• Home
 • »
 • News
 • »
 • entertainment
 • »
 • Rachita Ram: ಬಿಡದಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್​​​

Rachita Ram: ಬಿಡದಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್​​​

ನಟಿ ರಚಿತಾ ರಾಮ್​​

ನಟಿ ರಚಿತಾ ರಾಮ್​​

ಲವ್​ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಆದ ಅವಘಡದ ಕುರಿತು ಅವರು ಪೊಲೀಸರ ಮುಂದೆ ಹೇಳಿಕೆ ದಾಖಲಿಸಲಿದ್ದಾರೆ

 • Share this:

  ರಾಮನಗರ (ಆ. 24): ಲವ್​ ಯೂ ರಚ್ಚು (Love U Rachu) ಸಿನಿಮಾ ಚಿತ್ರೀಕರಣದ ವೇಳೆ ಫೈಟರ್​ ಸಾವಿನ ಕುರಿತ ವಿಚಾರಣೆಗಾಗಿ ನಟಿ ರಚಿತಾ ರಾಮ್​ (Rachita Ram) ಇಂದು ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ. ಬಿಡದಿ ಪೊಲೀಸ್​​ ಕಚೇರಿಗೆ  (Bidadi Police) ಆಗಮಿಸಿದ ಅವರು, ಘಟನೆ ಕುರಿತು ಪೊಲೀಸರ ಮುಂದೆ ಹೇಳಿಕೆ ದಾಖಲಿಸಲಿದ್ದಾರೆ. ರಾಮನಗರ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್,  ಚಿತ್ರದ ನಾಯಕ ನಟಿ ರಚಿತಾ ರಾಮ್ ಹೇಳಿಕೆ ದಾಖಲಿಸಲಿದ್ದಾರೆ. ಪ್ರಕರಣ ಕುರಿತು ಗಂಭೀರ ತನಿಖೆ ನಡೆಸುತ್ತಿರುವ ಬಿಡದಿ ಪೊಲೀಸರು ಈ ಅವಘಡ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಾಯಕ ನಟಿ ರಚಿತಾ ರಾಮ್​ಗೆ ಸೂಚಿಸಿದ್ದರು. ಈ ಹಿನ್ನಲೆ ಅವರು ಇಂದು ಠಾಣೆಗೆ ಹಾಜರಾಗಿದ್ದಾರೆ.


  ವಿಚಾರಣೆ ಬಳಿಕ ಮಾತನಾಡಿದ ನಟಿ ರಚಿತಾ ರಾಮ್​, ಘಟನೆ ನಡೆದ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ. ಈ ಬಗ್ಗೆ ಮಾಧ್ಯಮ, ಸಾಮಾಜಿಕ ಜಾಲತಾಣದ ಮೂಲಕ ನನಗೆ ತಿಳಿಯಿತು. ಹಾಗಾಗಿ ಇಷ್ಟೇ ವಿಚಾರವನ್ನ ಪೊಲೀಸರ ತಿಳಿಸಿದ್ದೇನೆ. ಇವತ್ತಿಗೆ ನನ್ನ ವಿಚಾರಣೆ ಮುಗಿದಿದೆ, ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದ್ದೇನ. ಘಟನೆ ಹೇಗಾಯಿತು ಎಂದು ಗೊತ್ತಿಲ್ಲ. ಫೈಟಿಂಗ್ ಸೀನ್ ನಲ್ಲಿ ಹೀರೋಯಿನ್ಸ್ ಗೆ ಕೆಲಸ ಇರಲ್ಲ . ಹಾಗಾಗಿ ಯಾವ ರೀತಿಯ ಶೂಟ್ ಕಂಪೋಸ್ ಮಾಡಿದ್ದರೂ ಎಂಬ ಮಾಹಿತಿ ಇಲ್ಲ . ಹಾಗಾಗಿ ಈ ವಿಚಾರದಲ್ಲಿ ನಾನು ಯಾವುದೇ ನಿರ್ಲಕ್ಷ್ಯವನ್ನು ಮಾಡಿಲ್ಲ. ಅದೊಂದು ಅನಾಹುತ ಆಗಿರುವ ಬಗ್ಗೆ ತುಂಬಾ ಬೇಸರವಿದೆ ಎಂದರು


  ಚಿತ್ರದ ಯಾವುದೇ ಸೀನ್ ಇದ್ದರೂ ಮುಂಜಾಗ್ರತ ಕ್ರಮವಹಿಸಬೇಕು. ಅಜಯ್ ರಾವ್ ಸ್ಥಳದಲ್ಲಿ ಇದ್ದ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಸ್ಥಳದಲ್ಲಿ ಇರಲಿಲ್ಲ, ಹಾಗಾಗಿ ನನಗೆ ಗೊತ್ತಿಲ್ಲ. ಆದರೆ ಘಟನಾ ಸ್ಥಳಕ್ಕೆ ಎಲ್ಲರೂ ಹೋಗಬೇಕು ಆ ಕ್ಷಣದಲ್ಲಿ ನಮಗೆ ಏನಾದರೂ ಆದರೆ ಎಲ್ಲರೂ ಬರುತ್ತಾರೆ. ಹಾಗಾಗಿ ಅಲ್ಲಿ ಯಾರೇ ಇದ್ದರೂ ಹೋಗಬೇಕಾಗುತ್ತದೆ ಎಂದು ತಿಳಿಸಿದರು


  ಈ ಘಟನೆ ನಡೆದ ಸಂದರ್ಭದಲ್ಲಿ ನಟಿ ರಚಿತಾ ರಾಮ್​ ತಾವು ಸ್ಥಳದಲ್ಲಿ ಇರಲಿಲ್ಲ. ತಾವು ಮತ್ತೊಂದು ಚಿತ್ರದ ಶೂಟಿಂಗ್​ನಲ್ಲಿ ಮೈಸೂರಿನಲ್ಲಿದ್ದೆ. ನಮ್ಮ ಚಿತ್ರದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಎನ್ನುವ ನೋವು ನನ್ನನ್ನು ಕಾಡುತ್ತಿದೆ. ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಈ ಹಿಂದೆ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.


  ಇದನ್ನು ಓದಿ: ಗುರು ಕಾಶೀನಾಥ್​ ಮನೆಗೆ ಭೇಟಿ ನೀಡಿದ ಚಿನ್ನದ ಹುಡುಗ ನೀರಜ್​ ಚೋಪ್ರಾ


  ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು
  ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಂಕರ್, ಫೈಟ್ ಮಾಸ್ಟ್ ವಿನೋದ್ ಮತ್ತು ಕ್ರೇನ್ ಚಾಲಕ ಮಹದೇವ್ ಅವರೇ ಕಾರಣ ಎಂದು ಈ ಮೂವರನ್ನೂ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿತ್ತು. ಅಲ್ಲದೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂದು  ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಇನ್ನು ಚಿತ್ರದ ನಿರ್ಮಾಪಕ ಗುರುದೇಶ್ ಪಾಂಡೆ ಹಾಗೂ ಫರ್ನಾಂಡೀಸ್ ತಲೆ ಮರೆಸಿಕೊಂಡಿದ್ದಾರೆ. ಈ ಘಟನೆ ಬಳಿಕ ನಾಯಕ ನಟ ಅಜಯ್ ರಾವ್ ಮತ್ತು ನಟಿ ರಚಿತಾ ರಾಮ್ ಅವರನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಬೇಕು ಎಂಬ ಕೂಗು ಕೇಳಿ ಬಂದಿತ್ತು.


  ಈ ಕುರಿತು ಹೇಳಿಕೆ ನೀಡಿದ್ದ ಅಜಯ್​ ರಾವ್​, ದುರಂತ ಘಟನೆ ನಡೆದಾಗ ನಾನು ಸ್ಪಾಟ್​ನಲ್ಲಿ ಇರಲಿಲ್ಲ. ನಾನು ಅಲ್ಲಿ ಇದ್ದಿದ್ದರೆ ಎಚ್ಚರಿಕೆ ವಹಿಸುವಂತೆ ಹೇಳುತ್ತಿದ್ದೆ ಎಂದಿದ್ದರು.

  Published by:Seema R
  First published: