• Home
  • »
  • News
  • »
  • entertainment
  • »
  • No Problem Shubra Come Back: ಟಾಲ್ ಹುಡುಗಿ-ವಜ್ರಕಾಯದ ಬೆಡಗಿ-ಮತ್ತೆ ಬಂದ್ರು "ನೋ ಪ್ರಾಬ್ಲಂ" ಶುಭ್ರಾ ಅಯ್ಯಪ್ಪ

No Problem Shubra Come Back: ಟಾಲ್ ಹುಡುಗಿ-ವಜ್ರಕಾಯದ ಬೆಡಗಿ-ಮತ್ತೆ ಬಂದ್ರು "ನೋ ಪ್ರಾಬ್ಲಂ" ಶುಭ್ರಾ ಅಯ್ಯಪ್ಪ

ಮತ್ತೆ ಬಂದ್ರು "ನೋ ಪ್ರಾಬ್ಲಂ" ಶುಭ್ರಾ ಅಯ್ಯಪ್ಪ

ಮತ್ತೆ ಬಂದ್ರು "ನೋ ಪ್ರಾಬ್ಲಂ" ಶುಭ್ರಾ ಅಯ್ಯಪ್ಪ

ಕೊಡಗಿನ ಕುವರಿ ಶುಭ್ರಾ ಅಯ್ಯಪ್ಪ ನ್ಯೂಸ್ 18 ಜೊತೆಗೆ ತಮ್ಮ ಈ ಹೊಸ ಚಿತ್ರದ ಬಗ್ಗೆ ಹಂಚಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಒಂದ್ ಒಳ್ಳೆ ಪ್ರೋಜೆಕ್ಟ್ ಬಂದಿದೆ. ಅದಕ್ಕೆ ಒಪ್ಪಿದೆ ಅಂತಲೂ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ (Shivaraj kumar) ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರ ಯಾರಿಗೆ ನೆನಪಿಲ್ಲ ಹೇಳಿ ? ಈ ಚಿತ್ರದ ನೋ (No Problem) ಪ್ರಾಬ್ಲಂ ಹಾಡನ್ನ ಈಗಲೂ ಅನೇಕರು ಗುನುಗುತ್ತಾರೆ. ಈ ಹಾಡಿನಲ್ಲಿ ಶಿವಣ್ಣನಿಗೆ ಜೋಡಿಯಾಗಿದ್ದ ಆ ನಟಿ ಶುಭ್ರಾ ಅಯ್ಯಪ್ಪ ನಿಜಕ್ಕೂ ಟಾಲ್ ಆಗಿದ್ದರು. ಟಾಲೆಸ್ಟ್ ಶುಭ್ರಾ ಅಯ್ಯಪ್ಪಗೂ ಮತ್ತು ಶಿವಣ್ಣನ ಹೈಟ್​ಗೂ ಇಲ್ಲಿ ಮ್ಯಾಚ್ ಆಗೋದೇ ಇಲ್ಲ. ಅದನ್ನ ಮೋಹನ್ ಕುಮಾರ್ ಲಿರಿಕ್ಸ್​ ನಲ್ಲೂ ತೆಗೆದುಕೊಂಡು ಬಂದಿದ್ದರು. ಅರ್ಜುನ್ ಜನ್ಯ ಸಂಗೀತ ಮತ್ತು ಆ್ಯಕ್ಟರ್ ಧನುಷ್ ಗಾಯನ ಹಾಡಿಗೆ ಸಖತ್ ಸೂಟೇಬಲ್ ಆಗಿತ್ತು. ಅದೇ ಹಾಡಿನ ಮೂಲಕ ಮನೆ ಮಾತಾಗಿದ್ದ ನಟಿ ಶುಭ್ರಾ (Shubra Aiyappa) ಅಯ್ಯಪ್ಪ ಮತ್ತೆ ಬಂದಿದ್ದಾರೆ.


ಮುಂಬೈ, New York ಅಂತಲ್ಲೆ ಸುತ್ತಾಡಿ ಬಂದ ನಟಿ ಶುಭ್ರಾ ಅಯ್ಯಪ್ಪ, ತಿಮ್ಮಯ್ಯ ತಿಮ್ಮಯ್ಯ ಅನ್ನೋ ಹೊಸ ಪ್ರೋಜೆಕ್ಟ್ ಮೂಲಕ ಸುದೀರ್ಘ ಸಮಯದ ಬಳಿಕ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಲ್ಲಿ ಶುಭ್ರಾ ಅಯ್ಯಪ್ಪಗೆ ಈ ಸಲ ಯಾರು ಜೋಡಿಯಾಗಿದ್ದಾರೆ ಗೊತ್ತೇ ? ಇಲ್ಲಿದೆ ನೋಡಿ ಆ ಡಿಟೈಲ್ಸ್.


ನ್ಯೂಸ್-18 ಡಿಜಿಟಲ್ ಕನ್ನಡದ ಜೊತೆಗೆ ಶುಭ್ರಾ ಅಯ್ಯಪ್ಪ ಮಾತು
ಕೊಡಗಿನ ಕುವರಿ ಶುಭ್ರಾ ಅಯ್ಯಪ್ಪ ನ್ಯೂಸ್ 18 ಜೊತೆಗೆ ತಮ್ಮ ಈ ಹೊಸ ಚಿತ್ರದ ಬಗ್ಗೆ ಹಂಚಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಒಂದ್ ಒಳ್ಳೆ ಪ್ರೋಜೆಕ್ಟ್ ಬಂದಿದೆ. ಅದಕ್ಕೆ ಒಪ್ಪಿದೆ ಅಂತಲೂ ಹೇಳಿಕೊಂಡಿದ್ದಾರೆ.


Kannada Actress Shubra Aiyappa Came Back to Kannada Film Industry After a long Gap
ಮತ್ತೆ ಬಂದ್ರು "ನೋ ಪ್ರಾಬ್ಲಂ" ಶುಭ್ರಾ ಅಯ್ಯಪ್ಪ


ಶುಭ್ರಾ ಅಯ್ಯಪ್ಪ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ವಜ್ರಕಾಯದ ಮೂಲಕ ಕನ್ನಡಕ್ಕೂ ಬಂದಿದ್ದಾರೆ. ವಜ್ರಕಾಯ ಸಿನಿಮಾದ ನೊ ಪ್ರಾಬ್ಲಂ ಹಾಡಿನ ಮೂಲಕ ಕನ್ನಡಿಗರ ಹೃದಯ ಕದ್ದು ಬಿಟ್ಟಿದ್ದಾರೆ.


ತಿಮ್ಮಯ್ಯ ತಿಮ್ಮಯ್ಯ ಇದು ಸಿನಿಮಾ ಹೆಸರು
ತಿಮ್ಮಯ್ಯ ತಿಮ್ಮಯ್ಯ ಇದು ಕನ್ನಡ ಸಿನಿಮಾ. ಎಲ್ಲೂ ಈ ಸಿನಿಮಾದ ಸುದ್ದಿನೇ ಇರಲಿಲ್ಲ. ಆದರೆ ಇತ್ತೀಚಿಗೆ ಈ ಚಿತ್ರದ ಒಂದೇ ಒಂದು ಟೀಸರ್ ರಿಲೀಸ್ ಆಗಿದೆ. ಆಗಿನಿಂದಲೂ ಈ ಸಿನಿಮಾದ ಸುದ್ದಿ ಇಂಡಸ್ಟ್ರೀಯಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ.


ಇದನ್ನೂ ಓದಿ: Puneeth Parva: ಪುನೀತ ಪರ್ವದಲ್ಲಿ ಮೋಹಕ ತಾರೆ ರಮ್ಯಾ ಲೈವ್ ಡ್ಯಾನ್ಸ್ ಪರ್ಫಾಮೆನ್ಸ್


ತಿಮ್ಮಯ್ಯ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್
ಅನಂತ್​ ನಾಗ್ ಎಂತಹ ಪಾತ್ರ ಮಾಡಿದ್ರೂ ಸರಿಯೇ. ಅಲ್ಲಿ ತಮ್ಮತನವನ್ನ ತಂದೇ ಬಿಡ್ತಾರೆ. ತಿಮ್ಮಯ್ಯ ತಿಮ್ಮಯ್ಯ ಸಿನಿಮಾದ ಟೀಸರ್ ನೋಡಿದ್ರೇ ಸಾಕು, ಅದು ನಿಮಗೆ ತಿಳಿದು ಬಿಡುತ್ತದೆ. ಸಿನಿಮಾದಲ್ಲಿ ಅನಂತ್ ನಾಗ್ ಮತ್ತು ದಿಗಂತ್ ಜೋಡಿಯ ಮೋಡಿ ಅತಿ ಹೆಚ್ಚು ಎಂಟರಟೈನ್ ಮಾಡೋ ಹಾಗೆ ಕಾಣುತ್ತಿದೆ.


ಜೂನಿಯರ್ ತಿಮ್ಮಯ್ಯ-ಸೀನಿಯರ್ ತಿಮ್ಮಯ್ಯ
ತಿಮ್ಮಯ್ಯ ಮತ್ತು ತಿಮ್ಮಯ್ಯ ಅಜ್ಜ ಮತ್ತು ಮೊಮ್ಮಗನ ಕಥೆ ಇರೋ ಸಿನಿಮಾ. ಇದೇ ಸಿನಿಮಾದಲ್ಲಿಯೇ ಶುಭ್ರಾ ಅಯ್ಯಪ್ಪ ಅಭಿನಯಿಸಿದ್ದಾರೆ. ವಜ್ರಕಾಯ ಸಿನಿಮಾನೇ ಕೊನೆ ನೋಡಿ, ಅದಾದ್ಮೇಲೆ ಶುಭ್ರಾ ಅಯ್ಯಪ್ಪ ರಾಮನ ಅವತಾರ ಹಾಗೂ ತಿಮ್ಮಯ್ಯ ತಿಮ್ಮಯ್ಯ ಅನ್ನೋ ಈ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ.


Kannada Actress Shubra Aiyappa Came Back to Kannada Film Industry After a long Gap
ತಿಮ್ಮಯ್ಯ ತಿಮ್ಮಯ್ಯ ಚಿತ್ರದಲ್ಲಿ ಶುಭ್ರಾ ಪಾತ್ರ ಹೇಗಿದೆ ?


ತಿಮ್ಮಯ್ಯ ತಿಮ್ಮಯ್ಯ ಚಿತ್ರದಲ್ಲಿ ಶುಭ್ರಾ ಪಾತ್ರ ಹೇಗಿದೆ ?
ತಿಮ್ಮಯ್ಯ ತಿಮ್ಮಯ್ಯ ಸಿನಿಮಾದಲ್ಲಿ ಶುಭ್ರಾ ಅಯ್ಯಪ್ಪ, ಸೌಮ್ಯ ಹೆಸರಿನ ಪಾತ್ರ ಮಾಡಿದ್ದಾರೆ. ಇದು ಶುಭ್ರಾ ಅಯ್ಯಪ್ಪ ರಿಯಲ್ ಜೀವನದ ಆ್ಯಟಿಟ್ಯೂಡ್​ಗೂ ಮ್ಯಾಚ್ ಆಗುತ್ತದೆ ಅಂತಲೇ ಶುಭ್ರಾ ಅಯ್ಯಪ್ಪ ಹೇಳಿಕೊಂಡಿದ್ದಾರೆ.


ತಿಮ್ಮಯ್ಯ ತಿಮ್ಮಯ್ಯ ಚಿತ್ರದ ನಿರ್ದೇಶಕ ಸಂಜಯ್ ಶರ್ಮಾ, ಶುಭ್ರಾ ಅಯ್ಯಪ್ಪ ನೋಡಿ, ನಮ್ಮ ಚಿತ್ರದ ಸೌಮ್ಯ ಸಿಕ್ಕೇ ಬಿಟ್ಟಳು ಅಂತಲೇ ಆಡಿಷನ್​ ಟೈಮ್​ ನಲ್ಲಿಯೇ ಶುಭ್ರಾ ಆಯ್ಕೆ ಮಾಡಿಕೊಂಡಿದ್ದಾರೆ.


ಸೌಮ್ಯ ಪಾತ್ರದ ಜೊತೆಗೆ ಜೂನಿಯರ್ ತಿಮ್ಮಯ್ಯ ದಿಗಂತ್ ಮೋಡಿ
ಹೌದು, ತಿಮ್ಮಯ್ಯ ತಿಮ್ಮಯ್ಯ ಚಿತ್ರದಲ್ಲಿ ದಿಗಂತ್ ಪೇರ್ ಆಗಿ ಶುಭ್ರಾ ಅಯ್ಯಪ್ಪ ಅಭಿನಯಿಸುತ್ತಿದ್ದಾರೆ. ದಿಗಂತ್ ಜೊತೆಗೇನೆ ಈ ಚಿತ್ರದಲ್ಲಿ ಶುಭ್ರಾ ಅಯ್ಯಪ್ಪ ಹೆಚ್ಚಿನ ಸೀನ್​ಗಳೂ ಇವೆ. ಅದು ಈಗಾಗಲೇ ಬಿಟ್ಟಿರೋ ಟೀಸರ್​ನಲ್ಲೂ ಕಂಡು ಬರುತ್ತದೆ.
ಲೈಫ್​ ಅಲ್ಲಿ ಕನ್ಫ್ಯೂಸ್ ಆಗಿರೋ ಜೂನಿಯರ್ ತಿಮ್ಮಯ್ಯನಿಗೆ ಸಾಥ್ ಕೊಡುವ ಶುಭ್ರಾ ಪಾತ್ರ ಬಹುತೇಕ ಇಡೀ ಸಿನಿಮಾದಲ್ಲಿಯೇ ಇರುತ್ತದೆ. ಬಹು ದಿನಗಳ ಬಳಿಕ ಒಳ್ಳೆ ಚಿತ್ರದಲ್ಲಿ ಅಭಿನಯಿಸಿರೋ ಖುಷಿಯಲ್ಲೂ ಶುಭ್ರಾ ಅಯ್ಯಪ್ಪ ಇರೋದು ಅಷ್ಟೇ ವಿಶೇಷ.


ಅಜ್ಜ-ಮೊಮ್ಮಗನ ಈ ಚಿತ್ರದಲ್ಲಿ ಹಾಡುಗಳು ಇವೆ. ಇರೋ ಐದು ಹಾಡುಗಳನ್ನ ಬೆಂಗಳೂರು ಕೊಡಗು, ಕುಣಿಗಲ್​ ನಲ್ಲಿ ಚಿತ್ರೀಕರಿಸಿಲಾಗಿದೆ. ಚಿತ್ರದ ಬಹುತೇಕ ಭಾಗವನ್ನ ಕುಣಿಗಲ್​ನಲ್ಲಿಯೇ ಶೂಟ್ ಮಾಡಲಾಗಿದೆ.


ತಿಮ್ಮಯ್ಯ ತಿಮ್ಮಯ್ಯ ಸಿನಿಮಾ ರಿಲೀಸ್ ಯಾವಾಗ ?
ಶುಭ್ರಾ ಅಯ್ಯಪ್ಪ, ದಿಗಂತ್, ಅನಂತ್​ ನಾಗ್ ಅಭಿನಯದ ಈ ಚಿತ್ರದ ರಿಲೀಸ್ ಪ್ಲಾನಿಂಗ್ ಕೂಡ ನಡೆಯುತ್ತಿದೆ. ಇದೇ ವರ್ಷ ನವೆಂಬರ್ ತಿಂಗಳಲ್ಲಿಯೇ ಸಿನಿಮಾ ರಿಲೀಸ್ ಪ್ಲಾನ್ ಆಗಿದೆ. ಆದರೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ ಅಷ್ಟೆ.


ಇದನ್ನೂ ಓದಿ: Kantara Cinema Making: ನಟ ಚೇತನ್ ಹೇಳಿಕೆ ಬಳಿಕ ಕಾಂತಾರ ಸಿನಿಮಾ ಮೇಕಿಂಗ್ ರಿಲೀಸ್ ? ಏನ್ ಇದರ ಹಿಂದಿನ ಸತ್ಯ ?


ಇನ್ನು ಶುಭ್ರಾ ಅಯ್ಯಪ್ಪ ಈ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕೆ ಭಾರೀ ಖುಷಿಯಲ್ಲಿಯೇ ಇದ್ದಾರೆ. ಈ ಚಿತ್ರದಲ್ಲಿ ಬರುವ ಒಂದು ಹಾಡು ತುಂಬಾ ಚೆನ್ನಾಗಿಯೇ ಬಂದಿದೆ. ವಜ್ರಕಾಯ ಚಿತ್ರದ ನೋ ಪ್ರಾಬ್ಲಂ ರೀತಿನೇ ಹಿಟ್ ಕೂಡ ಆಗಬಹುದು ಅಂತಲೂ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಮತ್ತೆ ಅಭಿನಯಿಸಿರೋ ಸಂತೋಷದಲ್ಲಿಯೇ ಇದ್ದಾರೆ.

First published: