ರಿಯಲ್ ಸ್ಟಾರ್ ಉಪೇಂದ್ರ (Prajaakeeya upendra) ಪ್ರಜಾಕೀಯ ಕನಸು ಅದ್ಭುತವಾಗಿದೆ. ಇದನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿಯೇ ಉಪ್ಪಿ ಕೆಲಸ ಮಾಡುತ್ತಿದ್ದಾರೆ. ಯುವ ಅಭಿಮಾನಿಗಳು (Upendra Fans) ಉಪ್ಪಿಗೆ ಈ ವಿಷಯದಲ್ಲಿ ಸಾಥ್ ಕೊಟ್ಟಿದ್ದಾರೆ. ಅಷ್ಟರಲ್ಲಿಯೇ ರಿಯಲ್ ಸ್ಟಾರ್ ಉಪೇಂದ್ರ ಅವರ ವೈಫ್ ಪ್ರಿಯಾಂಕಾ (priyanka upendra) ಉಪೇಂದ್ರ ಅವರು ಉಪ್ಪಿಯ ಕನಸನ್ನ ನನಸು ಮಾಡೋಕೆ ಟೊಂಕ ಕಟ್ಟಿ ನಿಂತಿದ್ದಾರೆ. ಈಗ ರಾಜಕಾರಣಕ್ಕೂ ಕಾಲಿಟ್ಟಿದ್ದಾರೆ. ಪ್ರಜಾಕೀಯದ (Prajaakeeya upendra Concepts) ಪರಿಕಲ್ಪನೆಯನ್ನೆ ಮುಂದಿಟ್ಟುಕೊಂಡು ರಾಜಕೀಯ ಪ್ರವೇಶಿಸಿದ್ದಾರೆ. ಇದೇನೋ ಸರಿ, ಇದರ ಬಗ್ಗೆ ಸ್ವತಃ ಪ್ರಿಯಾಂಕಾ ಉಪೇಂದ್ರ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಅನ್ನೋದನ್ನ ತಿಳಿಯೋಕೆ ಈ ಸ್ಟೋರಿ ಓದಿ.
ರಿಯಲ್ ಸ್ಟಾರ್ ವೈಫ್ ರಾಜಕೀಯಕ್ಕೆ ಕಾಲಿಟ್ಟೇ ಬಿಟ್ಟರು!
ರಾಜಕೀಯ ಎಲ್ಲರನ್ನೂ ಸೆಳೆಯೋದಿಲ್ಲ. ಸೆಳೆದರು ಅದು ಬೇರೆ ರೀತಿಯಲ್ಲಿಯೇ ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಇಂದಿನ ದಿನಮಾನಗಳಲ್ಲಿ ರಿಯಲ್ ರಾಜಕೀಯ ಮಾಡೋದು ಕಷ್ಟವೇ ಸರಿ.
ಆದರೂ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯದ ಕನಸು ಕಂಡಿದ್ದಾರೆ. ಆ ಕನಸನ್ನ ಈಗ ನನಸು ಮಾಡೋಕೆ ಪತ್ನಿ ಪ್ರಿಯಾಂಕಾ ಉಪೇಂದ್ರ ಪಣ ತೊಟ್ಟಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಯಾವ ಪಕ್ಷ ಸೇರಿದ್ದಾರೆ.?
ಪ್ರಿಯಾಂಕಾ ಉಪೇಂದ್ರ ಸೇರಿರೋ ಪಕ್ಷ ಯಾವುದು? ಈ ಪಕ್ಷದ ಮೂಲಕ ಪ್ರಿಯಾಂಕಾ ಏನೆಲ್ಲ ಮಾಡ್ತಾರೆ. ಇದುವೇ ಈಗೀನ ಪ್ರಶ್ನೆ. ಪ್ರಜೆಯೇ ಪ್ರಭು ಅನ್ನುವ ಮೂಲಕ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಕಾಲಿಟ್ಟು ಅದನ್ನ ಬೆಳ್ಳಿ ತೆರೆ ಮೇಲೂ ಅಭಿನಯಿಸಲಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಕ್ರಾಂತಿ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದಾರೆ. ಪತಿಯ ಪ್ರಜಾಕೀಯದ ಪರಿಕಲ್ಪನೆಯನ್ನೆ ಮೂಲ ಮಂತ್ರವಾಗಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದಲ್ವೇ ರಿಯಲ್ ರಾಜಕಾರಣ ಅನ್ನೋ ಮಟ್ಟಿಗೆ ಪ್ರಿಯಾಂಕಾ ಉಪೇಂದ್ರ ರಾಜಕೀಯದಲ್ಲಿ ಕ್ರಾಂತಿ ಮಾಡಲಿದ್ದಾರೆ.
ಪ್ರಜೆಯೇ ಪ್ರಭು ಎನ್ನುತ್ತಿದ್ರಾರೆ ಪ್ರಿಯಾಂಕಾ ಉಪೇಂದ್ರ!
ಪ್ರಿಯಾಂಕಾ ಉಪೇಂದ್ರ ರಿಯಲ್ ಆಗಿ ರಾಜಕೀಯಕ್ಕೆ ಏನೂ ಬರ್ತಿಲ್ಲ. ಬಂದಿಯೂ ಇಲ್ಲ. "ಪ್ರಜೆಯೇ ಪ್ರಭು" ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿಯೇ ರಾಜಕಾರಣಿಯಾಗಿಯೂ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಕೂಡ ಹೊರ ಬಿದ್ದಿದೆ.
ಪ್ರಜೆಯೇ ಪ್ರಭು ಚಿತ್ರದಲ್ಲಿ ಪ್ರಜಾಕೀಯ ಕಾನ್ಸೆಪ್ಟ್ ಬಳಕೆ
ಪ್ರಜಾಕೀಯ ಪರಿಕಲ್ಪನೆಯನ್ನೆ ಈ ಚಿತ್ರದಲ್ಲಿ ಬಳಸಲಾಗಿದೆ. ಎಲ್ಲವೂ ಅಲ್ಲ. ಕೆಲವು ಕಾನ್ಸೆಪ್ಟ್ ಅನ್ನೇ ಚಿತ್ರದಲ್ಲಿ ಇಡಲಾಗಿದೆ. ಎಲ್ಲರೂ ಕೆಲಸ ಮಾಡಬೇಕು ಅನ್ನೋದು ಒಂದು. ಪಾರದರ್ಶಕತೆ ಇರಲೇಬೇಕು ಅನ್ನೋದು ಇನ್ನೊಂದು ಹೀಗೆ ಉಪ್ಪಿಯ ಕಾನ್ಸೆಪ್ಟ್ಗಳು ಈ ಚಿತ್ರದಲ್ಲಿವೆ.
ನಿರ್ದೇಶಕ ಸಾಯಿ ಲಕ್ಷ್ಮಣ್ ಈ ಹಿಂದೆ ಕೋರಿಯೋಗ್ರಾಫರ್ ಆಗಿದ್ರು. ಈಗ ಪ್ರಜೆಯೇ ಪ್ರಭು ಚಿತ್ರದ ಮೂಲಕ ಡೈರೆಕ್ಟರ್ ಆಗಿದ್ದಾರೆ. ಒಂದ್ ಒಳ್ಳೆ ಕಾನ್ಸೆಪ್ಟ್ ಇಟ್ಟುಕೊಂಡೇ ಈ ಸಿನಿಮಾ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್,ಗಿರಿಜಾ ಲೋಕೇಶ್,ಯಶ್ ಶೆಟ್ಟಿ ಸೇರಿದಂತೆ ಇನ್ನೂ ಅನೇಕರು ಅಭಿನಯಿಸಿದ್ದಾರೆ.
ಪ್ರಜೆಯೇ ಪ್ರಭು ಚಿತ್ರಕ್ಕೆ ಉತ್ತರ ಕರ್ನಾಟಕದ ಡೈಲಾಗ್ಸ್
ಎಂ.ಕೆ.ಇಂದ್ರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿರೋ ಸಂಭಾಷಣೆ ಉತ್ತರ ಕರ್ನಾಟಕ ಶೈಲಿಯಲ್ಲಿಯೇ ಇರುತ್ತದೆ.
ಇದನ್ನೂ ಓದಿ: Shivarajkumar: ಹುಬ್ಬಳ್ಳಿಗೆ ಬಂದ್ರೆ ಶಿವರಾಜ್ಕುಮಾರ್ ಸಿದ್ದಾರೂಢಮಠಕ್ಕೆ ಯಾಕೆ ಹೋಗ್ತಾರೆ?
ಈ ಹಿನ್ನೆಲೆಯಲ್ಲಿಯೇ ಉತ್ತರ ಕರ್ನಾಟಕದ ಪ್ರಮುಖ ಜಾಗಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಇನ್ನೂ ಹಲವು ಜಾಗದಲ್ಲಿ ಚಿತ್ರೀಕರಣ ಮಾಡು ಪ್ಲಾನ್ ಅನ್ನ ಸಿನಿಮಾ ತಂಡ ಹಾಕಿಕೊಂಡಿದೆ. ಛಾಯಾಗ್ರಹಣ ಮತ್ತು ಸಂಕಲನವನ್ನ ಋಷಿಕೇಶ್ ಮಾಡುತ್ತಿದ್ದಾರೆ.
ಜನವರಿ-14 ರ ಬಳಿಕ ಪ್ರಜೆಯೇ ಪ್ರಭು ಚಿತ್ರದ ಚಿತ್ರೀಕರಣ ಶುರು
ಪ್ರಜೆಯೇ ಪ್ರಭು ಚಿತ್ರದ ಚಿತ್ರೀಕರಣದ ಪ್ಲಾನಿಂಗ್ ಆಗಿದೆ. ಹಾಗಾಗಿಯೇ ಬರೋ ಜನವರಿ-14 ರ ಬಳಿಕವೇ ಸಿನಿಮಾ ಶೂಟಿಂಗ್ ಆರಂಭಗೊಳ್ಳುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ