ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವೀಕೆಂಡ್ ವಿಥ್ (Ramya-Sudeepa Cinema) ರಮೇಶ್ ಶೋದಲ್ಲಿ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಸಿನಿಜರ್ನಿಯಲ್ಲಿ ಬಂದ ಸ್ಟಾರ್‌ಗಳ ಕುರಿತು ಒಂದೊಂದು ಇಂಟ್ರಸ್ಟಿಂಗ್ (Ramya Reveals Sudeepa Secrets) ಮ್ಯಾಟರ್ ತಿಳಿಸಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ಬಗ್ಗೆನೂ ಯಾರಿಗೂ ಗೊತ್ತಿರದ ಸ್ಪೆಷಲ್ ವಿಷಯವನ್ನ ರಮ್ಯಾ ಇಲ್ಲಿ ಹೇಳಿಕೊಂಡಿದ್ದಾರೆ. ತೆಲುಗು, ತಮಿಳು, ಕನ್ನಡ ಸೇರಿದಂತೆ ಎಲ್ಲ ಭಾಷೆಯಲ್ಲೂ ಅಭಿನಯಿಸಿರೋ ನಟಿ ರಮ್ಯಾ, (Ramya Reveal Secrets) ತಮಿಳು ನಟರಾದ ಸೂರ್ಯ (Ramya Talk about Co-Stars) ಸಿಂಬು, ಜೀವ, ವಿಶಾಲ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇವರ ಬಗೆಗಿನ ಒಟ್ಟು ಚಿತ್ರಣ ಈ ಸ್ಟೋರಿಯಲ್ಲಿದೆ ಓದಿ.
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೋಡಿ ಮೋಡಿ ಮಾಡಿರೋದು ಗೊತ್ತೇ ಇದೆ. ಜಸ್ಟ್ ಮಾತ್ ಮಾತಲ್ಲಿ ಈ ಜೋಡಿಯನ್ನ ಕಂಡ ಜನ ಸಾಕಷ್ಟು ಇಷ್ಟಪಟ್ಟಿದ್ದರು.
ಜಸ್ಟ್ ಮಾತ್ ಮಾತಲ್ಲಿ ರಮ್ಯ-ಕಿಚ್ಚ ಜೋಡಿ-ಮೋಡಿ
ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಸೂಪರ್ ಆಗಿಯೇ ಬಂದಿತ್ತು. ಜನ ಇದನ್ನ ಕಂಡು ತುಂಬಾ ಇಷ್ಟಪಟ್ಟಿದ್ದರು. ಆದರೆ ಶೂಟಿಂಗ್ ವೇಳೆ ಈ ಜೋಡಿ ಕಿತ್ತಾಡಿಕೊಂಡಿದ್ದರು ಅನ್ನೊ ಸುದ್ದಿನೂ ಇದೆ. ಆದರೆ ಇದರ ಹೊರತಾಗಿ ಈ ಜೋಡಿ ಆಫ್ ಸ್ಕ್ರೀನ್ ಚೆನ್ನಾಗಿಯೇ ಇದೆ.
ಹೌದು, ಕಿಚ್ಚ ಸುದೀಪ್ ಮತ್ತು ರಮ್ಯಾ ಒಳ್ಳೆ ಗೆಳೆಯರೇ ಆಗಿದ್ದಾರೆ. ಪರಸ್ಪರ ಗೌರವ ಕೂಡ ಕೊಡ್ತಾರೆ. ಅದೇ ರೀತಿ ಕಿಚ್ಚ ಸುದೀಪ್ ಅವರ ಬಗ್ಗೆ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ರಮೇಶ್ ಅವರು ಕೇಳಿದ್ದ ಪ್ರಶ್ನೆಗೆ ಮುಕ್ತವಾಗಿಯೇ ರಮ್ಯಾ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಬಗ್ಗೆ ರಮ್ಯಾ ಏನು ಹೇಳಿದ್ರು ಗೊತ್ತೇ?
ರಮ್ಯಾ ಅವರು ತಮ್ಮ ಕೋ ಸ್ಟಾರ್ ಕಿಚ್ಚ ಸುದೀಪ್ ಬಗ್ಗೆ ಇಲ್ಲಿ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಮತ್ತು ನಾನು ಒಳ್ಳೆ ಸ್ನೇಹಿತರು. ನಾನು ಎಲ್ಲೆ ಹೋದ್ರೂ ಸರಿಯೇ. ಕಿಚ್ಚ ಸುದೀಪ್ ನನ್ನ ಫೋನ್ ನಂಬರ್ ಅದ್ಹೇಗೋ ಹುಡುಕಿ ಕಾಲ್ ಮಾಡುತ್ತಿದ್ದರು.
ಕಾಲ್ ಮಾಡೋ ಕಿಚ್ಚ ಸುದೀಪ್ ಅವರು, ನನ್ನ ಬಗ್ಗೆ ವಿಚಾರಿಸುತ್ತಿದ್ದರು. ಹೇಗಿದ್ದೀರಾ? ಎಲ್ಲಿದ್ದೀರಾ? ಏನ್ ಮಾಡ್ತಾ ಇದ್ದೀರಾ? ಅಂತಲೂ ಕೇಳೋರು. ಅಷ್ಟು ಒಳ್ಳೆಯ ಫ್ರೆಂಡ್ ಅಂತ ರಮ್ಯಾ ಈ ಶೋದಲ್ಲಿ ಹೇಳಿಕೊಂಡಿದ್ದಾರೆ.
ಸಿಂಬು ಜೊತೆಗೆ ಜಗಳವಾಗಿತ್ತು ಅಂತ ಹೇಳಿದ ಕ್ವೀನ್ ರಮ್ಯಾ
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ತಮಿಳು ನಟ ಸಿಂಬು ಜೊತೆಗೆ ಕೆಲಸ ಮಾಡಿದ್ದಾರೆ. ಕುಥು (Kuththu) ಹೆಸರಿನ ಸಿನಿಮಾ ಕೂಡ ಮಾಡಿದ್ದಾರೆ. ಸಿಂಬು ಜೊತೆಗೂ ಶೂಟಿಂಗ್ ಟೈಮ್‌ಲ್ಲಿ ಜಗಳ ಆಗಿತ್ತು. ಆದರೆ ಸಿಂಬು ತಾಯಿ ಬಂದು ಸಿಂಬುಗೆ ಬುದ್ದಿ ಹೇಳ್ತಾ ಇದ್ದರು ಅನ್ನೋದನ್ನ ರಮ್ಯಾ ಈ ಒಂದು ಶೋದಲ್ಲಿ ಹೇಳಿದ್ದಾರೆ.
ತಮಿಳಿನ ನಟ ಸೂರ್ಯ ಜೊತೆಗೆ ರಮ್ಯಾ ಅಭಿನಯಿಸಿದ್ದಾರೆ. ವಾರಣಂ ಆಯಿರಮ್ ಸಿನಿಮದಲ್ಲಿ ಈ ಜೋಡಿ ಅದ್ಭುತವಾಗಿಯೇ ಕಾಣಿಸಿಕೊಂಡಿದೆ. ಹಾಗೆ ಸೂರ್ಯ ಜೊತೆಗೆ ಅಭಿನಯಿಸಿರೋ ರಮ್ಯಾ, ನಟ ಸೂರ್ಯ ಅವರಿಂದ ಸಾಕಷ್ಟು ವಿಷಯವನ್ನ ತಿಳಿದುಕೊಂಡಿದ್ದೇನೆ ಅಂತ ಹೇಳಿದ್ದಾರೆ.
ಕಾಲಿವುಡ್ ನಟ ಜೀವಾ ಹೇಗೆ ಅನ್ನೋದನ್ನ ಹೇಳಿದ ರಮ್ಯಾ
ಕಾಲಿವುಡ್ ನಟ ಜೀವಾ ಜೊತೆಗೆ ರಮ್ಯಾ ಹಲವು ಸಿನಿಮಾ ಮಾಡಿದ್ದಾರೆ. ಸಿಂಗಂ ಪುಲಿ ಚಿತ್ರದಲ್ಲೂ ಜೀವಾ ಜೊತೆಗೆ ರಮ್ಯಾ ಅಭಿನಯಿಸಿದ್ದಾರೆ. ಹಾಗೇನೆ ಕೋ ಸ್ಟಾರ್ ಜೀವಾ ಕುರಿತು ರಮ್ಯಾ ಇಲ್ಲಿ ಹೇಳಿಕೊಂಡಿದ್ದಾರೆ.
ಜೀವಾ ಪಕ್ಕಾ ಪ್ರೋಫೆಷ್ನಲ್ ಆಗಿದ್ದರು. ಯಾವಾಗ ಸಿಕ್ಕರೂ ಸರಿಯೇ, ಹೆಚ್ಚಾಗಿ ಸಿನಿಮಾ ಕುರಿತು ಮಾತನಾಡಿದ್ದೇವೆ ಅಂತ ರಮ್ಯಾ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ತಿಳಿಸಿದ್ದಾರೆ.
ಕೋ ಸ್ಟಾರ್ಸ್ ಬಗ್ಗೆ ಓಪನ್ ಆಗಿ ಮಾತನಾಡಿದ ರಮ್ಯಾ!
ಹೀಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ತಮ್ಮ ಚಿತ್ರ ಜೀವನದಲ್ಲಿ ಬಂದ ಕೋ ಸ್ಟಾರ್‌ಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಓಪನ್ ಆಗಿಯೇ ಮಾತನಾಡಿದ್ದಾರೆ. ಯಾರು ಹೇಗೆ ಯಾವ ರೀತಿ ಅನ್ನೋದನ್ನ ಸಂಕ್ಷಿಪ್ತವಾಗಿಯೇ ತಿಳಿಸಿದ್ದಾರೆ.
ಒಟ್ಟಾರೆ ರಮ್ಯಾ ಸಿನಿಮಾ ಜೀವನದಲ್ಲಿ ಮೂರ್ನಾಲ್ಕು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಹೆಚ್ಚು ಕಡಿಮೆ ಐದಾರು ಭಾಷೆಗಳನ್ನ ಕೂಡ ಮಾತನಾಡುತ್ತಾರೆ. ಹಾಗೆ ಈಗ ಇಂಡಸ್ಟ್ರೀಗೆ ಬಂದು 20 ವರ್ಷಗಳೂ ಆಗಿದೆ.
ಇದನ್ನೂ ಓದಿ: Ramya Movie: ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ಖಡಕ್ ವುಮೆನ್; ಮೋಹಕ ತಾರೆ ಪಾತ್ರ ಹೇಗಿದೆ?
ಈ ಖುಷಿಯನ್ನ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಸೆಲೆಬ್ರೇಟ್ ಕೂಡ ಮಾಡಲಾಗಿದೆ. ಇಂಡಸ್ಟ್ರೀಯ ಆತ್ಮೀಯರು ರಮ್ಯಾ ಅವರಿಗೆ ಈ ಮೂಲಕ ವಿಶ್ ಕೂಡ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ