ಸ್ಯಾಂಡಲ್ವುಡ್ (Sandalwood) ನಲ್ಲಿ ಸಿನಿಮಾಗಳ ರಿಲೀಸ್ ಭರಾಟೆ ಜಾಸ್ತಿ ಆಗಿದೆ. ಪ್ರತಿವಾರ ಐದೈದು ಸಿನಿಮಾ ರಿಲೀಸ್ ಆಗುತ್ತಿವೆ. ತಮ್ಮ ಈ ವರ್ಷದ ಕೋಟ ಕೂಡ ಪೂರ್ಣಗೊಳಿಸುತ್ತಿವೆ. ಪ್ರತಿ ವರ್ಷ ಇದೇ ರೀತಿನೇ ಇರುತ್ತದೆ. ವರ್ಷದ (2022 End) ಕೊನೆಯ ತಿಂಗಳಲ್ಲಿ ಸಿನಿಮಾಗಳು (Cinema Release) ರಿಲೀಸ್ ಆಗುತ್ತವೆ. ಮತ್ತೊಂದು ವರ್ಷಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ರಿಲೀಸ್ಗೆ ಇರೋ ಸಿನಿಮಾಗಳೆಲ್ಲವನ್ನೂ ರಿಲೀಸ್ ಮಾಡಲಾಗುತ್ತದೆ. ಹಾಗಿರೋವಾಗ 2022 ರಲ್ಲಿ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲಿ ಪ್ಯಾನ್ (Pan India) ಇಂಡಿಯಾ ಮಟ್ಟದಲ್ಲಿಯೆ ರಿಲೀಸ್ ಆಗಿರೋ ಸಿನಿಮಾಗಳು ಇವೆ. ಈ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕನ್ನಡದ ನಟಿಯರು ಎಲ್ಲೆಡೆ ಮಿಂಚಿದ್ದಾರೆ. 2022 ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳಗಿದ ಕನ್ನಡತಿಯರ ಪರಿಚಯದ ಪಟ್ಟಿ ಇಲ್ಲಿದೆ. ಓದಿ.
ಕನ್ನಡದ ನಟಿಯರು ಪ್ಯಾನ್ ಇಂಡಿಯಾದಲ್ಲಿ ಚಿರಪರಿಚಿತ!
ಪ್ಯಾನ್ ಇಂಡಿಯಾ ಅನ್ನೋದು ಒಂದು ಕನಸಲ್ಲ. ಈಗ ಕನ್ನಡದಲ್ಲಿ ಅದು ಕಾಮನ್ ಆಗಿದೆ. ಕೆಜಿಎಫ್ ಸಿನಿಮಾ ಬಂದ್ಮೇಲೆ ಪ್ಯಾನ್ ಇಂಡಿಯಾ ದಾರಿ ಸುಗಮವಾಗಿದೆ. ಈ ಮೂಲಕ ಕನ್ನಡದ ನಟರು-ನಟಿಯರು ದೇಶ-ವಿದೇಶಕ್ಕೂ ಪರಿಚಯ ಆಗುತ್ತಿದ್ದಾರೆ.
ಕಾಂತಾರದ ಲೀಲಾ ಈಗ ಎಲ್ಲರಿಗೂ ಪರಿಚಿತ!
ಕನ್ನಡದ ಕಾಂತಾರ ಸಿನಿಮಾದ ಪ್ರತಿ ಪಾತ್ರವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪರಿಚಯ ಆಗಿದ್ದಾರೆ. ವಿಶೇಷವಾಗಿ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಇಡೀ ನಾಡಿಗೆ ಪರಿಚಯ ಆಗಿದ್ದಾರೆ. ದೇಶ-ವಿದೇಶದಲ್ಲೂ ಈ ಚೆಲುವೆಯ ರೂಪ-ರಾಶಿ ಈಗ ಚಿರಪರಿಚಿತವಾಗಿದೆ.
ಸಪ್ತಮಿ ಗೌಡ ಸಾರಿ ಉಟ್ಟುಕೊಳ್ಳುವ ರೀತಿಯಿಂದ ಹಿಡಿದು, ಎರಡು ಕಡೆಗೂ ಮೂಗುತಿ ಚುಚ್ಚಿಸಿಕೊಳ್ಳುವ ವರೆಗೂ ಎಲ್ಲವೂ ಈಗ ಟ್ರೆಂಡ್ ಆಗಿ ಬಿಟ್ಟಿದೆ. ಅಷ್ಟು ಆವರಿಸಿಕೊಳ್ಳುವ ಸಪ್ತಮಿ ಗೌಡ ಯುವಕರ ಸದ್ಯದ ಫೇವರೆಟ್ ನಟಿ ಆಗಿದ್ದಾರೆ.
ಸಪ್ತಮಿ ಗೌಡ ಮುಂಚೆ ಕಿಚ್ಚು ಹಚ್ಚಿದ್ದ ಕೆಜಿಎಫ್ ಶ್ರೀನಿಧಿ ಶೆಟ್ಟಿ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇಡೀ ನಾಡಿನ ಹೆಮ್ಮೆಯನ್ನ ಹೆಚ್ಚಿಸಿದೆ. ಹೊಸಬರಿಗೆ ಪ್ಯಾನ್ ಇಂಡಿಯಾ ಕನಸು ನನಸು ಮಾಡಿಕೊಳ್ಳುವ ಶಕ್ತಿಯನ್ನೂ ತುಂಬಿದೆ.
ದೇಶ-ವಿದೇಶ ಅಲ್ಲದೇ ಪಾಕಿಸ್ತಾನದಂತ ದೇಶದಲ್ಲೂ ಕೆಜಿಎಫ್ ಕಮಾಲ್ ಮಾಡಿತ್ತು. ರಾಕಿಂಗ್ ಸ್ಟಾರ್ ಯಶ್ ಜನರಿಗೆ ರಾಕಿ ಭಾಯ್ ಆಗಿಯೇ ಪರಿಚಯವಾದ್ರು
ರಾಕಿ ಭಾಯ್ ಜೊತೆಗೆ ರೀನಾ ಪಾತ್ರಧಾರಿ ಶ್ರೀನಿಧಿ ಶೆಟ್ಟಿ ಕೂಡ ಹೆಸರು ಪಡೆದರು.
ಎಲ್ಲರಿಗೂ ಪರಿಚಯವಾಗಿ ಕುತೂಹಲ ಮೂಡಿಸಿದ್ದರು. ಕೆಜಿಎಫ್ ಪಾರ್ಟ್-1 ಬಳಿಕ ರೀನಾ ಪಾತ್ರ ಪಾರ್ಟ್-2 ದಲ್ಲೂ ಇರುತ್ತಾ ಅನ್ನೋ ಕುತೂಹಲದ ಪ್ರಶ್ನೆಯನ್ನೂ ಮೂಡಿಸಿತ್ತು.
ಕೆಜಿಎಫ್-2 ಸಿನಿಮಾ ಬಂದಾಗ, ರೀನಾ ಪಾತ್ರಧಾರಿ ಶ್ರೀನಿಧಿ ಶೆಟ್ಟಿ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದರು. ಸಿನಿಮಾದಲ್ಲಿ ಅತಿ ಹೆಚ್ಚು ಕಾಣಿಸಿಕೊಂಡು ಕನ್ನಡಿಗರು ಸೇರಿದಂತೆ ಎಲ್ಲ ಭಾಷೆಯ ಸಿನಿಪ್ರೇಮಿಗಳಿಗೂ ಪರಿಚಯವಾಗಿ ಮಿಂಚಿದರು.
ಚಾರ್ಲಿ-777 ಮೂಲಕ ಕನ್ನಡತಿ ಸಂಗೀತಾ ಶೃಂಗೇರಿ ಮಿಂಚಿಂಗ್
ಕನ್ನಡದ ಮತ್ತೊಬ್ಬ ನಟಿ ಸಂಗೀತ ಶೃಂಗೇರಿ ಕೂಡ ಮಿಂಚಿದರು. ಚಾರ್ಲಿ-777 ಮುಂಚೆ ಸೀರಿಯಲ್ ನಲ್ಲೂ ಸಂಗೀತ ಶೃಂಗೇರಿ ಅಭಿನಯಸಿದ್ದರು. ಆ ಮೂಲಕ ಸೀರಿಯಲ್ ಪ್ರೇಮಿಗಳಿಗೆ ಪರಿಚಯವಾಗಿದ್ದರು. ಆದರೆ ಚಾರ್ಲಿ-777 ಚಿತ್ರದಲ್ಲಿ ಡಾಗ್ ಲವರ್ ಆಗಿಯೇ ಎಲ್ಲರಿಗೂ ಸಂಗೀತಾ ಶೃಂಗೇರಿ ಪರಿಚಯವಾದ್ರು.
ಈ ಮೂಲಕ ಸಂಗೀತಾ ಕೇವಲ ಕನ್ನಡಿಗರಿಗೆ ಪರಿಚಯವಾಗಲಿಲ್ಲ. ಚಾರ್ಲಿ-777 ಎಲ್ಲಿ ರಿಲೀಸ್ ಆಗಿದೆಯೋ ಆಯಾ ಭಾಷೆಯ ಸಿನಿ ಪ್ರೇಮಿಗಳಿಗೂ ಸಂಗೀತಾ ಇಷ್ಟ ಆಗಿದ್ದಾರೆ. ಇತ್ತೀಚಿಗೆ ಈ ಸಿನಿಮಾ ಥೈಲ್ಯಾಂಡ್ ನಲ್ಲೂ ರಿಲೀಸ್ ಆಗಿದ್ದು, ಅಲ್ಲೂ ಕೂಡ ನಟಿ ಸಂಗೀತಾ ಶೃಂಗೇರಿ ಪರಿಚಯ ಆಗಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕೂಡ ಎಲ್ಲೆಡೆ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಉಡುಪಿ ಜಿಲ್ಲೆಯ ನಟಿ ನೀತಾ ಅಶೋಕ್ ಕೂಡ ಎಲ್ಲರಿಗೂ ಪರಿಚಯ ಆದ್ರು, ಕಿಚ್ಚನ ಪೇರ್ ಅಲ್ಲದೇ ಇದ್ರೂ, ನಿರೂಪ್ ಭಂಡಾರಿ ಜೋಡಿಯಾಗಿ ಕನ್ನಡಿಗರು ಸೇರಿದಂತೆ ಎಲ್ಲರಿಗೂ ಮೋಡಿ ಮಾಡಿದರು.
ಬನಾರಸ್ ಮೂಲಕ ಸೋನಲ್ ಮೊಂತೆರೋ ಹಲ್ಚಲ್!
ನವ ನಟ ಝೈದ್ ಖಾನ್ ಅಭಿನಯದ ಬನಾರಸ್ ಚಿತ್ರವೂ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ ಹಾಗೂ ಕೋಸ್ಟಲ್ ವುಡ್ ನಲ್ಲಿ ಮಿಂಚಿದ ನಟಿ ಸೋನಲ್ ಮೊಂತೆರೋ ಕೂಡ ಬನಾರಸ್ ಚಿತ್ರದ ಮೂಲಕ ಎಲ್ಲರಿಗೂ ಪರಿಚಯ ಆದರು.
ಇದನ್ನೂ ಓದಿ: Sapthami Gowda: ಕಾಂತಾರ ಚಿತ್ರದ ಲೀಲಾ ಮೋಹಕ ರೂಪ! ಕಪ್ಪು ಉಡುಗೆಯಲ್ಲಿ ಸಪ್ತಮಿ
ಹೀಗೆ ಕನ್ನಡದ ನಟಿಯರು ಈ ವರ್ಷವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೆ ಪರಿಚಯ ಆಗಿ ಮಿಂಚಿದ್ದಾರೆ. ಮುಂದಿನ ವರ್ಷ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಚಿತ್ರದ ಮುಖಾಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಳೆಯಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ