ಕನ್ನಡದ ಒಂದು ಕಾಲದ ನಾಯಕಿ ನಟಿ ತಾರಾ (Kannada Actress Tara) ಅನುರಾಧಾ ಸಿನಿ ಜರ್ನಿಯಲ್ಲಿ ಅದ್ಭುತ ಪಾತ್ರಗಳನ್ನೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅನ್ನೋದು ಕೂಡ (Tara Anuradha Movies) ಅಷ್ಟೇ ಹೆಮ್ಮೆಯ ವಿಷಯ. ತಾರಾ ಅನುರಾಧಾ ಅವರು ನಾಯಕಿಯಾಗಿಯೇ ಮಿಂಚಿದ್ದಾರೆ. ನಾಯಕಿಯ ಸ್ನೇಹಿತೆಯಾಗಿಯೂ (Hebbet Ramakka Film) ಕಾಣಿಸಿಕೊಂಡಿದ್ದಾರೆ. "ಹಸೀನಾ" (Hasina Special Film) ಚಿತ್ರದ ಪಾತ್ರಕ್ಕೇನೆ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ. "ಕಾನೂರು ಹೆಗ್ಗಡತಿ" ಸೂಪರ್ ಸಿನಿಮಾನೇ ಬಿಡಿ. ಇತ್ತೀಚಿನ ಸಿನಿಮಾಗಳಲ್ಲಿ ಹೆಬ್ಬೆಟ್ಟ ರಾಮಕ್ಕ ಕೂಡ ಸ್ಪೆಷಲ್ ಸಿನಿಮಾನೇ ಆಗಿತ್ತು. ತಾರಾ ಅನುರಾಧಾ ಅವರು ಕನ್ನಡದ ಅಮ್ಮನ ಪಾತ್ರಗಳಿಗೆ ಈಗ ಫಿಕ್ಸ್ ಆಗಿದ್ದಾರೆ.
ಈಗೀನ ಹೊಸಬರಿಗೆ ತಾರಾ ಅವರು ಅಮ್ಮನ ಪಾತ್ರವನ್ನೆ ಮಾಡೋದು ಹೆಚ್ಚು. ಹಾಗೆ ತಾರಾ ಅವರ ಸಿನಿ ಲೈಫ್ ಸೂಪರ್ ಆಗಿಯೇ ಸಾಗಿದೆ. ಇದೇನೋ ಸರಿ, ಈಗ ಏನೂ ಅಂತಿರೋ? ಈ ಸ್ಟೋರಿ ಓದಿ.
ತಾರಾ ಅನುರಾಧಾ ಮತ್ತು ಶಾರದಾ ಥಿಯೇಟರ್!
ತಾರಾ ಅನುರಾಧಾ ಅವ್ರು ತಮ್ಮ ಚಿತ್ರ ಜೀವನದಲ್ಲಿ ಕನ್ನಡದ ತುಳಸಿದಳ ತುಂಬಾ ವಿಶೇಷವಾದ ಚಿತ್ರವೇ ಆಗಿದೆ. 1986 ರಲ್ಲಿ ಈ ಚಿತ್ರದ ಮೂಲಕವೇ ತಾರಾ ಕನ್ನಡ ಇಂಡಸ್ಟ್ರೀಗೆ ಪರಿಚಯ ಆದರು. ಆದರೆ ಅದಕ್ಕೂ ಮೊದಲೇ, ತಾರಾ ಅವ್ರು 1984 ರಲ್ಲಿ ತಮಿಳು ಚಿತ್ರ Ingeyum Oru Gangai ಮೂಲಕವೇ ಬಣ್ಣದಲೋಕ್ಕೆ ಕಾಳಿಟ್ಟಿದ್ದರು.
ಹೌದು, ಈ ಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ತಾರಾ ಅನುರಾಧ ಅವರ ಜೀವನದಲ್ಲಿ ಒಂದು ಇಂಟ್ರಸ್ಟಿಂಗ್ ಲವ್ ಸ್ಟೋರಿನೂ ಇದೆ. ಆ ಲವ್ ಸ್ಟೋರಿ ಹೆಸರು ವೇಣು. ನಿಜ, ವೇಣು ಮತ್ತು ತಾರಾ ಅವ್ರು ಪ್ರೀತಿಸಿ ಮದ್ವೆ ಆದವರು. ಅವರ ಪ್ರೀತಿಗೆ ಈಗ 17 ವರ್ಷವೇ ಆಗಿದೆ.
ಬೆಂಗಳೂರಿನ ಶಾರದಾ ಥಿಯೇಟರ್ ಮತ್ತು ತಾರಾ ಮೇಡಂ?
ತಾರಾ ಅವರು ಕಾನೂರು ಹೆಗ್ಗಡತಿ ಅಂತಹ ಸಿನಿಮಾ ಮಾಡಿದರು. ಹಸೀನಾ ಹೆಸರಿನ ಸಿನಿಮಾ ಇವರಿಗೆ ರಾಷ್ಟ್ರೀಯ ಮನ್ನಣೆ ತಂದು ಕೊಡ್ತು. ರಾಷ್ಟ್ರೀಯ ಪ್ರಶಸ್ತಿಯನ್ನೂ ತಂದುಕೊಡ್ತು.
ಹಾಗೆ ತಾರಾ ಚಿತ್ರ ಜೀವನದಲ್ಲಿ ಸಾಕಷ್ಟು ಸಿನಿಮಾಗಳಿವೆ. ತಾರಾ ಅವರು ಈಗಲೂ ಸಿನಿಮಾಗಳನ್ನ ಮಾಡ್ತಾರೆ. ರಿಯಾಲಿಟಿ ಶೋದ ಜಡ್ಜ್ ಕೂಡ ಆಗಿದ್ದಾರೆ. ಹಾಗೆ ಸಿನಿಮಾ-ರಿಯಾಲಿಟಿ ಶೋ ಹಾಗೂ ರಾಜಕೀಯ ಹೀಗೆ ಮೂರನ್ನ ನಿಭಾಯಿಸಿಕೊಂಡೇ ಬರ್ತಿದ್ದಾರೆ.
ತಾರಾ ಅವರಿಗೆ ಅಭಿನಯ ಹೇಳಿಕೊಟ್ಟ ಥಿಯೇಟರ್ ಯಾವುದು?
ಈ ಒಂದು ಪ್ರಶ್ನೆಗೆ ಉತ್ತರ ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ. ಇದನ್ನ ಸ್ವತಃ ತಾರಾ ಅವರು ಖಾಸಗಿ ವಾಹಿನಿಯ ಕಾಮಿಡಿ ಶೋಗೆ ಗೆಸ್ಟ್ ಆಗಿ ಬಂದಾಗಲೇ ಹೇಳಿಕೊಂಡಿದ್ದರು.
ನಿಜ, ತಾರಾ ಅವರು ಸಿನಿಮಾರಂಗಕ್ಕೆ ಬರೋ ಮುಂಚೆಯಿಂದಲೂ ಸಿನಿಮಾ ಪ್ರೀತಿಯನ್ನ ಇಟ್ಟುಕೊಂಡವರು. ಸಿನಿಮಾ ಮತ್ತು ಅಭಿನಯದ ಗೀಳು ಆಗಲೇ ಹುಟ್ಟಿಕೊಂಡಿದೆ ಅಂತಲೇ ಹೇಳಬಹುದೇನೋ.
ಬೆಂಗಳೂರಿನ ಶಾರದಾ ಥಿಯೇಟರ್ನಲ್ಲಿ ಅತಿ ಹೆಚ್ಚಿ ಚಿತ್ರ ವೀಕ್ಷಣೆ
ತಾರಾ ಅನುರಾಧಾ ಅವರಿಗೆ ಸಿನಿಮಾ ಪ್ರೀತಿ ಹುಟ್ಟಿಕೊಂಡಿದ್ದೇ ಇಲ್ಲಿ ಅನಿಸುತ್ತದೆ. ಸಿನಿಮಾ ಪ್ರೀತಿ ಅದೆಷ್ಟು ಇತ್ತು ಅಂದ್ರೆ, ರಜಾ ಸಿಕ್ಕರೇ ಸಾಕು, ಮನೆ ಮಂದಿಯಲ್ಲ ಶಾರದಾ ಥಿಯೇಟರ್ಗೆ ಬರುತ್ತಿದ್ದರು. ಅಲ್ಲಿ ಬರ್ತಿದ್ದ ಒಳ್ಳೆ ಸಿನಿಮಾಗಳನ್ನ ನೋಡಿಯೇ ಹೋಗುತ್ತಿದ್ದರು.
ಹಾಗೆ ಸಿನಿಮಾ ನೋಡಿ ಬಂದ್ಮೇಲೆ ಮನೆಯಲ್ಲಿ ತಾವು ನೋಡಿದ ಪಾತ್ರಗಳನ್ನ ಆ್ಯಕ್ಟ್ ಮಾಡಿಯೇ ತೋರಿಸುತ್ತಿದ್ದರು. ಮನೆ ಮಂದಿಗೆಲ್ಲ ತಮ್ಮ ಅಭಿನಯದ ಮೂಲಕವೇ ಸಿನಿಮಾವನ್ನೆ ಮತ್ತೆ ರಿಕ್ರಿಯೇಟ್ ಮಾಡುತ್ತಿದ್ದರು.
ತಾರಾ ಅನುರಾಧ ಸಿನಿಮಾ ಪ್ರೀತಿ ಅಗಾಧ ನೋಡಿ
ತಾರಾ ಅವರು ಮನೆಮಂದಿಗೆಲ್ಲ ತಮ್ಮಲ್ಲಿದ್ದ ಅಭಿನಯದ ಪ್ರತಿಭೆಯನ್ನ ಆಗಲೇ ತೋರಿಸಿದ್ದರು. ಅದೇ ಪ್ರತಿಭೆ ಮುಂದೆ ಅವರನ್ನ ಸಿನಿಮಾರಂಗಕ್ಕೆ ಕರೆತರುತ್ತದೆ ಅಂತ ಭಾವಿಸಿದ್ದರೋ ಇಲ್ವೋ,
ಇದನ್ನೂ ಓದಿ: Samantha: ಸ್ಪೆಷಲ್ ವ್ಯಕ್ತಿಯಿಂದ ಸಮಂತಾಗೆ ಸಿಕ್ತು ಕ್ರಿಸ್ಮಸ್ ಸ್ಪೆಷಲ್ ಗಿಫ್ಟ್!
ಆದರೆ ತಾರಾ ಅವರು ತಮ್ಮ ಅಭಿನಯ ಕಲೆ ಮೂಲಕ ಕನ್ನಡ ಇಂಡಸ್ಟ್ರೀಯಲ್ಲಿ ಗಟ್ಟಿಯಾಗಿಯೇ ನೆಲಯೂರಿದ್ದಾರೆ. ಹೆಸರು ಮಾಡಿದ್ದಾರೆ. ಒಳ್ಳೆ ಒಳ್ಳೆ ಪಾತ್ರದ ಮೂಲಕ ಈಗಲೂ ಪ್ರೇಕ್ಷಕರನ್ನ ರಂಜಿಸುತ್ತಲೇ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ