ರಾಧಿಕಾ ಕುಮಾರಸ್ವಾಮಿ ಅವರ ಸಿನಿಮಾ (Radhika Kumaraswamy) ಜೀವನದಲ್ಲಿ ಈಗೊಂದು ಹೊಸ ಸಿನಿಮಾ ಸೇರ್ಪಡೆ ಆಗಿದೆ. ಈ ಚಿತ್ರ ಒಂದೇ ಭಾಷೆಯಲ್ಲಿ ತಯಾರಾಗುತ್ತಿಲ್ಲ. ಬರೋಬ್ಬರಿ ಏಳು ಭಾಷೆಯಲ್ಲಿ ಈ ಚಿತ್ರವನ್ನ (New Movie Launch Soon) ತೆರೆಗೆಯಲಾಗುತ್ತಿದೆ. ಸಪ್ತ ಭಾಷೆಯಲ್ಲಿ ನಿರ್ಮಾಣ ಆಗುತ್ತಿರೋ ಈ ಚಿತ್ರದ ಒಂದಷ್ಟು ಅಧಿಕೃತ ಮಾಹಿತಿ ಇದೀಗ ಹೊರ ಬಿದ್ದಿದೆ. ಪ್ರತಿ ಭಾಷೆಯಲ್ಲೂ ಆಯಾ ಭಾಷೆಯ (Radhika Kumaraswamy New Movie) ನಟರು ಅಭಿನಯಿಸ್ತಿರೋದು ಈ ಚಿತ್ರದ ವಿಶೇಷ ಆಗಿದೆ. ಈ ಸಿನಿಮಾದ ಮೂಲಕ ರಾಧಿಕಾ ಕುಮಾರಸ್ವಾಮಿ ಅವರು ಸಪ್ತಭಾಷೆಯ ನಾಯಕಿನೂ (Radhika Movie Updates) ಆಗುತ್ತಿದ್ದಾರೆ. ಹಾಗೆ ಅತೀ ಶೀಘ್ರದಲ್ಲಿ ಸೆಟ್ಟೇರುತ್ತಿರೋ ಚಿತ್ರದ ಹೆಸರು ಅಜಾಗ್ರತ ಅಂತ ಇದೆ. ಇದರ ಕುರಿತು ಇನ್ನೊಂದಷ್ಟು ಮಾಹಿತಿ ಇಲ್ಲಿದೆ ಓದಿ.
ಸಪ್ತಭಾಷೆ ಚಿತ್ರದಲ್ಲಿ ಕನ್ನಡದ ಸ್ವೀಟಿ ರಾಧಿಕಾ ಕುಮಾರಸ್ವಾಮಿ!
ರಾಧಿಕಾ ಕುಮಾರಸ್ವಾಮಿ ಅಭಿನಯದ ಅಜಾಗ್ರತ ಸಿನಿಮಾದ ಮುಹೂರ್ತ ಇನ್ನೇನು ನಡೆಯಲಿದೆ. ಇದೇ ತಿಂಗಳು 13 ರಂದು ಚಿತ್ರ ಹೈದ್ರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಸೆಟ್ಟೇರುತ್ತಿದೆ. ಬಹು ಭಾಷೆಯ ಬಹು ತಾರೆಯರ ಈ ಚಿತ್ರದಲ್ಲಿ ನುರಿತ ತಂಡವೇ ಇದೆ. ನುರಿತ ಪ್ರತಿಭಾವಂತರೇ ಆಯ್ಕೆ ಆಗಿದ್ದಾರೆ.
ಅಜಾಗ್ರತ ಸಿನಿಮಾ ಒಂದು ವಿಶೇಷ ಸಿನಿಮಾ ಅನಿಸುತ್ತಿದೆ. ಈ ಚಿತ್ರದಲ್ಲಿ ಒಂದು ವಿಶೇಷ ಕಥೆಯನ್ನ ತೆಗೆದುಕೊಳ್ಳಲಾಗಿದೆ. ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಯನ್ನ ಈ ಚಿತ್ರ ಹೊಂದಿದೆ. ಇದಕ್ಕಾಗಿಯೇ ಈ ಸಿನಿಮಾದ ಕೆಲಸ ಕೂಡ ಶುರು ಆಗಿದೆ.
ಅಜಾಗ್ರತ ಚಿತ್ರದ ಡೈರೆಕ್ಟರ್ ಯಾರು ಗೊತ್ತೆ?
ಅಜಾಗ್ರತ ಚಿತ್ರವನ್ನ ಎಂ. ಶಶಿಧರ್ ಡೈರೆಕ್ಟ್ ಮಾಡಿದ್ದಾರೆ. ಇದು ಇವರಿಗೆ ಎರಡನೇ ಸಿನಿಮಾ ಆಗಿದೆ. ಈ ಹಿಂದೆ ಘಾರ್ಗ್ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಈ ಚಿತ್ರದಲ್ಲಿ ನಟಿಸಿದ್ದರು.
ಚಿತ್ರದ ಡೈರೆಕ್ಟರ್ ವಿಎಫ್‌ಎಕ್ಸ್ ನಲ್ಲೂ ಪರಿಣಿತ
ಡೈರೆಕ್ಟರ್ ಶಶಿಧರ್ ಇನ್ನೂ ಒಂದು ವಿಷಯದಲ್ಲಿ ಪರಿಣಿತಿ ಪಡೆದಿದ್ದಾರೆ. ಹೌದು, ವಿ.ಎಫ್.ಎಕ್ಸ್ ನಲ್ಲೂ ಶಶಿಧರ್ ಪರಿಣಿತಿ ಹೊಂದಿದ್ದಾರೆ. ಇದರ ಹೊರತಾಗಿ ಫಿಲ್ಮಂ ಮೇಕಿಂಗ್ ಅಲ್ಲಿ ಎಂ.ಎಸ್.ಸಿ ಕೂಡ ಮಾಡಿದ್ದಾರೆ.
ಸಪ್ತಭಾಷೆಯಲ್ಲಿ ಅಜಾಗ್ರತ ಸಿನಿಮಾ ನಿರ್ಮಾಣ
ಹೀಗೆ ಒಳ್ಳೆ ವಿಭಿನ್ನ ಅನುಭವ ಪಡೆದಿರೋ ಶಶಿಧರ್ ಇದೀಗ ಅಜಾಗ್ರತ ಸಿನಿಮಾ ಮೂಲಕ ಸಪ್ತಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ.
ಅಜಾಗ್ರತ ಚಿತ್ರದಲ್ಲಿ ಬಹು ಭಾಷೆ ನಟರ ಅಭಿನಯ
ಅಜಾಗ್ರತ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ಚಿತ್ರಾ ಶೆಣೈ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ ಪ್ರಸಾದ್ ಅಭಿನಯಿಸುತ್ತಿದ್ದಾರೆ.
ಒಂದೇ ಸಿನಿಮಾದಲ್ಲಿ ಬಹು ಭಾಷಾ ನಟರ ಅಭಿನಯ
ತೆಲುಗು ಭಾಷೆಯ ರಾವ್ ರಮೇಶ್, ಪುಷ್ಮ ಸುನಿಲ್, ತಮಿಳು ಚಿತ್ರರಂಗದಿಂದ ಆದಿತ್ಯ ಮೆನನ್, ಸಮುದ್ರ ಕಣಿ, ಬಾಲಿವುಡ್‌ನ ಶ್ರೇಯಸ್ ತಲಪಾಡಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ, ಸಪ್ತಭಾಷೆಯಲ್ಲಿ ಬರ್ತಿರೋ ಅಜಾಗ್ರತ ಸಿನಿಮಾ ಆಯಾ ಭಾಷೆಯಲ್ಲಿ ತಯಾರಿಯಾಗಿ ಆಯಾ ಭಾಷಾ ಪ್ರೇಮಿಗಳಿಗೆ ಹೊಸ ರೀತಿಯ ಅನುಭವ ಕೊಡಲಿದೆ.
ಭೈರಾದೇವಿ ಸಿನಿಮಾ ರಿಲೀಸ್ ಆಗೋದಿಲ್ವೆ?
ಆದರೆ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಎಲ್ಲಿಗೆ ಬಂತು? ಏನ್ ಆಯಿತು? ಆ ಚಿತ್ರ ರಿಲೀಸ್ ಆಗಲ್ವಾ? ಈ ಎಲ್ಲ ಮಾಹಿತಿ ಇನ್ನಷ್ಟೆ ಹೊರ ಬೀಳಬೇಕಿದೆ. ಆದರೆ ಒಂದು ಮೂಲದ ಪ್ರಕಾರ ಇಡೀ ಸಿನಿಮಾ ರೆಡಿ ಆಗಿದೆ.
ಇದನ್ನೂ ಓದಿ: Kamal Haasan: ಕಮಲ್ ಹಾಸನ್ ನಿರ್ಮಾಣದಲ್ಲಿ ಹೊಸ ಸಿನಿಮಾ; ಚಿತ್ರದ ಹೀರೋ ಯಾರು ಗೊತ್ತಾ?
ರಾಧಿಕಾ ಭೈರಾದೇವಿ ಸಿನಿಮಾ ಏನ್ ಆಯಿತು?
ಪ್ರಚಾರವನ್ನೂ ಇನ್ನೇನು ಆರಂಭಿಸಬೇಕು. ಚಿತ್ರ ಅತಿ ಶೀಘ್ರದಲ್ಲಿಯೇ ಬರುತ್ತದೆ ಅನ್ನುವ ಮಾಹಿತಿ ಕೂಡ ಇದೆ. ಒಟ್ಟಾರೆ, ಭೈರಾದೇವಿ ಬರೋ ಮೊದಲೇ ರಾಧಿಕಾ ಕುಮಾರಸ್ವಾಮಿ ಇನ್ನೂ ಒಂದು ಸಿನಿಮಾ ಈಗ ಒಪ್ಪಿದ್ದಾರೆ. ಇದು ಕೂಡ ಈಗಲೇ ಒಂದು ಸೆಳೆತ ಹುಟ್ಟುಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ