• Home
  • »
  • News
  • »
  • entertainment
  • »
  • Ragini Dwivedi: ರಾಗಿಣಿ ಹಾಟ್ ಹಾಟ್ ಹಾಡು! ಸಂತಾನಂ ಜೊತೆ ಸೇರಿ ಕೊಡ್ತಿದ್ದಾರೆ ಸಖತ್ ಕಿಕ್

Ragini Dwivedi: ರಾಗಿಣಿ ಹಾಟ್ ಹಾಟ್ ಹಾಡು! ಸಂತಾನಂ ಜೊತೆ ಸೇರಿ ಕೊಡ್ತಿದ್ದಾರೆ ಸಖತ್ ಕಿಕ್

ಸಂತಾನಂ ಜೊತೆ ಸೇರಿ ರಾಗಿಣಿ ಕೊಡ್ತಿದ್ದಾರೆ ಸಖತ್ ಕಿಕ್

ಸಂತಾನಂ ಜೊತೆ ಸೇರಿ ರಾಗಿಣಿ ಕೊಡ್ತಿದ್ದಾರೆ ಸಖತ್ ಕಿಕ್

ಕಿಕ್ ಚಿತ್ರದ ಈ ಹಾಡು ತುಂಬಾ ಚೆನ್ನಾಗಿಯೇ ಬಂದಿದೆ. ಇದರಲ್ಲಿರೋ ಸ್ಟೆಪ್​​ಗಳನ್ನ ಫಾಲೋ ಮಾಡೋದು ಕಷ್ಟವೇ ಆಗಿತ್ತು. ಅದಕ್ಕಾಗಿಯೇ ಐದು ದಿನ ಪ್ರ್ಯಾಕ್ಟೀಸ್ ಕೂಡ ಮಾಡಿದ್ದೇವೆ ಅಂತಲೇ ರಾಗಿಣಿ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ತುಪ್ಪದ ಹುಡುಗಿ ರಾಗಿಣಿ (Ragini Dwivedi) ದ್ವಿವೇದಿ ಕನ್ನಡದಿಂದ ತಮಿಳಿಗೆ ಪಯಣ (Tamil Movie) ಬೆಳೆಸಿ ಆಗಿದೆ. ಇಲ್ಲಿವರೆಗೂ ರಾಗಿಣಿ ಮೂರು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಮೂರು ಸಿನಿಮಾಗಳಲ್ಲಿ ಕನ್ನಡದವ್ರೇ ಒಗ್ಗೂಡಿ ಮಾಡಿದ ಒಂದು (Tamil Cinema) ಸಿನಿಮಾ ಕೂಡ ಇದೆ. ಅದುವೇ ತಮಿಳಿನ ಕಿಕ್ ಸಿನಿಮಾ. ಇದು ಡೈರೆಕ್ಟರ್ (Director Prashanth Raj) ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾನೇ ಆಗಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಚಾರದ ಕೆಲಸವೂ ಇನ್ನೇನು ಶುರು ಆಗಬೇಕಿದೆ. ಅದಕ್ಕೂ ಮೊದಲೇ ಸಿನಿಮಾ ತಂಡ ಚಿತ್ರದ ಒಂದು ಹಾಡನ್ನ ರಿಲೀಸ್ ಮಾಡಿದೆ. ಆದರೆ ಇದು ವೀಡಿಯೋ ಸಾಂಗ್ ಅಲ್ಲ. ಲಿರಿಕಲ್ ವೀಡಿಯೋ ಮಾತ್ರವೇ ಆಗಿದೆ.


ಇದರಲ್ಲಿಯ ರಾಗಿಣಿ ದ್ವಿವೇದಿಯ ಹಾಟ್​ ಲುಕ್ ಪಡ್ಡೆಗಳ ನಿದ್ದೆಗೆಡಿಸೋ ಹಾಗಿದೆ. ವಿಶೇಷವೆಂದ್ರೆ ಈ ಮೂಲಕ ಚಿತ್ರದ ನಾಯಕಿ ರಾಗಿಣಿಯ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.


ಕನ್ನಡದ ಹಾಟ್ ಲುಕ್​ ನ ರಾಗಿಣಿ ಸಖತ್ ಕಿಕ್
ರಾಗಿಣಿ ದ್ವಿವೇದಿ ಹಾಟ್ ಲುಕ್​ ಅಲ್ಲಿಯೇ ಈಗ ಕಂಗೊಳಿಸುತ್ತಿದ್ದಾರೆ. ತಮಿಳು ಹಾಸ್ಯ ನಟ ಸಂತಾನಂ ಜೊತೆಗೆ ಮಸ್ತ್ ಮಸ್ತ್ ಸ್ಟೆಪ್ಸ್ ಅನ್ನೂ ಹಾಕಿದ್ದು, ಪ್ರಶಾಂತ್ ರಾಜ್ ನಿರ್ದೇಶನದ ಕಿಕ್ ಚಿತ್ರದಲ್ಲಿಯೇ ಈ ಜೋಡಿ ಹಾಟ್ ಮೋಡಿ ಮಾಡಿದೆ.


ರಾಗಿಣಿ ದ್ವಿವೇದಿ ತಮಿಳು ಸಿನಿಮಾದಲ್ಲಿ ಹೆಚ್ಚೇನೂ ಅಭಿನಯಿಸಿಲ್ಲ. ಆದರೆ ಈಗೀಗ ತಮಿಳು ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ. ಆ ಲೆಕ್ಕದಲ್ಲಿಯೆ ಕಿಕ್ ಕೂಡ ಬರುತ್ತದೆ. ಕಿಕ್ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.


ಇಂಗ್ಲೀಷ್ ಟೈಟಲ್-ತಮಿಳು ಸಿನಿಮಾ-ಬೆಂಗಳೂರಲ್ಲಿ ಶೂಟಿಂಗ್
ಕಿಕ್ ಚಿತ್ರದ ಈ ಒಂದು ಹಾಡು ಬೆಂಗಳೂರಿನ ಹೊರವಲಯದಲ್ಲಿಯೇ ಚಿತ್ರೀಕರಣ ಆಗಿದೆ. ಈ ಒಂದು ಹಾಡಿಗಾಗಿಯೇ ಸಂತಾನಂ ಹಾಗೂ ರಾಗಿಣಿ ಭರ್ಜರಿ ಸೆಟ್ ಅನ್ನೂ ಹಾಕಿದ್ದಾರೆ. Saturday is Comingu ಅಂತಲೇ ಶುರು ಆಗೋ ಹಾಡು ಮಜವಾಗಿಯೇ ಇದೆ.


ಇದನ್ನೂ ಓದಿ: Shiva Rajkumar: ಮಾತು ತಪ್ಪದ ಶಿವಣ್ಣ! ಘೋಸ್ಟ್ ಚಿತ್ರದಲ್ಲಿ ನಟ ಅಭಿಜಿತ್​ಗೆ ಚಾನ್ಸ್


ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇರೋ ಈ ಗೀತೆಯನ್ನ ಯುವ ನೃತ್ಯ ನಿರ್ದೇಶಕ ಭೂಷಣ್ ನಿರ್ದೇಶನದ ಮಾಡಿದ್ದಾರೆ. ಚುಟು ಚುಟು ಖ್ಯಾತಿಯ ಭೂಷಣ್, ಇಲ್ಲೂ ಹೊಸ ಸ್ಪೆಪ್ಸ್​ಗಳನ್ನೆ ಟ್ರೈ ಮಾಡಿದ್ದಾರೆ. ಇದರಿಂದಾಗಿ ರಾಗಿಣಿ ಮತ್ತು ಸಂತಾನಂ ರಿಹರ್ಸಲ್ ಕೂಡ ಮಾಡಿದ್ದಾರೆ.


Kannada Actress Ragini Dwivedi Acted Tamil Film Kick Lyrical Song Released
ರಾಗಿಣಿ ಕೊಡ್ತಿದ್ದಾರೆ ಸಖತ್ ಕಿಕ್


ನೃತ್ಯ ನಿರ್ದೇಶಕ ಭೂಷಣ್​​ ಬಗ್ಗೆ ಏನಂತಾರೆ ತುಪ್ಪದ ಬೆಡಗಿ
ರಾಗಿಣಿ ದ್ವಿವೇದಿ ತಮ್ಮ ಈ ಚಿತ್ರದ ಅದರಲ್ಲೂ ಈ ಹಾಡಿನ ಬಗ್ಗೆ ತುಂಬಾ ಪಾಸಿಟಿವ್ ಆಗಿಯೇ ಇದ್ದಾರೆ. ನೃತ್ಯ ನಿರ್ದೇಶಕ ಭೂಷಣ್ ಕಂಪೋಜ್ ಮಾಡಿರೋ ಸ್ಟೆಪ್​​ಗಳನ್ನೂ ರಾಗಿಣಿ ತುಂಬಾ ಇಷ್ಟಪಟ್ಟಿದ್ದಾರೆ.


ತಮಿಳು ಕಿಕ್ ಚಿತ್ರದ ಹಾಡಿಗಾಗಿ ಐದು ದಿನ ಪ್ರ್ಯಾಕ್ಟೀಸ್
ಕಿಕ್ ಚಿತ್ರದ ಈ ಹಾಡು ತುಂಬಾ ಚೆನ್ನಾಗಿಯೇ ಬಂದಿದೆ. ಇದರಲ್ಲಿರೋ ಸ್ಟೆಪ್​​ಗಳನ್ನ ಫಾಲೋ ಮಾಡೋದು ಕಷ್ಟವೇ ಆಗಿತ್ತು. ಅದಕ್ಕಾಗಿಯೇ ಐದು ದಿನ ಪ್ರ್ಯಾಕ್ಟೀಸ್ ಕೂಡ ಮಾಡಿದ್ದೇವೆ ಅಂತಲೇ ರಾಗಿಣಿ ಹೇಳಿಕೊಂಡಿದ್ದಾರೆ.


ಕಿಕ್ ಚಿತ್ರದ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ
ಕಿಕ್ ಚಿತ್ರದಲ್ಲಿ ಎಲ್ಲವೂ ಇದೆ. ಈ ಚಿತ್ರದ ನಾಯಕ ಸಂತಾನಂ ಸಖತ್ ಆಗಿಯೇ ಕಾಣಿಸುತ್ತಾರೆ. ರಾಗಿಣಿ ಕೂಡ ಮಸ್ತ್ ಆಗಿಯೇ ನಟಿಸಿದಂತೆ ಕಾಣುತ್ತದೆ. ಇವರ ಈ ಚಿತ್ರದ ರಿಲೀಸ್ ಡೇಟ್ ಇನ್ನೂ ಫೈನಲ್ ಆಗಿಲ್ಲ.


ಇದನ್ನೂ ಓದಿ: Kantara-Rishab Shetty: ಕಾಂತಾರ ಹೀರೋ ರಿಷಬ್ ಶೆಟ್ಟಿ ನಿಜವಾದ ಹೆಸರು ಬೇರೆಯೇ ಇದೆ


ಇದೇ ವರ್ಷದಲ್ಲಿಯೆ ರಿಲೀಸ್ ಆಗುತ್ತದೆ ಅಂತಲೂ ರಾಗಿಣಿ ತಿಳಿಸಿದ್ದಾರೆ.
ರಾಗಿಣಿ ಅಭಿನಯದ ಈ ಚಿತ್ರ ಹಾಡಿನ ಮೂಲಕ ಈಗ ಗಮನ ಸೆಳೆಯುತ್ತಿದೆ. ಇನ್ನುಳಿದಂತೆ ಸಿನಿಮಾ ರಿಲೀಸ್ ಆಗಬೇಕಿದೆ ವೇಟ್ ಮಾಡಿ

First published: