ಸ್ಯಾಂಡಲ್ವುಡ್ನ ಒಂದು (Rashmika Mandanna) ಕಾಲದ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ನ ನಟ ವಿಜಯ್ ದೇವರಕೊಂಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೊಸ ವರ್ಷದ (Vijay Deverakonda) ಆರಂಭದಲ್ಲಿಯೇ ಇವರ ಸುದ್ದಿ ವೈರಲ್ ಆಗಿದೆ. ಈ ಸ್ಟಾರ್ಗಳ ಮಧ್ಯ ಏನ್ ಇದಿಯೋ ಇಲ್ವೋ ಗೊತ್ತಿಲ್ಲ. ಆದರೆ ಇಬ್ಬರು ಟ್ರೋಲ್ (Rashmika Troll) ಆಗ್ತಾರೆ. ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗ್ತಾರೆ. ಅದೇ ರೀತಿ ಈಗ ಈ ಜೋಡಿ ಸುದ್ದಿಯಲ್ಲಿಯೆ ಇದೆ. ಹೊಸ (Rashmika Vijay Deverakonda) ವರ್ಷಕ್ಕೆ ಈ ಜೋಡಿ ಎಲ್ಲರಿಗೂ ಶುಭ ಹಾರಿಸಿದೆ. ಆದರೆ, ಇವರ ಶುಭಹಾರೈಕೆಯನ್ನ ಯಾರೆಲ್ಲ ಸ್ವೀಕರಿಸಿದ್ರೋ ಏನೋ. ಇದರ ಬದಲಾಗಿ ಈ ಜೋಡಿಯ ಪ್ರತ್ಯೇಕ ಫೋಟೋಗಳನ್ನ ಈಗ ಹೋಲಿಕೆ ಮಾಡಲಾಗುತ್ತಿದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
ಹೊಸ ವರ್ಷದ ಮೊದಲ ದಿನವೇ ಟ್ರೋಲ್ ಆದ ರಶ್ಮಿಕಾ ಮಂದಣ್ಣ
ಕಿರಿಕ್ ಬೆಡಗಿ ರಶ್ಮಿಕಾ ಟ್ರೋಲ್ ವೀರರ ಫೇವರಿಟ್ ನಟಿನೇ ಆಗಿದ್ದಾರೆ. ನೆಟ್ಟಿಗರ ಕೆಂಗಣ್ಣಿಗು ಆಗಾಗೊಮ್ಮೆ ಈಗೊಮ್ಮೆ ಗುರಿ ಆಗ್ತಾರೆ. ಟೈಮ್ ಸರಿ ಐತೋ ಇಲ್ವೋ ಗೊತ್ತಿಲ್ಲ. ಹೊಸ ವರ್ಷದ ಮೊದಲ ದಿನವೇ ಕೊಡಗಿನ ಕುವರಿ ರಶ್ಮಿಕಾ ಟ್ರೋಲ್ ಆಗಿ ಬಿಟ್ಟವ್ರೇ ನೋಡಿ.
ರಸ್ಮಿಕಾ ಮಂದಣ್ಣ ಈ ವರ್ಷವೂ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ವಿಶೇಷ ಅನಿಸೋ ಹಾಗೆ ಬೀಚ್ ನಲ್ಲಿ ಮಲಗಿಕೊಂಡಿರೋ ಒಂದು ಫೋಟೋನೂ ಹಂಚಿಕೊಂಡಿದ್ದಾರೆ. ಓಕೆ ಫೈನ್ ತುಂಬಾ ವಿಭಿನ್ನವಾಗಿಯೇ ರಶ್ಮಿಕಾ ಶುಭ ಹಾರಿಸಿದ್ದಾರೆ ಎಂದು ಕೊಂಡೇ ಕೆಲವರು ಸುಮ್ನಾಗಿದ್ದಾರೆ.
ವಿಜಯ್ ದೇವರಕೊಂಡ-ರಶ್ಮಿಕಾ ಫೋಟೋ ಹೋಲಿಕೆ!
ಹೌದು, ಟ್ರೋಲಿಗರಿಗೆ ಏನ್ ಸಿಕ್ಕರೂ ಸರಿಯೇ, ಅದನ್ನ ಟ್ರೋಲ್ ಮಾಡಿ ಬಿಸಾಕ್ತಾರೆ. ಅದನ್ನ ನೋಡಿದಾಗ ನಿಜ ಅಲ್ವೇ? ಅಂತಲೂ ಅನಿಸಿಬಿಡುತ್ತದೆ, ವಿಜಯ್ ಮತ್ತು ರಶ್ಮಿಕಾ ವಿಚಾರದಲ್ಲೂ ಈಗ ಅದೇ ಆಗಿದೆ.
ರಶ್ಮಿಕಾ ಅದ್ಯಾವಾಗ್ಲೋ ಮಾಲ್ಡೀವ್ಸ್ಗೆ ಹೋಗಿದ್ದರಂತೆ. ಆಗ ಅಲ್ಲಿ ಒಂದಷ್ಟು ಸ್ಪೆಷಲ್ ಫೋಟೋಗಳನ್ನ ಕೂಡ ತೆಗೆಸಿಕೊಂಡಿದ್ದಾರೆ. ಅದೇ ಫೋಟೋವನ್ನೆ ಹೊಸ ವರ್ಷದ ಶುಭಾಶಯ ತಿಳಿಸೋಕೆ ಬಳಸಿಕೊಂಡು ಅದನ್ನ ಇನ್ಸ್ಟಾಗ್ರಾಮ್ ನಲ್ಲೂ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ-ರಶ್ಮಿಕಾ ಮಾಲ್ಡೀವ್ಸ್ಗೆ ಹೋಗಿದ್ರೇ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತವ್ರೆ ಅನ್ನೋ ಸುದ್ದಿ ಜಾಸ್ತಿನೇ ಇದೆ. ಅದು ಎಲ್ಲೂ ಅಧಿಕೃತವಾಗಿಯೇ ಇಲ್ಲ. ಯಾರೂ ಇದನ್ನ ಹೇಳಿಕೊಂಡಿಯೂ ಇಲ್ಲ. ಆದರೂ ಇವರ ಲವ್ ಬಗ್ಗೆ ಸುದ್ದಿ ವೈರಲ್ ಆಗುತ್ತಲೇ ಇವೆ.
ಟ್ರೋಲ್ ವೀರರು ಟ್ರೋಲ್ ಮಾಡ್ತಾನೇ ಇರುತ್ತಾರೆ. ಅದೇ ರೀತಿನೇ ಈಗ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಫೋಟೋಗಳನ್ನ ಹೋಲಿಕೆ ಮಾಡಲಾಗುತ್ತಿದೆ.
ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಹೊಸ ವರ್ಷಾಚರಣೆಗೆ ಮಾಲ್ಡೀವ್ಸ್ಗೆ ಹೋಗಿದ್ದರು. ಅಲ್ಲಿಯೆ ಇಬ್ಬರೂ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ ಅಂತಲೇ ಟ್ರೋಲ್ ಆಗುತ್ತಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಒಂದೇ ಹೋಟೆಲ್ನಲ್ಲಿ ಇದ್ರೇ?
ರಶ್ಮಿಕಾ ಮತ್ತು ವಿಜಯ್ ಫೋಟೋಗಳು ಹೋಲಿಕೆಯಲ್ಲಿ ಒಂದೇ ಜಾಗದ ಫೋಟೋ ಅನಿಸುತ್ತವೆ. ಇದರಿಂದಲೋ ಏನೋ, ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ಮಾಲ್ಡೀವ್ಸ್ಗೆ ಹೋಗಿದ್ರು ಅಂತಲೇ ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ: Yash: ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್! ಬರ್ತಡೇ ದಿನ ಬಿಗ್ ಅನೌನ್ಸ್ಮೆಂಟ್!
ಆದರೆ ಇದರ ಬಗ್ಗೆ ಇವರಾರೂ ಎಲ್ಲೂ ಹೇಳಿಕೊಂಡಿಲ್ಲ. ಆದರೂ ಇವರ ಈ ಫೋಟೊಗಳು ವೈರಲ್ ಆಗುತ್ತಿವೆ. ಜೊತೆಗೇನೆ ಇದ್ದರು ಅನ್ನೋಮಟ್ಟಿಗೆ ಟ್ರೋಲ್ ಆಗುತ್ತಿವೆ.
ಇದರಿಂದ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಕೂಡ ಟ್ರೋಲ್ ಆಗಿಬಿಟ್ಟಿದ್ದಾರೆ. ಇದರಿಂದ ಈಗ ಎಲ್ಲಿ ನೋಡಿದರು ಇವರದೇ ಸುದ್ದಿ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ