ವಾರಾಂತ್ಯದಲ್ಲಿ ಟಿವಿ ಆನ್ ಮಾಡಿದರೆ ಸಾಕು ರಿಯಾಲಿಟಿ ಶೋಗಳ ಅಬ್ಬರವೇ ಜಾಸ್ತಿ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯ ಚಾನೆಲ್ಗಳಲ್ಲೂ ವಿವಿಧ ರಿಯಾಲಿಟಿ ಶೋ ನಡೆಯುತ್ತಿವೆ. ಡ್ಯಾನ್ಸ್, ಡ್ರಾಮ, ಹಾಡು, ಬಿಗ್ ಬಾಸ್ ಸೇರಿದಂತೆ ನಾನಾ ಚಾನೆಗಳು ತಮ್ಮ ಭಾಷೆಯ ಜನರನ್ನು ಸೆಳೆಯಲು ರಿಯಾಲಿಟಿ ಶೋ ನಡೆಸುತ್ತಿದೆ. ಅದಕ್ಕೂ ಮುಖ್ಯವಾಗಿ ಇಂತಹ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚಿಸಲು ಮತ್ತು ಟಿಆರ್ಪಿಯಲ್ಲಿ ಮುಂದಿರಲಿ ಖ್ಯಾತ ನಟ-ನಟಿಯರನ್ನು ನಿರೂಪಕರನ್ನಾಗಿ, ತೀರ್ಪುಗಾರರನ್ನಾಗಿ ಕರೆಸಿಕೊಳ್ಳುತ್ತಾರೆ. ಅವರ ಮೂಲಕ ಟಿಆರ್ಪಿ ಗಳಿಸಲು ಏನಾದರೊಂದು ಗಿಮಿಕ್ ಮಾಡಿಸುತ್ತಾರೆ. ಅದರಂತೆ ಚಾನೆಲ್ವೊಂದರಲ್ಲಿ ನಡೆದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಖ್ಯಾತ ನಟಿಯೊಬ್ಬರು ಸ್ಪರ್ಧಿಗೆ ಕಿಸ್ ಮಾಡಿರುವುದಲ್ಲದೆ ಆತನ ಕೆನ್ನೆ ಕಚ್ಚಿದ್ದಾರೆ. ಸದ್ಯ ಈ ರಿಯಾಲಿಟಿ ಶೋ ವಿಡಿಯೋ ಎಲ್ಲೆಂದರಲ್ಲಿ ಹರಿದಾಡುತ್ತಿದೆ.
ಚಾನೆಲ್ಗಳ ಟಿಆರ್ಪಿ ಹೆಚ್ಚಿಸಲು ಧಾರಾವಾಹಿಗಳು ಒಂದು ಕಾರಣವಾದರೆ ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳು ಅತಿ ಹೆಚ್ಚು ಟಿಆರ್ಪಿಯನ್ನು ತಂದುಕೊಡುತ್ತವೆ. ಹಾಗಾಗಿ ನಾನಾ ಚಾನೆಲ್ಗಳು ಟಿಆರ್ಪಿಗಾಗಿ ಏನಾದರೊಂದು ಗಿಮಿಕ್ ಮಾಡುತ್ತದೆ. ಸ್ಪರ್ಧಿಗಳನ್ನು, ನಿರೂಪಕರನ್ನು, ತೀರ್ಪುಗಾರರನ್ನು ಅಳಿಸುವ, ಸಗಿಸುವ ಮೂಲಕ ಟಿಆರ್ಪಿ ಬಾಚಲು ಪ್ರಯತ್ನಿಸುತ್ತದೆ. ಮನರಂಜನಾ ಕಾರ್ಯಕ್ರಮಕ್ಕೆ ಟಿಆರ್ಪಿ ಮಾನದಂಡವಾಗಿರುದಿಂದ ಈ ರೀತಿಯ ದಾರಿಯತ್ತ ಸುಳಿಯುವುದು ಅನಿವಾರ್ಯವಾಗಿದೆ.
ಅದರಂತೆ ಕನ್ನಡದ ನಟಿಯೊಬ್ಬರು ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿ ಪರ್ಫಾಮೆನ್ಸ್ಗೆ ಬೆರಗಾಗಿ ಆತನನ್ನು ತನ್ನ ಬಳಿ ಕರೆಸಿಕೊಂಡು ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ. ಸಾಲದ್ದಕ್ಕೆ ಕೆನ್ನೆಯನ್ನು ಕಚ್ಚಿ ಎಳೆದಿದ್ದಾರೆ. ಸದ್ಯ ಈ ದೃಶ್ಯ ಕ್ಯಾಮೆರಾದಲ್ಲಿ ಚೆನ್ನಾಗಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ. ಹಾಗಿದ್ದರೆ ಆ ನಟಿ ಯಾರು?
ನಟಿ ಶಮ್ನಾ ಕಾಸಿಂ ಅವರು ಖಾಸಗಿ ಚಾನೆಲ್ವೊಂದರಲ್ಲಿ ಪ್ರಸಾರವಾಗುವ ‘‘ಧೀ ಚಾಂಪಿಯನ್ಸ್’’ ಹೆಸರಿನ ರಿಯಾಲಿಟಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದಾರೆ. ಈ ಕಾರ್ಯಕ್ರದಲ್ಲಿ ಸ್ಪರ್ಧಿಯೊಬ್ಬನ ನೃತ್ಯ ಕಂಡು ಆತನಿಗೆ ಕಿಸ್ ಮಾಡಿ ಪ್ರಸಂಸಿರುವುದಲ್ಲದೆ ಕೆನ್ನೆಯನ್ನು ಕಚ್ಚಿ ಎಳೆದಿದ್ದಾರೆ. ಈ ದೃಶ್ಯ ನೆರೆದಿದ್ದವರನ್ನು ಬೆರಗಾಗಿಸುವಂತೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಶಮ್ನಾ ಅವರ ಈ ದೃಶ್ಯ ನಿಮಿಷಾರ್ಧದಲ್ಲೇ ವೈರಲ್ ಆಗಿದೆ. ಅನೇಕರು ದೃಶ್ಯ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ತೀರ್ಪುಗಾರರಾದವರು ಸ್ಪರ್ಧಿಗೆ ಚಪ್ಪಾಳೆ ನೀಡಿ ಹೊಗಳಿಕೆಯ ಮಾತನಾಡಬೇಕೆ ಹೊರತು. ಎಲ್ಲರೆದುರು ಕಿಸ್ ಮಾಡಿ ಕೆನ್ನೆ ಕಚ್ಚುವುದಲ್ಲ ಎಂದಿದ್ದಾರೆ.
ಶಮ್ನಾ ಕಾಸಿಂ
2009ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘‘ಜೋಶ್’’ ಸಿನಿಮಾದ ಬಗ್ಗೆ ಗೊತ್ತಿರುತ್ತೆ. ಈ ಸಿನಿಮಾಧಲ್ಲಿ ನಾಯಕ ರಾಕೇಶ್ ಅಡಿಗಗೆ ನಾಯಕಿಯಾಗಿ ಶಮ್ನಾ ಕಾಣಿಸಿಕೊಂಡಿದ್ದರು. ಶಿವಮಣಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿತ್ತು. ಅಂದಹಾಗೆಯೇ ಶಮ್ನಾ ಕಾಸಿಂಗೆ ಮತ್ತೊಂದು ಹೆಸರಿದ್ದು ಬಹುತೇಕರಿಗೆ ‘‘ಪೂರ್ಣ’’ವೆಂದರೆ ಬೇಗನೆ ನಟಿಯ ಬಗ್ಗೆ ತಿಳಿಯುತ್ತೆ.
ಇದನ್ನು ಓದಿ: Elsa Hosk: ನನಗೆ ಬೆತ್ತಲಾಗಿ ಓಡಾಡುವ ಅಭ್ಯಾಸ! ಮಗಳ ಜೊತೆಗೆ ನ್ಯೂಡ್ ಫೋಟೋ ಹಂಚಿಕೊಂಡ ಮಾಡೆಲ್!
ಮೂಲತಃ ಪೂರ್ಣ ಅವರ ಕೇರಳದ ಕನ್ನೂರಿನವರು. ಇವರ ಪೂರ್ತಿ ಹೆಸರು ಶಮ್ನಾ ಕುರಿಕ್ಕಲ್ ಕುಡಿಯಿಲ್. 32 ವರ್ಷದ ಪ್ರಾಯದ ನಟಿಯ ಕಿಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2004ರಲ್ಲಿ ಮಲಯಾಳಂನಲ್ಲಿ ‘‘ಮಂಜು ಪಲೋರು ಪೆನ್ಕುಟ್ಟಿ’’ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದರು. ಆ ಬಳಿಕ ತೆಲುಗು, ಕನ್ನಡ, ತಮಿಳು ಸಿನಿಮಾದಲ್ಲಿ ನಟಿಸುವ ಆಫರ್ ಬಂತು. 35ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿಇದ್ದಾರೆ. ಸದ್ಯ ತೆಲುಗಿನಲ್ಲಿ ‘‘ಅಖಂಡ’’ ಮತ್ತು ‘‘ದೃಶ್ಯಂ 2’’ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾ ತೆರೆಗೆ ಬರಬೇಕಿದೆ. ಅದರ ಜೊತೆಗೆ ರಿಯಾಲಟಿ ಕಾರ್ಯಕ್ರಮದಲ್ಲಿ ತೀರ್ಪಗಾರರಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ