• Home
  • »
  • News
  • »
  • entertainment
  • »
  • Rashmika Mandanna: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತಿಗೆ ರಶ್ಮಿಕಾ ಮಂದಣ್ಣ ಬದಲಾದ್ರಾ?

Rashmika Mandanna: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತಿಗೆ ರಶ್ಮಿಕಾ ಮಂದಣ್ಣ ಬದಲಾದ್ರಾ?

ಕಿಚ್ಚನ ಮಾತಿಗೆ ರಶ್ಮಿಕಾ ಮಂದಣ್ಣ ಬದಲಾದ್ರೇ?

ಕಿಚ್ಚನ ಮಾತಿಗೆ ರಶ್ಮಿಕಾ ಮಂದಣ್ಣ ಬದಲಾದ್ರೇ?

ನಮ್ಮನ್ನ ದ್ವೇಷ ಮಾಡೋರು ಇರ್ತಾರೆ. ನಮ್ಮನ್ನ ಪ್ರೀತಿ ಮಾಡೋರು ಇರ್ತಾರೆ. ಇಲ್ಲಿ ಎಲ್ಲವೂ ಇರುತ್ತದೆ. ಯಾಕೆಂದ್ರೆ ನಾವು ಪಬ್ಲಿಕ್ ಫಿಗರ್ಸ್ ಅಂತ ರಶ್ಮಿಕಾ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕರ್ನಾಟಕದ ಒಂದು ಕಾಲದ (Rashmika Mandanna) ಕ್ರಶ್ ರಶ್ಮಿಕಾ ಮಂದಣ್ಣ ಏನೇನೋ ಕಾರಣಕ್ಕೆ ಟ್ರೋಲ್ ಆಗ್ತಾನೇ ಇರ್ತಾರೆ. ಮೊನ್ನೆ ಅದೇನೋ ಹೇಳಿ ಮತ್ತೆ (Rashmika Mandanna New Troll) ಟ್ರೋಲ್ ಆಗಿದ್ದರು. ಅದಾದ್ಮೇಲೆ ರಶ್ಮಿಕಾ ಮಂದಣ್ಣ ಮನಸೋಯಿಚ್ಛೆ ಮಾತನಾಡಿದ್ದರು. ಇದಕ್ಕೆ ಮತ್ತೊಮ್ಮೆ ಟ್ರೋಲ್ (Rashmika New Comment) ವೀರರು ತಮ್ಮದೇ ಸ್ಟೈಲ್ ಅಲ್ಲಿಯೇ ರಶ್ಮಿಕಾ ಮಂದಣ್ಣರನ್ನ ಟ್ರೋಲ್ ಮಾಡಿದ್ದರು. ಆದರೆ ಈ ಎಲ್ಲ ಬೆಳವಣಿಗೆಯಿಂದ (Kannada Actress Rashmika Mandanna) ರಶ್ಮಿಕಾ ಮಂದಣ್ಣಗೆ ಏನೇನೂ ವ್ಯತ್ಯಾಸವೇ ಆಗಲಿಲ್ಲ. ಹೀಗಿರೋವಾಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪರೋಕ್ಷವಾಗಿಯೇ ರಶ್ಮಿಕಾ ಮಂದಣ್ಣ ಅವರಿಗೆ ಬುದ್ದಿ ಹೇಳಿದಂತೆಯೂ ಕಂಡು ಬಂತು. ಅದನ್ನ ಕೇಳಿಯೇ ರಶ್ಮಿಕಾ ಮಂದಣ್ಣ ಬದಲಾದಂತೆ ಕಾಣುತ್ತಿದೆ. ಇದರ ಬಗೆಗಿನ ಒಂದು ಸುದ್ದಿ ಇಲ್ಲಿದೆ ಓದಿ.


ಕನ್ನಡದ ರಶ್ಮಿಕಾ ಮಂದಣ್ಣ ಟ್ರೋಲ್ ಯಾಕ್ ಆಗ್ತಾರೆ?
ಕನ್ನಡದ ಬಹು ಭಾಷೆಯ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗ್ತಿರೋದು ಯಾಕೆ? ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿಯೇ ಇದೆ. ರಶ್ಮಿಕಾ ನಡೆ-ನುಡಿ ಇದಕ್ಕೆ ಕಾರಣ ಅಂತಲೇ ವಿಶ್ಲೇಷಿಸಬಹುದು.


Kannada Actress Rashmika Mandanna New Comment on Troll Pages
ಅಭಿನಯ ಚಕ್ರವರ್ತಿ ಸುದೀಪ್ ಅನುಭವದ ಮಾತು!


ಕನ್ನಡ ನಾಡಿನ ಈ ಕೊಡಗಿನ ಕುವರಿ ಕನ್ನಡ ಸಿನಿಮಾದಿಂದಲೇ ಮುಂದೆ ಹೋದವ್ರು. ಇಲ್ಲಿ ಅವಕಾಶವೇ ಸಿಗದೇ ಇದ್ರೆ ಏನ್ ಆಗುತ್ತಿತ್ತೋ ಏನೋ. ಆದರೆ ಜನ ಈ ಬೆಡಗಿಯನ್ನ ಸ್ವೀಕರಿಸಿದರು. ಕರ್ನಾಟಕದ ಕ್ರಶ್ ಆಗೋ ಲೆವಲ್​​ಗೆ ತೆಗೆದುಕೊಂಡು ಹೋದ್ರು.




ರಶ್ಮಿಕಾ ಮಂದಣ್ಣ ಮುಗ್ಧ ಮಾತಿಗೆ ಮರಳಾಗೋರೇ ಇಲ್ವೇ?
ರಶ್ಮಿಕಾ ಮಂದಣ್ಣ ಮುಗ್ಧ ಮಾತಿಗೆ ಮರಳಾಗೋ ಜನ ಇದ್ದರು. ಆದರೆ ಯಾವಾಗ ರಶ್ಮಿಕಾ ಮಾತಿನ ದಾಟಿ ಬದಲಾಯಿತೋ ಆಗ್ಲೇ ನೋಡಿ, ಈ ಬೆಡಗಿ ಮಾತಿಗೆ ಬೇರೆ ಬೇರೆ ಅರ್ಥವೆ ಕಲ್ಪಿಸಿಕೊಳ್ಳಲಾಗುತ್ತಿದೆ. ಇದರಿಂದಲೇ ರಶ್ಮಿಕಾ ಏನೆ ಮಾಡಿದ್ರೂ ಟ್ರೋಲ್ ಆಗ್ತಾರೆ. ಏನೇ ಹೇಳಿದ್ರೂ ವೈರಲ್ ಆಗುತ್ತಿದ್ದಾರೆ.


ರಶ್ಮಿಕಾ ಮಂದಣ್ಣ ಟ್ರೋಲ್ ಆಗ್ತಾನೇ ಇದ್ದಾರೆ. ಇದನ್ನ ಕಿಚ್ಚ ಸುದೀಪ್ ಗಮನಿಸಿದ್ರೋ ಇಲ್ವೋ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಆ್ಯಕ್ಟೀವ್ ಆಗಿರೋದ್ರಿಂದಲೋ ಏನೋ ಗಮನಕ್ಕೂ ಬಂದಿರಬಹುದು.


ಅಭಿನಯ ಚಕ್ರವರ್ತಿ ಸುದೀಪ್ ಅನುಭವದ ಮಾತು!
ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಸಾರ್ವಜನಿಕ ಜೀವನದಲ್ಲಿ ಬಂದ್ಮೇಲೆ ಎಲ್ಲವೂ ಬರುತ್ತದೆ. ಎಲ್ಲವನ್ನೂ ಹ್ಯಾಂಡಲ್​​ ಮಾಡೋದನ್ನ ಕಲಿಯಬೇಕು. ಅದನ್ನ ವಿರೋಧಿಸಿದ್ರೆ, ಏನೇನೋ ಆಗುತ್ತದೆ ಅನ್ನೋ ಅರ್ಥದಲ್ಲಿಯೇ ಹೇಳಿದ್ದರು.


ಇದನ್ನ ಯಾರನ್ನ ಉದ್ದೇಶಿಸಿಯೂ ಸುದೀಪ್ ಹೇಳಿರಲಿಲ್ಲ. ಆದರೆ ಈ ಮಾತು ರಶ್ಮಿಕಾ ಮಂದಣ್ಣ ನಡೆ-ನುಡಿಗೆ ಹೇಳಿದಂತೇನೆ ಕಾಣುತ್ತಿತ್ತು. ಇದನ್ನ ರಶ್ಮಿಕಾ ನೋಡಿದ್ರೊ ಇಲ್ವೋ ಗೊತ್ತಿಲ್ಲ. ಆದರೆ ರಶ್ಮಿಕಾ ಮಾತಿನ ದಾಟಿ ಈಗ ಬದಲಾದಂತೆ ಕಾಣುತ್ತಿದೆ.


ಕಿಚ್ಚನ ಮಾತಿಗೆ ರಶ್ಮಿಕಾ ಮಂದಣ್ಣ ಬದಲಾದ್ರೇ?
ರಶ್ಮಿಕಾ ಮಂದಣ್ಣ ಟ್ರೋಲ್ ವೀರರ ಫೇವರಿಟ್ ನಟಿ ಆಗಿ ಬಿಟ್ಟಿದ್ದಾರೆ. ವಾರದಲ್ಲಿ ಒಂದೆರಡು ಸಲವಾದ್ರೂ ಟ್ರೋಲ್ ಪೇಜ್​ ಅಲ್ಲಿ ರಶ್ಮಿಕಾ ರಾರಾಜಿಸುತ್ತಲೇ ಇರುತ್ತಾರೆ. ಆದರೂ ಇದಕ್ಕೆ ತಲೆಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ, ಈಗ ಅದ್ಯಾಕೋ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.


Kannada Actress Rashmika Mandanna New Comment on Troll Pages
ರಶ್ಮಿಕಾ ಮಂದಣ್ಣ ಮುಗ್ಧ ಮಾತಿಗೆ ಮರಳಾಗೋರೇ ಇಲ್ವೇ?


ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ. ಎಲ್ಲರೂ ನಮ್ಮನ್ನ ಪ್ರೀತಿಸುತ್ತಾರೆ ಅನ್ನೋದು ತಪ್ಪು. ನಮ್ಮನ್ನ ವಿರೋಧಿಸುವವರೂ ಹೆಚ್ಚು ಇರುತ್ತಾರೆ. ಹಾಗಂತ ನಾವು ಎಲ್ಲರೂ ನಮ್ಮನ್ನ ಪ್ರೀತಿಸಬೇಕು ಅಂದುಕೊಳ್ಳೋದೇ ತಪ್ಪು ಅಂತಲೇ ಹೇಳಿಕೊಂಡಿದ್ದಾರೆ.


ಟ್ರೋಲ್ ವೀರರಿಗೆ ರಶ್ಮಿಕಾ ಸಖತ್ ಟಾಂಗ್!
ರಶ್ಮಿಕಾ ಮಂದಣ್ಣ ಟ್ರೋಲ್ ವೀರರನ್ನ ತಮ್ಮದೇ ಶೈಲಿಯಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲರೂ ನಮ್ಮನ್ನ ಪ್ರೀತಿಸಬೇಕು ಅಂತ ನಿರೀಕ್ಷೆ ಮಾಡೋದೇ ತಪ್ಪು ಅನ್ನೋ ಅರ್ಥದಲ್ಲಿಯೇ ಈಗ ಹೇಳಿಬಿಟ್ಟಿದ್ದಾರೆ.


ಇದನ್ನೂ ಓದಿ: Simple Suni New Film: ಸಿಂಪಲ್ ಸುನಿ ಹೇಳಿದ ಕಥೆ ಕೇಳಿ ವಿನಯ್ ರಾಜ್​​ಕುಮಾರ್ ಹೇಳಿದ್ದೇನು?


ನಮ್ಮನ್ನ ದ್ವೇಷ ಮಾಡೋರು ಇರ್ತಾರೆ. ನಮ್ಮನ್ನ ಪ್ರೀತಿ ಮಾಡೋರು ಇರ್ತಾರೆ. ಇಲ್ಲಿ ಎಲ್ಲವೂ ಇರುತ್ತದೆ. ಯಾಕೆಂದ್ರೆ ನಾವು ಪಬ್ಲಿಕ್ ಫಿಗರ್ಸ್ ಅಂತಲೇ ರಶ್ಮಿಕಾ ಹೇಳಿದ್ದಾರೆ.


ಈ ಮೂಲಕ ರಶ್ಮಿಕಾ ಮಂದಣ್ಣ ಟ್ರೋಲ್ ಮಾಡೋರಿಗೆ ಸರಿಯಾಗಿಯೇ ಕೊಟ್ಟಿದ್ದಾರೆ. ಇದನ್ನ ನೋಡಿದ ಟ್ರೋಲ್ ವೀರರು ಇನ್ಯಾವ ರೀತಿ ಇದನ್ನ ಟ್ರೋಲ್ ಮಾಡ್ತಾರೋ ಏನೋ.

First published: