ಸ್ಯಾಂಡಲ್ವುಡ್ ಕ್ವೀನ್ (𝐑𝐚𝐦𝐲𝐚) ರಮ್ಯಾ ಅಂದ್ರೆ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ. ರಮ್ಯಾ ಕಾಣಿಸಿಕೊಂಡರೆ ಸಾಕು. ಜನ ಸೆಲ್ಫಿಗೆ (Selfi) ಈಗಲೂ ಮುಗಿ ಬೀಳುತ್ತಾರೆ. ಅಂತಹ ಈ ನಟಿ ಸಿನಿಮಾ ರಂಗಕ್ಕೆ ವಾಪಸ್ ಆಗಿರೋದು ಎಲ್ಲರಿಗೂ ಖುಷಿ ತಂದಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ರಮ್ಯಾ ಜನ್ಮ ದಿನಕ್ಕೆ ಮತ್ತಷ್ಟು ಇನ್ನಷ್ಟು ಅನ್ನೋ ಮಹತ್ವ ಬಂದಂತಾಗಿದೆ. ಜನ್ಮ ದಿನಕ್ಕೂ ಮುಂಚೇ ರಮ್ಯಾ ತಮ್ಮ ಕಮ್ (Come Back) ಬ್ಯಾಕ್ ಸಿನಿಮಾ ಬಗ್ಗೆನೂ ಅಧಿಕೃತ ಮಾಹಿತಿ ಕೊಟ್ಟರು. ಅದರಿಂದ ಅವರ ಹಳೆ ಫ್ಯಾನ್ಸ್ ಜೋಶ್ ಡಬಲ್ ಟ್ರಿಪಲ್ ಆಗಿದೆ. ಅದರ ಬೆನ್ನಲ್ಲಿಯೇ ರಮ್ಯಾ (Uttarakanda) ಉತ್ತರಕಾಂಡ ಚಿತ್ರಕ್ಕಾಗಿಯೇ ದೇಹದ ತೂಕವನ್ನ ಕೂಡ ಇಳಿಸಿಕೊಳ್ಳುತ್ತಿದ್ದಾರೆ.
ಹೀಗಿರೋವಾಗ್ಲೇ ಹೆಸರಾಂತ ಚಿತ್ರ ಕಲಾವಿದ ಬಾದಲ್ ಚಿತ್ರ ಬಿಡಿಸಿ ರಮ್ಯಾ ಅವರಿಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಕನ್ನಡದ ನಟಿಯ ಬೃಹತ್ ಚಿತ್ರ ಬಿಡಿಸಿದ ಕಲಾಕಾರ್ ಬಾದಲ್!
ಕ್ವೀನ್ ರಮ್ಯಾ ಅಂದರೆ ಎಲ್ಲರಿಗೂ ಫೇವರಿಟ್. ಈ ನಟಿಯ ಕಮ್ ಬ್ಯಾಕ್ ಹೆಚ್ಚು ಕಡಿಮೆ 8 ವರ್ಷಗಳೇ ತೆಗೆದುಕೊಂಡಿದೆ. ಸಿನಿಮಾರಂಗದಲ್ಲಿ ಫೀಕ್ನಲ್ಲಿ ಇರೋವಾಗ್ಲೇ ರಮ್ಯಾ ಚಿತ್ರರಂಗದಿಂದ ದೂರವೇ ಉಳಿದು ಬಿಟ್ಟರು. ಆಗ ರಮ್ಯಾ ಫ್ಯಾನ್ಸ್ ನಿಜಕ್ಕೂ ಬೇಸರ ಮಾಡಿಕೊಂಡಿದ್ದರು.
ರಮ್ಯಾ ಒಬ್ಬ ನಾಯಕ ನಟನಿಗೆ ಇರೋ ಫ್ಯಾನ್ ಫಾಲೋಯಿಂಗ್ ಅನ್ನೇ ಹೊಂದಿದ್ದರು. ಸಂಜು ವೆಡ್ಸ್ ಗೀತಾ ಸಿನಿಮಾದ ಆರಂಭದಲ್ಲಿ ಅಷ್ಟೇನೂ ಜನ ಥಿಯೇಟರ್ಗೆ ಬಂದಿರಲಿಲ್ಲ. ಆದರೆ ರಮ್ಯಾ ಕೆ.ಜಿ.ರಸ್ತೆಯ ಸಾಗರ್ ಥಿಯೇಟರ್ ಬಳಿಗೆ ಬಂದು ಜನರನ್ನ ಸೆಳೆದೇ ಬಿಟ್ಟರು.
ರಮ್ಯಾ ಕಮ್ ಬ್ಯಾಕ್ ಫ್ಯಾನ್ಸ್ಗೆ ದಿವ್ಯ ಸ್ಪಂದನ!
ರಮ್ಯಾ ಕಮ್ ಬ್ಯಾಕ್ ಸಿನಿ ಪ್ರೇಮಿಗಳಿಗೆ ಭಾರೀ ಖುಷಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಮ್ಯಾ ಕೂಡ ಒಳ್ಳೆ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಬರಬೇಕು ಅನ್ನೋ ಪ್ಲಾನಿಂಗ್ನಲ್ಲಿಯೇ ಇದ್ದರು. ಆದರೆ ಅದು ಈಗ ಕಾಲ ಕೂಡಿ ಬಂದಿದೆ.
ಉತ್ತರಕಾಂಡ ಸಿನಿಮಾ ಮೂಲಕವೇ ಕನ್ನಡ ಚಿತ್ರರಂಗಕ್ಕೆ ವಾಪಾಸ್ ಆಗಿರೋ ರಮ್ಯಾ, ದೇಹದ ತೂಕವನ್ನೂ ಚಿತ್ರಕ್ಕಾಗಿಯೇ ಈಗ ಇಳಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಚಿತ್ರದ ಪಾತ್ರಗಳನ್ನ ನಿರೂಪಿಸೋ ಮೂಲಕ ತಮ್ಮ ಈ ಚಿತ್ರದ ಖದರ್ ಅನ್ನೂ ಹೆಚ್ಚಿಸಿದ್ದಾರೆ.
A massive artwork for the first time for a Kannada actress on the occasion of 𝐒𝐚𝐧𝐝𝐚𝐥𝐰𝐨𝐨𝐝 𝐐𝐮𝐞𝐞𝐧 𝐑𝐚𝐦𝐲𝐚's birthday!💥@divyaspandana 👑
Art by : @baadalvirus
Wall size : 35feet × 15feet
Place : Yelahanka#SandalwoodQueen #Ramya #DivyaSpandana pic.twitter.com/YerW62L5jT
— KRG Connects (@KRG_Connects) November 30, 2022
35 ಅಡಿ ಎತ್ತರದ 15 ಅಡಿ ಅಗಲದ ಈ ಪೇಂಟಿಂಗ್ ನಲ್ಲಿ ರಮ್ಯಾ ಕ್ವೀನ್ ರೂಪ ತಾಳಿದ್ದಾರೆ. ಇಸ್ಪೆಟ್ ಎಲೆಯಲ್ಲಿ ಬರೊ ಕ್ವೀನ್ ಆಗಿಯೇ ಬಾದಲ್ ಇಲ್ಲಿ ರಮ್ಯಾರನ್ನ ಬಿಡಿಸಿದ್ದಾರೆ.
ಯಲಹಂಕಾದ ಗೋಡೆಯೊಂದರ ಮೇಲೆ ರಮ್ಯಾ ಚಿತ್ರ ಈಗ ರಾರಾಜಿಸುತ್ತಿದೆ. ರಮ್ಯಾ ಅವರ 40ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಈ ಒಂದು ಚಿತ್ರವನ್ನ ಗೋಡೆಯ ಮೇಲೆ ಬಾದಲ್ ಬಿಡಿಸಿ ಗಮನ ಸೆಳೆದಿದ್ದಾರೆ. ರಮ್ಯಾ ಅವರಿಗೆ ಈ ಮೂಲಕ ಶುಭ ಹಾರೈಸಿದ್ದಾರೆ.
ಬಾದಲ್ ವಿಶೇಷ ಗಿಫ್ಟ್ಗೆ ಥ್ಯಾಂಕ್ಸ್ ಹೇಳಿದೆ ರಮ್ಯಾ
ಚಿತ್ರ ಕಲಾವಿದ ಬಾದಲ್ ತಮ್ಮ ಚಿತ್ರ ಬಿಡಿಸಿದಕ್ಕೆ ರಮ್ಯಾ ಥ್ಯಾಂಕ್ಸ್ ಹೇಳಿದ್ದಾರೆ. ಚಿತ್ರ ಬಿಡಿಸೋ ಮೇಕಿಂಗ್ ವೀಡಿಯೋವನ್ನ ಕೆಆರ್ಜಿ ಕನೆಕ್ಟ್ಸ್ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲೂ ಹಂಚಿಕೊಂಡಿದೆ.
ಇದನ್ನೂ ಓದಿ: Ramachari: ತಾಯಿ-ಮಗಳಿಗೆ ಪಾಠ ಕಲಿಸಲು ರಾಮಾಚಾರಿ ನಿರ್ಧಾರ, ಪ್ರೀತಿ ಸಿಕ್ರೆ ಸಾಕು ಎಂದು ಕಾಯ್ತಿರೋ ಚಾರು!
ಕನ್ನಡದ ನಟಿಯೊಬ್ಬರ ಬೃಹತ್ ಚಿತ್ರವನ್ನ ಇದೇ ಮೊದಲ ಬಾರಿಗೆ ಬಿಡಿಸಲಾಗಿದ್ದು, ರಮ್ಯಾ ಅವರಿಗೆ ಈ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲಾಗಿದೆ ಅಂತಲೂ ಬರೆದುಕೊಂಡಿದೆ.
ರಮ್ಯಾ ಅವರ ಕಮ್ ಬ್ಯಾಕ್ ಅನ್ನ ಸೆಲೆಬ್ರೇಟ್ ಮಾಡಿರೋ ಫ್ಯಾನ್ಸ್ ಮತ್ತು ಚಿತ್ರರಂಗದ ಕೆಲವರು ರಮ್ಯಾ ಜನ್ಮ ದಿನಕ್ಕೆ ತಮ್ಮದೇ ರೀತಿಯಲ್ಲಿಯೇ ಶುಭಾಶಯ ತಿಳಿಸಿದ್ದಾರೆ. ಅದರಲ್ಲಿ ಕಲಾವಿದ ಬಾದಲ್ ವಿಶೇಷ ಚಿತ್ರದ ಕಲೆ ಹೆಚ್ಚು ಗಮನ ಸೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ