ಕನ್ನಡದ ಕಿರಿಕ್ ಪಾರ್ಟಿ ಸಂಯುಕ್ತಾ ಹೆಗಡೆ (Samyutkha Hegde) ಸದಾ ಆ್ಯಕ್ಟಿವ್ ಆಗಿರ್ತಾರೆ. ಸಿನಿಮಾಗಳ ಸುದ್ದಿಗಿಂತಲೂ ಸೋಷಿಯಲ್ ಮೀಡಿಯಾದಲ್ಲಿ ಸಂಯುಕ್ತಾ ಬೇಜಾನ್ ವೈರಲ್ (Samyuktha New Video Viral) ನೋಡಿ. ಸಂಯುಕ್ತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭಿನ್ನ-ವಿಭಿನ್ನ ವಿಡಿಯೋಗಳನ್ನು ಪೋಸ್ಟ್ ಮಾಡ್ತಾನೇ ಇರ್ತಾರೆ. ಫೋಟೋಗಳು ಸಖತ್ ಬೋಲ್ಡ್ ಆಗಿರುತ್ತದೆ. ಇದರ ಹೊರತಾಗಿ ಸಂಯುಕ್ತಾ ಹೆಗಡೆ (Kannada Actress) ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ಹುಡುಗಿ. ಡ್ಯಾನ್ಸ್ ಅಂತೂ ಅದ್ಬುತವಾಗಿಯೇ ಮಾಡ್ತಾರೆ. ಜಿಮ್ನಾಸ್ಟಿಕ್ ನೀರು ಕುಡಿದಷ್ಟೇ ಸಂಯುಕ್ತಾಗೆ ಸಲೀಸು. ಮೊನ್ನೆ ಚಿತ್ರೀಕರಣ ಮುಗಿಸಿರೊ ಕ್ರೀಮ್ ಚಿತ್ರದಲ್ಲಿ ಸಖತ್ (Samyuktha Fights) ಫೈಟ್ಸ್ ಕೂಡ ಮಾಡಿದ್ದಾರೆ. ಹಾಗೇನೆ ಆಗಲೇ ಕಾಲಿಗೆ ಗಂಭೀರ ಗಾಯ ಮಾಡಿಕೊಂಡು ಕೆಲವು ದಿನ ರೆಸ್ಟ್ ತೆಗೆದುಕೊಂಡಿದ್ದು ಆಗಿದೆ.
ಕ್ರೀಮ್ ಸಿನಿಮಾ, ಕಿರಿಕ್ ಬೆಡಗಿ, ಸಖತ್ ಫೈಟ್ಸ್
ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರವನ್ನ ಅಗ್ನಿ ಶ್ರೀಧರ್ ಬರೆದಿದ್ದಾರೆ.
ಈ ಚಿತ್ರದ ಚಿತ್ರೀಕರಣ ಪೂರ್ಣ ಆಗಿದೆ. ಇದಾದ್ಮೇಲೆ ನಟಿ ಸಂಯುಕ್ತಾ ಹೆಗಡೆ ಮತ್ಯಾವ ಸಿನಿಮಾ ಒಪ್ಪಿಕೊಂಡಂತೆ ಕಾಣೋದಿಲ್ಲ. ಹಾಗಂತ ಸಂಯುಕ್ತಾ ಹೆಗಡೆ ಸುಮ್ಮನೆ ಕುಳಿತುಕೊಳ್ಳೋದಿಲ್ಲ.
ಸಂಯುಕ್ತಾ ಹೆಗಡೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿ ಇದ್ದಾರೆ. ಹೊಸ ರೀತಿಯ ಪೋಟೋ ಶೂಟ್ಗಳ ಫೋಟೋಗಳನ್ನ ಆಗಾಗ ಅಪ್ಲೋಡ್ ಮಾಡುತ್ತಾರೆ. ವಿವಿಧ ನೃತ್ಯ ಪ್ರಕಾರಗಳನ್ನ ಕೂಡ ಪ್ರ್ಯಾಕ್ಟೀಸ್ ಮಾಡ್ತಾನೇ ಇರ್ತಾರೆ.
ಸಂಯುಕ್ತಾ ಹೆಗಡೆ ಈಗಿನ ಲೇಟೆಸ್ಟ್ ನೃತ್ಯದ ವಿಡಿಯೋ ಗಮನ ಸೆಳೆಯುತ್ತಿದೆ. ಬೇಸಿಗೆಯ ಉಡುಗೆ ರೀತಿಯ ಬಟ್ಟೆಯನ್ನೆ ಧರಿಸಿ ಸಂಯುಕ್ತಾ ಹೆಗಡೆ ಪೋಸ್ ಕೊಟ್ಟಿದ್ದಾರೆ.
ಇಂಗ್ಲೀಷ್ ಹಾಡು-ಸಂಯುಕ್ತಾ ನೃತ್ಯ-ಸಖತ್ ಪೋಸು!
ಇದೇ ಸಮಯದಲ್ಲಿ ಇಂಗ್ಲೀಷ್ ಹಾಡಿಗೆ ನೃತ್ಯವನ್ನೂ ಮಾಡಿದ್ದಾರೆ. ಆ ವಿಡಿಯೋವನ್ನ ಈಗ ತಮ್ಮ ಇನ್ಸ್ಟಾಗ್ರಾಮ್ ಪೇಜ್ಲ್ಲೂ ಶೇರ್ ಮಾಡಿದ್ದಾರೆ.
View this post on Instagram
ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಂಯುಕ್ತಾನೇ ಹೀರೋಯಿನ್!
ಆದರೆ ಪ್ರ್ಯಾಕ್ಟಿಕಲಿ ಅದು ಎಲ್ಲೂ ಚಾಲ್ತಿಗೆ ಬರಲೇ ಇಲ್ಲ. ಕಿರಿಕ್ ಪಾರ್ಟಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿಯೇ ಮೆರೆದರು. ಕನ್ನಡ ನಾಡಿನ ಕ್ರಶ್ ಆಗಿಯೇ ಹೊಳೆದರು.
ಮೊನ್ನೆ ಮೊನ್ನೆ ರಕ್ಷಿತ್ ಶೆಟ್ಟಿ ಅವರನ್ನ ಅದ್ಯಾವುದೋ ಸಂದರ್ಭದಲ್ಲಿ ಭೇಟಿ ಕೂಡ ಆಗಿದ್ದರು. ಆಗ ಅದೇ ಕಿರಿಕ್ ಸಿನಿಮಾ ಜೋಡಿನೇ ಇಲ್ಲಿ ಬಂದಿದೆ ಅನ್ನೋ ಫೀಲ್ ಕೂಡ ಫೋಟೋ ನೋಡಿದಾಗ ಅನಿಸಿತು.
ಕಿರಿಕ್ ಹುಡುಗಿ ಸಂಯುಕ್ತಾ ಕಿರಿಕ್ ಪಾರ್ಟಿ-2 ದಲ್ಲಿ ಇರ್ತಾರಾ?
ಹಿಂಗಿರೋವಾಗ ಕಿರಿಕ್ ಪಾರ್ಟಿ-2 ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಇರ್ತಾರಾ? ಅಥವಾ ಇಡೀ ಚಿತ್ರದ ಕಥೆ ಸಂಯುಕ್ತಾ ಹೆಗಡೆ ಮೇಲೆ ಹೋಗುತ್ತದೆಯೆ? ಈ ಎಲ್ಲ ಕುತೂಹಲ ಕೂಡ ಈಗ ಮೂಡಿವೆ.
ಕಿರಿಕ್ ಪಾರ್ಟಿ ಹೀರೋ ರಕ್ಷಿತ್ ಶೆಟ್ಟಿ ತಮ್ಮ ಈ ಕಿರಿಕ್ ಪಾರ್ಟಿ-2 ಚಿತ್ರವನ್ನ ಬೇರೆ ರೀತಿ ತೆಗೆಯೋ ಪ್ಲಾನ್ ಹಾಕಿದ್ದಾರೆ. ಅದರಲ್ಲಿ ಸಂಯುಕ್ತಾ ಹೆಗಡೆ ಇದ್ದರೂ ಇರಬಹುದು ಅನ್ನೋ ಗೆಸ್ಸಿಂಗ್ ಕೂಡ ಇದೆ.
ವಿಭಿನ್ನ ಯೋಚನೆ ಭಿನ್ನ ಹಾದಿ ಸಂಯುಕ್ತಾ ನಡೆದದ್ದೇ ದಾರಿ!
ಒಟ್ಟಾರೆ ಕನ್ನಡತಿ ಸಂಯುಕ್ತಾ ಹೆಗಡೆ ತಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಹಾಗೆ ಸಾಗುತ್ತಿರೋ ಸಂಯುಕ್ತಾ ಹೆಗಡೆ ಎಲ್ಲರಿಗೂ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ: Rishab Shetty: ನಿಜ ಘಟನೆಯನ್ನು ಆಧರಿಸಿದೆಯಾ ಕಾಂತಾರ ಸಿನಿಮಾ? ರಿಷಬ್ ರಿವೀಲ್ ಮಾಡಿದ್ರು ಕಥೆಯ ರಹಸ್ಯ
ಕಾಲೇಜು ಕುಮಾರ್ ಚಿತ್ರದಲ್ಲೂ ಸಂಯುಕ್ತಾ ಹೆಗಡೆ ಎಲ್ಲರ ಹೃದಯ ಕದ್ದಿರೋದು ಹಳೆ ಮಾತು. ಕ್ರೀಮ್ ಚಿತ್ರದ ಮೂಲಕ ಏನ್ ಧಮಾಕಾ ಮಾಡ್ತಾರೆ ಅನ್ನೋದೇ ಈಗೀನ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ