• Home
  • »
  • News
  • »
  • entertainment
  • »
  • Radhika Narayan: ಆ ನಾಯಕ ನಟ ತುಂಬಾ ಕಂಫರ್ಟ್! ರಂಗಿತರಂಗ ನಟಿ ಹೀಗೆ ಹೇಳಿದ್ದು ಯಾರಿಗೆ?

Radhika Narayan: ಆ ನಾಯಕ ನಟ ತುಂಬಾ ಕಂಫರ್ಟ್! ರಂಗಿತರಂಗ ನಟಿ ಹೀಗೆ ಹೇಳಿದ್ದು ಯಾರಿಗೆ?

ಆ ನಾಯಕ ನಟ ತುಂಬಾ ಕಂಫರ್ಟ್

ಆ ನಾಯಕ ನಟ ತುಂಬಾ ಕಂಫರ್ಟ್

ರಾಧಿಕಾ ನಾರಾಯಣ್ ಕಂಫರ್ಟ್ ಆಗೋ ಟೀಮ್​ ಜೊತೆಗೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ಆ ಚಿತ್ರವೊಂದರ ನಾಯಕ ನಟ ವೇರಿ ಕಂಫರ್ಟ್ ಹೀರೋನೇ ಆಗಿದ್ದಾರೆ ಅಂತ ಹೊಗಳಿದ್ದಾರೆ!

  • News18 Kannada
  • Last Updated :
  • Bangalore [Bangalore], India
  • Share this:

ಎಡಗೈ ಅಪಘಾತಕ್ಕೆ ಕಾರಣ. ಇದು ಕನ್ನಡದ (Kannada Cinema) ಸಿನಿಮಾ ಹೆಸರು. ಈಗಾಗಲೇ ಒಂದು ಹಂತಕ್ಕೆ ಪರಿಚಯ ಆಗಿದೆ. ಬ್ಲ್ಯಾಕ್ ಕಾಮಿಡಿ ಈ ಸಿನಿಮಾದ ಕಂಟೆಂಟ್. ಸಸ್ಪೆನ್ಸ್ ಕೂಡ ಈ ಸಿನಿಮಾದ ಇನ್ನೂ ಒಂದು ವಿಶೇಷ. ಕನ್ನಡದಲ್ಲಿ ಈ ಚಿತ್ರದ (Screen Play) ಕಥಾ ವಸ್ತು ಮೇಲೆ ಚಿತ್ರಗಳು ಬಂದಿಯೇ ಇಲ್ಲ. ಆದರೆ ಸಮರ್ಥ್(Samarth B Kadkol) ಕಡಕೋಳ್ ಈಗ ಆ ವಿಷಯವನ್ನ ಟಚ್ ಮಾಡಿದ್ದಾರೆ. ಇದೇ ಚಿತ್ರದಲ್ಲಿಯೇ ರಂಗಿತರಂಗ ಸಿನಿಮಾ ಖ್ಯಾತಿಯ ನಟಿ ರಾಧಿಕಾ (Radhika Narayan) ನಾರಾಯಣ್ ಅಭಿನಯಿಸಿದ್ದಾರೆ. ಮೂವರು ನಾಯಕಿಯರ ಪೈಕಿ ರಾಧಿಕಾ ನಾರಾಯಣ್ ಕೂಡ ಒಬ್ಬರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ತಮ್ಮ ಈ ಚಿತ್ರದ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ.


ರಾಧಿಕಾ ನಾರಾಯಣ್ ಹೊಸ ಪಾತ್ರ ಹೊಸ ಸಿನಿಮಾ
ರಾಧಿಕಾ ನಾರಾಯಣ್ ಸಿನಿಮಾಗಳ ಆಯ್ಕೆ ವಿಶೇಷವಾಗಿಯೇ ಇದೆ. ಸುಮ್ನೆ ಎಲ್ಲ ಪಾತ್ರಗಳನ್ನ ಒಪ್ಪಿಕೊಳ್ಳುವುದಿಲ್ಲ. ಅಳೆದು-ತೂಗಿ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.


ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಕೂಡ ಒಳ್ಳೆ ಕಂಟೆಂಟ್ ಹೊಂದಿದೆ. ಅದಕ್ಕೂ ಹೆಚ್ಚಾಗಿ ಒಳ್ಳೆ ಟೀಮ್ ಇದೆ. ಈ ಎರಡೂ ಕ್ವಾಲಿಟಿ ಜೊತೆಗೆ ಅದ್ಭುತ ಪಾತ್ರವೇ ಸಿಕ್ಕಿದೆ.
ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡೇ ರಾಧಿಕಾ ನಾರಾಯಣ್ ಈ ಚಿತ್ರವನ್ನ ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: Trisha: ತ್ರಿಶಾ ಕಾಲಿಗೆ ಏನಾಯ್ತು? ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿದ ನಟಿ


ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಮೂವರು ಹೀರೋಯಿನ್​​ಗಳಲ್ಲಿ ತಾವು ಒಬ್ಬರಾಗಿದ್ದರೂ ಕೂಡ ಯಾವುದೇ ಬೇಸರ ಕೂಡ ಇವರಿಗಿಲ್ಲ. ತಮ್ಮ ಪಾತ್ರದ ಸುತ್ತವೂ ವಿಶೇಷತೆಗಳಿವೆ. ಅದನ್ನ ಕಾದು ನೋಡಿ ಅನ್ನೋ ಅರ್ಥದಲ್ಲಿಯೇ ರಿಯಾಕ್ಟ್ ಮಾಡುತ್ತಾರೆ.


Kannada Actress Radhika Narayan Plying Important Role in Diganth Movie
ಕಂಫರ್ಟ್ ಜೋನ್​​ ನಲ್ಲಿ ರಾಧಿಕಾ ನಾರಾಯಣ್ ಅಭಿನಯ


ಕಂಫರ್ಟ್ ಜೋನ್​​ ನಲ್ಲಿ ರಾಧಿಕಾ ನಾರಾಯಣ್ ಅಭಿನಯ
ರಾಧಿಕಾ ನಾರಾಯಣ್ ಈ ಚಿತ್ರ ಒಪ್ಪಲು ಇನ್ನೂ ಒಂದು ಕಾರಣ ಇದೆ. ಅದುವೇ ಕ್ಯಾಮೆರಾಮನ್​ ಅಭಿಮನ್ಯು ಸದಾನಂದನ್. ನಿಜ, ಈ ಹಿಂದಿನ ರಾಧಿಕಾ ನಾರಾಯಣ್ ಸಿನಿಮಾದಲ್ಲೂ ಅಭಿಮನ್ಯು ಸದಾನಂದನ್ ಕ್ಯಾಮೆರಾಮನ್ ಆಗಿದ್ದರು.


ಇನ್ನು ರಾಧಿಕಾ ನಾರಾಯಣ್​ ಅವರಿಗೆ ಅಭಿಮನ್ಯ ಕೆಲಸ ಗೊತ್ತಿದೆ. ಈ ಕಾರಣಕ್ಕೆ ಈ ಚಿತ್ರವನ್ನ ಒಪ್ಪಿದೆ ಅಂತಲೂ ರಾಧಿಕಾ ನಾರಾಯಣ್ ವಿವರಿಸುತ್ತಾರೆ.
ರಾಧಿಕಾ ನಾರಾಯಣ್ ಅವರಿಗೆ ಕಥೆ-ಚಿತ್ರ ಕಥೆ ಮತ್ತು ಟೀಮ್ ಎಲ್ಲವೂ ಇಷ್ಟ ಆಗಿದೆ. ಅದೇ ಕಂಫರ್ಟ್ ಜೋನ್​ ನಲ್ಲಿಯೇ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಮಾಡುತ್ತಿದ್ದಾರೆ.


ದೂದ್ ಪೇಡ ದಿಗಂತ್ ವೇರಿ ಕಂಫರ್ಟ್ ಹೀರೋ-ರಾಧಿಕಾ
ರಾಧಿಕಾ ನಾರಾಯಣ್ ಕಂಫರ್ಟ್ ಆಗೋ ಟೀಮ್​ ಜೊತೆಗೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ಚಿತ್ರದ ನಾಯಕ ನಟ ದೂದ್ ಪೇಡ ದಿಗಂತ್ ಕೂಡ ವೇರಿ ಕಂಫರ್ಟ್ ಹೀರೋನೇ ಆಗಿದ್ದಾರೆ.


Kannada Actress Radhika Narayan Plying Important Role in Diganth Movie
ಎಡಗೈ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ರಾಧಿಕಾ ಮಹತ್ವದ ರೋಲ್


ಈ ವಿಚಾರವನ್ನ ಅಷ್ಟೇ ಖುಷಿಯಿಂದಲೇ ರಾಧಿಕಾ ನಾರಾಯಣ್ ಹೇಳಿಕೊಳ್ತಾರೆ. ನಾಯಕ ನಟ ದಿಗಂತ್ ಜೊತೆಗೂ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತೇನೆ. ದಿಗಂತ್ ಒಳ್ಳೆ ನಟರು, ತುಂಬಾ ಕಂಫರ್ಟ್ ಜೋನ್ ಕ್ರಿಯೆಟ್ ಮಾಡಿಕೊಡ್ತಾರೆ ಅಂತಲೇ ರಾಧಿಕಾ ನಾರಾಯಣ್ ತಿಳಿಸುತ್ತಾರೆ.


ಎಡಗೈ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ರಾಧಿಕಾ ಮಹತ್ವದ ರೋಲ್
ದಿಗಂತ್-ರಾಧಿಕಾ-ನಿಧಿ-ಧನು ಹರ್ಷ ಹೀಗೆ ಮೂವರು ಹೀರೋಯಿನ್​ಗಳು ಮತ್ತು ಒಬ್ಬ ನಾಯಕನ ಚಿತ್ರ ಇದಾಗಿದೆ. ಈಗಾಗಲೇ ಸಿನಿಮಾ ತಂಡ ಒಂದೊಂದೇ ಸರ್ಪ್ರೈಜ್ ಕೊಡ್ತಾನೇ ಬಂದಿದೆ.


ಇದನ್ನೂ ಓದಿ: KGF Star Yash: ಇಂಗ್ಲಿಷ್ ಭಾಷೆ ನನಗೆ ಸಮಸ್ಯೆಯಾಗಿತ್ತು ಎಂದ ರಾಕಿ ಭಾಯ್! ಫ್ಯಾನ್ಸ್​ಗೆ ಯಶ್ ಮೆಸೇಜ್


ಅದೇ ರೀತಿ ರಾಧಿಕಾ ನಾರಾಯಣ್ ಕೂಡ ಟೀಮ್ ಜಾಯಿನ್ ಆಗಿದ್ದಾರೆ. ಅಷ್ಟೇ ಸಂತೋಷದಲ್ಲಿಯೇ ಕೆಲಸ ಕೂಡ ಮಾಡುತ್ತಿದ್ದಾರೆ.

First published: