• Home
  • »
  • News
  • »
  • entertainment
  • »
  • Ragini Dwivedi: ಚೆನ್ನೈಯಲ್ಲಿ ಪೆಟ್ಟು, ಬಾಲಿವುಡ್​ನಲ್ಲಿ ರೆಸ್ಟು, ಮುಂಬೈಗೆ ಹಾರಲಿರೋ ರಾಗಿಣಿ ದ್ವಿವೇದಿ!

Ragini Dwivedi: ಚೆನ್ನೈಯಲ್ಲಿ ಪೆಟ್ಟು, ಬಾಲಿವುಡ್​ನಲ್ಲಿ ರೆಸ್ಟು, ಮುಂಬೈಗೆ ಹಾರಲಿರೋ ರಾಗಿಣಿ ದ್ವಿವೇದಿ!

ಕಮಾಂಡೋ ಆಫೀಸರ್​​ ರಾಗಿಣಿ ಎಡಗೈಗೆ ಗಾಯ!

ಕಮಾಂಡೋ ಆಫೀಸರ್​​ ರಾಗಿಣಿ ಎಡಗೈಗೆ ಗಾಯ!

ನ್ಯೂಸ್-18 ಕನ್ನಡ ಡಿಜಿಟಲ್​​ಗೆ ಈ ಪೆಟ್ಟು ಬಿದ್ದ ಬಗ್ಗೆ ಮಾತು ಕೂಡ ಆಡಿದ್ದಾರೆ. ನಾನು ನಾಲ್ಕು ದಿನ ರೆಸ್ಟ್ ತೆಗೆದುಕೊಳ್ಳಬೇಕು. ಕೈಗೆ ಪೆಟ್ಟು ಬಿದ್ದಿದೆ. ದೇವರ ದಯೆ ಮೂಳೆ ಏನೂ ಮುರಿದಿಲ್ಲ. Muscle tissue Rupture ಆಗಿದೆ ಅಷ್ಟೆ. ಬೇರೆ ಏನೂ ಇಲ್ಲ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್​ ನ ನಾಯಕಿ ನಟಿ ರಾಗಿಣಿ (Ragini Dwivedi) ದ್ವಿವೇದಿ ಈಗ (Mumbai) ಮುಂಬೈಗೆ ಹಾರಿಲಿದ್ದಾರೆ. ಇವರ ಈ ಪಯಣಕ್ಕೆ ಒಂದು ಕಾರಣವೂ ಇದೆ. ಈ ಹಿನ್ನೆಲೆಯಲ್ಲಿಯೇ ಮುಂಬೈಗೆ ಹೋಗ್ತಾಯಿದ್ದಾರೆ. ಹಾಗಂತ ಬಾಲಿವುಡ್​ (Bollywood Offer) ಸಿನಿಮಾ ಆಫರ್​ ಏನಾದ್ರೂ ಬಂತಾ? ಹೀಗೆ ಕೇಳಿದ್ರೆ ಅದಕ್ಕೆ ಉತ್ತರ ಏನೂ? ಈ ಕುತೂಹಲ ಉಳಿಸಿಕೊಳ್ಳಿ, ಆ ಡಿಟೈಲ್ಸ್ ಕೂಡ ನಿಮಗೆ ಇಲ್ಲಿಯೇ ಸಿಗುತ್ತದೆ. ಅದ್ಹಾಗೆ ರಾಗಿಣಿ (Ragini)  ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೇ ಸದ್ಯ ಮನೆಯಲ್ಲಿಯೇ ಇದ್ದಾರೆ. ಬೆಂಗಳೂರಿನ ತಮ್ಮ ಮನೆಯಲ್ಲಿರೋ ರಾಗಿಣಿ ಮುಂಬೈಗೂ  ಅತಿ ಶೀಘ್ರದಲ್ಲಿಯೇ ಮುಂಬೈಗೂ ಹಾರಲಿದ್ದಾರೆ.  ಹೌದು, ಯಾಕೆ? ಈಗಾಗಲೇ ಫೋಟೋ ನೋಡಿದ ನಿಮ್ಗೆ ಅನಿಸಿರಬಹುದು. ಬನ್ನಿ, ಹೇಳ್ತಿನಿ.


ರಾಗಿಣಿ ಕೈಗೆ ಏನ್ ಆಯಿತು? ಇದು ರೀಲಾ ರಿಯಲ್ಲಾ?
ರಾಗಿಣಿ ದ್ವಿವೇದಿ ಆ್ಯಕ್ಷನ್ ಹೀರೋಯಿನ್ ಅಂತ ಗೊತ್ತೇ ಇದೆ. ರಾಗಿಣಿ ಐಪಿಎಸ್ ಅನ್ನೋ ಸಿನಿಮಾದಲ್ಲಿ ತುಪ್ಪದ ಬೆಡಗಿ ರಾಗಿಣಿ ಸಖತ್ ಆ್ಯಕ್ಷನ್ ಮಾಡಿದ್ದರು. ಅದನ್ನ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.


ರಾಗಿಣಿಯ ಸಿನಿ ಜರ್ನಿ ಅಷ್ಟೇ ಕಲರ್​ಫುಲ್ ಅನ್ನೊದು ಗೊತ್ತೇ ಇದೆ. ಆಫ್ ದಿ ರೆಕಾರ್ಡ್ ಬಿಂದಾಸ್ ಆಗಿಯೇ ರಾಗಿಣಿ ಇರ್ತಾರೆ. ಸ್ಕ್ರೀನ್ ಮೇಲೆ ಸಖತ್ ಪವರ್​ ಪುಲ್ ಆ್ಯಕ್ಷನ್ ಕೂಡ ಮಾಡ್ತಾರೆ.


Kannada Actress Ragini Dwivedi Injured at Shooting in Chennai
ಮುಂಬೈಗೆ ಹಾರಲಿರೋ ರಾಗಿಣಿ ದ್ವಿವೇದಿ! ಸರಿ ಯಾಕೆ?


ಕಮಾಂಡೋ ಆಫೀಸರ್ ರಾಗಿಣಿಗೆ ಏನ್ ಆಗಿದೆ?
ಹೌದು ರಾಗಿಣಿ ದ್ವಿವೇದಿ ಕನ್ನಡದ ಸಿನಿಮಾ ಅಲ್ಲದೇ, ತೆಲುಗು ಮತ್ತು ತಮಿಳು ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದ ಚಿತ್ರಗಳಲ್ಲೂ ರಾಗಿಣಿ ಅಭಿನಯಿಸುತ್ತಿದ್ದಾರೆ.
ನಾನು ಒಬ್ಬ ಭಾರತೀಯ ಹೆಸರಿನ ಚಿತ್ರವನ್ನ ಕೂಡ ರಾಗಿಣಿ ಒಪ್ಪಿದ್ದಾರೆ.




ಇದರ ಶೂಟಿಂಗ್ ಚೆನ್ನೈನಲ್ಲಿಯೇ ನಡೆಯುತ್ತಿದೆ. ಇದರಲ್ಲಿ ಭಾಗಿ ಆಗಿರೋ ರಾಗಿಣಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೆ ಮಾಡಿದ್ದಾರೆ. ವಿಶೇಷವಾಗಿ ಕಮಾಂಡೋ ಆಫೀಸರ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.


ಕಮಾಂಡೋ ಆಫೀಸರ್​​ ರಾಗಿಣಿ ಎಡಗೈಗೆ ಗಾಯ!
ರಾಗಿಣಿ ದ್ವಿವೇದಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಚೆನ್ನೈನಲ್ಲಿ ಶೂಟಿಂಗ್ ಸಮಯದಲ್ಲಿಯೇ ಇದೆಲ್ಲ ಆಗಿದೆ. ಇದರಿಂದ ಡಾಕ್ಟರ್ ಬೆಡ್ ರೆಸ್ಟ್​ಗೂ ಹೇಳಿದ್ದಾರೆ. ಅದು ಒಂದೆರಡು ದಿನ ಅಲ್ಲ. ನಾಲ್ಕು ದಿನ ಬೆಡ್ ರೆಸ್ಟ್ ತೆಗೆದುಕೊಳ್ಳಿ ಅಂತಲೇ ಸಲಹೆ ಕೊಟ್ಟಿದ್ದಾರೆ.


ವೈದ್ಯರ ಸಲಹೆ ಪಡೆದ ರಾಗಿಣಿ ಕಮಾಂಡೋ ಪಾತ್ರದ ಚಿತ್ರೀಕರಣದಿಂದ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ. ಹಾಗಂತ ರಾಗಿಣಿ ಈಗ ಏನ್ ಮಾಡುತ್ತಿದ್ದಾರೆ? ಬೆಂಗಳೂರಿನ ತಮ್ಮ ಮನೆಯಲ್ಲಿಯೇ ಇದ್ದಾರಾ? ಈ ಪ್ರಶ್ನೆಗೆ ಇಲ್ಲಿದೆ ಇಂಟ್ರಸ್ಟಿಂಗ್ ಉತ್ತರ.


ಚೆನ್ನೈನಲ್ಲಿ ಪೆಟ್ಟು-ಮುಂಬೈ ನಲ್ಲಿ ರಾಗಿಣಿ ರೆಸ್ಟು!
ರಾಗಿಣಿ ದ್ವಿವೇದಿ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್​​ಗೆ ಈ ಪೆಟ್ಟು ಬಿದ್ದ ಬಗ್ಗೆ ಮಾತು ಕೂಡ ಆಡಿದ್ದಾರೆ. ನಾನು ನಾಲ್ಕು ದಿನ ರೆಸ್ಟ್ ತೆಗೆದುಕೊಳ್ಳಬೇಕು. ಕೈಗೆ ಪೆಟ್ಟು ಬಿದ್ದಿದೆ. ದೇವರ ದಯೆ ಮೂಳೆ ಏನೂ ಮುರಿದಿಲ್ಲ. Muscle tissue Rupture ಆಗಿದೆ ಅಷ್ಟೆ. ಬೇರೆ ಏನೂ ಇಲ್ಲ.


Kannada Actress Ragini Dwivedi Injured at Shooting in Chennai
ರಾಗಿಣಿ ಕೈಗೆ ಏನ್ ಆಯಿತು? ಇದು ರೀಲಾ ರಿಯಲ್ಲಾ?


ಆದರೆ ವೈದ್ಯರ ಸಲಹೆಯಂತೆ ರೆಸ್ಟ್ ತೆಗೆದುಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿಯೇ ಮುಂಬೈಗೂ ಹೋಗುತ್ತಿದ್ದೇನೆ. ಅಲ್ಲಿಯೆ physio ಥೆರಪಿಗೆ ತೆಗೆದುಕೊಳ್ಳುತ್ತಿದ್ದೇನೆ ಎಂದು ರಾಗಿಣಿ ಹೇಳಿದರು.


ರಾಗಿಣಿ ನಾಲ್ಕು ದಿನ ರೆಸ್ಟ್ ತೆಗೆದುಕೊಂಡು ಮತ್ತೆ ಶೂಟಿಂಗ್ ನಲ್ಲಿ ಭಾಗಿ ಆಗಲಿದ್ದಾರೆ. ಸದ್ಯ ಬೆಂಗಳೂರಿನ ಮನೆಯಲ್ಲಿರೋ ರಾಗಿಣಿ ತಮಗೆ ಅದ ನೋವಿನ ಬಗ್ಗೆ ತಮ್ಮ ಅಭಿಮಾನಿಗಳ ಜೊತೆಗೆ ಫೋಟೋ ಸಮೇತ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Vishnu Smaraka: ಮೈಸೂರಿನಲ್ಲಿ ರೆಡಿಯಾಯ್ತು ಸಾಹಸಸಿಂಹನ ಸ್ಮಾರಕ! ಲೋಕಾರ್ಪಣೆ ಬಗ್ಗೆ ಮಾಹಿತಿ ಕೊಟ್ಟ ಅನಿರುದ್ಧ್


ಇನ್ನುಳಿದಂತೆ ರಾಗಿಣಿಗೆ ಎಲ್ಲರೂ ಗೆಟ್ ವೆಲ್ ಸೂನ್ ಅಂತಲೇ ಹೇಳುತ್ತಿದ್ದಾರೆ. ರಾಗಿಣಿ ಕೂಡ ಅದನ್ನ ರಿಸೀವ್ ಮಾಡಿಕೊಂಡು ಖುಷಿಯಾಗಿಯೇ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.

First published: