Ranjani Raghavan: ಮೇಕಪ್ ಇಲ್ಲದ ಫೋಟೋದಲ್ಲೂ ‘ರಂಜನಿ’ ಸೂಪರ್ ಲುಕ್, ‘ಕನ್ನಡತಿ‘ ಟೀಚರ್ ಸಖತ್ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್​

ಕಲರ್ಸ್ ಕನ್ನಡದಲ್ಲಿ ಬರುವ ‘ಕನ್ನಡತಿ‘ ಧಾರಾವಾಹಿ ನಟಿ ರಂಜನಿ ರಾಘವನ್ (Ranjani Raghavan) ಮೇಕಪ್ ಇಲ್ಲದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕನ್ನಡತಿ (Kannadathi) ಧಾರಾವಾಹಿಯಲ್ಲಿ (Serial) ಹಸಿರುಪೇಟೆ ಟೀಚರ್ ಅಂತಾನೇ ಫೇಮಸ್ ಆಗಿರೋ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲೂ (Social Media) ಸಖತ್ ಆಕ್ಟೀವ್ ಆಗಿರ್ತಾರೆ. ಹೊಸ ಹೊಸ ಸ್ಟೈಲ್​ಗಳ ತಮ್ಮ ಫೋಟೋಗಳನ್ನು (Photo) ಶೇರ್ ಮಾಡಿಕೊಳ್ತಾರೆ. ಆದ್ರೆ ಈ ಬಾರಿ ಅವರು ಮೇಕಪ್ ಇಲ್ಲದ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ನಟಿ ರಂಜನಿ ರಾಘವನ್​

ನಟಿ ರಂಜನಿ ರಾಘವನ್​

  • Share this:
ಬಹುತೇಕ ಸೆಲೆಬ್ರಿಟಿಗಳು ಮೇಕಪ್ ಇಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋಕೆ ಇಷ್ಟಪಡುವುದಿಲ್ಲ. ಕೆಲ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಮುಚ್ಚುಮರೆ ಮಾಡುವುದಿಲ್ಲ. ಬಣ್ಣ ಹಚ್ಚದೆಯೂ ಅವರು ಅಭಿಮಾನಿಗಳ ಎದುರು ಬರುತ್ತಾರೆ. ಹಾಗೇ ರಂಜನಿ ಕೂಡ ಸಖತ್ ಸಿಂಪಲ್


ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಕೂಡ ಈ ಮೊದಲು ಮೇಕಪ್ ಇಲ್ಲದೆಯೇ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಿದೆ. ಈಗ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ಗೆ ಮೇಕಪ್ ಇಲ್ಲದ ಫೋಟೋ ಹಂಚಿಕೊಂಡಿದ್ದಾರೆ. ಸ್ಕಿನ್ ಕೇರ್ ಆಸ್ಪತ್ರೆಗೆ ತೆರಳಿರುವ ಅವರು ಅಲ್ಲಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ.


ಸಾಮಾನ್ಯವಾಗಿ ಈ ರೀತಿ ಫೋಟೋಗಳನ್ನು ಹಂಚಿಕೊಳ್ಳೋಕೆ ನಟಿಯರು ಹಿಂದೇಟು ಹಾಕುತ್ತಾರೆ. ಆದರೆ, ರಂಜನಿ ಆ ರೀತಿ ಇಲ್ಲ. ಅವರು ಮುಚ್ಚುಮರೆ ಇಲ್ಲದೆ ಮೇಕಪ್ ರಹಿತ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


ರಂಜನಿ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಹೀರೋ ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಿದ್ದಾಳೆ.


ಕನ್ನಡತಿ ಧಾರಾವಾಹಿಯಲ್ಲಿ ಭುವಿ ಟೀಚರ್ ಆಗಿರೋ ರಂಜನಿ ರಾಘವನ್ ತಮ್ಮ ಪಾತ್ರಕ್ಕೆ ತಕ್ಕಂತೆ ತುಂಬಾ ಸಿಂಪಲ್ ಆಗಿದ್ದಾರೆ. ಧಾರಾವಾಹಿಯಲ್ಲೂ ಅವರು ಸಿಂಪಲ್ ಸೀರೆಗಳನ್ನೇ ಹಾಕಿಕೊಳ್ತಾರೆ. ತುಂಬಾ ಸಿಂಪನ್ ಆಗಿಯೇ ಅಭಿಮಾನಿಗಳಿಗೆ ಇಷ್ಟ ಆಗಿದ್ದಾರೆ


ಇನ್ನು ತಮ್ಮ ಸಹಜ ಅಭಿನಯದಿಂದಲೇ ಫೇಮಸ್ ಆಗಿರೋ ರಂಜನಿ ರಾಘವನ್, ಕನ್ನಡತಿಯಲ್ಲಿ ಅಪ್ಪಟ ಕನ್ನಡ ಮಾತಾಡ್ತಾರೆ. ಅವರ ಕನ್ನಡವನ್ನು ಕೇಳೋದೇ ಚೆಂದ ಅಂತಾರೆ ಅಭಿಮಾನಿಗಳು


ರೀಲ್ ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್​ನಲ್ಲೂ ರಂಜನಿ ರಾಘವನ್ ಕನ್ನಡ ಅಭಿಮಾನಿಯೇ ಆಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಬಹಳ ಆಸಕ್ತಿ ಹೊಂದಿರೋ ಅವರು ಕನ್ನಡದಲ್ಲಿ ಪುಸ್ತಕ ಕೂಡ ಬರೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ರು.
Published by:Pavana HS
First published: