HOME » NEWS » Entertainment » KANNADA ACTRESS SUMAN NAGARKAR HAS TAKEN A GOOD DECISION TO SERVE FOOD TO PEOPLE WHOW ARE IN NEED IN CORONA TIME VB

ಬಡವರ ಹಸಿವು ನೀಗಿಸಲು ಮುಂದಾದ ಸ್ಯಾಂಡಲ್​ವುಡ್​ ನಟಿ; ಕೊರೋನಾ ಚಾರಿಟಿಗಾಗಿ ಏನು ಮಡ್ತಿದ್ದಾರೆ ಗೊತ್ತೇ?

ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ ಹಣ ಸಂಗ್ರಹಣೆ ಮಾಡಿ, ಹಾಗೆ ಸಂಗ್ರಹಣೆಯಾದ ಹಣವನ್ನ ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿಗಳನ್ನ ಸರಬರಾಜು ಮಾಡಲಿದ್ದಾರೆ.

news18-kannada
Updated:July 10, 2020, 1:57 PM IST
ಬಡವರ ಹಸಿವು ನೀಗಿಸಲು ಮುಂದಾದ ಸ್ಯಾಂಡಲ್​ವುಡ್​ ನಟಿ; ಕೊರೋನಾ ಚಾರಿಟಿಗಾಗಿ ಏನು ಮಡ್ತಿದ್ದಾರೆ ಗೊತ್ತೇ?
ಸುಮನ್ ನಗರ್ ಕರ್
  • Share this:
ಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸ್ಯಾಂಡಲ್​ವುಡ್ ಹಲವು ತಾರೆಯರು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುವುದಕ್ಕೆ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ನಟಿ ಸುಮನ್ ನಗರ್ ಕರ್ ಸಹ ಒಬ್ಬರು.

ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ ಕರ್, ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ. ಜುಲೈ ಒಂದರಿಂದ ಇಪ್ಪತ್ತರವರೆಗೆ, ಇಪ್ಪತ್ತು ದಿನಗಳ ಕಾಲ ಇಪ್ಪತ್ತು ರನ್ನರ್ಸ್ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ ಹಣ ಸಂಗ್ರಹಣೆ ಮಾಡಿ, ಹಾಗೆ ಸಂಗ್ರಹಣೆಯಾದ ಹಣವನ್ನ ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿಗಳನ್ನ ಸರಬರಾಜು ಮಾಡಲಿದ್ದಾರೆ.

Chiranjeevi Sarja: ಚಿರಂಜೀವಿ ಸರ್ಜಾ ನಿಧನದ ಸುದ್ದಿ ಕೇಳಿ ಇನ್​ಸ್ಟಾಗ್ರಾಂ ಕಂಪೆನಿ ಮಾಡಿದ್ದೇನು ನೋಡಿ

ಕೆಲ ವರ್ಷಗಳ ಬ್ರೇಕ್ ನಂತರ ನಟನೆಗೆ ಮರಳಿರುವ ಸುಮನ್, ತಮ್ಮದೇ ನಿರ್ಮಾಣ ಸಂಸ್ಥೆಯಿಂದ "ಬಬ್ರೂ" ಹಾಗೂ "ಬ್ರಾಹ್ಮಿ" ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಬೆಂಗಾಲಿ ನಿರ್ದೇಶಕ ಸಂಚಯನ್ ಚಕ್ರಬರ್ತಿಯವರ "ಲಾಕ್ಡೌನ್ ಡೈರೀಸ್" ಹಿಂದಿ ಕಿರುಚಿತ್ರ ಹಾಗೂ ಸಿಂಗಾಪುರ್ ನಲ್ಲಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಶಿಲ್ಪ ಕ್ರಿಷ್ನನ್ ಶುಕ್ಲಾ ಅವರ ಇಂಗ್ಲಿಷ್ ಹಿಂದಿ ಮಿಶ್ರಿತ ಚಲನಚಿತ್ರ "ಡಾಟ್ಸ್" ನಲ್ಲಿ ಕೂಡ ಅಭಿನಯಿಸಿದ್ದಾರೆ.

ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

ಆದರೆ ಎಷ್ಟೋ ಜನರಿಗೆ ಸುಮನ್ ಬಗ್ಗೆ ಗೊತ್ತಿರದ ವಿಷಯವೆಂದರೆ ಅವರು ಮ್ಯಾರಥಾನ್(42.2km) ರನ್ನ ರ್ ಎಂಬುದು. ಅಮೇರಿಕಾ ಹಾಗೂ ಬೆಂಗಳೂರಿನ ಹಲವಾರು ಮ್ಯಾರಥಾನ್ ರೇಸ್​ಗಳಲ್ಲಿ ಇವರು ಭಾಗವಹಿಸಿದ್ದಾರೆ. ಈಗ ಈ ಇಪ್ಪತ್ತು ದಿನಗಳ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡುವ ಈ ಅಭಿಯಾನದ ಮೂಲಕ fund raise ಮಾಡಿ ಕಷ್ಟದಲ್ಲಿರುವವರಿಗೆ ನೆರವಾಗುವ ಆಸೆ ಇವರದ್ದಾಗಿದೆ.
Published by: Vinay Bhat
First published: July 10, 2020, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories