ಚಿಕ್ಕವಯಸ್ಸಿನಲ್ಲೇ ಹೃದಯಾಘಾತದಿಂದ ಎಲ್ಲರನ್ನೂ ಅಗಲಿದ ಚಿರು ಸರ್ಜಾ ಅವರ ಅಂತ್ಯಸಂಸ್ಕಾರ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ತೋಟದಲ್ಲಿ ನಡೆಯಿತು. 10 ವರ್ಷಗಳ ಸ್ಯಾಂಡಲ್ವುಡ್ನಲ್ಲಿ ಸೇವೆ ಸಲ್ಲಿಸಿದ್ದ ಚಿರು ಇನ್ನು ನೆನಪು ಮಾತ್ರ.
ಚಿರು ಸರ್ಜಾ ಅವರ ಅಕಾಲಿಕ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಶೋಕದಲ್ಲಿ ಮುಳುಗಿದೆ. ಟಾಲಿವುಡ್, ಮಾಲಿವುಡ್ ನಟ-ನಟಿಯರೂ ಚಿರು ಅಗಲಿಕೆಯ ಸುದ್ದಿ ಕೇಳಿ ಸಂತಾಪ ಸೂಚಿಸುತ್ತಿದ್ದಾರೆ. ಸ್ಯಾಂಡಲ್ವುಡ್ ನಟಿ ರಮ್ಯಾ ಸಹ ಚಿರು ಜೊತೆಗಿದ್ದ ಬಾಂಧವ್ಯದ ಕುರಿತಾಗಿ ಬರೆದುಕೊಂಡಿದ್ದು, ಕಂಬನಿ ಮಿಡಿದಿದ್ದಾರೆ.
![Kannada Actress Ramya Condolence to Chiranjeevi Sarjas Death]()
ರಮ್ಯಾ ಅವರ ಫೇಸ್ಬುಕ್ ಪೋಸ್ಟ್
'ಚಿರು ಅದ್ಬೂತ ಸಹ ನಟರಾಗಿದ್ದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅವರ ಸಕಾರಾತ್ಮಕ ವ್ಯಕ್ತಿತ್ವ ಅವರೊಂದಿಗೆ ಕೆಲಸ ಮಾಡಲು ಬಹಳ ಖುಷಿ ನೀಡುತ್ತಿತ್ತು. ಅವರೊಂದಿಗೆ ಕೆಲಸ ಮಾಡಿದ್ದು ಸದಾ ಮನಸ್ಸಿನಲ್ಲಿ ಹಸಿರಾಗಿರುತ್ತದೆ. ಈಗ ನಾನು ಹೇಳುವ ಮಾತುಗಳಿಂದ ಅವರ ಕುಟುಂಬದವರ ನೋವ ಕಡಿಮೆ ಯಾಗುವುದಿಲ್ಲ. ಚಿರು ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬದವರಿಗೆ ಕೊಡಲಿ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Saif-Kareena: ಮಾಸ್ಕ್ ಇಲ್ಲದೆ ತೈಮೂರ್ ಜೊತೆ ಹೊರಗಡೆ ಬಂದು ಟ್ರೋಲ್ ಆದ ಸೈಫ್-ಕರೀನಾ: ಬುದ್ಧಿ ಹೇಳಿದ ಪೊಲೀಸ್..!
ರಮ್ಯಾ ಹಾಗೂ ಚಿರಂಜೀವಿ ಸರ್ಜಾ 'ದಂಡಂ ದಶಗುಣಂ' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಇದು 2011ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ಚಿರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು.
HDB Rakshit Shetty: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ