ಫೆಬ್ರವರಿ ತಿಂಗಳು ಬಂದ್ರೆ ಅಲ್ಲಿಗೆ ಪ್ರೀತಿ (Ragini Dwivedi New Song)ಮಾಡೋ ಹೃದಯದಲ್ಲಿ ದೊಡ್ಡ ಹಬ್ಬದ ಫೀಲ್ ಶುರು ಆಗುತ್ತದೆ. ಡಿಸೈನ್ ಡಿಸೈನ್ ಐಡಿಯಾಗಳು ಎದೆಯಲ್ಲಿ ರೂಪಗೊಳ್ಳುತ್ತವೆ. ಫೆಬ್ರವರಿ-14 ಮುಂಚಿನ 6 ದಿನಗಳನ್ನ ಪ್ರೇಮಿಗಳ (Ragini Dwivedi Alubm Song) ವಾರ ಅಂತಲೇ ಆಚರಿಸುತ್ತಾರೆ. ಪ್ರೇಮಿಗಳ ಹೃದಯ ಬಡಿತ ತಿಳಿದ ರಾಗಿಣಿ ದ್ವಿವೇದಿ ಈ ವರ್ಷ ಹೊಸ ಹೆಜ್ಜೆ ಇಟ್ಟಿದ್ದಾರೆ. ಹಾಗಂತ ಪ್ರೀತಿ-ಪ್ರೇಮ ಅಂತ ರಾಗಿಣಿ ಸೀರಿಯಸ್ ಆದ್ರಾ ಅಂತ ಕೇಳಬೇಡಿ. ರಾಗಿಣಿ (Soneyeah Album Song) ಇಲ್ಲಿ ಬೇರೆ ಪ್ರೇಮ ಪಾಠ ಮಾಡ್ತಿದ್ದಾರೆ. ಮೇಷ್ಟ್ರಾ ಅಂತಲೂ ಕೇಳಬೇಡಿ. ಇಲ್ಲಿರೋ ಕಥೆ ಬೇರೆ ಇದೆ. ಸಿಂಪಲ್ ಅಗಿ ಹೇಳೋದಾದ್ರೆ ಅದು ಆಲ್ಬಂ ಸಾಂಗ್ (Ragini Special Song) ಅಂತಲೇ ಹೇಳಬಹುದು.
ಅದರ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ರಾಗಿಣಿ ದ್ವಿವೇದಿ ನಾಯಕಿ ನಟಿ ಅಂತ ಗೊತ್ತಿದೆ. ಸಿನಿಮಾಗಳ ಮೂಲಕ ಲವ್ಲಿ ಕಥೆ ಹೇಳಿರೋದು ಗೊತ್ತಿದೆ. ಇದನ್ನ ನೋಡಿ ಅನೇಕರು ರಾಗಿಣಿ ಅವರ ಫ್ಯಾನ್ ಆಗಿದ್ದು ಇದೆ.
ರಾಗಿಣಿ ರಂಗು ಇಲ್ಲಿದೆ ನೋಡಿ ಹೊಸ ಗುಂಗು
ರಾಗಿಣಿ ಚಿತ್ರ ಬದುಕಿನಲ್ಲಿ ಚಿತ್ರಗಳ ಸ್ಪೆಷಲ್ ಸಾಂಗ್ಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳ ದಿಲ್ ಕದ್ದಿದ್ದಾರೆ. ತಮ್ಮದೇ ಚಿತ್ರಗಳಲ್ಲಿಯ ಹಾಡುಗಳ ಮುಖಾಂತರವೂ ರಾಗಿಣಿ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ರಾಗಿಣಿ ಇಲ್ಲಿವರೆಗೂ ಒಂದೇ ಒಂದು ಸಿಂಗಲ್ ಆಲ್ಬಂನಲ್ಲಿ ಕಾಣಿಸಿಕೊಂಡಿಲ್ಲ. ಕನ್ನಡದ ಕೆಲವು ನಟಿಯರು ಇಂತಹ ಪ್ರಯೋಗದಲ್ಲಿ ಹೆಚ್ಚು ಗಮನ ಸೆಳೆದಿರೋದು ಇದೆ.
ಮೊದಲ ಆಲ್ಬಂ ಸಾಂಗ್ ಬಗ್ಗೆ ರಾಗಿಣಿ ಏನಂತಾರೆ?
ತುಪ್ಪದ ಹುಡುಗಿ ರಾಗಿಣಿ ಈ ಒಂದು ಪ್ರಯೋಗವನ್ನ ಈಗ ಮಾಡಿದ್ದಾರೆ. ಪ್ರೇಮಿಗಳ ದಿನದಂದು ರಾಗಿಣಿ ಅಭಿನಯದ ಆಲ್ಬಂ ರಿಲೀಸ್ ಆಗುತ್ತಿದೆ. ಪ್ರೇಮಿಗಳಿಗೆ ಪ್ರೀತಿಯ ಪಾಠ ಮಾಡ್ತಿರೋ ಈ ಹಾಡು ವಿಶೇಷ ಅನ್ನೋದನ್ನ ಸ್ವತಃ ರಾಗಿಣಿ, ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಕನ್ನಡದಲ್ಲಿ ಈಗಾಗಲೇ ಅನೇಕ ಆಲ್ಬಂ ಬಂದಿವೆ. ಆದರೆ ನಮ್ಮ ಈ ಆಲ್ಬಂ ವಿಶೇಷವಾಗಿಯೇ ಇದೆ. ಇದರಲ್ಲಿ ಪಂಜಾಬಿ ಪ್ಯೂಸನ್ ಇರೋದು ಈ ಆಲ್ಬಂನ ವಿಶೇಷ ಆಗಿದೆ
ಕನ್ನಡ-ಹಿಂದಿ ಭಾಷೆಯಲ್ಲಿ ರಾಗಿಣಿ ಸ್ಪೆಷಲ್ ಹಾಡು
ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸೋನಿಯೇ (SONEYEAH) ಆಲ್ಬಂ ರಿಲೀಸ್ ಆಗುತ್ತಿದೆ. ಪ್ರೇಮಿಗಳ ದಿನದಂದು ಕನ್ನಡ ಆಲ್ಬಂ ಸಾಂಗ್ ರಿಲೀಸ್ ಆಗುತ್ತಿದೆ.
ಬಾಲಿವುಡ್ನ ಹೆಸರಾಂತ ನೃತ್ಯ ನಿರ್ದೇಶಕ ವಿಷ್ಣು ದೇವ ಈ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ. ಒಳ್ಳೆ ಸಂಗೀತದ ಈ ಗೀತೆಯನ್ನ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ. ಲಹರಿ ಸಂಸ್ಥೆ ಈ ಆಲ್ಬಂ ರಿಲೀಸ್ ಮಾಡುತ್ತಿದೆ.
ಫೆಬ್ರವರಿ-14 ರಂದು ರಾಗಿಣಿ ಸ್ಪೆಷಲ್ ಸಾಂಗ್ ರಿಲೀಸ್
ಪ್ರೇಮಿಗಳ ದಿನ ಫೆಬ್ರವರಿ-14 ರಂದು ಈ ಗೀತೆ ರಿಲೀಸ್ ಆಗುತ್ತಿದೆ. ಮುಂಬೈ ಸುತ್ತ-ಮುತ್ತ ಈ ಹಾಡಿನ ಚಿತ್ರೀಕರಣ ಆಗಿದೆ. ಪ್ರೇಮಿಗಳ ದಿನವೇ ಪ್ರೇಮಿಗಳಿಗೆ ಈ ಒಂದು ಹಾಡನ್ನ ಡೆಡಿಕೇಟ್ ಮಾಡುತ್ತಿದ್ದೇವೆ ಎಂದು ರಾಗಿಣಿ ದ್ವಿವೇದಿ ಹೇಳುತ್ತಾರೆ.
ಪ್ರೇಮಿಗಳ ದಿನಕ್ಕೆ ರಾಗಿಣಿ ಪ್ರೇಮದ ಪಾಠ
ಪ್ರೇಮಿಗಳ ದಿನದಂದು ಈ ಹಾಡು ರಿಲೀಸ್ ಆಗುತ್ತಿದ್ದು, ಮ್ಯೂಸಿಕ್ ಮತ್ತು ಬೀಟ್ಸ್ ಅನ್ನ ಆದಿ ಧರ್ ಮಾಡಿದ್ದಾರೆ. ಈಗಾಗಲೇ ಈ ಹಾಡು ರೆಡಿ ಆಗಿದೆ. ಪ್ರೇಮಿಗಳ ದಿನಂದು ಇದು ರಿಲೀಸ್ ಆಗುತ್ತದೆ.
ಇದನ್ನೂ ಓದಿ: Actress Priya Mani: ಬ್ಲ್ಯಾಕ್ ಡ್ರೆಸ್ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!
ಇನ್ನುಳಿದಂತೆ ಮೊಟ್ಟ ಮೊದಲ ಬಾರಿಗೆ ರಾಗಿಣಿ ದ್ವಿವೇದಿ ಆಲ್ಬಂ ಸಾಂಗ್ ಮೂಲಕ ಪ್ರೇಮಿಗಳಗೆ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ