• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Radhika Kumaraswamy: ಅಘೋರಿ ಪಾತ್ರದಲ್ಲಿ ರಾಧಿಕಾ! ಭೈರಾದೇವಿ ಶೂಟಿಂಗ್ ಕಂಪ್ಲೀಟ್, ರಿಲೀಸ್ ಯಾವಾಗ?

Radhika Kumaraswamy: ಅಘೋರಿ ಪಾತ್ರದಲ್ಲಿ ರಾಧಿಕಾ! ಭೈರಾದೇವಿ ಶೂಟಿಂಗ್ ಕಂಪ್ಲೀಟ್, ರಿಲೀಸ್ ಯಾವಾಗ?

ಭೈರಾದೇವಿ ಚಿತ್ರದ ಸ್ಪೆಷಲ್ ಝಲಕ್ ರಿವೀಲ್

ಭೈರಾದೇವಿ ಚಿತ್ರದ ಸ್ಪೆಷಲ್ ಝಲಕ್ ರಿವೀಲ್

ಭೈರಾದೇವಿ ಸಿನಿಮಾದ ರಿಲೀಸ್ ಡೇಟ್ ಇನ್ನು ಫಿಕ್ಸ್ ಆಗಿಲ್ಲ. ಆದರೆ ಅತಿ ಶೀಘ್ರದಲ್ಲಿಯೇ ಸಿನಿಮಾ ಬರುತ್ತದೆ ಅನ್ನುವ ಮಾಹಿತಿಯನ್ನ ಕೂಡ ಸಿನಿಮಾ ತಂಡ ಹೇಳಿಕೊಂಡಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಕನ್ನಡದ ನಾಯಕಿ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ಭೈರಾದೇವಿ ಅನ್ನುವ ಒಂದು ಸಿನಿಮಾ ಮಾಡಿದ್ದರು. ಆ ಚಿತ್ರ ಈಗ ಎಲ್ಲಿಗೆ ಬಂತು ಅನ್ನೋ ಪ್ರಶ್ನೆ ಕೂಡ ಇದೆ. ಈ ಚಿತ್ರ ರಿಲೀಸ್ ಏನಾದ್ರೂ ಆಯಿತೇ (Bhairadevi Cinema) ಅನ್ನುವ ಕ್ಯೂರಿಯೋಸಿಟಿ ಸಹ ಮೂಡಿದೆ. ಜೊತೆಗೆ ಡೈರೆಕ್ಟರ್ ಶ್ರೀಜೈ ಈ ಚಿತ್ರದ ಎಲ್ಲ ಕೆಲಸ ಮುಗಿಸಿದ್ರೇ ಅನ್ನುವ ವಿಚಾರದ ಬಗ್ಗೆ ಗೊತ್ತಿರೋರು ಮಾತಾಡುತ್ತಿದ್ದಾರೆ. ರಾಧಿಕಾ ಕುಮಾರ​​ಸ್ವಾಮಿ (Bhairadevi Movie Release Soon) ಅವರು ಈ ಚಿತ್ರದ ಮೂಲಕ ಅಘೋರಿ ಪಾತ್ರವನ್ನು ಮಾಡಿದ್ದಾರೆ. ಇದೇ ಚಿತ್ರದಲ್ಲಿ ನಟ ರವಿಶಂಕರ್ (Actor Ravi shankar Special Role) ಕೂಡ ಮಹತ್ವದ ಅಘೋರಿ ಪಾತ್ರವನ್ನ ನಿರ್ವಹಿಸಿದ್ದಾರೆ.


ಇಷ್ಟೆಲ್ಲ ವಿಶೇಷ ಇರೋ ಈ ಚಿತ್ರದ ಒಂದಷ್ಟು ಲೇಟೆಸ್ಟ್ ಅಪ್​​ಡೇಟ್ಸ್ ಈಗ ಹೊರ ಬಿದ್ದಿದೆ. ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಸಿನಿಮಾ ತಂಡದ ಸದಸ್ಯರೊಬ್ಬರು ಅಧಿಕೃತ ಮಾಹಿತಿಯನ್ನ ಕೊಟ್ಟಿದ್ದಾರೆ. ಆ ಮಾಹಿತಿಯ ಒಟ್ಟು ಚಿತ್ರಣ ಇಲ್ಲಿದೆ ಓದಿ.


Kannada Actress Radhika Kumaraswamy Movie Bhairadevi Latest Updates
ಭೈರಾದೇವಿ ಆರಾಧಿಸಿದ ಖಳನಾಯಕ ನಟ ರವಿಶಂಕರ್​


ಭೈರಾದೇವಿ ಸಿನಿಮಾ ಯಾವಾಗ ರಿಲೀಸ್
ಅಂದ್ಹಾಗೆ ಭೈರಾದೇವಿ ಚಿತ್ರದ ಚಿತ್ರೀಕರಣ ಪೂರ್ಣ ಆಗಿದೆ. ಸಿನಿಮಾದ ಮಹತ್ವದ ಚಿತ್ರೀಕರಣದ ಕೆಲಸವೂ ಪೂರ್ತಿ ಆಗಿದೆ. ಡೈರೆಕ್ಟರ್ ಶ್ರೀಜೈ ಭೈರಾದೇವಿ ಚಿತ್ರವನ್ನ ಮುಗಿಸಿಕೊಟ್ಟಿದ್ದಾರೆ.
ಆದರೆ ಚಿತ್ರದ ಡಿಐ ಮತ್ತು ಹಿನ್ನೆಲೆಯ ಸಂಗೀತದ ಕೆಲಸ ನಡೆಯುತ್ತಿದೆ. ಇನ್ನು ಕೆಲವು ದಿನಗಳು ಉರುಳಿದರೆ ಆ ಕೆಲಸವೂ ಪೂರ್ಣ ಆಗುತ್ತದೆ. ಹಾಗೇನೆ ಸಿನಿಮಾ ಕೂಡ ತುಂಬಾ ಚೆನ್ನಾಗಿಯೇ ಬಂದಿದೆ ಅನ್ನುವುದು ಸಿನಿಮಾ ಟೀಮ್​​ನ ಭರವಸೆಯ ಮಾತಾಗಿದೆ.


ಭೈರಾದೇವಿ ಚಿತ್ರೀಕರಣ ಪೂರ್ಣಗೊಳಿಸಿದ ಡೈರೆಕ್ಟರ್ ಶ್ರೀಜೈ
ಭೈರಾದೇವಿ ಸಿನಿಮಾ ಎಲ್ಲ ಕೆಲಸ ಬಹುತೇಕ ಮುಗಿತಾ ಬಂದಿದೆ. ಚಿತ್ರೀಕರಣದ ಹಂತದಲ್ಲಿರೋವಾಗ ಡೈರೆಕ್ಟರ್ ಶ್ರೀಜೈ ತಮ್ಮ ಈ ಚಿತ್ರವನ್ನ ಅದ್ಭುತವಾಗಿಯೇ ತೆಗೆದಿದ್ದಾರೆ.


ಸ್ಮಶಾನದಲ್ಲಿ ಭೈರಾದೇವಿಯ ಪ್ರಮುಖ ದೃಶ್ಯಗಳನ್ನ ತೆಗೆದು ಗಮನ ಸೆಳೆದಿದ್ದರು. ಅದೇ ಭೈರಾದೇವಿ ರೂಪದ ಪೋಸ್ಟರ್​​ಗಳು, ವಿಡಿಯೋಗಳು ಅತಿ ಹೆಚ್ಚು ಗಮನ ಸೆಳೆದಿದ್ದವು.


ಭೈರಾದೇವಿ ಚಿತ್ರದ ಸ್ಪೆಷಲ್ ಝಲಕ್ ರಿವೀಲ್
ಭೈರಾದೇವಿ ಸಿನಿಮಾ ತಂಡ ಮೊನ್ನೆ ಶಿವರಾತ್ರಿಯ ಒಂದು ಟೀಸರ್ ರಿಲೀಸ್ ಮಾಡಿದೆ. ಈ ಟೀಸರ್ ಮೂಲಕ ಚಿತ್ರದ ಪ್ರಚಾರ ಕೆಲಸವನ್ನೂ ಸಿನಿಮಾ ತಂಡ ಈಗ ಆರಂಭಿಸಿದೆ.


ಭೈರಾದೇವಿ ಚಿತ್ರದಲ್ಲಿ ಹಲವಾರು ವಿಶೇಷತೆಗಳಿವೆ. ಅವುಗಳಲ್ಲಿ ರವಿಶಂಕರ್ ನಿರ್ವಹಿಸಿದ ಪಾತ್ರವೂ ಇದೆ. ಚಿತ್ರದಲ್ಲಿ ಅಘೋರಿ ಪಾತ್ರವನ್ನ ನಿರ್ವಿಸರೋ ರವಿಶಂಕರ್ ಅವರು ಇಲ್ಲಿ ರಾಧಿಕಾ ಅವರ ಗುರುವಿನ ಪಾತ್ರವನ್ನ ಮಾಡಿದ್ದಾರೆ ಅನ್ನೋದು ಈಗಾಗಲೇ ಗೊತ್ತಿರೋ ವಿಷಯವೇ ಆಗಿದೆ.


ಭೈರಾದೇವಿ ಆರಾಧಿಸಿದ ಖಳನಾಯಕ ನಟ ರವಿಶಂಕರ್​
ಇದಕ್ಕೂ ಹೆಚ್ಚಾಗಿ ರವಿಶಂಕರ್ ಅವರು ಈ ಚಿತ್ರದಲ್ಲಿ ಶಿವನ ಒಂದು ಹಾಡನ್ನ ಹಾಡಿದ್ದಾರೆ. ಭೈರಾದೇವಿಯ ಗುಣಗಾನ ಮಾಡುತ್ತಿರೋ ಈ ಗೀತೆಯನ್ನ ಮೊನ್ನೆ ರಿವೀಲ್ ಮಾಡಲಾಗಿದೆ.


ಭೈರಾದೇವಿ ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಪೊಲೀಸ್ ಆಫೀಸರ್ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇವರ ಪಾತ್ರದ ಪೋಸ್ಟರ್​ ಕೂಡ ಈಗಾಗಲೇ ರಿಲೀಸ್ ಕೂಡ ಆಗಿದೆ.
ಭೈರಾದೇವಿ ಸಿನಿಮಾದ ರಿಲೀಸ್ ಡೇಟ್ ಇನ್ನು ಫಿಕ್ಸ್ ಆಗಿಲ್ಲ. ಆದರೆ ಅತಿ ಶೀಘ್ರದಲ್ಲಿಯೇ ಸಿನಿಮಾ ಬರುತ್ತದೆ ಅನ್ನುವ ಮಾಹಿತಿಯನ್ನ ಕೂಡ ಸಿನಿಮಾ ತಂಡ ಹೇಳಿಕೊಂಡಿದೆ.


Kannada Actress Radhika Kumaraswamy Movie Bhairadevi Latest Updates
ಭೈರಾದೇವಿ ಸಿನಿಮಾ ಯಾವಾಗ ರಿಲೀಸ್?


ಭೈರಾದೇವಿ ರೂಪದಲ್ಲಿ ರಾಧಿಕಾ ಕುಮಾರಸ್ವಾಮಿ
ಈ ಚಿತ್ರದ ಮೂಲಕ ಭೈರಾದೇವಿ ಆಗಿ ರಾಧಿಕಾ ಕುಮಾರ​​ಸ್ವಾಮಿ ಅವರು ಬರ್ತಿದ್ದಾರೆ. ಇವರ ಈ ಚಿತ್ರ ತುಂಬಾ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಇದಕ್ಕೆ ಕಾರಣ ಭೈರಾದೇವಿ ಪಾತ್ರ ಅಂತಲೇ ಹೇಳಬಹುದು.


ಇದನ್ನೂ ಓದಿ: Arjun Janya: ಅರ್ಜುನ್ ಜನ್ಯ ನಿರ್ದೇಶನದ ಚಿತ್ರದ ತಯಾರಿ ಹೇಗಿದೆ? ಶಿವಣ್ಣ ಕೊಟ್ಟ ಸಲಹೆ ಏನು?


ಭೈರಾದೇವಿಯ ಪಾತ್ರ ಅಷ್ಟೇ ವಿಶೇಷವಾಗಿದ್ದು, ಮಹಿಳಾ ಅಘೋರಿ ಪಾತ್ರದಲ್ಲಿ ನಟಿ ರಾಧಿಕಾ ಕುಮಾರ್​​ ಸ್ವಾಮಿ ಅಭಿನಯಿಸಿದ್ದಾರೆ. ಕನ್ನಡದ ಮಟ್ಟಿಗೆ ಇದು ಮೊದಲ ಪ್ರಯೋಗ ಅನ್ನುವ ಮಾಹಿತಿಯೂ ಇದೆ. ಸೋಷಿಯಲ್ ಮೀಡಿಯಾದಲ್ಲೂ ಈ ಚಿತ್ರದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇದೆ. ಶೀಘ್ರದಲ್ಲಿಯೇ ಚಿತ್ರ ರಿಲೀಸ್ ಮಾಡೋಕೆ ಸಿನಿಮಾ ತಂಡ ತಯಾರಿ ನಡೆಸಿದೆ.

First published: