ಮತ್ತೆ ಮದುವೆ ಸಿನಿಮಾ ರಿಲೀಸ್ ಮುಂದೇ (Matte Maduve Movie) ಹೋಯ್ತಾ? ಅಂದ್ಹಾಗೆ ಮೇ 5ಕ್ಕೆ ರಿಲೀಸ್ ಇತ್ತು. ಆದರೆ ಅದು ಮುಂದೆ ಹೋದಂತಿದೆ. ಇರಲಿ, ಆದರೆ ಈಗ ಅಸಲಿ ಕಹಾನಿಯೊಂದು ಚಿತ್ರದ ಟ್ರೈಲರ್‌ನಲ್ಲಿ ರಿವೀಲ್ (Movie Latest Trailer Release) ಆಗಿದೆ. ಇಲ್ಲಿವರೆಗೂ ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆ ವಿಷಯವೇ ಹರಿದಾಡಿತ್ತು. ಆದರೆ ಈಗ ಈ ಜೋಡಿಯ ರಿಯಲ್ ಲವ್ ಶುರು ಆಗಿದ್ದು ಹೇಗೆ (Pavithra Lokesh-Naresh Movie) ಅನ್ನುವ ವಿಷಯ ರಿವೀಲ್ ಆಗಿದೆ. ರಿಲೀಸ್ ಆದ ಟ್ರೈಲರ್‌ನಲ್ಲಿ ಎಲ್ಲದರ (Matte Maduve Updates) ಝಲಕ್ ಇದೆ. ಇದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.
ಮತ್ತೆ ಮದುವೆ ರಿಯಲ್ಲಾ-ರೀಲಾ ಟ್ರೈಲರ್ ಏನ್ ಹೇಳ್ತಿದೆ?
ಪವಿತ್ರಾ ಲೋಕೇಶ್ ಮತ್ತು ನರೇಶ್ ನಿಜಕ್ಕೂ ಲವ್ ಅಲ್ಲಿದ್ದಾರಾ? ಸಿನಿಮಾಗೋಸ್ಕರವೇ ಲವ್ಲಿ ಕಥೆ ಕಟ್ಟಿ ಪ್ರಚಾರ ಮಾಡುತ್ತಿದ್ದಾರಾ? ಈ ಒಂದು ಕನ್ಫ್ಯೂಜನ್ ಇದ್ದೇ ಇದೆ. ಸಿನಿಮಾದ ಮೊದಲ ಟೀಸರ್ ಆ ಒಂದು ಕನ್ಫ್ಯೂಜನ್ ಕ್ರಿಯೇಟ್ ಮಾಡಿದೆ.
ರಿಯಾಲಿಟಿ-ಫಿಕ್ಷನ್ ಎರಡರ ಮಿಶ್ರಣವೇ ಈ ಸಿನಿಮಾ ?
ಇತ್ತಿಚಿಗೆ ಬಿಟ್ಟಿದ್ದ ಈ ಟೀಸರ್ ರಿಯಾಲಿಟಿ ಮತ್ತು ಫಿಕ್ಷನ್ ಎರಡನ್ನೂ ಈ ಚಿತ್ರದಲ್ಲಿ ಮಿಕ್ಸ್ ಮಾಡಿದಂತೆ ಕಂಡು ಬಂತು.
ಮತ್ತೆ ಮದುವೆ ಮತ್ತೆ ಕನ್ಫ್ಯೂಜನ್ ಕ್ರಿಯೇಟ್ ಮಾಡಿದ್ದೇಕೆ ?
ಚಿತ್ರದ ಈಗಿನ ಟ್ರೈಲರ್ ಇನ್ನಷ್ಟು ಕನ್ಫ್ಯೂಜನ್ ಕ್ರಿಯೇಟ್ ಮಾಡಿದೆ. ಸಿನಿಮಾದಲ್ಲಿರೋ ಲವ್ ಸ್ಟೋರಿ ರಿಯಲ್ ಅನ್ನೋಮಟ್ಟಿಗೆ ಇಲ್ಲಿ ಅದರ ಝಲಕ್ ತೋರಲಾಗಿದೆ.
ಪವಿತ್ರಾ ಲೋಕೇಶ್-ನರೇಶ್ ಲವ್ ಶುರು ಆಗಿದ್ದು ಹೇಗೆ ?
ಪವಿತ್ರಾ ಲೋಕೇಶ್ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಸಿನಿಮಾದಲ್ಲೂ ನಟಿಸಿದ್ದಾರೆ. ಕಾಲಿವುಡ್ ಸೇರಿದಂತೆ ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ.
ಪವಿತ್ರಾ- ನರೇಶ್ ಲವ್ ಸ್ಟೋರಿಗೆ ಸಖತ್ ಕಮೆಂಟ್ಸ್
ಆದರೆ ತೆಲುಗು ಚಿತ್ರರಂಗದ ನಾಯಕ ನಟ ನರೇಶ್ ಅವರೊಟ್ಟಿಗೆ ಲವ್ ಅಲ್ಲಿ ಬಿದ್ದರು. ಯಾಕೆ ಬಿದ್ದರು ? ರಿಯಲಿ ಲವ್ ಆಗಿರೋದು ಹೇಗೆ ? ವಯಸ್ಸಾದ ನರೇಶ್ ಲವ್ ಕಂಡು ಇಂಡಸ್ಟ್ರೀಯವರು ಏನಂದ್ರು ?
ಮತ್ತೆ ಮತ್ತೆ ಪ್ರಶ್ನೆಗಳನ್ನ ಹುಟ್ಟುಹಾಕ್ತಿರೋ ಟ್ರೈಲರ್
ಈ ಎಲ್ಲ ಪ್ರಶ್ನೆಗಳನ್ನ ಇಟ್ಟುಕೊಂಡು ಮತ್ತೆ ಮದುವೆ ಸಿನಿಮಾ ಮಾಡಿದಂತೆ ಕಾಣುತ್ತಿದ್ದು, ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್ ಆಗಿದೆ. ಆದರೆ ಇದು ರೀಲಾ ? ರಿಯಲ್ಲಾ ಅನ್ನೋ ಕನ್ಫ್ಯೂಜನ್ ಮತ್ತಷ್ಟು ಕ್ರಿಯೇಟ್ ಆಗಿದೆ.
ಪವಿತ್ರಾ-ನರೇಶ್ ರಿಯಲ್ ಲವ್ ಸ್ಟೋರಿ ರಿವೀಲ್
ಮತ್ತೆ ಮದುವೆ ಸಿನಿಮಾದಲ್ಲಿ ಪವಿತ್ರಾ ಮತ್ತು ನರೇಶ್ ಲವ್ ಸ್ಟೋರಿಯ ಅಸಲಿ ಮ್ಯಾಟರ್ ಕೂಡ ಇದೆ. ಪವಿತ್ರಾ ಪತಿಯ ವಿಚಾರವೂ ಇಲ್ಲಿ ಬಂದು ಹೋಗುತ್ತದೆ. ನರೇಶ್ ಅವರ ಮೂವರು ಹೆಂಡ್ತಿಯರ ವಿಚಾರವೂ ಇಲ್ಲಿ ಪ್ರಸ್ತಾಪ ಆಗಿದೆ.
ಕುತೂಹಲ ಹೆಚ್ಚಿಸಿದ ಮತ್ತೆ ಮದುವೆ ಟ್ರೈಲರ್
ಇವೆಲ್ಲದರೆ ಒಟ್ಟು ಚಿತ್ರಣದ ಝಲಕ್ ಕೊಟ್ಟಿರೋ ಮತ್ತೆ ಮದುವೆ ಟ್ರೈಲರ್ ಇನ್ನಷ್ಟು ಮತ್ತಷ್ಟು ಅನ್ನುವ ಹಾಗೆ ಕುತೂಹಲ ಕೆರಳಿಸಿದೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅನ್ನುವ ಪ್ರಶ್ನೆ ಕೂಡ ಹುಟ್ಟಿದೆ.
ಇದೇ ತಿಂಗಳ 26 ರಂದು ಎರಡು ಭಾಷೆಯಲ್ಲಿ ರಿಲೀಸ್
ಸದ್ಯದ ಮಾಹಿತಿ ಪ್ರಕಾರ ಮೇ ತಿಂಗಳ 26 ರಂದು ಮತ್ತೆ ಮದುವೆ ಸಿನಿಮಾ ರಿಲೀಸ್ ಆಗುತ್ತಿದೆ. ಎಂ.ಎಸ್ ರಾಜು ಕಥೆ ಬರೆದು ನಿರ್ದೇಶನ ಮಾಡಿರೋ ಈ ಚಿತ್ರಕ್ಕೆ ಸುರೇಶ್ ಬೊಬ್ಬಲಿ ಸಂಗೀತ ಕೊಟ್ಟಿದ್ದಾರೆ.
ಇದನ್ನೂ ಓದಿ: Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಸದ್ಯ ಎಲ್ಲೆಡೆ
ಒಂದು ಕುತೂಹಲವನ್ನೂ ಈ ಚಿತ್ರ ಹುಟ್ಟುಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ