ಗುಡ್​ ನ್ಯೂಸ್​ ಕೊಟ್ರು ವೈಷ್ಣವಿ ಗೌಡ : ಮದುವೆ ಬಗ್ಗೆ ಸುಳಿವು ನೀಡಿದ ಸನ್ನಿಧಿ!

ಜಯಶ್ರೀ ಹೆಸರಿನ ಟ್ಯಾರೋ ಕಾರ್ಡ್ ರೀಡರ್‌ ಅವರು ವೈಷ್ಣವಿ ಅವರ ಮದುವೆ 8 ದಿನ ಅಥವಾ 8 ವಾರ ಅಥವಾ 8 ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ. ಈ ವಿಚಾರ ಕೇಳಿ ವೈಷ್ಣವಿ ಅವರ ಅಭಿಮಾನಿಗಳು ನಿಜನಾ ಎಂದು ಕಮೆಂಟ್​ ಮಾಡುತ್ತಿದ್ದಾರೆ.

ವೈಷ್ಣವಿ ಗೌಡ

ವೈಷ್ಣವಿ ಗೌಡ

  • Share this:
ಸ್ಯಾಂಡಲ್​ವುಡ್​(Sandalwood) ಬೆಳ್ಳಿತೆರೆ, ಕಿರುತೆರೆ ನಟ-ನಟಿಯರು ಹಸೆ ಮಣೆ ಏರುವ ವಿಚಾರವನ್ನು ಪೋಸ್ಟ್​ ಮೂಲಕ ತಿಳಿಸುತ್ತಾರೆ ಆದರೆ ಈ ನಮ್ಮ ಸನ್ನಿಧಿ(Sannidhi) ಮೇಡಂ ಈ ವಿಚಾರವನ್ನು ಸ್ವಲ್ಪ ಡಿಫ್ರೆಂಟ್​ ಆಗಿ ರಿವೀಲ್​ ಮಾಡಿದ್ದಾರೆ.ಇತ್ತೀಚೆಗೆ ಕನ್ನಡ ಕಿರುತೆರೆಯ ಸ್ಟಾರ್​ ನಟಿ ಕಾವ್ಯ ಗೌಡ(Kavya Gowda) ಡಿಸೆಂಬರ್​ 2ರಂದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಸುದ್ದಿ ಬೆನ್ನಲ್ಲೇ ಮತ್ತೊಬ್ಬ ಕಿರುತೆರೆ ಸ್ಟಾರ್​ ನಟಿ ವೈಷ್ಣವಿ ಗೌಡ(Vaishnavi Gowda) ಅವರ ಮದುವೆ ವಿಚಾರ ಸಖತ್​ ವೈರಲ್ ಆಗುತ್ತಿದೆ. ಹೌದು, ಟ್ಯಾರೋ ಕಾರ್ಡ್(Tarot Card) ಮೂಲಕ ನಟಿ ವೈಷ್ಣವಿ ಗೌಡ ತಮ್ಮ ಮದುವೆ(Marraige) ದಿನಾಂಕ ಮತ್ತು ಹುಡುಗ ಹೇಗಿರಲಿದ್ದಾನೆ ಎಂದು ರಿವೀಲ್ ಮಾಡಿದ್ದಾರೆ. ಅಗ್ನಿಸಾಕ್ಷಿ(Agnishashakshi) ಮತ್ತು ಬಿಗ್ ಬಾಸ್(Bigboss) ಸೀಸನ್ 8ರ ಮೂಲಕ ಜನಪ್ರಿಯತೆ ಪಡೆದ ವೈಷ್ಣವಿ ಗೌಡ ಟ್ಯಾರೋ ಕಾರ್ಡ್ ರೀಡಿಂಗ್ ವಿಡಿಯೋವನ್ನು ಯುಟ್ಯೂಬ್(Youtube) ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಜಯಶ್ರೀ ಹೆಸರಿನ ಟ್ಯಾರೋ ಕಾರ್ಡ್ ರೀಡರ್‌ ಅವರು ವೈಷ್ಣವಿ ಅವರ ಮದುವೆ 8 ದಿನ ಅಥವಾ 8 ವಾರ ಅಥವಾ 8 ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ. ಈ ವಿಚಾರ ಕೇಳಿ ವೈಷ್ಣವಿ ಅವರ ಅಭಿಮಾನಿಗಳು ನಿಜನಾ ಎಂದು ಕಮೆಂಟ್​ ಮಾಡುತ್ತಿದ್ದಾರೆ.  

ವೈಷ್ಣವಿ ಮದುವೆಯಾಗುವ ಹುಡುಗ ತುಂಬಾ ಸಿಂಪಲ್​!
ಮದುವೆ ಹೊಸ ಸಂಬಂಧ ಆಗಿದ್ದು ತುಂಬಾನೇ ಸಿಂಪಲ್ ಹುಡುಗ ಆಗಿರಲಿದ್ದಾನಂತೆ. ವೃಷ್ಣವಿ ಅವರ ಮನಸ್ಥಿತಿ ಹೊಂದಿಕೊಳ್ಳುವ ಹುಡುಗ ಆಗಿರುತ್ತಾನಂತೆ. 'ನಿಮ್ಮ ಮದುವೆ ವಿಚಾರದಲ್ಲಿ ತುಂಬಾನೇ ಕಾಂಪಿಟೇಷನ್‌ ಇರಲಿದೆ. ತುಂಬಾ ಹುಡುಗರು ಬರಲಿದ್ದಾರೆ’ ಎಂದು ಜಯಶ್ರೀ ಅವರು ಹೇಳಿದ್ದಾರೆ.‘ನೀವು ಒಳ್ಳೆಯ ಮ್ಯಾಚ್ ಹುಡುಕುತ್ತೀರಿ, ಅವರು ನಿಮ್ಮ ಜೊತೆ ವಿದೇಶ ಪ್ರಯಾಣ ಮಾಡಲಿದ್ದಾರೆ. ನೀವು ಮದುವೆ ಆದ್ಮೇಲೂ ಕೆಲಸದಲ್ಲಿ ಬ್ಯುಸಿಯಾಗಿರುತ್ತೀರಿ' ಎಂದಿದ್ದಾರೆ. ನೀವು ಆಯ್ಕೆ ಮಾಡಿಕೊಳ್ಳುವ ಹುಡುಗ ತುಂಬಾನೇ ಬ್ಯುಟಿಪುಲ್ ಆಗಿರುತ್ತಾರೆ. ಮದುವೆ ನಿಮ್ಮ ಜೀವನದಲ್ಲಿ ಹೊಸ ಆರಂಭ ತರಲಿದೆ. ನಿಮ್ಮ ಜೀವನವನ್ನು ಮತ್ತೊಂದು ರೀತಿಯಲ್ಲಿ ಬದಲಾಯಿಸುತ್ತಾರೆ' ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​!


ಈ ವಿಡಿಯೋ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ವೈಷ್ಣವಿ ಗೌಡ ಅವರ ಫ್ಯಾನ್ಸ್​ ಇದು  ನಿಜನಾ? ಸುಳ್ಳಾ? ದಯವಿಟ್ಟು ಹೇಳಿ. ಹುಡುಗ ಯಾರು, ನೀವು ಪ್ರೀತಿಸಿಯೇ ಮದುವೆಯಾಗುತ್ತೀರಾ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನೂ 8 ದಿನ ಅಂತ ಟ್ಯಾರೋ ಕಾರ್ಡ್ ಹೇಳಿದೆ. ಹಾಗಿದ್ದರೆ ಹುಡುಗ ಯಾರೆಂದು ಸಿಕ್ಕಿದ್ದಾರಾ? ಮದುವೆ ವಿಚಾರವನ್ನು ಈ ರೀತಿ ಹೇಳಲು ಏನು ಕಾರಣ ನೇರವಾಗಿ ಹೇಳಿ ಅಂತ ಮತ್ತೊಬ್ಬ ಕಮೆಂಟ್​ ಮಾಡಿದ್ದಾನೆ.
ಮತ್ತೆ ಒಂದಾಗ್ತಾರಾ ಅಗ್ನಿಸಾಕ್ಷಿ ಜೋಡಿ?


ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಈ ಜೋಡಿ ಸಖತ್​ ಹೆಸರು ಮಾಡಿದ್ದರು. ಇದೀಗ ಮತ್ತೆ ಕಿರುತೆರೆಗೆ ಇಬ್ಬರು ಕಮ್​ ಬ್ಯಾಕ್​ ಮಾಡುವ ಸಾಧ್ಯತೆ ಹೆಚ್ಚಿದೆ. ವಿಜಯ್ ಸೂರ್ಯ ನಟನೆಯ ಕರ್ಣ ಸಿನಿಮಾಗೆ ನಟಿ ಹುಡುಕಾಟದಲ್ಲಿ ಸೀರಿಯಲ್​ ತಂಡ ಇದೆ. ಈ ಬಗ್ಗೆ ವೈಷ್ಣವಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಬಿಗ್​ಬಾಸ್​ನಲ್ಲಿದ್ದಷ್ಟು ದಿನ ಸನ್ನಿಧಿ ಎಲ್ಲರೊಂದಿಗೆ ಒಳ್ಳೆಯ ಬಾಂಧ್ಯವ ಹೊಂದಿದ್ದರು. ಬಿಗ್​ ಬಾಸ್​ ಮನೆಯಿಂದ ಹೊರಗಡೆ ಬಂದ ಬಳಿಕ ಕೆಲವು ಸಿನಿಮಾಗಳಿಂದ ಕೂಡ ಸನ್ನಿಧಿಗೆ ಆಫರ್​​ಗಳು ಬಂದಿಯಂತೆ. ಎಲ್ಲ ಅಂದುಕೊಂಡಂತೆ ನಡೆದರೆ ಕರ್ಣ ಸೀರಿಯಲ್​ನಲ್ಲಿ ವಿಜಯ್​ ಸೂರ್ಯ ಮತ್ತು ಸನ್ನಿಧಿ ಒಟ್ಟಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
Published by:Vasudeva M
First published: