• Home
  • »
  • News
  • »
  • entertainment
  • »
  • Ramya Come Back Teaser: ರಮ್ಯಾ ಕಮ್ ಬ್ಯಾಕ್ ಮಾಡ್ಬೇಕು ಅಂತ ಹಾಸ್ಟೆಲ್ ಹುಡುಗರ ಪ್ರೊಟೆಸ್ಟ್​; ಟೀಸರ್​ನಲ್ಲಿ ಎಲ್ಲವೂ ಈಗ ರಿವೀಲ್

Ramya Come Back Teaser: ರಮ್ಯಾ ಕಮ್ ಬ್ಯಾಕ್ ಮಾಡ್ಬೇಕು ಅಂತ ಹಾಸ್ಟೆಲ್ ಹುಡುಗರ ಪ್ರೊಟೆಸ್ಟ್​; ಟೀಸರ್​ನಲ್ಲಿ ಎಲ್ಲವೂ ಈಗ ರಿವೀಲ್

ರಮ್ಯಾ ಕಮ್​ ಬ್ಯಾಕ್​​ಗೆ ಹಾಸ್ಟೆಲ್ ಹುಡುಗರ ಸಖತ್ ಪ್ರೋಟೆಸ್ಟ್

ರಮ್ಯಾ ಕಮ್​ ಬ್ಯಾಕ್​​ಗೆ ಹಾಸ್ಟೆಲ್ ಹುಡುಗರ ಸಖತ್ ಪ್ರೋಟೆಸ್ಟ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ರಮ್ಯಾ ಇರೋದ್ರ ಬಗ್ಗೆ ಈಗಲೇ ಯಾವುದೇ ಕ್ಲಾರಿಟಿ ಇಲ್ಲ. ಆದರೆ ಟೀಸರ್ ನಲ್ಲಿ ಮಾತ್ರ ಸಖತ್ ಆಗಿಯೇ ರಮ್ಯಾ ಆ್ಯಕ್ಟ್ ಮಾಡಿದ್ದಾರೆ. ಹುಡುಗರಿಗಾಗಿಯೇ ರಮ್ಯಾ ಇಲ್ಲಿ ಬಂದು ಶೂಟಿಂಗ್​ ನಲ್ಲಿ ಭಾಗಿ ಆಗಿರೋದು ಕೂಡ ಇಲ್ಲಿ ತಿಳಿಯುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್ ಕ್ವೀನ್ (Ramya Come Back) ರಮ್ಯಾ ಕನ್ನಡಕ್ಕೆ ಕಮ್​ ಬ್ಯಾಕ್ ಮಾಡಿದ್ದಾರೆ. "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಅನ್ನೋ ಸಿನಿಮಾ ಮೂಲಕ ರಮ್ಯಾ ಮತ್ತೆ ವಾಪಸ್ ಬಂದಿದ್ದಾರೆ. ಇದಕ್ಕೆ ಕಾರಣ ಏನೂ ಅನ್ನೋದನ್ನ ಸ್ವತಃ ಸಿನಿಮಾ (Cinema Teaser) ಟೀಮ್ ತನ್ನ ಟೀಸರ್​ (Teaser) ಮೂಲಕವೇ ಹೇಳಿದೆ. ಇದನ್ನ ನೀವು ನೋಡಿದ್ರೆ ನಿಮಗೂ ಅಷ್ಟೇ ಖುಷಿ ಆಗುತ್ತದೆ. ಅಷ್ಟೇ ಮಜಾ ಕೂಡ ಬರುತ್ತದೆ. ಇದಲ್ಲದೇ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಕಳೆದ 8 ವರ್ಷದಿಂದಲೂ ಯಾವುದೇ ಸಿನಿಮಾ ಮಾಡಿರಲಿಲ್ಲ. ಸಿನಿಮಾರಂಗದಿಂದಲೂ ದೂರವೇ ಇದ್ದರು. ಆದರೆ ಹಾಸ್ಟೆಲ್ (Hostel Hudugaru Bekagidare ) ಹುಡುಗರು ಚಿತ್ರದ ಮೂಲಕ ರಮ್ಯಾ ವಾಪಸ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಒಂದು ವಿಷಯವನ್ನ ಹಾಸ್ಟೆಲ್ ಹುಡುಗರು ಚಿತ್ರ ತಂಡ ಸಖತ್ ಆಗಿಯೇ ಹೇಳಿದೆ.


ರಮ್ಯಾ ಕಮ್​ ಬ್ಯಾಕ್​​ಗೆ ಹಾಸ್ಟೆಲ್ ಹುಡುಗರ ಸಖತ್ ಪ್ರೋಟೆಸ್ಟ್
"ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಅನ್ನೋ ಸಿನಿಮಾ ನಿಜಕ್ಕೂ ಹೊಸ ಐಡಿಯಾ ಮಾಡಿದೆ. ಇಲ್ಲಿವರೆಗೂ ಇಂತಹ ಒಂದು ಕಮ್ ಬ್ಯಾಕ್ ಟೀಸರ್ ಯಾರೂ ಮಾಡಿರಲಿಲ್ಲ. ಹಾಗೇನೆ ರಮ್ಯಾ ಸ್ಯಾಂಡಲ್​​ವುಡ್ ಗೆ ಕಮ್​ ಬ್ಯಾಕ್ ಮಾಡಲೇಬೇಕು ಅಂತಲೇ ಹಾಸ್ಟೆಲ್ ಹುಡುಗರು ಪ್ರೊಟೆಸ್ಟ್ ಕೂಡ ಮಾಡಿದ್ದಾರೆ.
ಹೌದು , ರಮ್ಯಾ ಮನೆ ಮುಂದೆ ಚಿತ್ರ-ವಿಚಿತ್ರವಾಗಿಯೇ ಹಾಸ್ಟೆಲ್ ಹುಡುಗರು ಪ್ರೊಟೆಸ್ಟ್ ಮಾಡಿದ್ದಾರೆ. ರಮ್ಯಾ ವಾಪಸ್ ಕನ್ನಡ ಚಿತ್ರರಂಗಕ್ಕೆ ಬರಲೇಬೇಕು. ನಮ್ಮ ಸಿನಿಮಾದಲ್ಲಿ ಅಭಿನಯ ಮಾಡಲೇಬೇಕು ಅಂತಲೇ ಹೋರಾಟ ಮಾಡಿದ್ದಾರೆ.


ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟೀಸರ್ ರೀಲಾ? ರಿಯಲ್ಲಾ?
ಹಾಸ್ಟೆಲ್ ಹುಡುಗರು ಚಿತ್ರದ ರಮ್ಯಾ ಟೀಸರ್ ನೋಡಿದ್ರೆ ನಿಮಗೆ ಒಂದು ಅಂದಾಜು ಸಿಗುತ್ತದೆ. ರಮ್ಯಾ ಕಮ್ ಬ್ಯಾಕ್ ಮಾಡಲಿ ಎಂದು ಅದೆಷ್ಟೋ ಯುವಕರು ಕಾಯುತ್ತಿದ್ದಾರೆ ಅನ್ನೋದನ್ನ ಇಲ್ಲಿ ವಿಭಿನ್ನವಾಗಿಯೇ ತೋರಲಾಗಿದೆ.
ಹಾಸ್ಟೆಲ್ ಹುಡುಗರ ಈ ಒಂದು ಮೊದಲ ಪ್ರಯೋಗದಲ್ಲಿ ರಮ್ಯಾ ಇದ್ದಾರೆ ಅನ್ನೋದನ್ನ ಕೂಡ ಈ ಒಂದು ಟೀಸರ್ ಹೇಳುತ್ತಿದೆ. ಅಸಲಿಗೆ ರಮ್ಯಾ ಈ ಚಿತ್ರದಲ್ಲಿ ಇದ್ದಾರೋ ಇಲ್ಲವೋ? ಈ ಒಂದು ಟೀಸರ್ ನೋಡಿದ್ರೆ ಆ ಅನುಮಾನ ಬರುತ್ತದೆ.


ಇದನ್ನೂ ಓದಿ: Ricky Kej: ಹಾಲಿವುಡ್ ಸಿನಿಮಾಗೆ ಭಾರತದ ಸಂಗೀತ ಸಂಯೋಜಕನ ಮ್ಯೂಸಿಕ್!


ಒಂದು ವೇಳೆ ಅಭಿನಯಿಸಿದ್ದರೇ, ರಮ್ಯಾ ಈ ಚಿತ್ರದಲ್ಲಿ ಯಾವ ರೀತಿಯ ರೋಲ್ ಮಾಡಿದ್ದಾರೆ ಅನ್ನೋ ಪ್ರಶ್ನೆ ಕೂಡ ಇದೆ. ಆದರೆ ಆ ಪ್ರಶ್ನೆಗೆ ಇಲ್ಲಿ ಉತ್ತರ ಸಿಗೋದಿಲ್ಲ. ಬದಲಾಗಿ ರಮ್ಯಾ ಈ ಟೀಸರ್ ಗೋಸ್ಕರವೇ ಅಭಿನಯಿಸಿದ್ದಾರೇನೋ ಅನ್ನೋ ಅನುಮಾನವೂ ಹುಟ್ಟಿ ಬಿಡುತ್ತದೆ.


"ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಚಿತ್ರದಲ್ಲಿ ರಮ್ಯಾ ಇಲ್ವೇ?
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ರಮ್ಯಾ ಇರೋದ್ರ ಬಗ್ಗೆ ಈಗಲೇ ಯಾವುದೇ ಕ್ಲಾರಿಟಿ ಇಲ್ಲ. ಆದರೆ ಟೀಸರ್ ನಲ್ಲಿ ಮಾತ್ರ ಸಖತ್ ಆಗಿಯೇ ರಮ್ಯಾ ಆ್ಯಕ್ಟ್ ಮಾಡಿದ್ದಾರೆ. ಹುಡುಗರಿಗಾಗಿಯೇ ರಮ್ಯಾ ಇಲ್ಲಿ ಬಂದು ಶೂಟಿಂಗ್​ ನಲ್ಲಿ ಭಾಗಿ ಆಗಿರೋದು ಕೂಡ ಇಲ್ಲಿ ತಿಳಿಯುತ್ತದೆ.


Kannada Actress Ramya Came Back to Sandalwood
ರಮ್ಯಾ ಕಮ್ ಬ್ಯಾಕ್ ಮಾಡ್ಬೇಕು ಅಂತ ಪ್ರೊಟೆಸ್ಟ್ ಮಾಡಿದ ಹಾಸ್ಟೆಲ್ ಹುಡುಗರು


ಅಂದ್ಹಾಗೆ ರಮ್ಯಾ ಅವರ ಕಮ್​ ಬ್ಯಾಕ್ ಬಗ್ಗೆ ಇಡೀ ಸ್ಯಾಂಡಲ್​ವುಡ್​ ನಲ್ಲಿ ಭಾರೀ ಕುತೂಹಲ ಇದೆ. ಆ ಬಗ್ಗೆ ರಮ್ಯಾ ಕೂಡ ಹಲವು ಕಲಾವಿದರ ಜೊತೆಗೆ ಚರ್ಚೆ ಕೂಡ ಮಾಡಿದ್ದಾರೆ. ಇದರ ಹೊರತಾಗಿ ರಮ್ಯಾ ಈಗಾಗಲೇ ಆ್ಯಪಲ್ ಬಾಕ್ಸ್ ಮೂಲಕ ನಿರ್ಮಾಪಕಿಯಾಗಿ ಬರುವ ವಿಚಾರವನ್ನ ಅನೌನ್ಸ್ ಮಾಡಿ ಆಗಿದೆ.


ಇದನ್ನೂ ಓದಿ: Sandalwood Queen Ramya: ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು! ಯಾಕೆ? ಏನಾಯ್ತು?


ಆದರೆ ಅದಕ್ಕೂ ಮೊದಲೇ ನಟಿ ರಮ್ಯಾ ಈಗ ಹಾಸ್ಟೆಲ್ ಹುಡುಗರು ಮೂಲಕ ಟೀಸರ್​ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾರಂಗಕ್ಕೆ ಈ ಮೂಲಕ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಿರೋದನ್ನ ಸಾಂಕೇತಿಕವಾಗಿಯೇ ಹೇಳಿದಂತಿದೆ. ಇಷ್ಟು ಬಿಟ್ಟರೇ, ರಮ್ಯಾ ಕಮ್​ ಬ್ಯಾಕ್ ಕುತೂಹಲವನ್ನ ತಂಡ ಇನ್ನೂ ಹಾಗೆ ಉಳಿಸಿಕೊಂಡಿದೆ.


ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ ವರುಣ್ ಹಾಗೂ ಪ್ರಜ್ವಲ್ ಸೇರಿ ದುಡ್ಡುಹಾಕಿದ್ದಾರೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿಯೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್ ಆಗುತ್ತಿದೆ.

First published: