Kannada Actress Shruti: ಮಾಲ್ಡೀವ್ಸ್​ನಲ್ಲಿ ನಟಿ ಶೃತಿ ಬರ್ತಡೇ ಸೆಲೆಬ್ರೇಷನ್!

ಅಮ್ಮ ನಿನ್ನ ಜನ್ಮ ದಿನಕ್ಕೆ ಹೊಸ ಪ್ಲಾನ್ ಮಾಡೋಣ. ಈ ಸಲದ ನಿಮ್ಮ ಬರ್ತ್​ ಡೇ ಗೆ ಮಾಲ್ಡೀವ್ಸ್ ಗೆ ಹೋಗೋಣ. ಹೀಗೆ ಅಮ್ಮನಿಗಾಗಿಯೇ ಶೃತಿ ಅವರ ಮಗಳು ಗೌರಿ ಮಾಲ್ಡೀವ್ಸ್​ಗೆ ಹೋಗುವ ಪ್ಲಾನ್ ಮಾಡಿದ್ದಾರೆ.

ಕನ್ನಡದ ಶೃತಿ ಹೊಸ ಲುಕ್

ಕನ್ನಡದ ಶೃತಿ ಹೊಸ ಲುಕ್

  • Share this:
ಕನ್ನಡದ ಸಿನಿ ಪ್ರೇಮಿಗಳ ಹೃದಯ ಕದ್ದ ಚೆಲುವೆ. ಶೃತಿ ಎಂಬ (Kannada Actress Shruti) ಎರಡು ಅಕ್ಷರದ ಹೆಸರಿನಿಂದ ಈಗಲೂ ಸಿನಿ ಪ್ರೇಮಿಗಳ ಮನದಲ್ಲಿ ಜಾಗ ಮಾಡಿಕೊಂಡ ಕಲಾವಿದೆ. ಈ ಕಲಾವಿದೆಯ ಜನ್ಮ ದಿನ ಕೂಡ ವಿಶೇಷ. ಇವರ ಹುಟ್ಟುಹಬ್ಬ ಇದ್ದ ದಿನವೇ ಇನ್ನೂ ಇಬ್ಬರು ಸೂಪರ್ ಸ್ಟಾರ್​ಗಳ ಹುಟ್ಟಿದ ಹಬ್ಬವೂ ಇರುತ್ತವೆ. ಹೌದು, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ (Birthday) ಜನ್ಮ ದಿನವೂ ಇರುತ್ತದೆ. ಇಂತಹ ವಿಶೇಷ ದಿನವನ್ನ ನಟಿ ಶೃತಿ ಈ ಸಲ ಹೇಗೆ ಪ್ಲಾನ್ ಮಾಡಿದ್ದಾರೆ.

ಜನ್ಮ ದಿನಕ್ಕೆ ಏನಾದ್ರೂ ವಿಶೇಷ ಅನೌನ್ಸ್​ಮಂಟ್ ಇರುತ್ತದೆಯೇ ? ಈ ಸಲದ ಜನ್ಮ ದಿನಕ್ಕೆ ಶೃತಿ ಏನೆಲ್ಲ ಮಾಡುತ್ತಿದ್ದಾರೆ. ಈ ತರದ ಎಲ್ಲ ಪ್ರಶ್ನೆಗಳನ್ನ ಇಟ್ಟುಕೊಂಡು ಅವರನ್ನ ಕೇಳಿದ್ರೆ, ಉತ್ತರ ಸ್ಪೆಷಲ್ ಆಗಿಯೇ ಇದೆ. ಅದನ್ನ ನಾವು ನಿಮಗೆ ಹೇಳುತ್ತವೆ.

ಜೀವ ತುಂಬಿದ ನಟಿ
ಕನ್ನಡಿಗರ ನೆಚ್ಚಿನ ನಾಯಕ ನಟಿಯರಲ್ಲಿ ಶೃತಿ ಅವರು ಒಬ್ಬರು. ಇವರ ಸಿನಿಮಾಗಳನ್ನ ನೋಡಿದ ಅಂದಿನ ಮಹಿಳೆಯರು ಇಂದಿಗೂ ಇವರನ್ನ ಕಂಡ್ರೆ ಮನಸಾರೆ ಶುಭ ಹಾರೈಸುತ್ತಾರೆ. ಮಹಿಳೆಯರ ನೋವಿನ ಪ್ರತಿನಿಧಿಯಂತೆಯೇ ಕಂಡ ಶೃತಿ ಅವರು ಈಗಲೂ ಅಂತಹ ಪಾತ್ರಗಳಿಗೆ ಜೀವ ತುಂಬುತ್ತಾರೆ.

ಹಾಸ್ಯಕ್ಕೂ ಓಕೆ ಮಹಿಳೆಯರ ನೋವು ಪ್ರತಿನಿಧಿಸೋಕು ಓಕೆ
ಇವರ ಚಿತ್ರ ಜೀವನ ನಿಜಕ್ಕೂ ವಿಶೇಷವಾಗಿಯೇ ಇದೆ. ಸಿನಿಮಾಗಳಲ್ಲಿ ಹಾಸ್ಯವನ್ನೂ ಮಾಡೋ ಶೃತಿ ಅವರು ಹಾಸ್ಯ ಕಾರ್ಯಕ್ರಮದ ನಿರ್ಣಾಯಕಿಯಾಗಿಯೂ ಇತ್ತೀಚಿಗೆ ಒಂದು ಕಾರ್ಯಕ್ರಮವನ್ನು ಮುಗಿಸಿಕೊಟ್ಟಿದ್ದಾರೆ.

Kannada Actress Shruthi Not Available at her Birthday on this year
ನಟಿ ಶೃತಿ ಹೊಸ ಲುಕ್


ಹಾಸ್ಯ ಮತ್ತು ಗಂಭೀರತೆ ಎರಡು ರೀತಿಯ ಪಾತ್ರಗಳಲ್ಲಿ ಶೃತಿ ಅವರು ಮಿಂಚುತ್ತಲೇ ಪ್ರೇಕ್ಷಕರ ಮನದಲ್ಲಿ ಜಾಗ ಉಳಿಸಿಕೊಂಡಿದ್ದಾರೆ. ಹೌದು, ಕನ್ನಡದ ಇಂತಹ ವಿಶೇಷ ನಾಯಕಿ ನಟಿ ಈ ಸಲ ತಮ್ಮ ಜನ್ಮದಿನಕ್ಕೆ ವಿಶೇಷ ಪ್ಲಾನ್ ಮಾಡಿಕೊಂಡಿದ್ದಾರೆ. ಆ ಪ್ಲಾನ್ ಸೂಪರ್ ಆಗಿಯೇ ಇದೆ.

ಮಾಲ್ಡೀವ್ಸ್ ನಲ್ಲಿ ನಟಿ ಶೃತಿ ಅವರ ಜನ್ಮ ದಿನ ಸೆಲೆಬ್ರೇಷನ್
ನಟಿ ಶೃತಿ ಅವರು ತಮ್ಮ ಜನ್ಮ ದಿನಕ್ಕೆ ಬೆಂಗಳೂರಲ್ಲಿ ಇರೋದಿಲ್ಲ. ಅವರು ಐದು ದಿನಗಳ ಕಾಲ ಸುಂದರ ಮಾಲ್ಡೀವ್ಸ್ ಗೆ ಹೋಗುತ್ತಿದ್ದಾರೆ. ಇಲ್ಲಿಯ ನಿಸರ್ಗ ಸೌಂದರ್ಯವನ್ನ ಸವಿಯಲಿದ್ದಾರೆ.ಇಲ್ಲಿಯೇ ತಮ್ಮ ಜನ್ಮ ದಿನವನ್ನೂ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Real Star Upendra: ರಿಯಲ್ ಸ್ಟಾರ್ ಉಪೇಂದ್ರ ಜನ್ಮ ದಿನಕ್ಕೆ ಕಬ್ಜ ಸಿನಿಮಾ ತಂಡದಿಂದ ವಿಶೇಷ ಉಡುಗೊರೆ, ಏನು ನೋಡಿ

ಮಾಲ್ಡೀವ್ಸ್​​ಗೆ ಹೋಗೋದು ಮಗಳು ಗೌರಿ ಪ್ಲಾನ್
ಅಮ್ಮ ನಿನ್ನ ಜನ್ಮ ದಿನಕ್ಕೆ ಹೊಸ ಪ್ಲಾನ್ ಮಾಡೋಣ. ಈ ಸಲದ ನಿಮ್ಮ
ಬರ್ತ್​ಡೇ ಗೆ ಮಾಲ್ಡೀವ್ಸ್ ಗೆ ಹೋಗೋಣ. ಹೀಗೆ ಅಮ್ಮನಿಗಾಗಿಯೇ ಶೃತಿ ಮಗಳು ಗೌರಿ ಮಾಲ್ಡೀವ್ಸ್​ಗೆ ಹೋಗುವ ಪ್ಲಾನ್ ಮಾಡಿದ್ದಾರೆ. ಇದು ನನ್ನ ಪ್ಲಾನ್ ಅಲ್ಲ, ಮಗಳ ಪ್ಲಾನ್​ ಅಂತಲೇ ಶೃತಿ ಅವರು ಈಗ ಹೇಳಿಕೊಂಡಿದ್ದಾರೆ.

Kannada Actress Shruthi Not Available at her Birthday on this year
ಕನ್ನಡದ ನಟಿ ಶೃತಿ ಹೊಸ ರೂಪ


ಹೌದು, ಶೃತಿ ಅವರು ತಮ್ಮ ಜನ್ಮ ದಿನಕ್ಕೆ ವಿಶೇಷವಾಗಿ ಏನೋ ಒಂದು ಪ್ಲಾನ್ ಮಾಡಿರುತ್ತಾರೆ. ಅದರಂತೆ ಈ ಹಿಂದಿನ ಜನ್ಮ ದಿನಗಳಲ್ಲಿ ಬೆಂಗಳೂರಿನ ಇಸ್ಕಾನ್ ಟೆಂಪಲ್ ಗೆ ಹೋಗಿದ್ದರು. ಅದೇ ದಿನ ನೇತ್ರದಾನದ ವಾಗ್ದಾನವನ್ನೂ ಮಾಡಿದ್ದರು. ಆದರೆ ಈ ಸಲ ದ್ವೀಪ ರಾಷ್ಟ್ರಕ್ಕೆ ಹಾರಲಿದ್ದಾರೆ.

ಇದನ್ನೂ ಓದಿ: Aishani Shetty: ಮುಗ್ದ ಹುಡುಗಿ ಭಾರೀ ಬೆಡಗಿ - ಈಗ ದೊಡ್ಡ ಚಿತ್ರದ ಡೈರೆಕ್ಟರ್ ಐಶಾನಿ ಶೆಟ್ಟಿ

ಶೃತಿ ಜನ್ಮ ದಿನಕ್ಕೆ ಎರಡು ಸಿನಿಮಾ ಅನೌನ್ಸ್​
ಶೃತಿ ಅವರ ಜನ್ಮ ದಿನಕ್ಕೆ ಎರಡು ಕನ್ನಡ ಸಿನಿಮಾ ಅನೌನ್ಸ್ ಕೂಡ ಆಗುತ್ತಿವೆ. ಸೆಪ್ಟೆಂಬರ್-18 ರಂದು ಈ ಚಿತ್ರದ ಟೈಟಲ್ ರಿವೀಲ್ ಆಗುತ್ತಿದೆ. ಅದರ ಹೊರತಾಗಿ ಶೃತಿ ಅವರು ಈ ಬಗ್ಗೆ ಈಗಲೇ ಏನೂ ಹೇಳೋಕೆ ಇಷ್ಟಪಡೋದಿಲ್ಲ. ಆ ದಿನದವರೆಗೂ ವೇಟ್ ಮಾಡಿ ಅನ್ನೋ ಅರ್ಥದಲ್ಲಿಯೇ ರಿಯಾಕ್ಟ್ ಮಾಡುತ್ತಾರೆ.
First published: