ನಟಿಯ ಕಥೆ ಡಿಫರಂಟ್
ನಾಯಕಿ ನಟಿ ವಿನಯ ಪ್ರಸಾದ್ ಯಾರಿಗೆ ಗೊತ್ತಿಲ್ಲ ಹೇಳಿ. ಈಗಲೂ ಇವರು ಚಾರ್ಮಿಂಗ್ ಆಗಿಯೇ ಇದ್ದಾರೆ. ಇವರ ಮಗಳು ಕೂಡ ಈಗ ಸೀರಿಯಲ್ ನಲ್ಲಿ ಹೆಸರು ಮಾಡಿದ್ದಾರೆ. ವಿನಯ ಪ್ರಸಾದ್ ಅವರು ಕೂಡ ಸೀರಿಯಲ್ ನಲ್ಲೂ ನಟಿಸುತ್ತಾರೆ.
ವಿನಯ ಪ್ರಸಾದ್ ಅವರಿಗೆ ಈಗಲೂ ಒಂದು ಬೇಡಿಕೆ ಇದ್ದೇ ಇದೆ. ಆದರೆ ಇವರ ಆರಂಭದ ದಿನಗಳಲ್ಲೂ ಇವರು ನಿಜಕ್ಕೂ ಲಕ್ಕಿ ನಟಿನೇ ಆಗಿದ್ದಾರೆ. ಇದನ್ನ ಇವರು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲೂ ಹೇಳಿಕೊಂಡಿದ್ದಾರೆ.
ವಿನಯ ಪ್ರಸಾದ್ ಮದ್ವೆ-ಮಗು ಆದ್ಮೇಲೆ ಹೀರೋಯಿನ್
ವಿನಯ ಪ್ರಸಾದ್ ಮದ್ವೆ ಆಗಿ ಮಗು ಆದ್ಮೇಲೆ ಹೀರೋಯಿನ್ ಆಗಿದ್ದಾರೆ. ಡೈರೆಕ್ಟರ್ ಫಣಿ ರಾಮಚಂದ್ರ ಅವರ ಗಣೇಶನ ಮದ್ವೆ ಮೂಲಕ ಹೀರೋಯಿನ್ ಆಗಿದ್ದಾರೆ. ಅನಂತ್ ನಾಗ್ ಅವರ ಜೊತೆಗೆ ಹೀರೋಯಿನ್ ಆಗಿ ನಟಿಸಿದ್ದಾರೆ.
ಈ ಚಿತ್ರದ ನಾಯಕಿ ಆಗೋ ಹೊತ್ತಿಗೆ ವಿನಯ ಪ್ರಸಾದ್ ಅವರಿಗೆ ಮದುವೆ ಆಗಿತ್ತು. ಮಗು ಕೂಡ ಆಗಿತ್ತು. ಆದರೆ ಅದನ್ನ ಲೆಕ್ಕಿಸದೇನೇ, ಫಣಿ ರಾಮಚಂದ್ರ ಅವರು ತಮ್ಮ ಚಿತ್ರಕ್ಕೆ ಇವರನ್ನ ಹಾಕಿಕೊಂಡಿದ್ದರು.
ಸಿನಿಮಾ ಕೂಡ ಹಿಟ್ ಆಯಿತು. ಈ ಮೂಲಕ ಸೂಪರ್ ಹಿಟ್ ಚಿತ್ರ ಕೊಟ್ಟ ವಿನಯ ಪ್ರಸಾದ್ ಅವರು ಮುಂದೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿಯೇ ಮಿಂಚಿದರು. ಮಿನುಗಿದರು.
ಇದನ್ನೂ ಓದಿ: Yuva Rajkumar: ಯುವ ರಾಜ್ಕುಮಾರ್ ಮೊದಲ ಸಿನಿಮಾಗೆ ಮಲಯಾಳಿ ಬೆಡಗಿ ಹೀರೋಯಿನ್
ಒಂದು ವೇಳೆ ಸಿನಿಮಾ ಫ್ಲಾಪ್ ಆಗಿದ್ದರೇ, ಇಂಡಸ್ಟ್ರೀಯಲ್ಲಿ ಜನ ಆಡಿಕೊಳ್ತಿದ್ದರು. ಮದುವೆ ಆಗಿ ಮಗು ಆದವರನ್ನ ನಾಯಕಿಯಾಗಿ ಹಾಕಿಕೊಂಡ್ರೆ ಹೀಗೆ ಆಗೋದು ಅಂತಲೂ ಆಡಿಕೊಳ್ತಿದ್ರೋ ಏನೋ ಅಂತಲೂ ವಿನಯ ಪ್ರಸಾದ್ ಹೇಳಿಕೊಳ್ಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ