• Home
  • »
  • News
  • »
  • entertainment
  • »
  • Gajaram Film Heroin: ಗಜರಾಮನಿಗೆ ಕೊನೆಗೂ ಸಿಕ್ಕಳು ಹೀರೋಯಿನ್; ಇಲ್ಲಿದ್ದಾರೆ ನೋಡಿ ಆ ಕೊಡಗಿನ ಕುವರಿ

Gajaram Film Heroin: ಗಜರಾಮನಿಗೆ ಕೊನೆಗೂ ಸಿಕ್ಕಳು ಹೀರೋಯಿನ್; ಇಲ್ಲಿದ್ದಾರೆ ನೋಡಿ ಆ ಕೊಡಗಿನ ಕುವರಿ

ಗಜರಾಮ ಚಿತ್ರದ ನಾಯಕಿ ತಪಸ್ವಿನಿ ಪೊಣಚ್ಚ

ಗಜರಾಮ ಚಿತ್ರದ ನಾಯಕಿ ತಪಸ್ವಿನಿ ಪೊಣಚ್ಚ

ಇದೇ ಖಡಕ್ ನಾಯಕನಿಗೇನೆ ತಪಸ್ವಿನಿ ಪೊಣಚ್ಚ ಜೋಡಿ ಆಗುತ್ತಿದ್ದಾರೆ. ತಮ್ಮ ಗಜರಾಮನಿಗೆ ಈ ತಪಸ್ವಿನಿನೇ ಸರಿಯಾದ ಜೋಡಿ ಅಂತಲೇ ಸಿನಿಮಾ ತಂಡ ಈಗ ನಟಿ ತಪಸ್ವಿನಿ ಪೊಣಚ್ಚರನ್ನ ಆಯ್ಕೆ ಮಾಡಿದೆ.

  • Share this:

ಕೊಡಗಿನ ಆ ಕುವರಿ ಇನ್​ಸ್ಟಾಗ್ರಾಮ್​ ನಲ್ಲಿ ಒಂದು ಫೋಟೋ (Photos) ಹಾಕಿದ್ದರು. ಹಾಗೆ ಸುಮ್ಮನೆ ಅಪ್​ಲೋಡ್ ಮಾಡಿ ಖುಷಿಪಟ್ಟ ಆ ಫೋಟೋದಿಂದ ಲಕ್ ಬದಲಾಗಿ ಹೋಯಿತು. ರಿಷಬ್ ಶೆಟ್ಟಿ (Rishabh Shetty) ಅಭಿನಯದ ಹರಿಕಥೆ ಅಲ್ಲ ಗಿರಿ ಕಥೆ ಸಿನಿಮಾ ಟೀಮ್ ಈ ಬೆಡಗಿಯನ್ನ ಆ ಕೂಡಲೇ ಅಪ್ರೋಚ್ ಮಾಡಿಯೇ ಬಿಡ್ತು. ಅಲ್ಲಿಂದಲೇ ಈ ಚೆಲುವೆಯ ಸಿನಿಮಾ ಪಯಣ ಆರಂಭವಾಗಿದೆ. ಆದರೆ ಹರಿ ಕಥೆ ಅಲ್ಲ ಗಿರಿ ಕಥೆ ಸಿನಿಮಾ ಬಂದ್ಮೇಲೆ ಈ ಕೊಡಗಿನ ಹುಡುಗಿಗೆ ಯಾವುದೇ (Offer) ಆಫರ್ ಬರಲೇ ಇಲ್ವೇ ಅಂತ ಕೇಳಬೇಡಿ. ಬರೋ ಎಲ್ಲ ಕಥೆಗಳನ್ನೂ ಯಾರೂ ಒಪ್ಪಿಕೊಳ್ಳೋದಿಲ್ಲ ಅಲ್ವೇ. ಹಾಗೇನೆ ಈ ಹುಡುಗಿ ಕೂಡ ಯಾವುದೇ ಕಥೆಗೂ ಇಲ್ಲಿವರೆಗೂ ಓಕೆ ಅಂತ ಹೇಳಿರಲೇ ಇಲ್ಲ.


ಆದರೆ ಈಗ ಈ ನಟಿಗೆ ಈ ಒಂದು ಚಿತ್ರದ ಕಥೆ ಇಷ್ಟ ಆಗಿದೆ. ಅದುವೇ ಗಜರಾಮ. ಈ ಗಜರಾಮ (Gajaram) ಯಾರು? ಇಲ್ಲಿವರೆಗೂ ಹೇಳಿರೋ ಆ ನಾಯಕಿ ಯಾರು? ಈ ಎಲ್ಲ ಡಿಟೈಲ್ಸ್ ಇಲ್ಲಿದೆ ಓದಿ.


ಕೊಡಗಿ ಕುವರಿಯ ಹೆಸರು ತಪಸ್ವಿನಿ ಪೊಣಚ್ಚ. ಈ ಚೆಲುಗೆಯ ಮೊದಲ ಚಿತ್ರ ಈ ಮೊದಲೇ ಹೇಳಿದಂತೆ ಹರಿಕಥೆಯಲ್ಲ ಗಿರಿಕಥೆನೇ ಆಗಿದೆ. ಇದಾದ ಬಳಿಕ ಈಗ ಒಪ್ಪಿಕೊಂಡ ಸಿನಿಮಾ ಗಜರಾಮ. ಗಜರಾಮ ಸಿನಿಮಾದ ನಾಯಕನ ಪೊಸ್ಟರ್ ಈಗಾಗಲೇ ಗಮನ ಸೆಳೆದಿದೆ.


Kannada Actress Thapaswini Poonacha Signed her Second movie with Raja vardan
ಗಜರಾಮ ಸಿನಿಮಾದ ನಾಯಕಿ ತಪಸ್ವಿನಿ ಪೊಣಚ್ಚ


ಹೌದು, ಗಜರಾಮನಾಗಿ ಇಲ್ಲಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಒಂದೇ ಒಂದು ಪೋಸ್ಟರ್ ಮೂಲಕ ರಾಜವರ್ಧನ್ ತಮ್ಮ ಪಾತ್ರದ ಗತ್ತನ್ನ ಪ್ರದರ್ಶಿಸಿದ್ದಾರೆ.


ಗಜರಾಮನಿಗೆ ಕೊಡಗಿನ ಕುವರಿ ತಪಸ್ವಿನಿ ಪೊಣಚ್ಚ ಸಾಥ್
ಇದೇ ಖಡಕ್ ನಾಯಕನಿಗೇನೆ ತಪಸ್ವಿನಿ ಪೊಣಚ್ಚ ಜೋಡಿ ಆಗುತ್ತಿದ್ದಾರೆ. ತಮ್ಮ ಗಜರಾಮನಿಗೆ ಈ ತಪಸ್ವಿನಿನೇ ಸರಿಯಾದ ಜೋಡಿ ಅಂತಲೇ ಸಿನಿಮಾ ತಂಡ ಈಗ ನಟಿ ತಪಸ್ವಿನಿ ಪೊಣಚ್ಚರನ್ನ ಆಯ್ಕೆ ಮಾಡಿದೆ.


ಇದನ್ನೂ ಓದಿ: Pregnant Prathap Narayan: ಕನ್ನಡದ ನಟ ಪ್ರತಾಪ್ ನಾರಾಯಣ್ ಪ್ರೆಗ್ನೆಂಟ್; ಇದು ಸುಳ್ಳಲ್ಲ!


ಗಜರಾಮನ ಚಿತ್ರ ಒಪ್ಪಿಕೊಳ್ಳುವ ಮೊದಲು ನಟಿ ತಪಸ್ವಿನಿ ಅನೇಕ ಕಥೆಗಳನ್ನ ಕೇಳಿದ್ದಾರೆ. ಆದರೆ ಯಾವುದೂ ಇವರಿಗೆ ಇಷ್ಟ ಆಗಲೇ ಇಲ್ಲ. ಗಜರಾಮ ಚಿತ್ರದ ಕಥೆ ಈ ಬೆಡಗಿಯ ಹೃದಯವನ್ನ ಕದ್ದಿದೆ. ಆ ಕಾರಣಕ್ಕೇನೆ ಈಗ ಸಿನಿಮಾದಲ್ಲಿ ನಟಿಸಲು ತಪಸ್ವಿನಿ ಒಪ್ಪಿಕೊಂಡಿದ್ದಾರೆ.


ಗಜರಾಮ ಚಿತ್ರದಲ್ಲಿ ತಪಸ್ವಿನಿ ಪೊಣಚ್ಚ ಪಾತ್ರವೇನು ಗೊತ್ತ?
ಗಜರಾಮ ಸಿನಿಮಾದಲ್ಲಿ ತಪಸ್ವಿನಿ ಪೊಣಚ್ಚ ಹಳ್ಳಿ ಹುಡುಗಿ ಪಾತ್ರವನ್ನೆ ಮಾಡುತ್ತಿದ್ದಾರೆ. ಕೊಡಗಿನ ಕುವರಿ ತಪಸ್ವಿನಿ ಪೊಣಚ್ಚ ಈ ಮೂಲಕ ಹಳ್ಳಿ ಹುಡುಗಿ ಪಾತ್ರದಿಂದಲೇ ಕನ್ನಡಿಗರ ಹೃದಯ ಕದಿಯಲು ಸಜ್ಜಾಗುತ್ತಿದ್ದಾರೆ.


Kannada Actress Thapaswini Poonacha Signed her Second movie with Raja vardan
ಗಜರಾಮ ಸಿನಿಮಾದ ನಾಯಕಿ ತಪಸ್ವಿನಿ ಪೊಣಚ್ಚ


ಗಜರಾಮನ ಚಿತ್ರವನ್ನ ನವ ನಿರ್ದೇಶಕ ಸುನಿಲ್ ಕುಮಾರ್ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಮೊದಲು ನಿರ್ದೇಶನದ ವಿಭಾಗದಲ್ಲಿಯೇ ಕೆಲಸದ ಅನುಭವ ಕೂಡ ಇದೆ. ಅದೇ ಅನುಭವದ ಮೇಲೆನೆ ಸ್ವತಂತ್ರವಾಗಿಯೇ ಗಜರಾಮ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.


ರಾಜವರ್ಧನ್ ಗಜರಾಮನಿಗೆ ಮನೋಮೂರ್ತಿ ಸಂಗೀತ ನಿರ್ದೇಶನ
ಗಜರಾಮ ಸಿನಿಮಾದಲ್ಲಿ ಆ್ಯಕ್ಷನ್ ಇದೆ. ಮನರಂಜನೆಗೆ ಬೇಕಾಗೋ ಕಂಟೆಂಟ್​ ಕೂಡ ಇದೆ. ಎರಡೂ ಇರೋ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಕೊಡಲು ಒಪ್ಪಿಕೊಂಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಚಿನ್ಮಯ್ ಭಾವಿಕೆರೆ ಸಾಹಿತ್ಯ ಬರೆಯುತ್ತಿದ್ದಾರೆ.


ಇದನ್ನೂ ಓದಿ:Bigg Boss Season 9: ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡೋಕೆ 18 ಕಂಟೆಸ್ಟೆಂಟ್ಸ್ ರೆಡಿ! ಕೆಲವ್ರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದ್ಯಂತೆ


ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಮಾಡೋಕೆ ಒಪ್ಪಿದ್ದಾರೆ. ನರಸಿಂಹ ಮೂರ್ತಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರುತ್ತಿದೆ.

First published: