• Home
  • »
  • News
  • »
  • entertainment
  • »
  • Ragini Dwivedi: ಕ್ರಿಕೆಟ್ ದಿಗ್ಗಜನ ಜೊತೆ ರಾಗಿಣಿ ದ್ವಿವೇದಿ!

Ragini Dwivedi: ಕ್ರಿಕೆಟ್ ದಿಗ್ಗಜನ ಜೊತೆ ರಾಗಿಣಿ ದ್ವಿವೇದಿ!

ಕ್ರಿಕೆಟ್ ದಿಗ್ಗಜ ಕಪಿಲ್ ದೇವ ಭೇಟಿಯಾದ ರಾಗಿಣಿ!

ಕ್ರಿಕೆಟ್ ದಿಗ್ಗಜ ಕಪಿಲ್ ದೇವ ಭೇಟಿಯಾದ ರಾಗಿಣಿ!

ಕ್ರಿಕೆಟ್ ದಿಗ್ಗಜನನ್ನು ಭೇಟಿಯಾದ ರಾಗಿಣಿ ತುಂಬಾ ಖುಷಿಯಲ್ಲಿ ಕುಣಿದಾಡಿದ್ದಾರೆ. ಕುಣಿದು ಕುಪ್ಪಳಿಸಿದ ರಾಗಿಣಿ, ಆ ಕ್ಷಣ ಸುಮ್ನೆ ಕುಳಿತೇ ಇಲ್ಲ. ಖುಷಿಯಲ್ಲಿಯೇ ಓಡಾಡಿ ಬಿಟ್ಟಿದ್ದಾರೆ.

  • Share this:

ಮೊನ್ನೆ ನಟಿ ರಾಗಿಣಿ ಸಿನಿಮಾ (Ragini Dwivedi) ಶೂಟಿಂಗ್ ಮಾಡ್ತಿದ್ದರು. ಚೆನ್ನೈನಲ್ಲಿ ಚಿತ್ರೀಕರಣದ ಸಮಯ ಅದು, ಆಗ ಸಡನ್ ಆಗಿಯೇ ಎಡಗೈಗೆ ಪೆಟ್ಟು ಮಾಡಿಕೊಂಡರು. ಆದರೆ ಇದಾದ್ಮೇಲೆ ಡಾಕ್ಟರು (4 Days Rest) 4 ದಿನ ರೆಸ್ಟ್ ತೆಗೆದುಕೊಳ್ಳಬೇಕು ಅಂತ ಸಲಹೆ ಕೊಟ್ಟರು. ಇದನ್ನ ಅಷ್ಟೇ ಚಾಚುತಪ್ಪದೇ ಪಾಲಿಸಿದ ರಾಗಿಣಿ, ಅಲ್ಲಿ ಏನ್ ಮಾಡಿದ್ದಾರೆ ಗೊತ್ತೇ? ಹೌದು, ನಾಲ್ಕು ದಿನ ರೆಸ್ಟ್ ತೆಗೆದುಕೊಳ್ಳೋಕೇನೆ ಇಲ್ಲಿಗೆ ಬಂದ (Ragini) ರಾಗಿಣಿ ಇನ್ನೂ ಒಂದು ಕೆಲಸವನ್ನ ಕೂಡ ಮಾಡಿದ್ದಾರೆ. ಆ ಕೆಲಸವನ್ನ ಕಂಡ್ರೆ ಎಲ್ಲರಿಗೂ ಇಷ್ಟ ಆಗುತ್ತದೆ. ಅದಕ್ಕೂ ಹೆಚ್ಚಾಗಿ ರಾಗಿಣಿ ದ್ವಿವೇದಿ ಆ ಕೆಲಸದಿಂದ ಫುಲ್ ಖುಷ್ ಆಗಿದ್ದಾರೆ. ಅದೇನೂ ಅನ್ನೋದನ್ನ ಸ್ವತಃ ರಾಗಿಣಿ ಆಡಿಯೋ (Audio Clip) ಕ್ಲಿಪ್ ಮೂಲಕ ನ್ಯೂಸ್-18 ಡಿಜಿಟಲ್​ ಕನ್ನಡಕ್ಕೂ ಹಂಚಿಕೊಂಡಿದ್ದಾರೆ.


ರಾಗಿಣಿ ರೆಸ್ಟ್ ತೆಗೆದುಕೊಳ್ಳೋದು ಬಿಟ್ಟು ಹಿಂಗ್ಯಾಕ್ ಮಾಡಿದ್ರು!
ರಾಗಿಣಿ ಮುಂಬೈಗೆ ಹಾರಿ ಹೋಗಿದ್ದಾರೆ. ಇಲ್ಲಿಯೇ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಆ ಗ್ಯಾಪ್​ ನಲ್ಲಿಯೇ ಪೆಟ್ಟು ಮಾಡಿಕೊಂಡ ಕೈಗೆ ಫಿಜಿಯೋ ಥೆರಪಿ ಕೂಡ ಮಾಡಿಕೊಳ್ಳುತ್ತಿದ್ದಾರೆ.
ಹೌದು, ಇದೇನೋ ನಿಜ, ಆದರೆ ಈ ನಟಿ ಸುಮ್ನೆ ಕೂಡದೇ ಆ ವ್ಯಕ್ತಿಯನ್ನ ಮೀಟ್ ಆಗಿದ್ದಾರೆ.


ಕ್ರಿಕೆಟ್ ಲೋಕದಲ್ಲಿ ಟಾಪ್​ ಅಲ್ಲಿದ್ದ ಆ ಕ್ರಿಕೆಟರ್ ಜೀವನದ ಮೇಲೆ ಸಿನಿಮಾ ಕೂಡ ಬಂದಿದೆ. ಅಷ್ಟು ಪವರ್​​ ಫುಲ್ ಆಗಿರೋ ಆ ಕ್ರಿಕೆಟರ್ ಯಾರು ಗೊತ್ತೇ?


Kannada Actress Ragini Dwivedi met Cricketer Kapil Dev at Mumbai
ಕಪಿಲ್ ಕಂಡ ನಾನು ನಿಮ್ಮ ಫ್ಯಾನು ಎಂದ ರಾಗಿಣಿ


ಕ್ರಿಕೆಟ್ ದಿಗ್ಗಜ ಕಪಿಲ್ ದೇವ ಭೇಟಿಯಾದ ರಾಗಿಣಿ!
ರಾಗಿಣಿ ದ್ವಿವೇದಿಗೂ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೂ ಎಲ್ಲಿಂದ ಎಲ್ಲಿ ಲಿಂಕ್? ನೋ ವೇ ಚಾನ್ಸ್​ ಇಲ್ವೇ ಇಲ್ಲ ಬಿಡಿ. ಆದರೆ ರಾಗಿಣಿ ಲಕ್ಕಿ ಆಗಿದ್ದಾರೆ. ಕಪಿಲ್ ದೇವ್ ಮೀಟ್ ಆಗೋ ಚಾನ್ಸ್ ಸಿಕ್ಕು ಸಿಕ್ಕಾಪಟ್ಟೆ ಖುಷಿಯಲ್ಲಿಯೇ ತೇಲಿದ್ದಾರೆ.


ಕಪಿಲ್ ದೇವ್ ಮೀಟ್ ಆದ ರಾಗಿಣಿ ತುಂಬಾ ಖುಷಿಯಲ್ಲಿ ಕುಣಿದಾಡಿದ್ದಾರೆ. ಕುಣಿದು ಕುಪ್ಪಳಿಸಿದ ರಾಗಿಣಿ, ಆ ಕ್ಷಣ ಸುಮ್ನೆ ಕುಳಿತೇ ಇಲ್ಲ. ಖುಷಿಯಲ್ಲಿಯೇ ಓಡಾಡಿ ಬಿಟ್ಟಿದ್ದಾರೆ.




ಕಪಿಲ್ ಕಂಡ ನಾನು ನಿಮ್ಮ ಫ್ಯಾನು ಎಂದ ರಾಗಿಣಿ
ಕಪಿಲ್ ದೇವ್ ಕಂಡ್ರೆ ಎಲ್ಲರಿಗೂ ಈ ಒಂದು ಫೀಲ್ ಬರುತ್ತದೆ. ಅಷ್ಟೇ ಅಲ್ಲದೇ ಕ್ರಿಕೆಟ್ ಪ್ರೇಮಿಗಳಿಗೆ ಕಪಿಲ್ ದೇವ್ ಅಚ್ಚು-ಮೆಚ್ಚಿನ ಆಟಗಾರ್, ಅದರಲ್ಲೂ 1983 ರಲ್ಲಿ ಭಾರತಕ್ಕೆ ವಿಶ್ವ ಕಪ್ ತಂದು ಕೊಟ್ಟ ಮಹಾನ್ ನಾಯಕ ಅಲ್ವೆ. ಅಂತಹ ಈ ನಾಯಕನ್ನ ಮೀಟ್ ಆಗೋಕೆ ಎಲ್ಲರೂ ಇಷ್ಟ ಪಡ್ತಾರೆ ನೋಡಿ.




ರಾಗಿಣಿ ಕೂಡ ಕಪಿಲ್ ದೇವ್ ಪಕ್ಕಾ ಫ್ಯಾನ್ ಆಗಿದ್ದಾರೆ. ಅವರೊಟ್ಟಿಗೆ ಸಾಕಷ್ಟು ಮಾತನಾಡಿದ್ದಾರೆ. ಮಾತನಾಡಿ ತಮ್ಮ ಪರಿಚಯವನ್ನೂ ಅವರಿಗೆ ಹೇಳಿಕೊಂಡಿದ್ದಾರೆ. ಹಾಗೇನೆ ಸುಮಾರು ಹೊತ್ತು ಅವರೊಟ್ಟಿಗೆ ಮಾತನಾಡಿ ಸಂತೋಷ ಪಟ್ಟಿದ್ದಾರೆ.


ಕಪಿಲ್ ದೇವ್ ಜೊತೆಗೆ ಫೋಟೋ ತೆಗೆಸಿಕೊಂಡ ರಾಗಿಣಿ
ಮುಂಬೈಯಲ್ಲಿ ರಾಗಿಣಿ ಕಪಿಲ್ ದೇವ್ ಅವರನ್ನ ಭೇಟಿ ಆಗಿದ್ದಾರೆ. ಭೇಟಿಯಾಗಿ ಸುಮ್ನೆ ಇರ್ತಾರಾ? ಎಲ್ಲ ಫ್ಯಾನ್ಸ್ ರೀತಿನೇ ಕಪಿಲ್ ಜೊತೆಗೆ ಫೋಟೋ ಕೂಡ ಕ್ಲಿಕಿಸಿಕೊಂಡಿದ್ದಾರೆ. ಆ ಫೋಟೋವನ್ನ ಅಷ್ಟೇ ಜತನದಿಂದಲೇ ರಾಗಿಣಿ ಶೇರ್ ಮಾಡಿಕೊಂಡು ಫುಲ್ ಖುಷ್ ಆಗಿದ್ದಾರೆ.


Kannada Actress Ragini Dwivedi met Cricketer Kapil Dev at Mumbai
ಕಪಿಲ್ ದೇವ್ ಜೊತೆಗೆ ಫೋಟೋ ತೆಗೆಸಿಕೊಂಡ ರಾಗಿಣಿ


ಕಮಾಂಡೋ ಆಫೀಸರ್ ರಾಗಿಣಿ ದ್ವಿವೇದಿ
ನಾನು ಭಾರತೀಯ ಹೆಸರಿನ ಚಿತ್ರದಲ್ಲಿ ರಾಗಿಣಿ ಕಮಾಂಡೋ ಆಫೀಸರ್ ಆಗಿ ಅಭಿನಯಿಸುತ್ತಿದ್ದಾರೆ. ಆ ಪಾತ್ರ ಮಾಡೋವಾಗ್ಲೇ ರಾಗಿಣಿ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Vinay Rajkumar: ಹಸಿರ ಸಿರಿಯ ಹಸಿ ಹಸಿ ಕ್ರೌರ್ಯ; ರಾಜ್ ಮೊಮ್ಮಗನ ರಗಡ್​ ರೂಪ-ಡೈರೆಕ್ಟರ್ ಏನ್ ಹೇಳ್ತಾರೆ?


ಈ ಒಂದು ಪೆಟ್ಟು ಬಿದ್ದ ಕಾರಣಕ್ಕೇನೆ ರೆಸ್ಟ್ ತೆಗೆದುಕೊಳ್ಳುತ್ತಿರೋ ರಾಗಿಣಿ, ಮುಂಬೈಯಲ್ಲಿ ಕಪಿಲ್ ದೇವ್ ಅವರನ್ನ ಮೀಟ್ ಆಗಿದ್ದಾರೆ. ಮಾತನಾಡಿದ್ದಾರೆ. ಫೋಟೋ ತೆಗೆಸಿಕೊಂಡಿದ್ದಾರೆ. ಒಟ್ಟಾರೆ, ಈ ಒಂದು ಅದ್ಭುತ ಕ್ಷಣವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

First published: