• Home
  • »
  • News
  • »
  • entertainment
  • »
  • Rachita Ram Birthday: ಬುಲ್​ಬುಲ್ ರಚ್ಚುಗೆ ಹ್ಯಾಪಿ ಬರ್ಥ್​​ಡೇ! ಇಲ್ಲಿದೆ ಹೊಸ ಸಿನಿಮಾ ಲಿಸ್ಟ್

Rachita Ram Birthday: ಬುಲ್​ಬುಲ್ ರಚ್ಚುಗೆ ಹ್ಯಾಪಿ ಬರ್ಥ್​​ಡೇ! ಇಲ್ಲಿದೆ ಹೊಸ ಸಿನಿಮಾ ಲಿಸ್ಟ್

ಇವತ್ತು ರಚಿತಾ ರಾಮ್ ಜನ್ಮ ದಿನ

ಇವತ್ತು ರಚಿತಾ ರಾಮ್ ಜನ್ಮ ದಿನ

ಬೇಡಿಕೆಯ ಕನ್ನಡದ ನಟಿ ರಚಿತಾ ರಾಮ್​ಗೆ ಇವತ್ತು ಜನ್ಮ ದಿನದ ಸಂಭ್ರಮ. ಈ ಸಂಭ್ರಮದಲ್ಲಿ ಅವರ ಅಭಿನಯದ ಸಿನಿಮಾಗಳ ಒಂದಷ್ಟು ವಿವರ ಇಲ್ಲಿದೆ.

  • Share this:

ಕನ್ನಡದ ನಟಿ ರಚಿತಾ ರಾಮ್ (Rachita Ram) ತಮ್ಮದೇ ಛಾಪನ್ನ ಕನ್ನಡದಲ್ಲಿ ಮೂಡಿಸುತ್ತಲೇ ಬಂದಿದ್ದಾರೆ. ಸೂಪರ್ ಸ್ಟಾರ್​ಗಳ (Super Star)ಜೊತೆಗೆ ಅಭಿನಯಿಸೋ ಮೂಲಕ ಕನ್ನಡಿಗರ ಪ್ರೀತಿಯನ್ನ ಗಳಿಸಿಕೊಂಡಿದ್ದಾರೆ. ಸಿನಿಮಾ ಪ್ರೇಮಿಗಳು ಈ ನಟಿಯನ್ನ ಬುಲ್ ಬುಲ್ (Bull Bull) ಅಂತಲೇ ಕರೆಯೋದು. ಕನ್ನಡದ ಮಟ್ಟಿಗೆ ಟಾಪ್ ನಟಿಯರ ಲಿಸ್ಟ್ ನಲ್ಲಿ ರಚಿತಾ ಕೂಡ ಇದ್ದಾರೆ. ಸಿನಿಮಾ ಪ್ರೀತಿಯನ್ನು ಉಳಿಸಿಕೊಂಡು ಬರ್ತಿರೋ ರಚಿತಾ ರಾಮ್, ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅವುಗಳ ಪಟ್ಟಿ ದೊಡ್ಡದೇ ಇದೆ. ಕನ್ನಡದ ಬೇಡಿಕೆಯ ನಟಿಗೆ ಇವತ್ತು ಜನ್ಮ ದಿನದ ಸಂಭ್ರಮ. ಈ ಸಂಭ್ರಮದಲ್ಲಿ (Rachita Ram Birthday) ಅವರ ಅಭಿನಯದ ಸಿನಿಮಾಗಳ ಒಂದಷ್ಟು ವಿವರ ಇಲ್ಲಿದೆ.

ಮಾನ್ಸೂನ್ ರಾಗದಲ್ಲಿ ರಚಿತಾ ಪಾತ್ರಕ್ಕೆ ಪ್ರಶಂಸೆಯ ಸುರಿಮಳೆ
ರಚಿತಾ ರಾಮ್ ಸಿನಿ ಬದುಕಿನಲ್ಲಿ ಮಾನ್ಸೂನ್ ರಾಗ ಒಂದು ವಿಶೇಷ ಸಿನಿಮಾ. ಈ ಚಿತ್ರದಲ್ಲಿ ರಚಿತಾ ರಾಮ್ ಒಂದು ವಿಶೇಷ ಪಾತ್ರವನ್ನೇ ನಿರ್ವಹಿಸಿದ್ದರು. ತಮ್ಮ ಸಿನಿ ಜೀವನದಲ್ಲಿ ರಚಿತಾ ರಾಮ್ ಇಂತಹ ಪಾತ್ರವನ್ನ ಮಾಡಿಯೇ ಇರಲಿಲ್ಲ.


Today Kannada Actress Rachita Ram Celebrating her Birthday
ಕನ್ನಡದ ಬುಲ್ ಬುಲ್ ರಚಿತಾ ರಾಮ್


ಹೌದು, ಮಾನ್ಸೂನ್ ರಾಗ ಚಿತ್ರದಲ್ಲಿ ರಚಿತಾ ರಾಮ್ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿಯೇ ಅಭಿನಯಿಸಿದ್ದರು. ಡಾಲಿ ಧನಂಜಯ್ ಈ ಚಿತ್ರದಲ್ಲಿ ರಚಿತಾ ರಾಮ್ ಗೆ ಜೋಡಿಯಾಗಿ ಅಭಿನಯಿಸಿದ್ದರು. ಇವರ ವಿಭಿನ್ನ ಲವ್ ಸ್ಟೋರಿಗೆ ಜನ ಮೆಚ್ಚಿಕೊಂಡರು.


ರಾವಣನನ್ನ ಹುಡುಕ ಹೊರಟ ಶಬರಿ ರಚಿತಾ ರಾಮ್
ಮಾನ್ಸೂನ್ ರಾಗದ ರಚಿತಾ ರಾಮ್ ಪಾತ್ರದ ಬೆನ್ನಲ್ಲಿಯೇ ಮತ್ತೊಂದಷ್ಟು ಸಿನಿಮಾಗಳನ್ನೂ ರಚಿತಾ ಒಪ್ಪಿಕೊಂಡಿದ್ದಾರೆ. ಶಬರಿ ಇನ್​ ಸರ್ಚ್ ಆಫ್ ರಾವಣ ಅನ್ನೋ ಸಿನಿಮಾವನ್ನ ಕೂಡ ರಚಿತಾ ಒಪ್ಪಿಕೊಂಡಿದ್ದಾರೆ.


ರಚಿತಾ ರಾಮ್ ಇಲ್ಲಿ ಶಬರಿ ಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್​ ಈಗಾಗಲೇ ರಿಲೀಸ್ ಆಗಿದೆ. ಇದು ಅಷ್ಟೇ ವಿಶೇಷ ಅನ್ನೋ ಭಾವನೆಯನ್ನೂ ಮೂಡಿಸುತ್ತದೆ.


Today Kannada Actress Rachita Ram Celebrating her Birthday
ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮ


ಬ್ಯಾಡ್ ಮ್ಯಾನರ್ಸ್ ನಲ್ಲೂ ಇದ್ದಾರೆ ರಚಿತಾ ರಾಮ್
ಶಬರಿ ಇನ್ ಸರ್ಚ್ ಆಫ್ ರಾವಣ ಅನ್ನೋದೇ ಇಲ್ಲಿ ವಿಶೇಷವಾ ವಿಷಯ. ಶಬರಿ ಹುಡುಕುತ್ತಿರೋ ಆ ರಾವಣ ಯಾರೂ ಅನ್ನೋದು ಪಾತ್ರ ಇನ್ನೂ ರಿವೀಲ್ ಆಗಿಲ್ಲ. ಆದರೆ ರಚಿತಾ ರಾಮ್ ಪಾತ್ರದ ಗತ್ತು ಇಲ್ಲಿ ನಿಜಕ್ಕೂ ಗಮನ ಸೆಳೆಯುವಂತೇನೆ ಇದೆ.


ಇದನ್ನೂ ಓದಿ: Salman Khan: ಕಾಸ್ಟಿಂಗ್ ಕೌಚ್ ಸದ್ದು, ಸಲ್ಮಾನ್ ಖಾನ್ ಮಂಚದಲ್ಲಿ ಮಲಗಿದ್ಯಾರು?


ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಬರೀಶ್ ಅಭಿನಯ ಬ್ಯಾಡ್​ ಮ್ಯಾನರ್ಸ್ ಸಿನಿಮಾದಲ್ಲೂ ರಚಿತಾ ರಾಮ್ ಅಭಿನಯಸಿದ್ದಾರೆ. ಬ್ಯಾಡ್ ಮ್ಯಾನರ್ಸ್ ಅಂದ್ಮೇಲೆ ಇಲ್ಲಿ ಅಭಿಷೇಕ್ ಪಾತ್ರದ್ದೇ ಅಬ್ಬರ ಇರುತ್ತದೆ. ಆದರೆ ಈ ಸಿನಿಮಾದಲ್ಲಿ ರಚಿತಾ ರಾಮ್ ಪಾತ್ರ ಹೇಗಿರುತ್ತದೆ ಅನ್ನೋ ಕುತೂಹಲ ಕೂಡ ಇದೆ.


ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ಪಾತ್ರ ಸೂಪರ್
ಜೇಮ್ಸ್ ಚಿತ್ರದಲ್ಲೂ ರಚಿತಾ ರಾಮ್ ಅಭಿನಯಿಸಿದ್ದರು. ಇದಕ್ಕೂ ಹೆಚ್ಚಾಗಿ ರಚಿತಾ ರಾಮ್ ಅಭಿನಯದ ಏಕ್ ಲವ್ ಯಾ ಸಿನಿಮಾ ಹೆಚ್ಚು ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಒಬ್ಬ ವಕೀಲೆಯಾಗಿಯೇ ರಚಿತಾ ರಾಮ್ ಕಂಗೊಳಿಸಿದ್ದರು.


ಅಯೋಗ್ಯ ಸಿನಿಮಾದಲ್ಲೂ ಸೂಪರ್ ಆಗಿಯೇ ರಚಿತಾ ಅಭಿನಯಿಸಿದ್ದರು. ಏನಮ್ಮಿ ಹಾಡಂತೂ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಮಹೇಶ್ ಕುಮಾರ್ ನಿರ್ದೇಶನ ಈ ಮೊದಲ ಚಿತ್ರದಲ್ಲಿ ರಚಿತಾ ಹಾಗೂ ನೀನಾಸಂ ಸತೀಸ್ ಜೋಡಿ ಆಗಿ ಮೋಡಿ ಮಾಡಿದ್ದರು.


ಸ್ಪೆಷಲ್ ಅಪಿರಿಯೆನ್ಸ್ ಫೇಮಸ್ ಗೂ ರಚಿತಾ ರಾಮ್
ರಚಿತಾ ರಾಮ್ ಸಿನಿಮಾ ಜರ್ನಿಯಲ್ಲಿ ಗೆಸ್ಟ್ ಅಪಿಯರೆನ್ಸ್ ನ ಲಿಸ್ಟ್ ಕೂಡ ಇದೆ. ಕನ್ನಡದ ಕೆಲವು ಹಿಟ್ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲೂ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.


ಹೌದು, ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಚಿತ್ರದಲ್ಲೂ ರಚಿತಾ ರಾಮ್ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದರು. ಭರಾಟೆ ಚಿತ್ರದಲ್ಲೂ ವಿಶೇಷ ಪಾತ್ರದ ಮೂಲಕ ಗಮನ ಸೆಳೆದರು.


Today Kannada Actress Rachita Ram Celebrating her Birthday
ಹ್ಯಾಪಿ ಬರ್ತ್ ಡೇ ರಚಿತಾ ರಾಮ್


ಕನ್ನಡದ ಬಿಗ್ ಸ್ಟಾರ್​ಗಳ ದಿ ವಿಲನ್ ಸಿನಿಮಾದಲ್ಲೂ ರಚಿತಾ ರಾಮ್ ಸ್ಪೆಷಲ್ ಅಪಿಯರೆನ್ಸ್ ಮಾಡಿದರು. ಹೀಗೆ ತಮ್ಮ ಬೇಡಿಕೆಯನ್ನ ಹೆಚ್ಚಿಸಿಕೊಂಡು ಬರ್ತಿರೊ ರಚಿತಾ ರಾಮ್ ಪುಟ್ಟ ಪರದೆ ಮೇಲೂ ಕಾಣಿಸಿಕೊಂಡಿದ್ದಾರೆ.


ಕಾಮಿಡಿ ಶೋದಲ್ಲೂ ನಿರ್ಣಾಯಕಿಯಾಗಿ ರಚಿತಾ ಮಿಂಚಿಂಗ್
ನಿಜ, ರಚಿತಾ ರಾಮ್ ಪುಟ್ಟ ಪರದೆಯ ಕಾಮಿಡಿ ಶೋದಲ್ಲಿ ನಿರ್ಣಾಯಕಿಯಾಗಿಯೇ ಕಾಣಿಸಿಕೊಂಡು ಪುಟ್ಟ ಪರದೆ ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ.


ಇದನ್ನೂ ಓದಿ: Kantara: ಕಾಂತಾರ ಕ್ಲೈಮ್ಯಾಕ್ಸ್​​ ನೋಡ ನೋಡುತ್ತಲೇ ದೈವ ಆವಾಹನೆ, ಥಿಯೇಟರ್‌ನಲ್ಲೇ ಓ ಎಂದು ಆರ್ಭಟಿಸಿದ ಮಹಿಳೆ!


ಪುಟ್ಟ ಪರದೆ ಒಂದು ಕಡೆಯಾದ್ರೆ, ದೊಡ್ಡ ಪರದೆ ಮೇಲೆ ಧಮಾಕಾ ಮಾಡ್ತಾನೇ ಬಂದಿರೋ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಶೇಷವೆಂದ್ರೆ ಇವರ ಹುಟ್ಟುಹಬ್ಬದ ದಿನವೇ ಅಭಿಷೇಕ್ ಅಂಬರೀಶ್ ಜನ್ಮ ದಿನವೂ ಇರುತ್ತದೆ. ಅಲ್ಲಿಗೆ ಒಂದೇ ದಿನ ಇಬ್ಬರು ಸೆಲೆಬ್ರೆಟಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ.

First published: