ಸ್ಯಾಂಡಲ್ವುಡ್ ನಟಿ ಶೃತಿ (Kannada Actress Shruthi) ಅವ್ರು ಕೊರಗಜ್ಜನ ಮೊರೆ ಹೋಗಿದ್ದಾರೆ. ಕೊರಗಜ್ಜನಿಗೆ ಕೋಲ ಸೇವೆ ಕೂಡ ಮಾಡಿದ್ದಾರೆ. ಈ ಸಮಯದಲ್ಲಿ (Actress Shruthi) ಅಮ್ಮನೊಟ್ಟಿಗೆ ಮಗಳು ಗೌರಿ ಕೂಡ ಕೋಲ ಸೇವೆ ಮಾಡಿದ್ದಾರೆ. ಕೋಲ ಸೇವೆ ಅನ್ನೋದು ಒಂದು ವಿಶೇಷ ಸೇವೆನೆ ಆಗಿದೆ. ಕಾಂತಾರ ಸಿನಿಮಾ ಬಂದ್ಮೇಲೆ (Kola Seve) ಕೋಲ ಸೇವೆಯ ಬಗ್ಗೆ ಜನಕ್ಕೆ ಹೆಚ್ಚು ತಿಳಿದಿದೆ. ಕೊರಗಜ್ಜನ ವಿಷಯದಲ್ಲೂ ಅಷ್ಟೇ. ಕೋಲ ಸೇವೆ (Koragajja Kola Seve) ಮಾಡುವ ಜನ ಹೆಚ್ಚಿದ್ದಾರೆ. ಇದಕ್ಕೂ ಹೆಚ್ಚಾಗಿ ನಟಿ ಶೃತಿ ಅವ್ರು ಕೊರಗಜ್ಜನ ಜೀವನ ಆಧರಿಸಿದ "ಕರಿ ಹೈದ ಕರಿ ಅಜ್ಜ" ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈಗ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಕೋಲ ಸೇವೆ ಮೂಲಕ ಟೀಮ್ ಧನ್ಯವಾದ ಹೇಳಿದೆ.
ಕೊರಗಜ್ಜನಿಗೆ ನಟಿ ಶೃತಿ ಕೋಲ ಸೇವೆ ವೀಡಿಯೋ ವೈರಲ್
ಕನ್ನಡದ ನಟಿ ಶೃತಿ ಅವರು ಈಗೊಂದು ಸಿನಿಮಾ ಮಾಡಿದ್ದಾರೆ. ಇದು ಕೊರಗಜ್ಜನ ಜೀವನವನ್ನೇ ಆಧರಿಸಿದೆ. ಕೊರಗಜ್ಜನ ಇಡೀ ಜೀವನದ ಆ ಕಥೆ ಈ ಚಿತ್ರದಲ್ಲಿ ಚಿತ್ರ ರೂಪ ಪಡೆದಿದೆ.
ಕೊರಗಜ್ಜನ ಚಿತ್ರದಲ್ಲಿ ನಟಿ ಶೃತಿ ಅವರು ಕೊರಗಜ್ಜನ ತಾಯಿಯ ಪಾತ್ರವನ್ನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಶೃತಿ ಅವರು ತಮ್ಮ ಪಾತ್ರವನ್ನ ಅಷ್ಟೇ ಭಕ್ತಿಯಿಂದಲೇ ನಿರ್ವಹಿಸಿದ್ದಾರೆ.
ಕೊರಗಜ್ಜನಿಗೆ ನಟಿ ಶೃತಿ-ಮಗಳು ಗೌರಿ ಕೋಲ ಸೇವೆ
ಕರಿ ಹೈದ ಕರಿ ಅಜ್ಜ ಚಿತ್ರ ಬಹು ಬಜೆಟ್ನಲ್ಲಿಯೇ ರೆಡಿ ಆಗುತ್ತಿದೆ. ಬಾಲಿವುಡ್ನ ನಟ ಕಬೀರ್ ಬೇಡಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರಲ್ಲದೇ ನಟಿ ಭವ್ಯ ಕೂಡ ಇದರಲ್ಲಿ ನಟಿಸಿದ್ದಾರೆ.
View this post on Instagram
ನಟಿ ಶೃತಿ ಅವರ ಈಗೀನ ಕೋಲ ಸೇವೆ ವೀಡಿಯೋ ರೀಲಾ ? ರಿಯಲ್ಲಾ? ಅನ್ನೋ ಪ್ರಶ್ನೆ ಕೂಡ ಇದೆ. ಆದರೆ ಅದಕ್ಕೆ ಉತ್ತರ ಸಿಂಪಲ್ ಆಗಿಯೇ ಇದೆ. ರಿಯಲ್ ಆಗಿಯೇ ನಟಿ ಶೃತಿ ಅವರು ಕೊರಗಜ್ಜನಿಗೆ ಕೋಲ ಸೇವೆ ಮಾಡಿದ್ದಾರೆ.
ಶೃತಿ ಅವರು ಅಭಿನಯಿಸಿದ್ದ ಕರಿ ಹೈದ ಕರಿ ಅಜ್ಜ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಹಿನ್ನೆಲೆಯಲ್ಲಿಯೆ ಇಡೀ ಟೀಮ್ ಕೊರಗಜ್ಜನಿಗೆ ಕೋಲ ಸೇವೆ ಮಾಡೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಕೊರಗಜ್ಜನ ಕೋಲ ಸೇವೆ ವೀಡಿಯೋ ಶೇರ್
ಕೋಲ ಸೇವೆಯನ್ನ ಅಷ್ಟೇ ಶ್ರದ್ಧಾ ಭಕ್ತಿಯಿಂದಲೇ ನಟಿ ಶೃತಿ ಅವರು ಮಾಡಿದ್ದಾರೆ. ಮಗಳು ಗೌರಿ ಈ ಕ್ಷಣ ಇಲ್ಲಿ ಜೊತೆಯಾಗಿರೋದು ವಿಶೇಷವೇ ಆಗಿದೆ.
ಕೊರಗಜ್ಜನ ಕೋಲ ಸೇವೆಯ ವಿಶೇಷ ವೀಡಿಯೋವನ್ನ ನಟಿ ಶೃತಿ ಅವರು ತಮ್ಮ ಸೋಷಿಯಲ್ ಮೀಡಿಯಾ ಅಧಿಕೃತ ಪೇಜ್ನಲ್ಲೂ ಹಂಚಿಕೊಂಡಿದ್ದಾರೆ. ಆ ವೀಡಿಯೋ ಕೂಡ ಸಿನಿಮಾದ ರೀತಿನೇ ಅದ್ಭುತವಾಗಿಯೇ ಇದೆ.
ಇನ್ನುಳಿದಂತೆ ಕರಿ ಹೈದ ಕರಿ ಅಜ್ಜ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇದು ಮುಗಿದ ಬಳಿಕವೇ ಕಿರುತೆರೆಯ ಶೋ ಗಿಚ್ಚಿ ಗಿಲಿಗಿಲಿ- ಸೀಸನ್ 2 ಶೋದಲ್ಲೂ ಶೃತಿ ಅವರು ಎಂದಿನಂತೆ ನಿರ್ಣಾಯಕಿ ಆಗಿಯೇ ಬಂದಿದ್ದಾರೆ.
ಇದನ್ನೂ ಓದಿ: Gicchi Giligili Season 2: ನಮ್ಮಮ್ಮ ಸೂಪರ್ ಸ್ಟಾರ್ ನಿಂದ ನಿರಂಜನ್ ಹೊರಗೆ ಬಂದಿದ್ದೇಕೆ?
ಸಂಕ್ರಾಂತಿ ಹಬ್ಬ ಜನವರಿ 14 ಅಂದ್ರೆ ಇಂದಿನಿಂದಲೇ ಸಂಜೆ 7.30ಕ್ಕೆ ಈ ಶೋ ಪ್ರಸಾರ ಆಗುತ್ತದೆ. ಉಳಿದಂತೆ ಈಗ ಶೃತಿ ಅವರ ಕೊರಗಜ್ಜನಿಗೆ ಕೋಲ ಸೇವೆ ಮಾಡಿಸಿರೋ ವೀಡಿಯೋ ಈಗ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ