ಸ್ಯಾಂಡಲ್‌ವುಡ್‌ನ ನಾಯಕಿ ನಟಿ ಶ್ರದ್ಧಾ ಶ್ರೀನಾಥ್ (Shraddha Srinath Film Updates) ಅಭಿನಯದ ಸಿನಿಮಾಗಳಲ್ಲಿ ವಿಶೇಷತೆ ಇರುತ್ತದೆ. ಶ್ರದ್ಧಾ ಸಿನಿಮಾ ಆಯ್ಕೆಗಳು ಹಾಗಿರುತ್ತವೆ. ಅಭಿನಯಕ್ಕೆ ಪ್ರಾಶಸ್ತ್ಯ ಇರೋ ಪಾತ್ರಗಳನ್ನ (Victory Venkatesh Pan India Film) ಶ್ರದ್ಧಾ ಆಯ್ಕೆ ಮಾಡುತ್ತಲೇ ಬಂದಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಶ್ರದ್ಧಾ ಮಿಂಚಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ತಮ್ಮದೇ (Kannada Actress Shraddha Srinath) ಛಾಪು ಮೂಡಿಸಿದ್ದಾರೆ. ಇವರ ಈ ಒಂದು ಆಯ್ಕೆಯ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನ (Shraddha Srinath New Film) ಶ್ರದ್ಧಾ ಒಪ್ಪಿಕೊಂಡಿದ್ದಾರೆ. ಇದರ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರ ಸುತ್ತ ಒಂದಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ವಿಕ್ಟರಿ ವೆಂಕಟೇಶ್ ಸಿನಿಮಾದಲ್ಲಿ ಮೂಗುತಿ ಸುಂದರಿ ಶ್ರದ್ಧಾ!
ಶ್ರದ್ಧಾ ಶ್ರೀನಾಥ್ ಅವರ ಅಭಿನಯಕ್ಕೆ ಸಾಕ್ಷಿ ಯಾವುದು? ಹೆಚ್ಚಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ವೇ ಇಲ್ಲ. ಎಲ್ಲರ ಮನದಲ್ಲಿ ಉಳಿಯುವಂತಹ ಪಾತ್ರಗಳ ಚಿತ್ರಗಳನ್ನ ಶ್ರದ್ಧಾ ಒಪ್ಪಿಕೊಂಡು ಗೆದ್ದಿದ್ದಾರೆ. ಆಪರೇಷನ್ ಅಲಮೇಲಮ್ಮ ಅದಕ್ಕೆ ಒಂದು ಉದಾಹರಣೆ ಆಗಿದೆ.
ಶ್ರದ್ಧಾ ಶ್ರೀನಾಥ್ ಮೊದಲ ಪ್ಯಾನ್ ಇಂಡಿಯಾ ಸೈಂಧವ್ ಸಿನಿಮಾ
ಆದರೆ ಶ್ರದ್ಧಾ ಒಪ್ಪಿರೋ ಯು ಟರ್ನ್ ಸಿನಿಮಾ ಶ್ರದ್ಧಾ ಅಭಿನಯದ ಪ್ರತಿಭೆಗೆ ಹಿಡಿದ ಕನ್ನಡಿ ಆಗಿದೆ. ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯ ಖುಷಿಕೊಡುತ್ತದೆ. ಈ ಚಿತ್ರದ ಮೂಲಕ ಶ್ರದ್ಧಾ ಶ್ರೀನಾಥ್ ಎಲ್ಲೆಡೆ ಪರಿಚಯ ಆಗಿರೋದಂತೂ ಸತ್ಯ ನೋಡಿ.
ಶ್ರದ್ಧಾ ಶ್ರೀನಾಥ್ ಸಿನಿಮಾ ಜೀವನದಲ್ಲಿ ಉರ್ವಿ ಚಿತ್ರವೂ ಸ್ಪೆಷಲ್ ಆಗಿಯೇ ಇತ್ತು. ಬಿ.ಕೆ. ವರ್ಮಾ ಅವರ ಪುತ್ರ ಪ್ರದೀಪ್ ವರ್ಮಾ ನಿರ್ದೇಶನದ ಈ ಚಿತ್ರ, ಕ್ರೈಮ್ ಡ್ರಾಮಾ ಕಥೆಯನ್ನ ಹೇಳಿತ್ತು. ಜನಕ್ಕೆ ಈ ಚಿತ್ರ ಸ್ಪೆಷಲ್ ಆಗಿಯೇ ಸೆಳೆಯಿತು.
ವಿಕ್ಟರಿ ವೆಂಕಟೇಶ್-೭೫ನೇ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಜೋಡಿ
ಶ್ರದ್ಧಾ ಶ್ರೀನಾಥ್ ಒಳ್ಳೆ ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಬಂದಿದ್ದಾರೆ. ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಇದೀಗ ಅಭಿನಯಿಸಿದ್ದಾರೆ. ಆ ಚಿತ್ರದ ಹೆಸರು ಸೈಂಧವ್ ಅನ್ನೋದೇ ವಿಶೇಷ. ಈ ಚಿತ್ರದಲ್ಲಿ ಟಾಲಿವುಡ್ ನಾಯಕ ನಟ ವಿಕ್ಟರಿ ವೆಂಕಟೇಶ್ ಅಭಿನಯಿಸಿದ್ದಾರೆ.
ವಿಕ್ಟರಿ ವೆಂಕಟೇಶ್ ಅವರ ಚಿತ್ರ ಜೀವನದ 75ನೇ ಚಿತ್ರವಾಗಿರೋ ಈ ಚಿತ್ರದಲ್ಲಿ ನಟಿ ಶ್ರದ್ಧಾ ಶ್ರೀನಾಥ್, ವಿಕ್ಟರಿ ವೆಂಕಟೇಶ್ ಅವರಿಗೆ ಜೋಡಿ ಆಗಿದ್ದಾರೆ. ಈ ಚಿತ್ರದಲ್ಲಿರೋ ಶ್ರದ್ಧಾ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಟಾಲಿವುಡ್‌ಗೆ ನವಾಜುದ್ದೀನ್ ಸಿದ್ದಿಕಿ ಎಂಟ್ರಿ!
ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಎರಡನೇ ಹಂತದ ಚಿತ್ರೀಕರಣ ವೈಜಾಗ್‌ನಲ್ಲಿ ನಡೆಯುತ್ತಿದೆ. ಮನೋಜ್ಞಾ ಹೆಸರಿನ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್‌ನ ಹೆಸರಾಂತ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದಲ್ಲಿ ಅಭಿಯಿಸುತ್ತಿದ್ದು, ಈ ಮೂಲಕ ಮೊದಲ ಬಾರಿಗೆ ದಕ್ಷಿಣದ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ: Meghana Gaonkar: ಪೊಲೀಸ್ ಡ್ರೆಸ್‌ನಲ್ಲಿ ರೀಲ್ಸ್ ಮಾಡಿದ ನಟಿ ಮೇಘನಾ! ವೈರಲ್ ಆಯ್ತು ವಿಡಿಯೋ
ಸೈಂಧವ್ ಚಿತ್ರಕ್ಕೆ ಸಂತೋಷ್ ನಾರಾಯಣ್ ಸಂಗೀತ ಕೊಡುತ್ತಿದ್ದಾರೆ. ಶೈಲೇಶ್ ಕೋಲನು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಎಸ್. ಮಣಿಕಂದನ್ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಇತರ ಪಾತ್ರಗಳನ್ನು ರಿವೀಲ್ ಮಾಡೋಕೆ ಸಿನಿಮಾ ತಂಡ ಪ್ಲಾನ್ ಮಾಡಿದೆ. ಡಿಸೆಂಬರ್-22 ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಸಿನಿಮಾ ತಂಡ ಈಗಾಗಲೇ ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ