Keerthy Krishna: ಶ್ರುತಿ ಮನೆ ಮಗಳು ಕೀರ್ತಿ ಕೃಷ್ಣ ಸ್ಯಾಂಡಲ್ವುಡ್ಗೆ ಎಂಟ್ರಿ!
Keerthy Krishna: ಶ್ರುತಿ ಮನೆ ಮಗಳು ಕೀರ್ತಿ ಕೃಷ್ಣ ಸ್ಯಾಂಡಲ್ವುಡ್ಗೆ ಎಂಟ್ರಿ!
ಶೃತಿ ಮನೆ ಮಗಳು ಕೀರ್ತಿ ಕೃಷ್ಣ ಸ್ಯಾಂಡಲ್ವುಡ್ಗೆ ಎಂಟ್ರಿ!
ಬಣ್ಣದ ಲೋಕಕ್ಕೆ ಕಾಲಿಡ್ತಿರೋ ಕೀರ್ತಿ ಕೃಷ್ಣ ಈ ಹಿಂದೆ ದೊಡ್ಡಮ್ಮ ನಟಿ ಶ್ರುತಿ ಅವರ ಶ್ರೀ ನಾಗ ಶಕ್ತಿ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದರು. ಆದರೆ ವಿದ್ಯಾಭ್ಯಾಸದ ಕಾರಣ ಕೀರ್ತಿ ಬಣ್ಣದ ಲೋಕಕ್ಕೆ ಆ ಕೂಡಲೇ ಬರೋ ಮನಸು ಮಾಡಿರಲಿಲ್ಲ. ಆದರೆ ಈಗ ನಾಯಕಿ ಆಗಿ ಕಾಲಿಡುತ್ತಿದ್ದಾರೆ.
ಸ್ಯಾಂಡಲ್ವುಡ್ ನಟಿ ಶ್ರುತಿ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಸ್ಯ ನಾಯಕ ನಟ ಶರಣ್ ಅವರ ಜರ್ನಿ ಸೂಪರ್ ಆಗಿಯೇ ಸಾಗುತ್ತಿದೆ. ಈಗ ಇದೇ ಫ್ಯಾಮಿಲಿಯ ಮಗಳು ಕೀರ್ತಿ ಕೃಷ್ಣ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಬಣ್ಣದ ಲೋಕಕ್ಕೆ ಕಾಲಿಡ್ತಿರೋ ಕೀರ್ತಿ ಕೃಷ್ಣ ಈ ಹಿಂದೆ ದೊಡ್ಡಮ್ಮ ನಟಿ ಶ್ರುತಿ ಅವರ ಶ್ರೀ ನಾಗ ಶಕ್ತಿ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದರು. ಆದರೆ ವಿದ್ಯಾಭ್ಯಾಸದ ಕಾರಣ ಕೀರ್ತಿ ಬಣ್ಣದ ಲೋಕಕ್ಕೆ ಆ ಕೂಡಲೇ ಬರೋ ಮನಸು ಮಾಡಿರಲಿಲ್ಲ. ಆದರೆ ಈಗ ನಾಯಕಿ ಆಗಿ ಕಾಲಿಡುತ್ತಿದ್ದಾರೆ.
ಸ್ಯಾಂಡಲ್ವುಡ್ಗೆ ಕಾಲಿಡ್ತಿರೋ ಕೀರ್ತಿ ಕೃಷ್ಣ, ಶ್ರುತಿ ಅವರ ಸಹೋದರಿ ಉಷಾ ಕೃಷ್ಣ ಅವರ ಮಗಳು. ಈಗ ಬಿಬಿಎ ಪೂರ್ಣಗೊಳಿಸಿದ್ದಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೇನೆ ಬಣ್ಣದ ಲೋಕಕ್ಕೂ ಬಂದಿದ್ದಾರೆ.
ಕನ್ನಡದ ಯುವ ನಟ ಮನೋಜ್ ಅಭಿನಯದ ಧರಣಿ ಚಿತ್ರದ ಮೂಲಕ ಕೀರ್ತಿ ಕೃಷ್ಣ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿದ್ದಾರೆ. ಕೀರ್ತಿ ಕೃಷ್ಣ ಅವರಿಗೆ ಕಲೆ ಅನ್ನೋದು ಮನೆಯಲ್ಲಿಯೇ ಇದೆ. ಅದನ್ನ ಅಷ್ಟೇ ಅಚ್ಚುಕಟ್ಟಾಗಿ ಅಭ್ಯಾಸ ಮಾಡಿಕೊಂಡು ಈಗ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.
ಅನಂತ್ ವರ್ಸಸ್ ನುಸ್ರತ್ ಚಿತ್ರದ ನಿರ್ದೇಶಕ ಸುಧೀರ್ ಶ್ಯಾನುಭೋಗ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ತಾವು ಮಾಡಿಕೊಂಡಿರೋ ಕಥೆಯನ್ನ ಕೇಳಿರೋ ಕೀರ್ತಿ ಕೃಷ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕೀರ್ತಿ ಕೃಷ್ಣ ಅವರ ಈ ಮೊದಲ ಸಿನಿಮಾ ಬಗ್ಗೆ ಈಗ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಧರಣಿ ಸಿನಿಮಾದ ಮೂಲಕವೇ ಕೀರ್ತಿ ಕೃಷ್ಣ ಕನ್ನಡ ಇತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಕೀರ್ತಿ ಕೃಷ್ಣ ಮೂಲಕ ಶ್ರುತಿ ಮತ್ತು ಶರಣ್ ತಂದೆ ಕೃಷ್ಣ ಅವರ ಮೂರನೇ ತಲೆಮಾರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಾಗುತ್ತದೆ.
ಶ್ರುತಿ ಅವರ ಮಗಳು ಗೌರಿ ಕೂಡ ಸಿನಿಮಾರಂಗಕ್ಕೆ ಕಾಲಿಡುತ್ತಾರೆ ಅನ್ನೋ ಸುದ್ದಿ ಇದೆ. ಅದಕ್ಕೂ ಮೊದಲೇ ಶ್ರುತಿ ಅವರ ಸಹೋದರಿ ಉಷಾ ಅವರ ಮಗಳು ಕೀರ್ತಿ ಕೃಷ್ಣ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ