• Home
  • »
  • News
  • »
  • entertainment
  • »
  • Sharmiela Mandre: ಮರ್ಡರ್ ಲೈವ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ! ಹಾಲಿವುಡ್ ಟಚ್​​ನಲ್ಲಿ ಬರ್ತಿದೆ ಕನ್ನಡ ಸಿನಿಮಾ

Sharmiela Mandre: ಮರ್ಡರ್ ಲೈವ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ! ಹಾಲಿವುಡ್ ಟಚ್​​ನಲ್ಲಿ ಬರ್ತಿದೆ ಕನ್ನಡ ಸಿನಿಮಾ

ಮರ್ಡರ್ ಲೈವ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ

ಮರ್ಡರ್ ಲೈವ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ

ಈ ಚಿತ್ರದ ಮೂಲಕ ಶರ್ಮಿಳಾ ಮಾಂಡ್ರೆ 10 ವರ್ಷದ ಬಳಿಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಕೊನೆಯದಾಗಿ ಮಿರತ್ತಲ್ ಹೆಸರಿನ ಚಿತ್ರವನ್ನ ಶರ್ಮಿಳಾ ಮಾಡಿದ್ದರು.

  • Share this:

ಕನ್ನಡದ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಸಿನಿಮಾಗಳು ಕಡಿಮೆ ಆಗುತ್ತಿವೆ. ಗಾಳಿಪಟ-2 (Gaalipaa-2) ಸಿನಿಮಾದಲ್ಲಿ ಹೊಸ ಕಿಚ್ಚು ಹಚ್ಚಿದ್ದ ಶರ್ಮಿಳಾ, ತಮಿಳು ಸಿನಿಮಾಗಳಲ್ಲೂ ಬ್ಯುಸಿ ಆಗಿರುತ್ತಾರೆ. ಇಂದಿನ ದಿನಗಳಲ್ಲಿ ಕ್ರೈಮ್ ಥ್ರಿಲ್ಲರ್ (Thriller Cinema) ಚಿತ್ರಗಳು ಜನರನ್ನ ಹೆಚ್ಚು ಸೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ರೆಡಿ ಆಗ್ತಿರೋ ಕನ್ನಡ (Kannada) ಮತ್ತು (Tamil Cinema) ತಮಿಳು ಭಾಷೆಯಲ್ಲಿ ರೆಡಿ ಆಗುತ್ತಿರೋ ಚಿತ್ರವೊಂದನ್ನ ಶರ್ಮಿಳಾ ಮಾಂಡ್ರೆ ಈಗ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಟೈಟಲ್ ಕೂಡ ಇಂಟ್ರಸ್ಟಿಂಗ್ ಆಗಿದೆ. ಇಂಗ್ಲೀಷ್ ಟೈಟಲ್​ನ ಈ ಚಿತ್ರವನ್ನ ಹಾಲಿವುಡ್​ ಗುಣಮಟ್ಟದಲ್ಲಿಯೇ ತಯಾರಿಸಲಾಗಿದೆ.


ಮರ್ಡರ್ ಲೈವ್ ಚಿತ್ರದಲ್ಲಿ ಕನ್ನಡತಿ ಶರ್ಮಿಳಾ ಮಾಂಡ್ರೆ
ಶರ್ಮಿಳಾ ಮಾಂಡ್ರೆ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಕಡಿಮೆ ಆಗಿವೆ. ಈಗೀಗ ಒಪ್ಪಿಕೊಳ್ತಿರೋ ಸಿನಿಮಾಗಳಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳೂ ಇವೆ. ಆ ಸಾಲಿನಲ್ಲಿ ಶರ್ಮಾಳಾ ಮಾಂಡ್ರೆ ಒಪ್ಪಿಕೊಂಡ ಸಿನಿಮಾದ ಹೆಸರು ವಿಶೇಷವಾಗಿಯೇ ಇದೆ. ಅದು ಮರ್ಡರ್ ಲೈವ್.


Actress Sharmiela Mandre Acted New Movie shooting Complete
ಕನ್ನಡ-ತಮಿಳು ಭಾಷೆಯ ಮರ್ಡರ್ ಲೈವ್ ಚಿತ್ರದಲ್ಲಿ ಶರ್ಮಿಳಾ


ಹೌದು, ಮರ್ಡರ್ ಲೈವ್ ಶೀರ್ಷಿಕೆಯ ಈ ಚಿತ್ರ ಒಂದು ಸೈಕಾಲಜಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾನೇ ಆಗಿದೆ. ಇಂತಹ ಈ ಚಿತ್ರ, ಹಾಲಿವುಡ್​ನ ಹೆಸರಾಂತ ನಿರ್ದೇಶಕ ನಿಕೋ ಮಾಸ್ತೋರಾಕಿಸ್ ಬರೆದ ಕಥೆಯನ್ನೆ ಆಧರಿಸಿದೆ.


ಮರ್ಡರ್ ಲೈವ್ ಚಿತ್ರಕ್ಕೆ ಹಾಲಿವುಡ್ ಡೈರೆಕ್ಟರ್ ಕಥೆ


ನಿಕೋ ಮಾಸ್ತೋರಾಕಿಸ್, ಈ ಹಿಂದೆ ಬ್ಲೈಂಡ್ ಡೇಟ್, ಗ್ಲಿಚ್, ಸ್ಕೈಕ್ ಹೈ ದಂತ ಚಿತ್ರಗಳನ್ನ ಡೈರೆಕ್ಟ್ ಮಾಡಿದ್ದಾರೆ. ಈಗ ಇವರೇ ಬರೆದ ಕಥೇನೆ ಮರ್ಡರ್ ಲೈವ್ ಹೆಸರಿನಲ್ಲಿ ಕನ್ನಡಕ್ಕೂ ಬರ್ತಿದೆ. ತಮಿಳು ಭಾಷೆಯಲ್ಲೂ ರೆಡಿ ಆಗುತ್ತಿದೆ.


10 ವರ್ಷದ ಬಳಿಕ ತಮಿಳು ಚಿತ್ರ ಮಾಡಿರೋ ಶರ್ಮಿಳಾ ಮಾಂಡ್ರೆ


ಇಂತಹ ಈ ಚಿತ್ರದ ಮೂಲಕ ಶರ್ಮಿಳಾ ಮಾಂಡ್ರೆ 10 ವರ್ಷದ ಬಳಿಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಕೊನೆಯದಾಗಿ ಮಿರತ್ತಲ್ ಹೆಸರಿನ ಚಿತ್ರವನ್ನ ಶರ್ಮಿಳಾ ಮಾಡಿದ್ದರು.


ಇದನ್ನೂ ಓದಿ: Bhoomi Shetty Film: ಕನ್ನಡದ ಬಿಗ್ ಬಾಸ್ ಕಿನ್ನರಿಗೆ ಕೆಂಡದ ಸೆರಗಿನ ಕಿಚ್ಚು, ಮಹಿಳಾ ಪ್ರಧಾನ ಚಿತ್ರದಲ್ಲಿ ಭೂಮಿ ಶೆಟ್ಟಿ


ಇಷ್ಟು ವರ್ಷದ ಬಳಿಕ ಈಗ ತಮಿಳು ಚಿತ್ರವನ್ನ ಮಾಡ್ತಿರೋ ಶರ್ಮಿಳಾ, ಮರ್ಡರ್​ ಲೈವ್ ಸಿನಿಮಾದ ನಾಯಕಿ ನಟಿನೇ ಆಗಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿಯೇ ಅಭಿನಯಿಸುತ್ತಿದ್ದಾರೆ.


ಮರ್ಡರ್ ಲೈವ್ ಚಿತ್ರದಲ್ಲಿ ಖತರ್ನಾಕ್ ಸೈಕೋ ಕಿಲ್ಲರ್
ಶರ್ಮಿಳಾ ಮಾಂಡ್ರೆ ಜೊತೆಗೆ ಹಾಲಿವುಡ್​ ನಟಿ ಕೂಡ ಅಭಿನಯಿಸುತ್ತಿದ್ದಾರೆ. ಮರ್ಡರ್ ಲೈವ್ ಸಿನಿಮಾದ ಕಥೆ ನಿಜಕ್ಕೂ ವಿಶೇಷವಾಗಿಯೇ ಇದೆ. ಚಿತ್ರದಲ್ಲಿ ಬರೋ ಆ ಸೈಕೋ ಕಿಲ್ಲರ್ ಒಬ್ಬ ಹ್ಯಾಕರ್ ಕೂಡ ಹೌದು. ಈತನ ಮರ್ಡರ್ ಮಾಡೋ ರೀತಿನೇ ಬೇರೆ ಇರುತ್ತದೆ.


Actress Sharmiela Mandre Acted New Movie shooting Complete
ಮರ್ಡರ್ ಲೈವ್ ಚಿತ್ರದ ಖಳನಾಯಕ ನಟ ವಿನಯ್ ರೈ


ನಾಲ್ವರು ಮಹಿಳೆಯರ ಸುತ್ತ ಮರ್ಡರ್ ಲೈವ್ ಸಿನಿಮಾ
ಇಂತಹ ಕಥೆಯಲ್ಲಿ ನಾಲ್ವರು ಮಹಿಳೆಯರ ಸುತ್ತವೇ ಇಡೀ ಕಥೆ ಸಾಗುತ್ತದೆ. ಈ ಮೂಲಕ ಕಷ್ಟದ ಪರಿಸ್ಥಿತಿಯಲ್ಲಿ ಸಾಮಾನ್ಯ ಮಹಿಳೆಯರು ಹೇಗೆಲ್ಲ ಸಿಡಿದೇಳುತ್ತಾರೆ ಅನ್ನೋದನ್ನ ಕೂಡ ಈ ಚಿತ್ರದಲ್ಲಿ ತೋರಲಾಗಿದೆ.


ಮರ್ಡರ್ ಲೈವ್ ಚಿತ್ರದಲ್ಲಿ ವಿನಯ್ ರೈ ಸೈಕೋ ವಿಲನ್
ಇಟಿ ಮತ್ತು ಶಿವಕಾರ್ತಿಕೇಯನ್ ಅಭಿನಯದ ಡಾಕ್ಟರ್ ಚಿತ್ರದಲ್ಲಿ ನಟ ವಿನಯ್ ರೈ ಭಾರೀ ಸ್ಕೋರ್ ಮಾಡಿದ್ದರು. ಅದೇ ವಿನಯ್ ರೈ ಈ ಚಿತ್ರದಲ್ಲಿ ಖಳನಾಯಕನಾಗಿ ಕಂಗೊಳಿಸುತ್ತಿದ್ದಾರೆ.


ಮುರುಗೇಶ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೂರ್ಣ
ಮರ್ಡರ್ ಲೈವ್ ಸಿನಿಮಾದ ಚಿತ್ರೀಕರಣ ಬಹುತೇಕ ಇಂಗ್ಲೆಂಡ್ ನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಮರುಗೇಶ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.


ಇದನ್ನೂ ಓದಿ: Kantara: ಕಾಂತಾರ ಸಿನಿಮಾ ವೀಕ್ಷಿಸಿ ಪ್ರತಿಕ್ರಿಯಿಸಿದ ಪ್ರಭಾಸ್! ಏನಂದ್ರು?


ಅತ್ಯಾಧುನಿಕ ಟೆಕ್ನಾಲಜಿಯನ್ನ ಬಳಸಿಯೇ ಇಡೀ ಚಿತ್ರವನ್ನ ಈಗಾಗಲೇ ಚಿತ್ರೀಕರಣ ಮಾಡಲಾಗಿದೆ. ಸಂಕಲನಕಾರ ಮದನ್ ಈ ಚಿತ್ರವನ್ನ ಎಡಿಟ್ ಮಾಡುತ್ತಿದ್ದಾರೆ.


ಮರ್ಡರ್ ಲೈವ್ ಚಿತ್ರಕ್ಕೆ ಪ್ರಶಾಂತ್ ಡಿ. ಸಂಗೀತ ಕೊಡ್ತಿದ್ದಾರೆ. ಇನ್ನುಳಿದಂತೆ ಚಿತ್ರ ತಮಿಳು ಮತ್ತು ಕನ್ನಡ ಎರಡು ಭಾಷೆಯಲ್ಲಿ ರೆಡಿ ಆಗುತ್ತಿದೆ. ಈ ಮೂಲಕ ನಟಿ ಶರ್ಮಿಳಾ ಮಾಂಡ್ರೆ ಎರಡು ಭಾಷೆಯಲ್ಲೂ ಅಭಿನಯಿಸಿದಂತಾಗಿದೆ.

First published: