ಸ್ಯಾಂಡಲ್‌ವುಡ್‌ನಲ್ಲಿ ಒಂದೊಮ್ಮೆ ಮೀ ಟೂ (Sangeetha Bhat Movie Updates) ಬಿರುಗಾಳಿ ಸಿಕ್ಕಾಪಟ್ಟೆ ಬೀಸಿತ್ತು. ಇದರಿಂದ ಕನ್ನಡದ ಹಲವು ನಾಯಕಿಯರು ತಮ್ಮದೇ ಕೆಟ್ಟ ಅನುಭವಗಳನ್ನ ಹಂಚಿಕೊಂಡಿದ್ದರು. ನಾಯಕಿ (Sangeetha Bhat New Film Details) ನಟಿ ಸಂಗೀತಾ ಭಟ್ ಕೂಡ ಅದರಿಂದ ಹೊರತಾಗಿರಲಿಲ್ಲ. ತಮಗಾದ ಸಮಸ್ಯೆಯನ್ನ ಸಂಗೀತಾ ಭಟ್ ಸುದೀರ್ಘ (Sandalwood Sangeetha Bhat Movie) ಪತ್ರದ ಮೂಲಕವೇ ಹೇಳಿಕೊಂಡಿದ್ದರು. ಅದೇ ಕೊನೆ ಅನಿಸುತ್ತದೆ. ಸಂಗೀತಾ ಭಟ್ ಓದಲು ವಿದೇಶಕ್ಕೆ ಹೋದ್ರು. ಅಲ್ಲಿಂದ ಬಣ್ಣದ ನಂಟಿನಿಂದ ದೂರವೇ ಉಳಿದು ಬಿಟ್ರು ಅಂತಲೂ ಹೇಳಬಹುದು. ಆದರೆ ಸಂಗೀತ ಕಂಬ್ಯಾಕ್ ಮಾಡೋಕೆ ಮತ್ತೊಮ್ಮೆ (Kannada Actress New Movie Updates) ಮನಸ್ಸು ಮಾಡಿದ್ದರು.
ಅದಕ್ಕೆ ಸಂಗೀತಾ ಭಟ್ ಅವರಿಗೆ ವೇದಿಕೆ ಆಗಿರೋದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ.
ಆ ಚಿತ್ರಕ್ಕೆ ಅಂದು ಟೈಟಲ್ ಇನ್ನೂ ಫೈನಲ್ ಆಗಿರಲಿಲ್ಲ. ಆದರೆ ಈಗ ಆ ಚಿತ್ರದ ಟೈಟಲ್ ಫೈನಲ್ ಆಗಿದೆ. ರಿವೀಲ್ ಕೂಡ ಆಗಿದೆ.
ಸಂಗೀತಾ ಭಟ್ ಕಮ್ ಬ್ಯಾಕ್ ಸಿನಿಮಾ ಯಾವುದು ಗೊತ್ತೇ?
ಸಂಗೀತಾ ಭಟ್ ಕಮ್ ಬ್ಯಾಕ್ ಸಿನಿಮಾ ಟೈಟಲ್ ರಿವೀಲ್ ಆಗಿದೆ. ಈ ಮೊದಲೇ ಓದಿದಂತೆ, ಈ ಚಿತ್ರಕ್ಕೆ ಕ್ಲಾಂತ ಅನ್ನುವ ವಿಶೇಷ ಹೆಸರನ್ನ ಇಡಲಾಗಿದೆ. ಕನ್ನಡದಲ್ಲಿ ಹೊಸ ರೀತಿ ಟೈಟಲ್ ಅತಿ ಹೆಚ್ಚು ಗಮನ ಸೆಳೆಯುತ್ತಿವೆ. ಕಾಂತಾರ ಆ ಒಂದು ವಿಷಯದಲ್ಲಿ ದಿ ಬೆಸ್ಟ್ ಎಕ್ಸಾಂಪಲ್ ಅಂತಲೇ ಹೇಳಬಹುದು.
ಕ್ಲಾಂತ ಅಂದ್ರೇನೂ ಅಂತ ಸಿನಿಮಾ ತಂಡ ಎಲ್ಲೂ ಹೇಳಿಕೊಂಡಂತಿಲ್ಲ. ಆದರೆ ಇದನ್ನ ನೋಡಿದ್ರೆ, ಇದು ಕೂಡ "ಕ" ಅಕ್ಷರದಿಂದಲೇ ಶುರು ಆಗುತ್ತದೆ. ಕಾಂತಾರ ಚಿತ್ರದ ಟೈಟಲ್‌ನಿಂದಲೇ ಸ್ಪೂರ್ತಿ ಪಡೆದಿದೆ ಅಂತಲೂ ಗೆಸ್ ಮಾಡಬಹುದೇನೋ.
ಕ್ಲಾಂತ ಸಿನಿಮಾದಲ್ಲಿ ಸಂಗೀತಾ ಭಟ್ ಸಖತ್ ಆ್ಯಕ್ಷನ್!
ಇದರ ಹೊರತಾಗಿ ಕ್ಲಾಂತ ಸಿನಿಮಾ ಮೂಲಕ ಸಂಗೀತಾ ಭಟ್ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಯುವತಿಯ ಪಾತ್ರದಲ್ಲಿ ಸಂಗೀತಾ ಭಟ್ ಅಭಿನಯಿಸಿದ್ದಾರೆ. ಇದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ಸಂಗೀತಾ ಆ್ಯಕ್ಷನ್ ಕೂಡ ಮಾಡಿದ್ದಾರೆ. ಆ ಒಂದು ಆ್ಯಕ್ಷನ್ ದೃಶ್ಯ ಸಂಗೀತಾ ಭಟ್ ಅವರಿಗೆ ಖುಷಿ ಕೊಟ್ಟಿದೆ.
ಸಂಗೀತಾ ಭಟ್ ಅಭಿನಯದ ಈ ಚಿತ್ರವನ್ನ ವೈಭವ್ ಪ್ರಶಾಂತ್ ಡೈರೆಕ್ಟ್ ಮಾಡುತ್ತಿದ್ದಾರೆ. ವೈಭವ್ ಪ್ರಶಾಂತ್ ಏನೂ ಹೊಸಬರಲ್ಲ. ಈಗಾಗಲೇ ಮೂರು ಸಿನಿಮಾಗಳನ್ನ ಮಾಡಿದ್ದಾರೆ. ಹಾಗೆ ನಿರ್ದೇಶನ ಮಾಡಿದ ಚಿತ್ರಗಳ ಟೈಟಲ್ ಕೂಡ ವಿಶೇಷವಾಗಿಯೇ ಇವೆ. ರಂಗನ್ ಸ್ಟೈಲ್, ದಗಲ ಬಾಜಿ ಈ ಸಾಲಿನಲ್ಲಿ ಸೇರಿವೆ.
ಕನ್ನಡದ ಕ್ಲಾಂತ ಹೊಸ ಜಾನರ ಸಿನಿಮಾ
ಇದೀಗ ಕ್ಲಾಂತ ಸಿನಿಮಾ ಮೂಲಕ ವೈಭವ್ ಪ್ರಶಾಂತ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಈ ಮೊದಲಿನ ಸಿನಿಮಾಗಳಲ್ಲಿ ಬೇರೆ ಜಾನರ್ ಸಿನಿಮಾಗಳೇ ಆಗಿವೆ. ಇದೂ ಕೂಡ ವಿಭಿನ್ನ ಜಾನರ್ ಸಿನಿಮಾ ಆಗಿದೆ ಅನ್ನೋದು ಒಟ್ಟು ಮಾಹಿತಿ.
ಮಕ್ಕಳು ಅಪ್ಪ-ಅಮ್ಮನಿಗೆ ಸುಳ್ಳು ಹೇಳಿ ತಪ್ಪು ದಾರಿ ಹಿಡಿಯುತ್ತಾರೆ. ಆದರೆ ಅದನ್ನ ಮಾಡಬೇಡಿ ಅನ್ನೋದೇ ಕ್ಲಾಂತ ಸಿನಿಮಾ ಒಟ್ಟು ವಿಷಯ ಆಗಿದೆ. ಇದರ ಸುತ್ತವೇ ಸಿನಿಮಾ ಸಾಗುತ್ತದೆ. ಆಗಷ್ಟೇ ಟೀನೇಜ್ ದಾಟಿ ಕೆಲಸ ಮಾಡ್ತಿರೋ ಹುಡುಗಿಯಾಗಿಯೇ ಸಂಗೀತಾ ಭಟ್ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಗೀತಾ ಭಟ್ ಕಮ್ ಬ್ಯಾಕ್ ಸಿನಿಮಾ ಶೂಟಿಂಗ್ ಕಂಪ್ಲೀಟ್
ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಸಿನಿಮಾ ತಂಡ ಬ್ಯುಸಿ ಆಗಿದೆ. ಇದರ ಮಧ್ಯೆ ಸಿನಿಮಾ ತಂಡ ಟೈಟಲ್ ಕೂಡ ರಿಲೀಸ್ ಮಾಡಿದೆ. ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ವಿಘ್ನೇಶ್ ಈ ಚಿತ್ರದ ಮೂಲಕ ಕನ್ನಡಕ್ಕೂ ಬಂದಿದ್ದಾರೆ.
ಇದನ್ನೂ ಓದಿ: KD Heroine: ಕೆಡಿ ಚಿತ್ರದ ಮಚ್ಲಕ್ಷ್ಮಿ ಪರಿಚಯಕ್ಕೆ ಡೇಟ್ ಫಿಕ್ಸ್
ಚಿತ್ರದಲ್ಲಿ ಶೋಭರಾಜ್, ವೀಣಾ ಸಂಗೀತ, ಕಾಮಿಡಿ ಕಿಲಾಡಿ ದೀಪಿಕಾ ಹಾಗೂ ಪ್ರವೀಣ್ ಜೈನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಎಸ್.ಪಿ. ಚಂದ್ರಕಾಂತ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಮೋಹನ್ ಲೋಕನಾಥ್ ಛಾಯಾಗ್ರಹಣ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ