Radhika Narayan: ಆಧ್ಯಾತ್ಮದತ್ತ ಒಲವು; ಸಿನಿಮಾಗಳ ನಡುವೆ ರಾಧಿಕಾ ನಾರಾಯಣ್​ಗೆ ಹಿಮಾಲಯದ ಹಂಬಲ!

ಕನ್ನಡದ ನಟಿಗೆ ಹೆಚ್ಚಿದ ಆಧ್ಯಾತ್ಮದ ಒಲವು. ದಿನವೂ ಅಧಿಕ ಸಮಯ ಧ್ಯಾನಕ್ಕೆ ಮೀಸಲು. ರಂಗೀತರಂಗ, ಶಿವಾಜಿ ಸುರತ್ಕಲ್ ನಾಯಕಿ ರಾಧಿಕಾ ಮನದ ಮಾತು ಅನಾವರಣ. -ರಾಧಿಕಾ ನಾರಾಯಣ್

ಕನ್ನಡದ ನಟಿಗೆ ಹೆಚ್ಚಿದ ಆಧ್ಯಾತ್ಮದ ಒಲವು

ಕನ್ನಡದ ನಟಿಗೆ ಹೆಚ್ಚಿದ ಆಧ್ಯಾತ್ಮದ ಒಲವು

  • Share this:
ಸ್ಯಾಂಡಲ್​ವುಡ್ ನ ನಾಯಕಿ ನಟಿ ರಾಧಿಕಾ ನಾರಾಯಣ್ (Radhika Narayan) ಆಧ್ಯಾತ್ಮದತ್ತ ವಾಲುತ್ತಿದ್ದಾರೆಯೇ ? ಯೋಗ ಧ್ಯಾನ ಓಕೆ. ಆದರೆ ಹಿಮಾಲಯಕ್ಕೆ (Himalaya)ಹೋಗುವ ಹಂಬಲ ಯಾಕೆ ? ರಂಗೀತರಂಗದ ಈ ಚೆಲುವೆಯ ಆಧ್ಯಾತ್ಮದತ್ತ ಸೆಳೆತ ಯಾಕೆ ಬಂತು.? ಹೆಚ್ಚಿನ ಸಮಯವನ್ನ ಧ್ಯಾನದಲ್ಲಿಯೇ (Meditation)ಕಳೆಯುತ್ತಿರೋದು ಯಾಕೆ ? ರಾಧಿಕಾ ನಾರಾಯಣ್ ವಿಶೇಷವಾಗಿಯೇ ಈ ಎಲ್ಲ ವಿಷಯಗಳನ್ನ ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಇವರ ಪ್ರತಿ ಮಾತಿನ ಒಟ್ಟು ಚಿತ್ರಣ ಇಲ್ಲಿದೆ ಓದಿ.

ರಾಧಿಕಾ ನಾರಾಯಣ್ ಕನ್ನಡದ ವಿಶೇಷ ನಟಿ. ಆಯ್ಕೆ ಮಾಡೋ ಪಾತ್ರಗಳೂ ಸ್ಪೆಷಲ್ ಆಗಿಯೇ ಇರುತ್ತವೆ. ರಂಗಿತರಂಗ ಈ ನಟಿಯ ಹೆಸರನ್ನ ಎಲ್ಲೆಡೆ ಪ್ರಚಾರ ಮಾಡಿತು. ಶಿವಾಜಿ ಸುರತ್ಕಲ್ ಸಿನಿಮಾ ಕೂಡ ರಾಧಿಕಾ ಚೇತನ್​ ಅವರಿಗೆ ಹೆಸರು ತಂದು ಕೊಡ್ತು.ಹೌದು ರಾಧಿಕಾ ಆಯ್ಕೆ ಮಾಡೋ ಪ್ರೋಜೆಕ್ಟ್​ಗಳು ಇದೇ ರೀತಿ ವಿಶೇಷವಾಗಿಯೇ ಇರುತ್ತವೆ. ಇಲ್ಲಿವರೆಗೂ ಅಭಿನಯಿಸಿರೋ ಚಿತ್ರಗಳು ರಾಧಿಕಾ ವಿಶೇಷತೆಗಳನ್ನ ಹೇಳಿವೆ. ಈಗಾಗಲೇ ಅಭಿನಯಿಸಿರೋ ಶಿವಾಜಿ ಸುರತ್ಕಲ್-2 ಚಿತ್ರದಲ್ಲೂ ರಾಧಿಕಾ, ಶಿವಾಜಿಯ ಪತ್ನಿ ಪಾತ್ರದಲ್ಲಿಯೇ ಅಭಿನಯಸಿದ್ದಾರೆ.

ರಾಧಿಕಾ ನಾರಾಯಣ್​ಗೆ ಒಲವಿನ ಜೊತೆಗೆ ಧ್ಯಾನದ ಸೆಳೆತ 
ಆದರೆ, ರಾಧಿಕಾ ಈಗ ಅತಿ ಹೆಚ್ಚು ಧ್ಯಾನ ಮಾಡೋದರಲ್ಲಿಯೇ ತಲ್ಲೀನರಾಗಿರುತ್ತಾರೆ. ಧ್ಯಾನವೇ ಎಲ್ಲ ನೆಮ್ಮದಿಗೂ ಮೂಲ ಅನ್ನೋ ಅರ್ಥದಲ್ಲಿಯೇ ಧ್ಯಾನ ಮಾಡೋದನ್ನ ದಿನೇ ದಿನೇ ಹೆಚ್ಚು ಮಾಡುತ್ತಿದ್ದಾರೆ. ಧ್ಯಾನ ಮಾಡೋದಕ್ಕೇನೆ ಆನ್​ ಲೈನ್ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ.

Radhika Chetan Now Very Much Busy with Yoga and Meditation
ರಾಧಿಕಾ ನಾರಾಯಣ್ ಹೊಸ ಫೋಟೋ ಶೂಟ್​


ಆಧ್ಯಾತ್ಮ-ಜೀವನದಂತಹ ಪುಸ್ತಕಗಳನ್ನ ಓದುತ್ತಿದ್ದಾರೆ ರಾಧಿಕಾ
ರಾಧಿಕಾ ಅವರು ಯೋಗವನ್ನ ಪ್ರತಿದಿನ ಅಭ್ಯಾಸ ಮಾಡುತ್ತಾರೆ. ಅದನ್ನ ಈ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಅತಿ ಹೆಚ್ಚು ಧ್ಯಾನ ಮಾಡೋದನ್ನ ಈಗ ಅಭ್ಯಾಸ ಮಾಡಿಕೊಂಡಿದ್ದಾರೆ. ಮನಸ್ಸಿಗೆ ನೆಮ್ಮದಿ ಇಲ್ಲದೇ ಇದ್ದರೇನೆ ಧ್ಯಾನ, ಆಧ್ಯಾತ್ಮ ಅಂತ ಜನ ಹೋಗ್ತಾರೆ. ಆದರೆ ರಾಧಿಕಾ ನಾರಾಯಣ್ ಧ್ಯಾನವೇ ಪರಮ ಸತ್ಯ ಅಂತ ತಿಳಿದು ಅದನ್ನೆ ಹೆಚ್ಚು ಹೆಚ್ಚು ಧ್ಯಾನವನ್ನೇ ಮಾಡುತ್ತಿದ್ದಾರೆ.

ಸಿನಿಮಾಗಳ ಕೆಲಸ-ಫ್ಯಾಷನ್ ಶೋ ಪ್ರೀತಿ-ಪುಸ್ತಕ ಓದುವ ಅಭ್ಯಾಸ
ರಾಧಿಕಾ ನಾರಾಯಣ್​ ಅವರು ಸಿನಿಮಾಗಳನ್ನೂ ಮಾಡ್ತಾನೇ ಇದ್ದಾರೆ. ಫ್ಯಾಷನ್ ಶೋಗಳಲ್ಲೂ ವಾಕ್ ಮಾಡುತ್ತಾರೆ. ಪುಸ್ತಕ ಪ್ರೀತಿ ಏನೂ ಕಮ್ಮಿ ಇಲ್ಲ ಬಿಡಿ. ಓಬಾಮಾ ಪತ್ನಿ ಮಿಸೆಲ್ ಓಬಾಮಾ ಅವರ ಜೀವನ ಚರಿತ್ರೆಯನ್ನ ಓದುತ್ತಿದ್ದಾರೆ.ಮನಸ್ಸಿಗೆ ಖುಷಿಕೊಡುವ ಒಳ್ಳೆ ಪುಸ್ತಕಗಳನ್ನೂ ಓದುತ್ತಾರೆ. ರಾಧಿಕಾ ನಾರಾಯಣ್ ಇತ್ತೀಚಿಗೆ ಡಿಸೈನರ್ ಮೇಘಾ ಕಪೂರ್ ಗಾಗಿಯೇ ಶೋ ಟಾಪರ್ ಆಗಿಯೇ ವಾಕ್ ಕೂಡ ಮಾಡಿದ್ದಾರೆ. ಫೋಟೋ ಶೂಟ್​ಗಳನ್ನೂ ಮಾಡುತ್ತಿದ್ದಾರೆ. ಹೀಗೆ ಸಿನಿಮಾ, ಇವೆಂಟ್ಸ್,ಯೋಗ, ಧ್ಯಾನ ಅಂತಲೇ ತಲ್ಲೀನರಾಗಿರುತ್ತಾರೆ.

Radhika Chetan Now Very Much Busy with Yoga and Meditation
ರಾಧಿಕಾ ನಾರಾಯಣ್ ಸಖತ್ ಫೋಸ್


ರಾಧಿಕಾ ನಾರಾಯಣ್ ಒಪ್ಪಿಕೊಂಡಿರೋ ಸಿನಿಮಾಗಳಾವವು ?
ಶಿವಾಜಿ ಸುರತ್ಕಲ್-2 ಚಿತ್ರದಲ್ಲೂ ರಾಧಿಕಾ ನಾರಾಯಣ್ ಅಭಿನಯಿಸಿದ್ದಾರೆ. ಮೊನ್ನೆ ಚೇಜ್ ಸಿನಿಮಾ ರಿಲೀಸ್ ಆಯಿತು. ವೀರಕಂಬಳ ಚಿತ್ರದಲ್ಲಿ ಕಮಿಷನರ್ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಹೊಸ ಹೊಸ ಕಥೆಗಳನ್ನೂ ಕೇಳ್ತಾರೆ. ಫ್ಯಾಮಿಲಿ ಜೊತೆಗೆ ಹೆಚ್ಚಿನ ಸಮಯವನ್ನೂ ಕಳೆಯುತ್ತಿದ್ದಾರೆ.

ರಾಧಿಕಾ ನಾರಾಯಣ್ ಅವರಿಗೆ ಬೇಡಿಕೆ ಇದೆ. ಇವರನ್ನ ಹುಡುಗಿಕೊಂಡು ಸಿನಿಮಾಗಳು ಬರ್ತಾನೇ ಇವೆ. ಹಾಗೆ ಬಂದು ಕಥೆ ಹೇಳುವ ನಿರ್ದೇಶಕರ ಕಥೆಗಳನ್ನೂ ರಾಧಿಕಾ ನಾರಾಯಣ್ ಕೇಳುತ್ತಿದ್ದಾರೆ.  ಆದರೆ ಅಷ್ಟು ಬೇಗ ಎಲ್ಲವನ್ನೂ ಒಪ್ಪಿಕೊಳ್ಳದ ರಾಧಿಕಾ ನಾರಾಯಣ್, ಮನಸ್ಸಿಗೆ ಇಷ್ಟ ಆಗೋ ಮತ್ತು ತಮಗೆ ಸರಿ ಹೊಂದುವ ಪಾತ್ರಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ.ಅದಕ್ಕೆ ಸಾಕ್ಷಿ ಈಗಾಗಲೇ ಅವರ ನಟಿಸಿರೋ ಈ ಹಿಂದಿನ ಚಿತ್ರಗಳ ಪಾತ್ರವೇ ಅಂತ ಹೇಳಬಹುದು.
First published: