• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Matte Maduve Teaser: ಪವಿತ್ರಾ ಲೋಕೇಶ್-ನರೇಶ್ ಮದುವೆ ರೀಲಾ? ರಿಯಲ್ಲಾ? ಮತ್ತೆ ಅನುಮಾನ ಮೂಡಿಸಿದೆ ಸಿನಿಮಾ ಟೀಸರ್

Matte Maduve Teaser: ಪವಿತ್ರಾ ಲೋಕೇಶ್-ನರೇಶ್ ಮದುವೆ ರೀಲಾ? ರಿಯಲ್ಲಾ? ಮತ್ತೆ ಅನುಮಾನ ಮೂಡಿಸಿದೆ ಸಿನಿಮಾ ಟೀಸರ್

ಮತ್ತೆ ಮದುವೆ ಟೀಸರ್‌ನಲ್ಲಿ ರಿಯಲ್ ಘಟನೆ ರಿವೀಲ್!

ಮತ್ತೆ ಮದುವೆ ಟೀಸರ್‌ನಲ್ಲಿ ರಿಯಲ್ ಘಟನೆ ರಿವೀಲ್!

ಅಸಲಿಗೆ ಪವಿತ್ರಾ ಲೋಕೇಶ್ ಮತ್ತು ನರೇಶ್ ನಿಜವಾಗಲೂ ಮದುವೆ ಆದ್ರೋ? ಇಲ್ಲಾ ಸಿನಿಮಾಗೋಸ್ಕರವೇ ಮದುವೆ ಆದ್ರೋ? ಈ ಒಂದು ಅನುಮಾನ ಈಗ ಮೂಡಿದೆ. ಟೀಸರ್ ನೋಡಿದ್ಮೇಲೆ ಈ ಅನುಮಾನ ಇನ್ನೂ ಜಾಸ್ತಿ ಆಗಿದೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಸ್ಯಾಂಡಲ್‌ವುಡ್‌ನ ಹೆಸರಾಂತ ನಟಿ ಪವಿತ್ರಾ (Matte Maduve Teaser) ಲೋಕೇಶ್ ಮತ್ತು ತೆಲುಗು ನಟ ನರೇಶ್ ಲವ್ ಸ್ಟೋರಿ ಜಗಜ್ಜಾಹೀರಾಗಿದೆ. ಮೈಸೂರಿನ ರೂಮ್‌ನಲ್ಲಿ ಇಬ್ಬರು ಇರೋವಾಗಲೇ, ನರೇಶ್ ಮೂರನೇ ಪತ್ನಿ ಬಂದು ರಾದ್ಧಾಂತ ಮಾಡಿದ್ದಾರೆ. ಮಾಧ್ಯಮದ ಮುಂದೆ ಬಂದು ತನ್ನ ಪತಿಯ ಎಲ್ಲ (Pavithra Lokesh-Naresh Movie) ಲೀಲೆಗಳನ್ನ ಹೇಳಿಕೊಂಡಿದ್ದರು. ಆದರೆ ಇದೇ ರಿಯಲ್ ಘಟನೆ ಇದೀಗ ಮತ್ತೆ ಮದುವೆ ಸಿನಿಮಾದಲ್ಲೂ ಇದೆ. ಚಿತ್ರದ ಮೊದಲ ಟೀಸರ್‌ನಲ್ಲಿ ಯಥಾವತ್ತು ಅದೇ (Matte Maduve Teaser Release) ದೃಶ್ಯವನ್ನ ರೀಕ್ರಿಯೇಟ್ ಮಾಡಲಾಗಿದೆ. ಎಲ್ಲೋ ಒಂದು ಕಡೆ ಇದು ಪವಿತ್ರಾ ಮತ್ತು ನರೇಶ್ ಲವ್ ಲೈಫ್‌ ಅನ್ನೆ ಸಿನಿಮಾ ಮಾಡಿ ಜನರ ಮುಂದೆ ಬೇರೆ ರೀತಿ ಕೊಡ್ತಿದ್ದಾರಾ (Matte Maduve Cinema) ಅನ್ನೋ ಅನುಮಾನವೂ ಮೂಡಿದೆ.


ಪವಿತ್ರಾ ಲೋಕೇಶ್ ಮತ್ತು ನರೇಶ್ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿದೆ. ನರೇಶ್ ಪತ್ನಿ ಹಾದಿ-ಬೀದಿಯಲ್ಲ ರಂಪಾಟ ಮಾಡಿರೋದು ತಿಳಿಸಿದೆ. ಕಾರಣ, ಪವಿತ್ರ ಲೋಕೇಶ್ ಮತ್ತು ನರೇಶ್ ಸಂಬಂಧವನ್ನ ವಿರೋಧಿಸಿ ನರೇಶ್ ಪತ್ನಿ ರೊಚ್ಚಿಗೆದ್ದು ಕೆಂಡಕಾರಿದ್ದರು.


Kannada Actress Pavithra Lokesh-Naresh Acted Matte Maduve Teaser Release
ಪವಿತ್ರಾ ಲೋಕೇಶ್-ನರೇಶ್ ಮತ್ತೆ ಮದುವೆ ಹಂಗಾಮ!


ಮತ್ತೆ ಮದುವೆ ಟೀಸರ್‌ನಲ್ಲಿ ರಿಯಲ್ ಘಟನೆ ರಿವೀಲ್


ಇದರ ಬೆನ್ನಲ್ಲಿಯೇ ಪವಿತ್ರಾ ಮತ್ತು ನರೇಶ್ ಮದುವೆ ಆಗಿದ್ದೇವೆ ಅಂತಲೇ ಮದುವೆ ವಿಡಿಯೋ ಕೂಡ ರಿಲೀಸ್ ಮಾಡಿದ್ದರು. ಆಗ ಜನ ಇದನ್ನ ನಂಬಿದ್ದರು. ಅದ್ಹೇಗೆ ಈ ವ್ಯಕ್ತಿ ಮದುವೆ ಆಗ್ತಾರೆ? ಪತ್ನಿಯ ಪರ್ಮಿಷನ್ ಇಲ್ವೇ ಇಲ್ಲ ಅನ್ನೋ ಅನುಮಾನವೂ ಹಲವರಿಗೆ ಕಾಡಿತ್ತು.
ಆದರೆ ಕೆಲವೇ ದಿನಗಳಲ್ಲಿಇದು ಮತ್ತೆ ಮದುವೆ ಎಂಬ ಹೆಸರಿನ ಸಿನಿಮಾದ ವಿಡಿಯೋ ಅಂತಲೇ ಅಧಿಕೃತವಾಗಿಯೇ ಹೇಳಲಾಗಿತ್ತು. ಆದರೆ ಇವತ್ತಿನ ಟೀಸರ್ ನೋಡಿದ್ರೆ, ಮತ್ತೆ ಬೇರೆ ರೀತಿಯ ಅನುಮಾನ ಶುರು ಆಗಿದೆ.


ಮತ್ತೆ ಮದುವೆ ಚಿತ್ರದಲ್ಲಿ ಪವಿತ್ರಾ-ನರೇಶ್ ರಿಯಲ್ ಘಟನೆ ಚಿತ್ರಣ


ಹೌದು, ನರೇಶ್ ಮತ್ತು ಪವಿತ್ರಾ ಅವರ ಈ ಸಿನಿಮಾದಲ್ಲಿ ರಿಯಲ್ ಘಟನೆಗಳೂ ಇವೆ. ಮೈಸೂರಿನ ಹೋಟೆಲ್ ರೂಮ್‌ನಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇದ್ದಾಗಲೇ, ನರೇಶ್ ಪತ್ನಿ ಬಂದು ಗದ್ದಲ ಮಾಡಿದ್ದರು. ಆ ಘಟನೆ ಯಥಾವತ್ತು ಈ ಚಿತ್ರದಲ್ಲಿದೆ.
ನರೇಶ್ ಪತ್ನಿ ಮಾಧ್ಯಮದ ಮುಂದೆ ಬಂದು, ಪತಿಯ ಎಲ್ಲ ಲೀಲೆಗಳನ್ನ ಬಿಚ್ಚಿಟ್ಟಿರೋ ಕಥೆನೂ ಇಲ್ಲಿ ಒಂದು ಕ್ಯಾರೆಕ್ಟರ್ ಮೂಲಕ ಹೇಳಲಾಗಿದೆ. ಅಲ್ಲಿಗೆ ಈ ಸಿನಿಮಾ ರೀಲಾ? ರಿಯಲ್ಲಾ ಅನ್ನೋ ಕನ್ಫ್ಯೂಜನ್ ಕೂಡ ಈಗ ಕ್ರಿಯೇಟ್ ಆಗಿದೆ.


ಪವಿತ್ರಾ ಲೋಕೇಶ್-ನರೇಶ್ ಮತ್ತೆ ಮದುವೆ ಹಂಗಾಮ!


ಅಸಲಿಗೆ ಪವಿತ್ರಾ ಲೋಕೇಶ್ ಮತ್ತು ನರೇಶ್ ನಿಜವಾಗಲೂ ಮದುವೆ ಆದ್ರೋ? ಇಲ್ಲಾ ಸಿನಿಮಾಗೋಸ್ಕರವೇ ಮದುವೆ ಆದ್ರೋ? ಈ ಒಂದು ಅನುಮಾನ ಈಗ ಮೂಡಿದೆ. ಟೀಸರ್ ನೋಡಿದ್ಮೇಲೆ ಈ ಅನುಮಾನ ಇನ್ನೂ ಜಾಸ್ತಿ ಆಗಿದೆ.


Kannada Actress Pavithra Lokesh-Naresh Acted Matte Maduve Teaser Release
ಮತ್ತೆ ಮದುವೆ ಚಿತ್ರದಲ್ಲಿ ಪವಿತ್ರಾ-ನರೇಶ್ ರಿಯಲ್ ಘಟನೆ ಚಿತ್ರಣ


ನರೇಶ್ ಮತ್ತು ಪವಿತ್ರಾ ಲೋಕೇಶ್ ಅಭಿನಯದ ಈ ಚಿತ್ರಕ್ಕೆ ಎಂ.ಎಸ್.ರಾಜು ಡೈರೆಕ್ಷನ್ ಮಾಡುತ್ತಿದ್ದಾರೆ. ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಟೀಸರ್ ಮೂಲಕ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಿನಿಮಾ ಬೇರೆ ರೀತಿಯ ಅನುಮಾನವನ್ನ ಈಗ ಹುಟ್ಟುಹಾಕಿದೆ.


ಇದನ್ನೂ ಓದಿ: Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ


ಇದರ ಬೆನ್ನಲ್ಲಿಯೇ ತಮ್ಮ ಚಿತ್ರದ ಪ್ರಚಾರಕ್ಕಾಗಿಯೇ ಈ ರೀತಿ ಟೀಸರ್ ಮತ್ತು ಸೀನ್‌ಗಳನ್ನ ಇಟ್ಟಿದ್ದಾರೆಯೇ ಅನ್ನೋ ಅನುಮಾನವೂ ಈಗ ಮೂಡುತ್ತಿದೆ.


ಇದರ ಜೊತೆಗೆ ಸಿನಿಮಾ ಪ್ರೇಮಿಗಳಲ್ಲಿ ಇದೊಂದು ರಿಯಲ್ ಲವ್ ಸ್ಟೋರಿಯ ಸಿನಿಮಾ ಅನ್ನೋದನ್ನೂ ಹೇಳಿದಂತೆ ಕಾಣುತ್ತಿದೆ.

First published: