ಕನ್ನಡದ ಕಾಂತಾರ ಚಿತ್ರದ ಬೆಡಗಿ (Sapthami Gowda) ಸಪ್ತಮಿ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಪ್ರಚಾರದಲ್ಲೂ ಅಷ್ಟೇ ಶೃದ್ದೆಯಿಂದಲೇ ತೊಡಗಿಕೊಂಡಿದ್ದರು. ಅದೇ ರೀತಿ (Kantara Movie Heroin) ಕಾಂತಾರ ಸಿನಿಮಾ ಹಿಟ್ ಆದ್ಮೇಲೆ ಸಪ್ತಮಿ ಗೌಡ ಏನೇ ಮಾಡಿದ್ರು ವೈರಲ್ ಆಗುತ್ತವೆ. ತಮ್ಮ ಸೋಷಿಯಲ್ (social media) ಮೀಡಿಯಾ ಪೇಜ್ಲ್ಲಿ ಒಂದೇ ಒಂದು ಫೋಟೋ ಹಾಕಿದ್ರು ಸಾಕು, ಅದು ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಪ್ರತಿ ದಿನ ಹೀಗೆ ಸುದ್ದಿ ಆಗೋ (Sapthami Gowda New Photos) ನಟಿ ಸಪ್ತಮಿ ಗೌಡ, ತಮ್ಮ ಟ್ವಿಟರ್ ಪೇಜ್ ಅಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಸಿನಿಮಾದ ಮಾಹಿತಿಯನ್ನೂ ಕೊಡ್ತಾನೇ ಇರ್ತಾರೆ. ಅದೇ ರೀತಿ ಈಗೊಂದು ವಿಡಿಯೋ ಶೇರ್ ಮಾಡಿದ್ದಾರೆ. ಇದು ತುಂಬಾ ಸ್ಪೆಷಲ್ ಆಗಿದೆ.
ಇದರ ಹಿಂದಿನ ಸೀಕ್ರೆಟ್ ಏನು ಅನ್ನೋದನ್ನ ಸ್ವತಃ ಸಪ್ತಮಿ ಗೌಡ, ನ್ಯೂಸ್-18 ಕನ್ನಡ ಡಿಜಿಟಲ್ಗೆ ಹೇಳಿಕೊಂಡಿದ್ದಾರೆ.
ಅಪ್ಸರೆಯಂತೆ ಕಂಗೊಳಿಸ್ತಿರೋ ಸಪ್ತಮಿ ಗೌಡ!
ಕಾಂತಾರ ಚಿತ್ರದಲ್ಲಿ ಕನ್ನಡದ ನಟಿ ಸಪ್ತಮಿ ಗೌಡ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡರು. ತಮ್ಮ ಈ ಸರಳ ರೂಪದಿಂದಲೇ ಅದೆಷ್ಟೋ ಜನರ ದಿಲ್ ಕದ್ದರು ನಟಿ ಸಪ್ತಮಿ ಗೌಡ. ಈ ನಟಿಯ ಸಿಂಪಲ್ ರೂಪರಾಶಿಗೆ ಎಲ್ಲರೂ ಫಿದಾ ಆಗಿದ್ದರು.
ಸಪ್ತಮಿ ಗೌಡ ಚಿತ್ರ ಜೀವನದಲ್ಲಿ ಕಾಂತಾರ ಎರಡನೇ ಸಿನಿಮಾ ಆಗಿತ್ತು. ಈ ಚಿತ್ರದಲ್ಲಿ ಅಭಿನಯಿಸಿದ್ದೇ ತಡ ಕನ್ನಡದ ಸಪ್ತಮಿ ಗೌಡ ಈಗ ಪ್ಯಾನ್ ಇಂಡಿಯಾ ನಟಿ ಆಗಿದ್ದಾರೆ. ಎರಡನೇ ಚಿತ್ರದಲ್ಲಿ ಇಂತಹ ಸಕ್ಸಸ್ ಎಲ್ಲರಿಗೂ ಸಿಗೋದಿಲ್ಲ ಬಿಡಿ.
ಸಪ್ತಮಿ ಗೌಡ ಹೊಸ ಫೋಟೋ ಶೂಟ್ ವೀಡಿಯೋ ವೈರಲ್
ಕಾಂತಾರ ಚಿತ್ರದ ಲೀಲಾ ಲಕ್ ಚೆನ್ನಾಗಿದೆ. ರಾತ್ರೋ ರಾತ್ರಿ ಪ್ಯಾನ್ ಇಂಡಿಯಾ ನಟಿ ಆಗೋದು ಅಂದ್ರೆ ಅದಕ್ಕೆ ಲಕ್ ಬೇಕೇ ಬೇಕು ನೋಡಿ. ಆ ಲಕ್ ಪಡೆದ ನಟಿ ಸಪ್ತಮಿ ಗೌಡ, ಈಗ ಹೊಸ ಹೊಸ ಫೋಟೋಶೂಟ್ ಅನ್ನು ಮಾಡಿಸುತ್ತಿದ್ದಾರೆ.
ಫೋಟೋಶೂಟ್ ಮಾಡಿಸಿರೋ ವೀಡಿಯೋ ಮತ್ತು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸಪ್ತಮಿ ಗೌಡ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ತಮ್ಮ ಸಿನಿಮಾದ ವಿಶೇಷ ವಿಷಯಗಳನ್ನೂ ಶೇರ್ ಮಾಡಿಕೊಳ್ತಾರೆ.
ಸಪ್ತಮಿ ಗೌಡ ಹೊಸ ವೀಡಿಯೋದ ಹಿಂದಿನ ಸೀಕ್ರೆಟ್ ಏನು?
ಸಪ್ತಮಿ ಗೌಡ ಈಗೊಂದು ವೀಡಿಯೋ ಶೇರ್ ಮಾಡಿದ್ದಾರೆ. ಇದು ನಿಜಕ್ಕೂ ಸ್ಪೆಷಲ್ ಆಗಿದೆ. ಈ ವೀಡಿಯೋದಲ್ಲಿ ಸಪ್ತಮಿ ಗೌಡ ಸುಂದರ ಕಾಸ್ಟೂಮ್ ಧರಿಸಿಕೊಂಡಿದ್ದಾರೆ. ಚಂದದ ಆಭರಣಗಳನ್ನೂ ಧರಿಸಿಕೊಂಡು ಅಪ್ಸರೆಯಂತೆ ಕಾಣುತ್ತಿದ್ದಾರೆ.
View this post on Instagram
ಸಪ್ತಮಿ ಗೌಡ ತಮ್ಮ ಈ ಫೋಟೋ ಶೂಟ್ನ ವೀಡಿಯೋವನ್ನ ಟ್ವಿಟರ್ ಪೇಜ್ಲ್ಲಿ ಶೇರ್ ಮಾಡೋದಲ್ಲದೇ, can’t wait to show you guys this! Unveiling soon ಅಂತಲೂ ಬರೆದುಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಸಪ್ತಮಿ ಗೌಡ
ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ ಚಿತ್ರದಲ್ಲೂ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಮುಹೂರ್ತ ಕೂಡ ಆಗಿದೆ. ಡೈರೆಕ್ಟರ್ ಕೃಷ್ಣ, ಶೂಟಿಂಗ್ ಪ್ಲಾನ್ ಕೂಡ ಮಾಡಿಕೊಳ್ಳುತ್ತಿದ್ದಾರೆ.
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಚಿತ್ರದಲ್ಲೂ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕಾಗಿ ಹೈದ್ರಾಬಾದ್ಗೂ ಸಪ್ತಮಿ ಗೌಡ ಹೋಗಿದ್ದರು. ತಮ್ಮ ಪಾತ್ರದ ಚಿತ್ರೀಕರಣ ಕೂಡ ಮುಗಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: Kannadathi: ಸಾನಿಯಾಳನ್ನು ಬಿಲ್ಡಿಂಗ್ ಮೇಲಿಂದ ತಳ್ಳಿದ ಆದಿ, ಆತಂಕದಲ್ಲಿ ಕಿರುಚಿದ ಭುವಿ!
ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಅವರಿಂದ ತುಂಬಾ ಕಲಿತಿದ್ದೇನೆ ಅಂತಲೂ ಸಪ್ತಮಿ ಗೌಡ ಹೇಳಿಕೊಂಡಿದ್ದಾರೆ. ಒಟ್ಟಾರೆ, ಸಪ್ತಮಿ ಗೌಡ ಬ್ಯುಸಿ ಆಗಿದ್ದಾರೆ. ವಿವಿಧ ಫೋಟೋ ಶೂಟ್ಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ಗಮನ ಸೆಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ