ಸ್ಯಾಂಡಲ್ವುಡ್ ನಾಯಕಿ (Ragini Dwivedi) ನಟಿ ರಾಗಿಣಿ ದ್ವಿವೇದಿ ಮೊದಲ ಆಲ್ಬಂ ಸಾಂಗ್ ರಿಲೀಸ್ ಆಗಿದೆ. ಇದು ಪಕ್ಕಾ ರಾಗಿಣಿಯ ಗುಣಗಾನದ ಗೀತೆ ಆಗಿದೆ. ರಾಗಿಣಿಯ ಸೌಂದರ್ಯದ ಅಷ್ಟು ಚಿತ್ರಣ ಇಲ್ಲಿ ಹಾಡಿನ (Bollywood quality Song) ರೂಪ ಪಡೆದಿದೆ. ರಾಗಿಣಿಯ ಸೌಂದರ್ಯ ವರ್ಣನೆ ಇಲ್ಲಿ ಚಿತ್ರಣಗೊಂಡಿದೆ. ರಾಗಿಣಿ ಸಿನಿಮಾ ಪ್ರೀತಿ ಬೇರೆ ರೀತಿ ಇದ್ರೆ, ಇಲ್ಲಿ ರಾಗಿಣಿನೇ ಎಲ್ಲ ಅನ್ನೋ ಹಾಗೆ ಇಡೀ ಹಾಡು ಚಿತ್ರಿತಗೊಂಡಿದೆ. ನೋಡುಗರಿಗೆ (Kannada Album Song) ಬಾಲಿವುಡ್ ಕ್ವಾಲಿಟಿಯ ಹಾಡು ಇದಾಗಿದೆ. ಒಳ್ಳೆ ಸಂಗೀತ ಮತ್ತು ಒಳ್ಳೆ ಸಾಲುಗಳ ಗೀತೆ ಅಂತಲೂ ಈಗೀನ ಹುಡುಗರು (Soneyeah Album Song) ಇದನ್ನ ಮೆಚ್ಚಬಹುದು.
ಸಿಂಪಲ್ ಪದಗಳ ಈ ಹಾಡಲ್ಲಿ ಕನ್ನಡ ರಾಪ್ ಇದೆ. ಅದನ್ನ ಇಲ್ಲಿ ಗಾಯಕ ಕ್ವೀಕ್ (Quake) ಮತ್ತು ಮಾರ್ಟಿನ್ ಯೋ ಈ ಹಾಡು ಹಾಡಿದ್ದಾರೆ.
ರಾಗಿಣಿ ರಂಗು ಆಲ್ಬಂ ಸಾಂಗ್ಲ್ಲಿ ಹಿಡಿಸುತ್ತದೆ ಗುಂಗು!
ರಾಗಿಣಿ ದ್ವಿವೇದಿಯನ್ನ ಇಲ್ಲಿವರೆಗೂ ತುಪ್ಪದ ಹುಡುಗಿ ಅಂತಲೇ ಬಣ್ಣಿಸಲಾಗುತ್ತಿತ್ತು. ಆದರೆ ಈ ಅಲ್ಬಂ ಸಾಂಗ್ನಿಂದ ಇನ್ಮುಂದೆ ಸೋನೆಯಾ ಅಂತಲೇ ಹೇಳಬಹುದು. ರಾಗಿಣಿಯ ಸೌಂದರ್ಯದ ಗುಣಗಾನ ಇಲ್ಲಿ ಆಗಿದೆ.
ಬಾಲಿವುಡ್ ಕ್ವಾಲಿಟಿಯ ಈ ಗೀತೆಯಲ್ಲಿ ರಾಗಿಣಿಯ ಅಂದವನ್ನೂ ಗುಣಗಾನ ಮಾಡಲಾಗಿದೆ. ನಿನ್ನ ಸೌಂದರ್ಯಕ್ಕೆ ಎಲ್ಲರೂ ಬೋಲ್ಡ್ ಆಗ್ತಾರೆ ಅನ್ನುವ ಹಾಗೆ ಇಲ್ಲಿ ಸಾಲುಗಳನ್ನ ಬರೆದಿದ್ದಾರೆ.
ಕ್ಲಬ್ ಅಲ್ಲಿ ನೋಡಿದ ಸುಸ್ತಾಗಿ ಹೋದೆ
ಜೀನ್ಸ್ ಹಾಕಿ ಬಂದಿದ್ದೇ ಮಸ್ತಾಗಿ ಹೋದೆ
ನೋಡಿದ್ಮೇಲೆ ಯಾಕೆ ಸ್ಮೈಲ್ ಮಾಡಿ ಹೋದೆ
ನೀ ನಿನ್ನ ಸ್ಟೈಲ್ಗೆ ಕ್ಯಾಟ್-ವಾಕ್ ಬೇಕಾಗಿರೋದೆ.
ರಾಗಿಣಿ ದ್ವಿವೇದಿ ಅಭಿನಯದ ಸೋನೆಯಾ ಹಾಡು ಇಂತಹ ಸಾಲುಗಳನ್ನ ಹೊಂದಿದೆ. ಇದರಲ್ಲಿ ರಾಗಿಣಿಯ ಗುಣಗಾನದ ಇನ್ನೂ ಒಂದಷ್ಟು ಸಾಲುಗಳಿವೆ. ಅವು ಕೂಡ ವಿಶೇಷ ಅನಿಸುತ್ತವೆ.
ನಡೆದಾಡುವ ಮೀನು
ಮಾಡಬೇಡ ಸೀನು
ಹಾರ್ಟಿಗೆ ಬೇಕಿರೋದು
ಒಬ್ಬಳೆ ನೀನು
ಬೇರೆ ಅವರ ಥರ ನಾನು
ಆಟ ಆಡೋದಿಲ್ಲ
ನಿನ್ನ ನೋಡಿದ್ರೆ
ಎಕ್ಸ್ ನೆನಪಾಗೋದಿಲ್ಲ
ಸೋನೆಯಾ ಆಲ್ಬಂ ಸಾಂಗ್ನಲ್ಲಿ ಇನ್ನೂ ವಿಶೇಷ ಸಾಲುಗಳೂ ಇವೆ. ಅವುಗಳ ಬಗ್ಗೆ ಹೇಳ್ತಾ ಹೋದ್ರೆ, ನೀನು ಎಷ್ಟು ಚೆಂದ ಅಂದ್ರೆ, ಫ್ರೀ ಆಗಿಯೇ ಎಲ್ಲ ಹುಡುಗಿಯರಿಗೆ ಜಲಸಿ ಕೊಟ್ಟೆ ನೀನು ಅನ್ನೋ ಅರ್ಥದ ಲೈನ್ ಕೂಡ ಇದೆ.
ಸೋನೆಯಾ ಹಾಡು-ರಾಗಿಣಿಯ ಸೌಂದರ್ಯದ ಗುಣಗಾನ
ಇದರ ಹೊರತಾಗಿ ಸೋನೆಯಾಳನ್ನ ಇಷ್ಟ ಪಡೋ ಈ ಕ್ವೀಕ್ ಇಲ್ಲಿ ಗುಣಗಾನ ಮಾಡುತ್ತಲೇ ಹೋಗ್ತಾರೆ. ವಿಶೇಷವಾಗಿ ಈ ಹಾಡು ಮೂರು ಭಾಷೆಯ ಸಂಗಮವೇ ಆಗಿದೆ.
ಒಂದೇ ಆಲ್ಬಂ ಹಾಡಲ್ಲಿ ಎರಡು ಭಾಷೆ ಬಳಕೆ ಇದೆ. ಇದುವೇ ಈ ಹಾಡಿನ ವಿಶೇಷವಾಗಿದೆ. ಕನ್ನಡದ ಸೋನೆಯಾ ಹಾಡಲ್ಲಿ ಮೊದಲು ಪಂಜಾಬಿ ಭಾಷೆಯ ಒಂದಷ್ಟು ಲೈನ್ಗಳು ಬರುತ್ತವೆ.
ಸೋನೆಯಾ ಹಾಡಲ್ಲಿ ರಾಪ್ ಸ್ಟೈಲ್ ಅಲ್ಲಿ ಕನ್ನಡದ ಸಾಲು!
ಇದಾದ್ಮೇಲೆ ರಾಪ್ ಸ್ಟೈಲ್ ಅಲ್ಲಿ ಕನ್ನಡದ ಪದಗಳು ಇಲ್ಲ ತುಂಬಾ ಸುಂದರವಾಗಿಯೇ ಇವೆ. ಎಲ್ಲರೂ ಇಷ್ಟಡೋ ರೀತಿಯಲ್ಲಿಯೇ ಇಲ್ಲಿ ಸಾಲುಗಳು ಹಾಡಾಗಿ ಸಾಗುತ್ತದೆ.
ಹಿಂದಿ ಭಾಷೆಯಲ್ಲೂ ಇದೇ ಪ್ರಯೋಗ ಮುಂದುವರೆದಿದೆ. ಕನ್ನಡ ಭಾಷೆಯ ಸಾಲುಗಳಿದ್ದ ರಾಪ್ ಅಲ್ಲಿ ಹಿಂದಿ ಸಾಲುಗಳು ಇವೆ. ಯುವಕರ ಅಭಿರುಚಿಗೆ ತಕ್ಕನಾಗಿಯೇ ಸೋನೆಯಾ ಆಲ್ಬಂ ಸಾಂಗ್ ರೆಡಿ ಆಗಿದೆ.
ಸೋನೆಯಾ ಆಲ್ಬಂ ಸಾಂಗ್ಗೆ ವಿಷ್ಣು ದೇವ್ ಕೋರಿಯೋಗ್ರಾಫಿ
ಬಾಲಿವುಡ್ನ ಹೆಸರಾಂತ ಕೋರಿಯೋಗ್ರಾಫರ್ ವಿಷ್ಣು ದೇವ್ ಈ ಗೀತೆಯನ್ನ ಡೈರೆಕ್ಷನ್ ಮತ್ತು ಕೊರಿಯೋಗ್ರಾಫ್ ಮಾಡಿದ್ದಾರೆ. ಕ್ವೀಕ್ ಮತ್ತು ಮಾರ್ಟಿನ್ ಯೋ ಸೇರಿ ಈ ಗೀತೆಗೆ ಲಿರಿಕ್ಸ್ ಬರೆದಿದ್ದಾರೆ.
ಆದಿ ಧರ್ ಈ ಗೀತೆಗೆ ಸಂಗೀತ ಮಾಡೋದಲ್ಲದೇ ಬೀಟ್ಸ್ ಕೂಡ ಇವರದ್ದೇ ಆಗಿದೆ. ಪ್ರೇಮಿಗಳ ದಿನದಂದು ಈ ಒಂದು ಹಾಡನ್ನ ರಿಲೀಸ್ ಮಾಡಲಾಗಿದೆ. ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಸೋನೆಯಾ ಹಾಡು ರಿಲೀಸ್ ಆಗಿದೆ.
ಕನ್ನಡ ನಿರ್ಮಾಪಕರ ಬಾಲಿವುಡ್ ಕ್ವಾಲಿಟಿಯ ಸೋನೆಯಾ ಆಲ್ಬಂ
ಕನ್ನಡದ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮತ್ತು ಲಹರಿ ಸಂಸ್ಥೆ ಈ ಒಂದು ಗೀತೆಯನ್ನ ನಿರ್ಮಿಸಿದೆ. ಬಾಲಿವುಡ್ ಕ್ವಾಲಿಟಿಯ ಸೋನೆಯಾ ಹಾಡು ಗಮನ ಸೆಳೆಯುವಂತೆ ಇದೆ.
ಇದನ್ನೂ ಓದಿ: Ghost Movie: ಘೋಸ್ಟ್ ಚಿತ್ರದಲ್ಲಿ ಬೀರ್ಬಲ್-2! ಶ್ರೀನಿ ಹೇಳಿದ್ರು ಹೊಸ ಕಥೆ
ರಾಗಿಣಿ ದ್ವಿವೇದಿ ಕೂಡ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ. ರಾಗಿಣಿ ಜೋಡಿ ಆಗಿರೋ ಕ್ವೀಕ್ ಕೂಡ ಇಂಟ್ರಸ್ಟಿಂಗ್ ಅನಿಸುತ್ತಾರೆ. ಒಟ್ಟಾರೆ, ಕನ್ನಡದ ನಿರ್ಮಾಪಕರ ಬಾಲಿವುಡ್ ಕ್ವಾಲಿಟಿಯ ಹಾಡು ಸೂಪರ್ ಆಗಿಯೇ ಬಂದಿದೆ. ಜನರಿಗೂ ಇಷ್ಟ ಆಗೋ ಹಾಗೇನೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ