'ಯೂಟರ್ನ್' ಖ್ಯಾತಿಯ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಈಗ ಬಹು ಭಾಷಾನಟಿ. ಹೌದು, ಕನ್ನಡ ಮಾತ್ರವಲ್ಲದೇ ಬಾಲಿವುಡ್,ಟಾಲಿವುಡ್ ಹಾಗೂ ಕಾಲಿವುಡ್ನಲ್ಲೂ ಶ್ರದ್ಧಾ ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಟಿ ಪೂಜಾ ಗಾಂಧಿ- ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ವಿರುದ್ಧ ವಂಚನೆ ಆರೋಪ: ಹೋಟೆಲ್ ಬಿಲ್ ಕೊಡದೆ ಕಾಲ್ಕಿತ್ತ ಮಳೆ ಹುಡುಗಿ..!
ಸ್ಯಾಂಡಲ್ವುಡ್ನಲ್ಲಿ ಎಷ್ಟು ಬ್ಯುಸಿಯಿದ್ದಾರೋ, ತೆಲುಗು ಹಾಗೂ ತಮಿಳಿನಲ್ಲೂ ಅಷ್ಟೇ ಕೆಲಸ ಮಾಡುತ್ತಿದ್ದಾರೆ 'ಯೂಟರ್ನ್' ನಟಿ. ಅವರು ನಟಿಸಿರುವ ಹೊಸ ಕಾಲಿವುಡ್ ಸಿನಿಮಾ 'ಕೆ 13'ನ ಟೀಸರ್ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸುವಂತಿದೆ.
ಅಷ್ಟೇ ಅಲ್ಲ ಈಗಾಗಲೇ ಶ್ರದ್ಧಾ ಟಾಲಿವುಡ್ಗೂ ಕಾಲಿಟ್ಟಿದ್ದಾರೆ. ನಾನಿ ಅಭಿನಯದ 'ಜೆರ್ಸಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೆ ಈ ಸಿನಿಮಾದ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿತ್ತು.
ಇನ್ನೂ ತಮಿಳಿನಲ್ಲಿ ಅಜಿತ್ ಜತೆ ಸಹ ತೆರೆ ಹಂಚಿಕೊಳ್ಳುತ್ತಿರುವ ಶ್ರದ್ಧಾ 'ನೇರ್ಕೊಂಡ ಪಾರವೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾರ್ಚ್ 4ರಂದು ಈ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿತ್ತು. ಈ ಸಿನಿಮಾ ಏಪ್ರಿಲ್ 19ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.
Ner Konda Parvai. The title says it all. Its time for a change in perspective. My eternal gratitude to this lovely team. 🙏 pic.twitter.com/E6plJt2f0v
— Shraddha Srinath (@ShraddhaSrinath) March 4, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ