• Home
  • »
  • News
  • »
  • entertainment
  • »
  • Radhika Narayan: ಲಕ್ಕಿ ಮ್ಯಾನ್ ದೂದ್ ಪೇಡ ದಿಗಂತ್! ಒಂದೇ ಚಿತ್ರದಲ್ಲಿ ಮೂವರು ಹೀರೋಯಿನ್ಸ್

Radhika Narayan: ಲಕ್ಕಿ ಮ್ಯಾನ್ ದೂದ್ ಪೇಡ ದಿಗಂತ್! ಒಂದೇ ಚಿತ್ರದಲ್ಲಿ ಮೂವರು ಹೀರೋಯಿನ್ಸ್

ರಾಧಿಕಾ-ನಿಧಿ ಸುಬ್ಬಯ್ಯ ಮತ್ತು ಧನು ಹರ್ಷಾ

ರಾಧಿಕಾ-ನಿಧಿ ಸುಬ್ಬಯ್ಯ ಮತ್ತು ಧನು ಹರ್ಷಾ

ಸಿನಿಮಾ ಶುರು ಆದಾಗಲೇ ಧನು ಹರ್ಷ ಹೆಸರಿನ ನವ ನಟಿ ಈ ಚಿತ್ರಕ್ಕೆ ಆಯ್ಕೆ ಆಗಿದ್ದರು. ಆದರೆ ಚಿತ್ರದ ನಿರ್ಮಾಪಕ ಗುರುದತ್ ಗಾಣಿಗ ಈ ಚಿತ್ರದಲ್ಲಿ ಇನ್ನೂ ಒಂದಷ್ಟು ಸರ್ಪ್ರೈಜ್ ಕೂಡ ಇದೆ ಅಂತಲೇ ಹೇಳಿದ್ದರು. ಆ ಸರ್ಪ್ರೈಜ್​ಗಳನ್ನ ಈಗ ಒಂದೊಂದಾಗಿಯೇ ರಿವೀಲ್ ಮಾಡುತ್ತಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ದೂದ್ ಪೇಡ ದಿಗಂತ್ (Diganth) ಅಭಿನಯದಲ್ಲಿ ಒಂದು ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಈ ಚಿತ್ರಕ್ಕೆ ವಿಶೇಷ (Special Title) ಟೈಟಲ್ ಇಡಲಾಗಿದೆ. ಇದನ್ನ ಕೇಳಿದ್ರೆ ನಿಮ್ಗೆ ಆಶ್ಚರ್ಯವೂ ಅನಿಸಬಹುದು. ಆದರೆ ಅದು ಸತ್ಯ. ದೂದ್​ ಪೇಡ ದಿಗಂತ್ ಚಿತ್ರ ಜೀವನದಲ್ಲಿ ಇದು ವಿಶೇಷ ಟೈಟಲ್ ಆಗಿದೆ. ವಿಶೇಷವೆಂದ್ರೆ ಈ ಚಿತ್ರದಲ್ಲಿ ದಿಗಂತ್ ಒಬ್ಬರಲ್ಲ ಇಬ್ಬರಲ್ಲ ಮೂವರು ಹೀರೋಯಿನ್ ಜೊತೆಗೆ (Romance) ರೋಮ್ಯಾನ್ಸ್ ಮಾಡಲಿದ್ದಾರೆ. ಮೂವರು ಕನ್ನಡದ (Kannada Heroins) ನಾಯಕಿಯರು ಅನ್ನೋದೇ ಇಲ್ಲಿ ವಿಶೇಷ. ಇದರ ಬಗ್ಗೆ ನಿರ್ಮಾಪಕ-ಗುರುದತ್ ಗಾಣಿಗೆ ಒಂದಷ್ಟು ಅಧಿಕೃತ ಮಾಹಿತಿಯನ್ನ ನ್ಯೂಸ್-18 ಕನ್ನಡ ಡಿಜಿಟಲ್​​ ಜೊತೆಗೆ ಹಂಚಿಕೊಂಡಿದ್ದಾರೆ. ಇದರ ವಿಸ್ತಾರವಾದ ಮಾಹಿತಿ ಇಲ್ಲಿದೆ.


ಎಡಗೈ ಅಪಘಾತಕ್ಕೆ ಕಾರಣ-ಇದು ದಿಗಂತ್ ಸಿನಿಮಾ


ಎಡಗೈ ಅಪಘಾತಕ್ಕೆ ಕಾರಣ ಅನ್ನೋದೇ ಈ ಚಿತ್ರದ ವಿಶೇಷ ಟೈಟಲ್ ಆಗಿದೆ. ಇದನ್ನ ನೋಡಿದಾಕ್ಷಣ ಎಲ್ಲರಿಗೂ ಏನ್ ಇದು ಹೀಗಿದೆ ಟೈಟಲ್ ಅಂತಲೇ ಅನಿಸುತ್ತದೆ. ಆದರೆ ಇದಕ್ಕೆ ಡೀಪ್ ಮೀನಿಂಗ್ ಕೂಡ ಇದೆ.


ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ಎಡಗೈ ಬಳಸುವ ವ್ಯಕ್ತಿಗಳ ಕಥೆ ಇದೆ. ಎಲ್ಲ ಕೆಲಸಕ್ಕೂ ತಮ್ಮ ಎಡಗೈ ಮುಂದೆ ಚಾಚೋ ವ್ಯಕ್ತಿಗಳ ಸುತ್ತವೇ ಈ ಸಿನಿಮಾ ಇದೆ. ನಿಜ ಹೇಳಬೇಕು ಅಂದ್ರೆ ಈ ಸಿನಿಮಾದಲ್ಲಿ ಎಡಗೈ ಬಳಕೆದಾರರ ಸಮಸ್ಯೆಗಳನ್ನ ಎತ್ತಿ ಹಿಡಿಯಲಾಗಿದೆ.


Kannada Actress Radhika Narayan Signed New Project with Diganth
ದಿಗಂತ್ ಅಡ್ಡ ಸೇರಿದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್


ಬ್ಲ್ಯಾಕ್ ಕಾಮಿಡಿ ಜೊತೆಗೆ ಸಸ್ಪೆನ್ಸ್ ಕಥೆಯ ಸಿನಿಮಾ
ಬ್ಲ್ಯಾಕ್ ಕಾಮಿಡಿಯ ಚೌಕಟ್ಟಿನಲ್ಲಿಯೇ ಸಮರ್ಥ್ ಬಿ.ಕಡಕೋಳ್ ಈ ಚಿತ್ರದ ಕಥೆಯನ್ನ ಹೇಳುತ್ತಿದ್ದಾರೆ. ವಿಶೇಷವಾಗಿಯೇ ಈ ಚಿತ್ರದಲ್ಲಿ ದಿಗಂತ್​ಗೆ ಮೂವರು ನಾಯಕಿಯರು ಸಾಥ್ ಕೊಡುತ್ತಿದ್ದಾರೆ.


ಸಿನಿಮಾ ಶುರು ಆದಾಗಲೇ ಧನು ಹರ್ಷ ಹೆಸರಿನ ನವ ನಟಿ ಈ ಚಿತ್ರಕ್ಕೆ ಆಯ್ಕೆ ಆಗಿದ್ದರು. ಆದರೆ ಚಿತ್ರದ ನಿರ್ಮಾಪಕ ಗುರುದತ್ ಗಾಣಿಗ ಈ ಚಿತ್ರದಲ್ಲಿ ಇನ್ನೂ ಒಂದಷ್ಟು ಸರ್ಪ್ರೈಜ್ ಕೂಡ ಇದೆ ಅಂತಲೇ ಹೇಳಿದ್ದರು.


ಇದನ್ನೂ ಓದಿ: Ramya Come Back Teaser: ರಮ್ಯಾ ಕಮ್ ಬ್ಯಾಕ್ ಮಾಡ್ಬೇಕು ಅಂತ ಹಾಸ್ಟೆಲ್ ಹುಡುಗರ ಪ್ರೊಟೆಸ್ಟ್​; ಟೀಸರ್​ನಲ್ಲಿ ಎಲ್ಲವೂ ಈಗ ರಿವೀಲ್


ಆ ಸರ್ಪ್ರೈಜ್​ಗಳನ್ನ ಈಗ ಒಂದೊಂದಾಗಿಯೇ ರಿವೀಲ್ ಮಾಡುತ್ತಿದ್ದಾರೆ. ಅದರಂತೆ ಮೂವರು ನಾಯಕಿಯರ ಈ ಚಿತ್ರದಲ್ಲಿ ಮೂರನೇ ನಾಯಕಿಯ ಹೆಸರು ಈಗ ರಿವೀಲ್ ಆಗಿದೆ.


ದಿಗಂತ್ ಅಡ್ಡ ಸೇರಿದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್
ಹೌದು, ಇದು ಅಧಿಕೃತ ಮಾಹಿತಿನೇ ಆಗಿದೆ. ಚಿತ್ರದ ನಿರ್ಮಾಪಕ ಗುರುದತ್ ಗಾಣಿಗ ಈ ಸಿನಿಮಾದ ಮಾಹಿತಿಯನ್ನ ನ್ಯೂಸ್-18 ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ.


Kannada Actress Radhika Narayan Signed New Project with Diganth
ಬ್ಲ್ಯಾಕ್ ಕಾಮಿಡಿ ಜೊತೆಗೆ ಸಸ್ಪೆನ್ಸ್ ಕಥೆಯ ಸಿನಿಮಾ


ರಂಗಿತರಂಗ ಚಿತ್ರದ ನಾಯಕಿ ರಾಧಿಕಾ ನಾರಾಯಣ್ ಈ ಚಿತ್ರದಲ್ಲಿ ಬೇರೆ ರೀತಿನೇ ಕಾಣಿಸಿಕೊಳ್ಳುತ್ತಿದ್ದಾರೆ. ರಾಣಿಯ ಲುಕ್​ ಅಲ್ಲಿಯೇ ಕಂಗೊಳಿಸುತ್ತಿದ್ದಾರೆ. ರಂಗಿತರಂಗ, ಶಿವಾಜಿ ಸುರತ್ಕಲ್ ಹೀಗೆ ಅದ್ಭುತ ಸಿನಿಮಾಗಳಲ್ಲಿ ಅಭಿನಯಿಸಿರೋ ರಾಧಿಕಾ ನಾರಾಯಣ್ ಹೊಸ ರೂಪದಲ್ಲಿಯೇ ಹೊಳೆಯುತ್ತಿದ್ದಾರೆ.


ರಾಧಿಕಾ-ನಿಧಿ ಸುಬ್ಬಯ್ಯ ಮತ್ತು ಧನು ಹರ್ಷಾ


ಎಡಗೈ ಅಪಘಾತಕ್ಕೆ ಕಾರಣ ಅಂದ್ಮೇಲೆ ಈ ನಾಯಕಿ ಕೂಡ ಎಡಗೈ ಬಳಕೆ ಮಾಡೋ ನಟಿಯೇ ಅನ್ನೋ ಪ್ರಶ್ನೆನೂ ಇದೆ. ಆದರೆ ಅದರ ಬಗ್ಗೆ ಇನ್ನೂ ಯಾವುದೇ ರೀತಿಯ ಮಾಹಿತಿ ಇಲ್ಲ. ಇನ್ನು ಈ ಚಿತ್ರದಲ್ಲಿ ಪಂಚರಂಗಿ ಚಿತ್ರದ ಬಳಿಕ ದಿಗಂತ್​ಗೆ ಮತ್ತೊಬ್ಬ ನಟಿ ಜೊತೆಯಾಗಿದ್ದಾರೆ.


ಇದನ್ನೂ ಓದಿ: Sobhita Dhulipala: ಸಮಂತಾ ಮಾಜಿ ಗಂಡ ನಾಗ ಚೈತನ್ಯ 'ಗರ್ಲ್​ಫ್ರೆಂಡ್​' ಮದುವೆ ಫೋಟೋಸ್​ ವೈರಲ್!


ಹೌದು ದಿಗಂತ್ ಜೊತೆಗೆ ಈ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕೂಡ ಅಭಿನಯಿಸಿದ್ದಾರೆ. ಇವರ ಕಥೆ ಏನೂ ಅನ್ನೋದು ಸದ್ಯದ ಕುತೂಹಲೇ ಆಗಿದೆ. ಆದರೆ ಈ ಚಿತ್ರದಲ್ಲಿ ನವ ನಟಿ ಧನು ಹರ್ಷ ಎಡಗೈ ಬಳಕೆ ಮಾಡೋ ನಟಿನೇ ಆಗಿದ್ದಾರೆ.


ಎಲ್ಲದಕ್ಕೂ ಎಡಗೈ ಬಳಕೆ ಮಾಡೋ ಹೆಣ್ಣುಮಕ್ಕಳ ಕಥೆಯನ್ನೆ ಧನು ಹರ್ಷ ಇಲ್ಲಿ ಹೇಳುತ್ತಿದ್ದಾರೆ. ಈ ವಿಷಯ ಈಗಾಗಲೇ ಟೀಸರ್ ಮೂಲಕ ಜನಕ್ಕೂ ತಿಳಿದು ಹೋಗಿದೆ. ಆದರೆ ಈಗ ಸಿನಿಮಾ ತಂಡ ಸೇರಿರೋ ನಟಿಯರ ಕಥೆ ಏನೂ? ಹೇಗಿರುತ್ತದೆ? ಇದೆಲ್ಲವೂ ಈಗ ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಕುತೂಹಲ ಕೆರಳಿಸುತ್ತಿವೆ.

First published: