Ragini Dwivedi: ಡ್ರಗ್ಸ್ ಕೇಸ್, ಜೈಲಲ್ಲಿ 90 ದಿನ! ಬರ್ತಿದೆ ರಾಗಿಣಿ ಪುಸ್ತಕ

ಪ್ರತಿ ದಿನ ಪ್ರತಿ ಕ್ಷಣವನ್ನ ಬರೆದಿಟ್ಟುಕೊಂಡಿರೋ ರಾಗಿಣಿ ದ್ವಿವೇದಿ

ಪ್ರತಿ ದಿನ ಪ್ರತಿ ಕ್ಷಣವನ್ನ ಬರೆದಿಟ್ಟುಕೊಂಡಿರೋ ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ ಈಗೊಂದು ನಿರ್ಧಾರ ಮಾಡ್ತಾ ಇದ್ದಾರೆ. ತಮ್ಮ ಬದುಕಿನ ಆ 90 ದಿನಗಳ ಬಗ್ಗೆ ಪುಸ್ತಕ ಬರೆಯಬೇಕು ಅಂತ ಯೋಚನೆ ಮಾಡ್ತಿದ್ದಾರೆ. ಇದು ಪುಸ್ತಕ ರೂಪದಲ್ಲಿ ಬರಲು ಇನ್ನೂ ಟೈಮ್ ಇದೆ ಅಂತ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ರಾಗಿಣಿ ಹೇಳಿಕೊಂಡಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi book on her Life) ಜೀವನದಲ್ಲಿ ಅಂದು ಎಲ್ಲವೂ ಸರಿ ಇತ್ತು. ಸ್ಟಾರ್ ಜೊತೆಗೆ ಸಿನಿಮಾ ಮಾಡಿಕೊಂಡು ಫ್ಯಾನ್ಸ್ ಗಳಿಸಿದ್ದರು. ಫ್ಯಾಷನ್ ಶೋಗಳಲ್ಲೂ ಕಾಣಿಸಿಕೊಂಡು ಇಡೀ ಶೋಗೆ ಮೆರಗು ತರ್ತಾ ಇದ್ದರು. ಹೀರೋಗಳ ಮಧ್ಯೆ ಸೂಪರ್ ಹೀರೋಯಿನ್ ಆಗಿ (Ragini Dwivedi Latest Updates) ಕಾಣಿಸಿಕೊಂಡರು. ಮಹಿಳಾ ಪ್ರಧಾನ ಸಿನಿಮಾ ಮೂಲಕ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಅವರ ರೀತಿ ಮಿಂಚೋಕೆ ಟ್ರೈ ಮಾಡಿದರು. ಆನಂದ್‌ ಪಿ.ರಾಜು ನಿರ್ದೇಶದನಲ್ಲಿ ಹಲವು ಪೊಲೀಸ್ (Kannada Actress Ragini Dwivedi) ಸಿನಿಮಾಗಳಲ್ಲೂ ಅಭಿನಯಿಸಿದ್ದರು. ರಾಗಿಣಿ ಐಪಿಎಸ್ ದಂತಹ ಸಿನಿಮಾದಲ್ಲಿ ರಾಗಿಣಿ ಸಖತ್ ಆಗಿಯೇ ಮಿಂಚಿದ್ದರು.


ಆದರೆ ಆ ಒಂದು ದಿನ ಹೌದು, ಆ ಒಂದು ದಿನ ಆ (Ragini Dwivedi Latest Updates) ಒಂದು ಕೇಸ್‌ ಅಲ್ಲಿ ಸಿಲುಕಿದ ಮೇಲೆ ಎಲ್ಲವೂ ಅಯೋಮಯ, ಬದುಕಿನ ದಿಕ್ಕು ಬದಲಿಸಿಯೇ ಬಿಟ್ಟಿತು ನೋಡಿ.


Kannada Actress Ragini Dwivedi Wants wrote a book on her life in jail
ಆ 90 ದಿನಗಳ ಮೇಲೆ ರಾಗಿಣಿ ದ್ವಿವೇದಿ ಬದುಕಿನ ಪುಸ್ತಕ


ಕರಾಳ ದಿನಗಳು ಕರಾಳ ಕ್ಷಣಗಳು-ಎಲ್ಲವನ್ನೂ ಬರೆದಿಟ್ಟ ರಾಗಿಣಿ


ಹೌದು, ಟಾಪ್ ಅಲ್ಲಿರೋ ನಟಿ ರಾಗಿಣಿ ದ್ವಿವೇದಿ ಬದುಕಿನಲ್ಲಿ ಡ್ರಗ್ಸ್ ಕೇಸ್ ಬ್ಲಾಕ್ ಸ್ಪಾಟ್ ಆಗಿಯೇ ಬಿಟ್ಟಿದೆ. ಇದರಿಂದ ಜರ್ಜರಿತಗೊಂಡಿದ್ದ ರಾಗಿಣಿ ದ್ವಿವೇದಿ ಪ್ರತಿಯೊಂದನ್ನ ಬರೆದಿಟ್ಟುಕೊಂಡಿದ್ದಾರೆ. ಜೈಲಿನಲ್ಲಿದ್ದ ಆ 90 ದಿನಗಳ ಪ್ರತಿ ಕ್ಷಣವನ್ನ ಇಂದಿಗೂ ಮರೆತಿಲ್ಲ.




ಜೈಲಿನಲ್ಲಿದ್ದ ಆ 90 ದಿನಗಳ ಪ್ರತಿ ದಿನವೂ ಆದ ಪ್ರತಿ ಕ್ಷಣವನ್ನ ರಾಗಿಣಿ ಬರೆದಿಟ್ಟಿದ್ದಾರೆ. ಅದನ್ನ ಎಂದೂ ಮರೆಯಲೇಬಾರದು ಅನ್ನೋದಕ್ಕೆ ಬರೆದಿರೋ ಸತ್ಯ ಇದಾಗಿಲ್ಲ. ತಮ್ಮ ಬದುಕಿನ ಚಾಪ್ಟರ್ ಅಲ್ಲಿ ಬಂದ ಕರಾಳ ದಿನಗಳನ್ನ ದಾಖಲೆ ಮಾಡುತ್ತಲೇ ಹೋಗಿದ್ದಾರೆ.


ಹಾಗೆ ಬರೆದಿಟ್ಟ ಆ 90 ದಿನಗಳ ಸಂಗತಿಗಳಲ್ಲಿ ಏನೆಲ್ಲ ಇದೆ ಗೊತ್ತಿಲ್ಲ. ಆದರೆ ಅದನ್ನ ಅಷ್ಟೇ ನೀಟಾಗಿಯೇ ಬರೆದಿಟ್ಟುಕೊಂಡಿದ್ದಾರೆ. ಹಾಗೆ ಬರೆದ ಆ ಅನುಭವವನ್ನ ಇದೀಗ ಪುಸ್ತಕ ರೂಪದಲ್ಲಿ ತರುವ ಒಂದು ಯೋಚನೆ ಕೂಡ ಬಂದಿದೆ. ಈ ಬಗ್ಗೆ ನ್ಯೂಸ್-೧೮ ಕನ್ನಡ ಡಿಜಿಟಲ್‌ ಜೊತೆಗೂ ರಾಗಿಣಿ ಹೇಳಿಕೊಂಡಿದ್ದಾರೆ.


ಪ್ರತಿ ದಿನ ಪ್ರತಿ ಕ್ಷಣವನ್ನ ಬರೆದಿಟ್ಟುಕೊಂಡಿರೋ ರಾಗಿಣಿ ದ್ವಿವೇದಿ


ನಾನು ನನ್ನ ಜೀವನದ ಆ 90 ದಿನಗಳ ಬಗ್ಗೆ ಎಲ್ಲವನ್ನೂ ಬರೆದಿಟ್ಟುಕೊಂಡಿದ್ದೇನೆ. ಆ ಅನುಭವವನ್ನ ಪುಸ್ತಕದ ರೂಪದಲ್ಲಿ ತರಬೇಕು ಅನ್ನೋ ಯೋಚನೆ ಬಂದಿದೆ. ಆದರೆ ಈ ಪುಸ್ತಕಕ್ಕೆ ಏನು ಟೈಟಲ್ ಇಡಬೇಕು? ಈ ಪುಸ್ತಕ ಯಾವಾಗ ರಿಲೀಸ್ ಆಗುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಇನ್ನೂ ಟೈಮ್ ಇದೆ ಅಂತ ರಾಗಿಣಿ ದ್ವಿವೇದಿ ಹೇಳಿಕೊಂಡಿದ್ದಾರೆ.


ರಾಗಿಣಿ ದ್ವಿವೇದಿ ಅವರಿಗೆ ಈ ಥಾಟ್ ಯಾಕೆ ಬಂತು ಗೊತ್ತಿಲ್ಲ. ಆದರೆ ತಮಗಾದ ಅನುಭವವನ್ನ ಎಲ್ಲರೊಟ್ಟಿಗೆ ಹಂಚಿಕೊಳ್ಳುವ ಧೈರ್ಯ ಮಾಡಿರೋದಂತೂ ನಿಜ, ಈ ಬಗ್ಗೆ ರಾಗಿಣಿ ಎಲ್ಲೂ ಹೆಚ್ಚಿಗೆ ಹೇಳೋಕೆ ಇಷ್ಟ ಪಡೋದಿಲ್ಲ.


Kannada Actress Ragini Dwivedi Wants wrote a book on her life in jail
ರಾಗಿಣಿ ದ್ವಿವೇದಿ ಆ 90 ದಿನಗಳ ಮೇಲೆ ಪುಸ್ತಕ


ಆ 90 ದಿನಗಳ ಮೇಲೆ ರಾಗಿಣಿ ದ್ವಿವೇದಿ ಬದುಕಿನ ಪುಸ್ತಕ


ಆದರೆ ಇದೀಗ ರಾಗಿಣಿ ತಮ್ಮ ಬದುಕಿನ ಆ 90 ದಿನಗಳ ಕುರಿತು ಹೇಳೋಕೆ ಯೋಚನೆ ಮಾಡುತ್ತಿದ್ದಾರೆ. ಈ ಪುಸ್ತಕದ ಮೂಲಕ ರಾಗಿಣಿ ಅವರ ಬದುಕಿನ ಆ ದಿನಗಳ ಯಾವೆಲ್ಲ ಸಂಗತಿಗಳು ರಿವೀಲ್ ಆಗಲಿವೆ ಅನ್ನೊ ಕುತೂಹಲ ಕೂಡ ಇದೆ.


ಇಲ್ಲಿವರೆಗೂ ಈ ಬಗ್ಗೆ ಎಲ್ಲೂ ಹೇಳಿಕೊಳ್ಳದ ರಾಗಿಣಿ ದ್ವಿವೇದಿ, ಇದೀಗ ಪುಸ್ತಕ ರೂಪದಲ್ಲಿ ತಮ್ಮ ಅನುಭವ ಹೇಳಬೇಕು ಅನ್ನೋ ವಿಷಯವನ್ನ ಮಾಧ್ಯಮದ ಮುಂದೇನೂ ಹೇಳಕೊಂಡಿದ್ದಾರೆ.


ಇದನ್ನೂ ಓದಿ:  Jaggesh Movies: ನವರಸ ನಾಯಕನಿಗೆ ವಿಶೇಷ ಗೌರವ, 4 ದಶಕಗಳ ಸಂಭ್ರಮದಲ್ಲಿ ಜಗ್ಗಣ್ಣ!

top videos


    ಒಟ್ಟಾರೆ ರಾಗಿಣಿ ದ್ವಿವೇದಿ ತಮ್ಮ ಜೀವನದ ಆ 90 ದಿನಗಳನ್ನ ದಾಖಲಿಸಿಟ್ಟಿದ್ದಾರೆ. ಪುಸ್ತಕ ರೂಪದಲ್ಲಿ ಯಾವಾಗ ಬರುತ್ತದೆ ಅನ್ನೋದೇ ಈಗೀನ ಕುತೂಹಲದ ಪ್ರಶ್ನೆ ಅಂತಲೇ ಹೇಳಬಹುದು.

    First published: