Vikram: ಕಮಲ್ ಹಾಸನ್ ಸಿನಿಮಾದಲ್ಲಿ ಕನ್ನಡ ನಟಿ! ಸಣ್ಣ-ಪುಟ್ಟ ಪಾತ್ರ ಅಲ್ಲ, ಇಂಟ್ರೆಸ್ಟಿಂಗ್​ ಕ್ಯಾರೆಕ್ಟರ್​

ಎಷ್ಟೋ ಜನ ಯುವ ನಟ, ನಟಿಯರು ಇವರ ಜೊತೆ ಪರದೆಯನ್ನು ಹಂಚಿಕೊಳ್ಳಬೇಕೆಂದು ಕನಸು ಕಾಣುತ್ತಿರುತ್ತಾರೆ. ಇಂತಹ ಒಂದು ಅದೃಷ್ಟವು ಈಗ ಕನ್ನಡ ಚಲನಚಿತ್ರೋದ್ಯಮದ ನಟಿಗೆ ಒಲಿದು ಬಂದಿದೆ ಎಂದು ಹೇಳಬಹುದು.

ಕಮಲ್​ ಹಾಸನ್​

ಕಮಲ್​ ಹಾಸನ್​

  • Share this:
ತಮಿಳು (Tamil) ಚಲನಚಿತ್ರೋದ್ಯಮದ ಹಿರಿಯ ನಟ ಕಮಲ್ ಹಾಸನ್ (Kamal Hassan) ಅವರ ಚಲನಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ತಿಳಿದರೆ ಸಾಕು ಅಭಿಮಾನಿಗಳು ಎಂತಹ ದೊಡ್ಡ ಸಾಲಿನಲ್ಲಿ ನಿಂತಾದರೂ ಟಿಕೆಟ್ (Ticket) ಪಡೆದುಕೊಂಡು ಸಿನಿಮಾ ನೋಡುತ್ತಾರೆ. ಈಗ ಇವರ ಮುಂಬರುವ ಚಿತ್ರವಾದ ‘ವಿಕ್ರಮ್’ (Vikram)  ನ ಬಿಡುಗಡೆಗಾಗಿ ಇವರ ಅಭಿಮಾನಿಗಳು (Fans) ಕಾತುರತೆಯಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು. ಇವತ್ತಿಗೂ ಅದೇ ಕ್ರೇಜ್ (Craze) ಅನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಹಿರಿಯ ನಟರ ಪೈಕಿಯಲ್ಲಿ ಕಮಲ್ ಹಾಸನ್ ಸಹ ಒಬ್ಬರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಎಷ್ಟೋ ಜನ ಯುವ ನಟ, ನಟಿಯರು ಇವರ ಜೊತೆ ಪರದೆಯನ್ನು ಹಂಚಿಕೊಳ್ಳಬೇಕೆಂದು ಕನಸು ಕಾಣುತ್ತಿರುತ್ತಾರೆ. ಇಂತಹ ಒಂದು ಅದೃಷ್ಟವು ಈಗ ಕನ್ನಡ ಚಲನಚಿತ್ರೋದ್ಯಮದ ನಟಿಗೆ ಒಲಿದು ಬಂದಿದೆ ಎಂದು ಹೇಳಬಹುದು.

ಕಮಲ್​ ಹಾಸನ್​ ಸಿನಿಮಾದಲ್ಲಿ ಕನ್ನಡದ ನಟಿ!

ಈ ಚಿತ್ರದಲ್ಲಿ ಕನ್ನಡ ಚಲಚಿತ್ರೋದ್ಯಮದ ನಟಿಯೊಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಯಾರಪ್ಪಾ ಆ ಕನ್ನಡದ ನಟಿ, ನಟ ಕಮಲ್ ಹಾಸನ್ ಜೊತೆ ನಟಿಸಲಿರುವುದು ಅಂತ ನಿಮಗೆಲ್ಲಾ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರಬೇಕಲ್ಲವೇ? ಆ ನಟಿ ಕನ್ನಡ ಚಲನಚಿತ್ರೋದ್ಯಮದ ಜನಪ್ರಿಯ ಮತ್ತು ಬಹು ಬೇಡಿಕೆಯ ನಟನಾದ ಯಶ್ ಜೊತೆಗೆ 'ಮಾಸ್ಟರ್‌ಪೀಸ್’ ಚಿತ್ರದಲ್ಲಿ ನಟಿಸಿದ ಶಾನ್ವಿ ಶ್ರೀವಾಸ್ತವ ಎಂದು ಹೇಳಬಹುದು.

ವಿಕ್ರಮ್​ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ!

ತಮಿಳಿನ ಲೋಕೇಶ್ ಕನಗರಾಜ್ ನಿರ್ದೇಶನದ ಕಮಲ್ ಹಾಸನ್ ಅವರ ಮುಂದಿನ 'ವಿಕ್ರಮ್' ಚಿತ್ರವು ಜೂನ್ 3 ರಂದು ದೇಶಾದ್ಯಂತ ಬಹುತೇಕ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. 'ವಿಕ್ರಮ್' ಚಿತ್ರವು 2022 ರಲ್ಲಿ ತಮಿಳು ಚಿತ್ರರಂಗದಲ್ಲಿಯೇ ಇದು ಒಂದು ಬಹು ನಿರೀಕ್ಷಿತ ಚಿತ್ರ ಎಂದು ಹೇಳಬಹುದು.

ಇದನ್ನೂ ಓದಿ: KGF 2 ಸಿನಿಮಾ ನೋಡಿದ ಗುಜರಾತ್ ಟೈಟನ್ಸ್​ ಟೀಂ, ರಾಕಿ ಭಾಯ್​ ಅಬ್ಬರ ಕಂಡು ದಂಗಾದ ಹಾರ್ದಿಕ್​ ಪಾಂಡ್ಯ!

ವರದಿಗಳ ಪ್ರಕಾರ, ಕನ್ನಡದ ನಟಿ ಶಾನ್ವಿ ಶ್ರೀವಾಸ್ತವ ಅವರು ನಟ ಕಮಲ್ ಅವರ ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ನಟಿಯ ದೃಶ್ಯಗಳು ಸುಮಾರು 10 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗಿದೆ. ವಿಜಯ್ ಸೇತುಪತಿ ಕೂಡ ಈ ಚಿತ್ರದಲ್ಲಿ ಫ್ಲ್ಯಾಶ್ ಬ್ಯಾಕ್ ಕಥೆಯನ್ನು ಹೊಂದಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.

ವಿಜಯ್​ ಸೇತುಪತಿ-ಫಹಾದ್​ ಫಾಸಿಲ್​ ಜುಗಲ್​ಬಂದಿ!

ಈ ಚಿತ್ರದಲ್ಲಿ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ನಟ ಕಮಲ್ ಹಾಸನ್ ಫ್ಲಾಶ್ ಬ್ಯಾಕ್ ಕಥೆಗಾಗಿ 30 ವರ್ಷದ ಯುವಕನಾಗಿ ಕಾಣಿಸಿಕೊಳ್ಳುವ ಅನೇಕ ದೃಶ್ಯಗಳಿರಲಿವೆ ಎಂದು ಈ ಹಿಂದೆ ವರದಿಯಾಗಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಚಲನಚಿತ್ರ ನಿರ್ಮಾಪಕರು ಹಾಲಿವುಡ್ ಚಲನಚಿತ್ರಗಳಲ್ಲಿ ನಟನನ್ನು ಯಂಗ್ ಆಗಿ ಕಾಣುವಂತೆ ಮಾಡಲು ಬಳಸುವ ತಂತ್ರಜ್ಞಾನಕ್ಕಾಗಿ 10 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ತೆರೆಗೆ ಬರಲಿದೆ ಕ್ಯಾ.ಗೋಪಿನಾಥ್ ಜೀವನಗಾಥೆ! ಕನ್ನಡಿಗನಾಗಿ ಮಿಂಚಲಿದ್ದಾರೆ ಅಕ್ಷಯ್ ಕುಮಾರ್

ಈ ಚಿತ್ರದ ಚಿತ್ರೀಕರಣವು 2021 ರಲ್ಲಿ ಪ್ರಾರಂಭವಾಯಿತು ಮತ್ತು ಮಾರ್ಚ್ ತಿಂಗಳಿನಲ್ಲಿ ಪೂರ್ಣಗೊಂಡಿತು ಮತ್ತು ಚಿತ್ರವು ಈಗ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಟ್ರೈಲರ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಯಿದೆ. 'ವಿಕ್ರಮ್' ಕಳೆದ ವರ್ಷ ಶೀರ್ಷಿಕೆ ಟೀಸರ್ ಅನ್ನು ಬಿಡುಗಡೆ ಮಾಡಿತ್ತು ಮತ್ತು ಇದು ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಆಸಕ್ತಿಯನ್ನು ಕೆರಳಿಸಿದೆ ಎಂದು ಹೇಳಬಹುದು.
Published by:Vasudeva M
First published: