Actress Ramya: ಉತ್ತರ ಕರ್ನಾಟಕದ ಭಾಷೆಗೂ ರಮ್ಯಾ ಗೆಲುವಿಗೂ ಇದೆ ನಂಟು

ಗಂಡು ಮೆಟ್ಟಿನ ನಾಡಿನ ಪಾತ್ರಗಳ ರಮ್ಯಾ ಸಕ್ಸಸ್ ಸ್ಟೋರಿ

ಗಂಡು ಮೆಟ್ಟಿನ ನಾಡಿನ ಪಾತ್ರಗಳ ರಮ್ಯಾ ಸಕ್ಸಸ್ ಸ್ಟೋರಿ

ರಮ್ಯಾ ಸಿನಿಮಾ ಜೀವನದ ಈ ಮೊದಲ ಚಿತ್ರ ಒಳ್ಳೆ ಮೈಲೇಜ್ ಕೊಟ್ಟಿತ್ತು. ರಮ್ಯಾ ಈ ಮೂಲಕ ಕನ್ನಡ ನಾಡಿನ ಜನರ ಹೃದಯ ಕದ್ದೇ ಬಿಟ್ಟರು. ಉತ್ತರ ಕರ್ನಾಟಕದ ಮಂದಿ ಕೂಡ ನಮ್ಮ ಕಡೆಗೆ ಸಿನಿಮಾ ಅಂತ ಹೆಮ್ಮೆಯಿಂದ ನೋಡಿದ್ರು.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:
  • published by :

ಸ್ಯಾಂಡಲ್‌ಡ್‌ ಕ್ವೀನ್ ರಮ್ಯಾ ಚಿತ್ರ (Ramya First Movie Untold Story) ಜೀವನದಲ್ಲಿ ಮೊದಲ ಸಿನಿಮಾ ತುಂಬಾ ಮಹತ್ವದ ಸಿನಿಮಾನೇ ಆಗಿದೆ. ಈ ಚಿತ್ರ ಬರೋವರೆಗೂ ಕೇವಲ ದಿವ್ಯ ಸ್ಪಂದನ ಆಗಿದ್ದ ಈ ಚೆಲುವೆಗೆ ದೊಡ್ಮನೆ (Ramya Special Film Story) ಅಮ್ಮ ಒಂದು ಹೆಸರು ಇಟ್ಟರು. ನೋಡಿದಾಕ್ಷಣ ಇಂದಿನಿಂದ ನೀವು ರಮ್ಯ ಅಂದ್ರು ನೋಡಿ, ಅಷ್ಟೇ ರಮ್ಯಾ ತಮ್ಮ ಪ್ರತಿಭೆಯಿಂದ ಕ್ವೀನ್ ಆಗೋ ಮಟ್ಟಿಗೆ ಬೆಳೆದು ನಿಂತರು. ಆದರೆ (Ramya Film UK Story) ಆರಂಭದ ಆ ಗೆಲುವಿನ ಇನ್ನೂ ಒಂದು ಸತ್ಯ ಇದೆ. ಅದು ಉತ್ತರ ಕರ್ನಾಟಕದ ಭಾಷೆ ಆಗಿದೆ. ಸಿನಿಮಾವನ್ನ ತುಂಬಾ ಹಚ್ಚಿಕೊಂಡು ನೋಡುವ ಚಿತ್ರ ಪ್ರೇಮಿಗಳು ಈ ನೆಲದಲ್ಲಿದ್ದಾರೆ.


ಪ್ರತಿ ಶುಕ್ರವಾರ ಬಂದ್ರೆ ಒಂದು ಹೊಸ ಸಿನಿಮಾ ನೋಡ್ಬೇಕು ಅನ್ನುವ ಹಂಬಲ ಇಲ್ಲಿಯ ಮಂದಿಗೆ ಇರುತ್ತದೆ. ರಮ್ಯಾ ತಮ್ಮ (Sandalwood Queen Special Story) ಮೊದಲ ಸಿನಿಮಾದಲ್ಲಿಯೇ ಇಲ್ಲಿಯ ಜನರ ಮನಸ್ಸ ಕದ್ದು ಬಿಟ್ಟರು.


Kannada Actress Ramya Film Journey Untold Story Uttara Karnataka
ನಿರ್ಮಾಪಕಿಯಾಗಿ ಬಂದ್ರೂ ನಟನೆಗೆ ಉತ್ತರ ಕರ್ನಾಟಕ ಕಥೆಯ ಆಯ್ಕೆ


ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ತಮ್ಮ ಚಿತ್ರ ಜೀವನವನ್ನ ಅಭಿ ಚಿತ್ರದ ಮೂಲಕ ಆರಂಭಿಸಿದರು. ಮೊದಲ ಸಿನಿಮಾದಲ್ಲಿಯೆ ಸಖತ್ ಸಿಕ್ಸರ್ ಹೊಡೆದರು. ಮೊದಲ ಸಿನಿಮಾದಲ್ಲಿಯೇ ಒಂದ್ ಒಳ್ಳೆ ಪಾತ್ರವನ್ನ ನಿರ್ವಹಿಸಿದ್ದರು.




ಅಭಿ ಚಿತ್ರದಲ್ಲಿ ಭಾನು ಹೆಸರಿನ ಉತ್ತರ ಕರ್ನಾಟಕ ಪಾತ್ರದಲ್ಲಿ ರಮ್ಯಾ


ಹುಬ್ಬಳ್ಳಿಯ ಮುಸ್ಲಿಂ ಮನೆತನದ ಭಾನು ಹೆಸರಿನ ಪಾತ್ರವನ್ನ ನಿರ್ವಹಿಸಿದ್ದರು. ಅಪ್ಪು ಇಲ್ಲಿ ಅಭಿಯಾಗಿ ನಟಿಸಿದ್ದರು. ಇವರ ಜೋಡಿಯ ಈ ಚಿತ್ರ ರಿಯಲ್ ಕಥೆಯನ್ನ ಆಧರಿಸಿತ್ತು. ಹುಬ್ಬಳ್ಳಿಯಲ್ಲಿ ನಡೆದ ಘಟನೆಯನ್ನ ಡೈರೆಕ್ಟರ್ ದಿನೇಶ್ ಬಾಬು ಅವರು ಅಭಿ ಹೆಸರಿನ ಸಿನಿಮಾ ಮಾಡಿದ್ದರು.


ಅಭಿ ಚಿತ್ರದಲ್ಲಿ ಕ್ವೀನ್ ರಮ್ಯಾ ಉತ್ತರ ಕರ್ನಾಟಕದ ಭಾಷೆ ಮಾತನಾಡಿದ್ದರು. ಮೊದಲ ಸಿನಿಮಾದಲ್ಲಿಯೇ ಈ ಭಾಷೆಯ ಸೊಗಡನ್ನ ತಿಳಿದುಕೊಂಡಿರೋ ರಮ್ಯಾ ಅವರು, ಅದ್ಭುತವಾಗಿಯೇ ಅಭಿನಯಿಸಿದ್ದರು. ಉತ್ತರ ಕರ್ನಾಟಕದ ಮುಸ್ಲಿಂ ಹುಡುಗಿಯರು ಹೀಗೇ ಇರ್ತಾರೆ ಅನ್ನೋದನ್ನ ಕೂಡ ಬಿಂಬಿಸುವಂತೇನೆ ಕಾಣಸಿಕೊಂಡಿದ್ದರು.




ಕ್ವೀನ್ ರಮ್ಯಾಗೆ ಸಕ್ಸಸ್ ತಂದು ಕೊಟ್ಟ ಉತ್ತರ ಕರ್ನಾಟಕ ಪಾತ್ರಗಳು


ರಮ್ಯಾ ಸಿನಿಮಾ ಜೀವನದ ಈ ಮೊದಲ ಚಿತ್ರ ಒಳ್ಳೆ ಮೈಲೇಜ್ ಕೊಟ್ಟಿತ್ತು. ರಮ್ಯಾ ಈ ಮೂಲಕ ಕನ್ನಡ ನಾಡಿನ ಜನರ ಹೃದಯ ಕದ್ದೇ ಬಿಟ್ಟರು. ಉತ್ತರ ಕರ್ನಾಟಕದ ಮಂದಿ ಕೂಡ ನಮ್ಮ ಕಡೆಗೆ ಸಿನಿಮಾ ಅಂತಲೇ ಹೆಮ್ಮೆಯಿಂದ ನೋಡಿದ್ರು.


ಅಂತಹ ರಮ್ಯಾ ಅವರಿಗೆ ಅಭಿ ಚಿತ್ರ ಆದ್ಮೇಲೆ ಸಾಕಷ್ಟು ಸಿನಿಮಾಗಳು ಬಂದವು. ಆದರೆ ಮತ್ತೆ ಉತ್ತರ ಕರ್ನಾಟಕ ಹುಡುಗಿಯಾಗಿ ಅಭಿನಯಿಸೋಕೆ ಬರೋಬ್ಬರಿ ಮೂರು ವರ್ಷದ ಬಳಿಕ ಮತ್ತೊಂದು ಅವಕಾಶ ಬಂತು. ಆ ಚಿತ್ರದ ಹೆಸರು ಜೊತೆ ಜೊತೆಯಲಿ ಅನ್ನೋದು ವಿಶೇಷ ಅಂತಲೇ ಹೇಳಬಹುದು.


ಗಂಡು ಮೆಟ್ಟಿನ ನಾಡಲ್ಲಿ ರಮ್ಯಾ ಪಾತ್ರಗಳ ಸಕ್ಸಸ್


ನೆನಪಿರಲಿ ಪ್ರೇಮ್ ಅಭಿನಯದ ಈ ಚಿತ್ರದಲ್ಲೂ ರಮ್ಯಾ ಅಭಿನಯದ ದಿವ್ಯ ಅನ್ನೋ ಪಾತ್ರ ಉತ್ತರ ಕರ್ನಾಟಕ ಹಿನ್ನೆಲೆಯ ಪಾತ್ರವೇ ಆಗಿತ್ತು. ಇದನ್ನ ತುಂಬಾ ಚೆನ್ನಾಗಿಯೇ ನಿಭಾಯಿಸಿದ್ದ ರಮ್ಯಾ ಇಲ್ಲೂ ಜನರಿಂದ ಮೆಚ್ಚುಗೆ ಗಳಿಸಿದರು.


ಹಾಗೆ ಆರಂಭದಲ್ಲಿ ಒಳ್ಳೆ ಚಿತ್ರಗಳನ್ನ ಮಾಡ್ತಾನೇ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಬೆಳೆದ ರಮ್ಯಾ, ಬಹು ಬಡಿಕೆ ನಟಿ ಆಗಿದ್ದು ಗೊತ್ತೇ ಇದೆ. ರಮ್ಯಾ ಮತ್ತು ರಕ್ಷಿತಾ ಅವರ ನಡುವೇ ಭಾರೀ ಕಾಂಪಿಟೇಷನ್ ಕೂಡ ಇಂಡಸ್ಟ್ರೀಯಲ್ಲಿ ಏರ್ಪಟ್ಟಿತ್ತು.


ಸಂಜು ವೆಡ್ಸ್ ಗೀತಾ ರಮ್ಯಾ ಚಿತ್ರ ಜೀವನದ ಸ್ಪೆಷಲ್ ಸಿನಿಮಾ


ಇವರ ಅಭಿನಯದಲ್ಲಿ ಬಂದ ಸಂಜು ವೆಡ್ಸ್ ಗೀತಾ ತುಂಬಾ ಅದ್ಭುತ ಸಿನಿಮಾನೇ ಆಗಿತ್ತು. ಬೆಂಗಳೂರಿನ ಕೆಜಿ ರಸ್ತೆಯ ಸಾಗರ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಅಷ್ಟು ವಿಶೇಷವಾದ ಈ ಚಿತ್ರದ ಬಳಿಕ ರಮ್ಯಾ ಆರ್ಯನ್ ಸಿನಿಮಾ ಮಾಡಿದರು.


ಕೊನೆಯದಾಗಿ 2016 ರಲ್ಲಿ ನಾಗರಹಾವು ಸಿನಿಮಾದಲ್ಲಿ ಅಭಿನಯಿಸಿದ್ದರು. ಅಷ್ಟೇ ನೋಡಿ, ರಮ್ಯಾ ದೂರ ದೂರ ಹೋಗಿ ಬಿಟ್ಟರು. ಎಲ್ಲಿಗೆ ಹೋದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಹೆಚ್ಚು ಕಡಿಮೆ 8 ವರ್ಷದ ಬಳಿಕ ರಮ್ಯಾ ವಾಪಾಸ್ ಆಗಿದ್ದಾರೆ.


Kannada Actress Ramya Film Journey Untold Story Uttara Karnataka
ಕ್ವೀನ್ ಕೈ ಹಿಡಿದ ಉತ್ತರ ಕರ್ನಾಟಕದ ಕಥೆಗಳು


ನಿರ್ಮಾಪಕಿಯಾಗಿ ಬಂದ್ರೂ ನಟನೆಗೆ ಉತ್ತರ ಕರ್ನಾಟಕ ಕಥೆಯ ಆಯ್ಕೆ


ಆ್ಯಪಲ್ ಬಾಕ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದರು. ಈ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದರ ಮಧ್ಯೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಸ್ಪೆಷಲ್ ಆಗಿಯೇ ಅಭಿನಯಿಸಿದ್ದಾರೆ.


ಇದರ ಮಧ್ಯೆ ರಮ್ಯಾ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಮ್ಯಾ ಮೇನ್ ಲೀಡ್ ಪಾತ್ರದಲ್ಲಿಯೇ ಅಭಿನಯಸಿದ್ದಾರೆ. ನಾಯಕಿಯಾಗಿ ಕಮ್‌ ಬ್ಯಾಕ್ ಮಾಡ್ತಿರೋ ಈ ಚಿತ್ರ ಕೂಡ ಉತ್ತರ ಕರ್ನಾಟಕ ಹಿನ್ನೆಲೆಯನ್ನೆ ಹೊಂದಿದೆ.


ಸ್ಯಾಂಡಲ್‌ವುಡ್ ಕ್ವೀನ್ ಕೈ ಹಿಡಿದ ಉತ್ತರ ಕರ್ನಾಟಕದ ಕಥೆಗಳು


ಉತ್ತರ ಕರ್ನಾಟಕದಲ್ಲಿ ನಡೆದ ಕಾಂಡಗಳ ಕಥೆಯನ್ನೆ ಆಧರಿಸಿದ ಈ ಚಿತ್ರದಲ್ಲಿ ರಮ್ಯಾ ಮತ್ತೊಮ್ಮೆ ಉತ್ತರ ಕರ್ನಾಟಕ ಭಾಷೆಯನ್ನ ಮಾತನಾಡಲಿದ್ದಾರೆ. ಈಗಾಗಲೇ ರಮ್ಯಾ ಮಾತನಾಡಿರೋ ಚಿತ್ರದ ಡೈಲಾಗ್ ಫೇಮಸ್ ಆಗಿವೆ.


ಇದನ್ನೂ ಓದಿ: Actress Ramya: ರಮ್ಯಾ-ರಕ್ಷಿತಾ ಮಧ್ಯೆ ಸ್ಪರ್ಧೆ ತಂದಿದ್ದು ಯಾರು? ಸ್ಯಾಂಡಲ್​ವುಡ್ ಕ್ವೀನ್ ಹೇಳಿದ್ದಿಷ್ಟು


ಹಾಗೆ ರೋಹಿತ್ ಪದಕಿ ನಿರ್ದೇಶನದ ಈ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ. ಚಿತ್ರೀಕರಣದ ಅಧಿಕೃತ ಅಪ್‌ಡೇಟ್ಸ್ ಇನ್ನೂ ಹೊರ ಬಿದ್ದಿಲ್ಲ. ಅಷ್ಟರಲ್ಲಿಯೇ ರಮ್ಯಾ ವೀಕೆಂಡ್ ವಿಥ್ ರಮೇಶ್ ಸೀಸನ್-5 ರ ಮೊದಲ ಸಂಚಿಕೆಯ ಮೊದಲ ಸಾಧಕಿಯಾಗಿಯೇ ಬರ್ತಿದ್ದಾರೆ.

First published: