Nishvika Naidu: ನಾನು ಸಿನಿಮಾ ಗರ್ಲ್, ಸಿನಿಮಾಗೇ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ ಎಂದ ನಿಶ್ವಿಕಾ ನಾಯ್ಡು

ನಿಶ್ವಿಕಾ ನಾಯ್ದು ಸಿನಿಮಾ ಪ್ರೀತಿ ನಿಜಕ್ಕೂ ಸ್ಪೆಷಲ್ ಆಗಿಯೇ ಇದೆ. ಸಿನಿಮಾ ಹೊರತಾಗಿ ಬೇರೆ ಏನು ಯೋಚಿಸೋದಿಲ್ಲ. ಸಿನಿಮಾ, ಸಿನಿಮಾ ಮತ್ತು ಸಿನಿಮಾ. ಸಿನಿಮಾವನ್ನೆ ಧ್ಯಾನಿಸೋ ನಿಶ್ವಿಕಾ ನಾಯ್ಡು, ಸಿನಿಮಾ ಬಿಟ್ಟು ಬೇರೆ ಏನೂ ಯೋಚನೆ ಮಾಡೋದಿಲ್ಲ.

ಗುರು ಶಿಷ್ಯರು ನಾಯಕಿ ನಿಶ್ವಿಕಾ ನಾಯ್ಡು

ಗುರು ಶಿಷ್ಯರು ನಾಯಕಿ ನಿಶ್ವಿಕಾ ನಾಯ್ಡು

  • Share this:
ಕನ್ನಡದ ನಟಿಯರಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಕೂಡ ತಮ್ಮದೇ ಟ್ರ್ಯಾಕ್ ಅಲ್ಲಿ ಬರ್ತಿದ್ದಾರೆ. ಜಂಟಲ್ ಮ್ಯಾನ್ ಸಿನಿಮಾದಲ್ಲಿ ನಿಶ್ವಿಕಾ ಅಭಿನಯಿಸಿರೋದು ಗೊತ್ತೆ ಇದೆ. ಗುರು ಶಿಷ್ಯರು ಸಿನಿಮಾದ "ಆಣೆ ಮಾಡಿ ಹೇಳುತ್ತೀನಿ" ಹಾಡಿನ (Guru Shishyaru Song Viral) ಮೂಲಕ ಈಗ ಎಲ್ಲರ ಮನಸ್ಸನ್ನೂ ಗೆದ್ದು ಬಿಟ್ಟಿದ್ದಾರೆ. ಸಿನಿಮಾದ ಈ ಒಂದೇ ಒಂದು ಹಾಡನ್ನ ಎಲ್ಲೆಡೆ ಎಲ್ಲರೂ ಗುನುಗುತ್ತಿದ್ದಾರೆ. ರೀಲ್ಸ್ (Song Reels Viral) ಅಲ್ಲೂ ಇದೇ ಹಾಡಿನ ಕ್ರೇಜ್ ಇದೆ. ಯಾರಾದರೂ ಅಷ್ಟೇ ಅವರು ಒಮ್ಮೆ ಈ ಹಾಡನ್ನ ಮನಸ್ಸಿನಲ್ಲೂ ಹಾಡಿಕೊಂಡಿರುತ್ತಾರೆ. ಅಲ್ಲಿ ಇಲ್ಲಿ ಕೇಳಿದಾಗಲೂ ಗುನುಗಿಕೊಂಡಿರುತ್ತಾರೆ. ಅಜನೀಶ್ ಲೋಕನಾಥ್ ಅವರ ಸಂಗೀತದ ಈ ಗೀತೆ ಈಗಾಗಲೇ ಅಷ್ಟೊಂದು ಮೋಡಿ ಮಾಡಿ ಬಿಟ್ಟಿದೆ.

ಈ ಹಾಡಿನ ಗುರು ಶಿಷ್ಯರು ಸಿನಿಮಾದಲ್ಲಿ ನಾಯಕಿ ನಟಿ ನಿಶ್ವಿಕಾ ನಾಯ್ಡು ಸೂಜಿ ಹೆಸರಿನ ಪಾತ್ರವನ್ನೆ ಮಾಡುತ್ತಿದ್ದಾರೆ. ಈ ಸೂಜಿ ಪಾತ್ರಕ್ಕಾಗಿ ನಿಶ್ವಿಕಾ ನಾಯ್ಡು ಸಾಕಷ್ಟು ಬದಲಾಗಿದ್ದಾರೆ. ತಮ್ಮ ಈ ಪಾತ್ರದ ತಯಾರಿ ಮತ್ತು ವೈರಲ್ ಆಗಿರೋ ತಮ್ಮ ಹಾಡಿನ ಕುರಿತು ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಆ ಡಿಟೈಲ್ಸ್ ಇಲ್ಲಿದೆ.

ನಾನು ಸಿನಿಮಾ ಗರ್ಲ್, ಸಿನಿಮಾಗೇ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ
ಸಿನಿಮಾಗೇನೆ ನನ್ನ ಜೀವನ ಮೀಸಲು ಅನ್ನೋದು ನಿಶ್ವಿಕಾ ಒನ್ ಲೈನ್ ಓಪಿನಿಯನ್.
ನಿಶ್ವಿಕಾ ನಾಯ್ದು ಸಿನಿಮಾ ಪ್ರೀತಿ ನಿಜಕ್ಕೂ ಸ್ಪೆಷಲ್ ಆಗಿಯೇ ಇದೆ. ಸಿನಿಮಾ ಹೊರತಾಗಿ ಬೇರೆ ಏನು ಯೋಚಿಸೋದಿಲ್ಲ. ಸಿನಿಮಾ, ಸಿನಿಮಾ ಮತ್ತು ಸಿನಿಮಾ. ಸಿನಿಮಾವನ್ನೆ ಧ್ಯಾನಿಸೋ ನಿಶ್ವಿಕಾ ನಾಯ್ಡು, ಸಿನಿಮಾ ಬಿಟ್ಟು ಬೇರೆ ಏನೂ ಯೋಚನೆ ಮಾಡೋದಿಲ್ಲ.

ಇದನ್ನೂ ಓದಿ: Actor Naveen Son Harshit: ಕನ್ನಡದ ಭೋಜರಾಜನ ಮೊಮ್ಮಗನ ಸಿನಿಮಾ ಎಂಟ್ರಿ; ಹಾಸ್ಯದ ಹೊನಲು ಹರಿಸಿದ ನಟ ನವೀನ್ ಪುತ್ರ ಹರ್ಷಿತ್

ಸಿನಿಮಾನೇ ಮಾಡಬೇಕು ಅಂತಲೇ ಸಿನಿಮಾ ಫೀಲ್ಡ್​ಗೆ ಬಂದು ಎಲ್ಲರ ಹೃದಯ ಗೆದ್ದು ಬಿಟ್ಟಿದ್ದಾರೆ. ನಿಶ್ವಿಕಾ ನಾಯ್ಡು ಅಭಿನಯಿಸಿದ ಜಂಟಲ್ ಮೆನ್ ಸಿನಿಮಾ ಒಂದು ರೀತಿ ಎಲ್ಲರ ಗಮನಕ್ಕೂ ಬಂದಿತ್ತು. ಅದೇ ಚಿತ್ರದ ನಿರ್ದೇಶಕ ಜಡೇಶ್ ಹಂಪಿ ಈ ಚೆಲುವೆಯನ್ನ ತಮ್ಮ ಈ ಗುರು ಶಿಷ್ಯರು ಚಿತ್ರಕ್ಕೂ ಹಾಕಿಕೊಂಡರು.

ಆಣೆ ಮಾಡಿ ಹೇಳುತ್ತೀನಿ ಹಾಡು ಈಗ ಫುಲ್ ವೈರಲ್
ಆಗಲೇ ನೋಡಿ, ಈ ನಟಿಯ ಲಕ್ ತಿರುಗಿತು ಅಂತಲೇ ಹೇಳಬಹುದು. ಚಿತ್ರ ಇನ್ನು ರಿಲೀಸ್ ಕೂಡ ಆಗಿಲ್ಲ. ಆಗಲೇ ನಿಶ್ವಿಕಾ ನಾಯ್ಡು ಮನೆ ಮಾತಾಗಿದ್ದಾರೆ. ರೀಲ್ಸ್ ಮೂಲಕ ಎಲ್ಲರ ಫೋನ್​ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆಣೆ ಮಾಡಿ ಹೇಳುತ್ತೀನಿ ಅಂತಲೂ ಎಲ್ಲರ ಎದೆಯಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.

Kannada Actress Nishvika Naidu Acted Kannada Film Guru ShiShyaru film Releasing On 23rd this month
ನಿಶ್ವಿಕಾ ನಾಯ್ಡು ಸಖತ್ ಪೋಸ್


ನಿಶ್ವಿಕಾ ನಾಯ್ಡು ತಮ್ಮ ಗುರು ಶಿಷ್ಯರು ಚಿತ್ರದ ಮೂಲಕ ಈಗ ಎಲ್ಲ ಪ್ರೇಕ್ಷಕರಿಗೂ ರೀಚ್ ಆಗಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ಒಬ್ಬ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡು ಈಗಲೇ ಮೋಡಿ ಮಾಡಿದ್ದಾರೆ. ಕೇವಲ ಹಾಡು ಮತ್ತು ಟೀಸರ್ ನಿಂದಲೇ ಭಾರೀ ಕ್ರೇಜ್ ಹುಟ್ಟುಹಾಕಿದ್ದಾರೆ.

ಗುರು ಶಿಷ್ಯರು ಚಿತ್ರದಲ್ಲಿ ಸೂಜಿ ಹೆಸರಿನ ಪಾತ್ರದಲ್ಲಿ ನಿಶ್ವಿಕಾ ಅಭಿನಯ
ಅಂದ ಹಾಗೆ ಈ ಪಾತ್ರಕ್ಕೆ ನಿಶ್ವಿಕಾ ಒಂದಷ್ಟು ತಯಾರಿ ಮಾಡಿಕೊಂಡಿದ್ದಾರೆ. ನಿರ್ದೇಶಕ ಜಡೇಶ್ ಹಂಪಿ ಅವರ ಕಲ್ಪನೆಯಂತೆ, ಹಳ್ಳಿಹುಡುಗಿ ಆಗಿ ಬದಲಾಗಲು ಸೂಕ್ತ ವರ್ಕ್​ಶಾಪ್ ಮೂಲಕ ಅಭ್ಯಾಸ ಕೂಡ ಮಾಡಿಕೊಂಡಿದ್ದಾರೆ. ಹಾವ-ಭಾವ ಮತ್ತು ಹಳ್ಳಿ ಹುಡುಗಿ ಹೇಗೆ ನಡೆದಾಡುತ್ತಾಳೆ ಅನ್ನೋದನ್ನೂ ಇಲ್ಲಿ ತಿಳಿದುಕೊಂಡೇ ಅಭಿನಯಿಸಿದ್ದಾರೆ.

ಇದನ್ನೂ ಓದಿ: Sunny Leone: ಮಾಲ್ಡೀವ್ಸ್​ನಲ್ಲಿ ಸನ್ನಿ ಹವಾ! ಸ್ಟೈಲಿಷ್ ಫೋಟೋಸ್ ವೈರಲ್

ನಿಶ್ವಿಕಾ ನಾಯ್ಡುಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ.ಬಾಲ್ಯದಿಂದಲೂ ನೃತ್ಯದ ಬಗ್ಗೆ ಒಂದು ಆಸಕ್ತಿ ಇದ್ದೇ ಇದೆ. ಹಾಗಾಗಿಯೇ ಬಾಲ್ಯದಲ್ಲಿಯೇ ಭರತ ನಾಟ್ಯ ಅಭ್ಯಾಸ ಕೂಡ ಮಾಡಿದ್ದಾರೆ. ಇದರಿಂದ ಅದು ಸಿನಿಮಾ ನೃತ್ಯಕ್ಕೂ ಹೆಲ್ಪ್ ಆಗಿದೆ.

Nishvika Naidu Acted Kannada Film Guru ShiShyru film Releasing On 23rd this month
ಗುರು ಶಿಷ್ಯರು ನಾಯಕಿ ನಿಶ್ವಿಕಾ ನಾಯ್ಡು ಹಾಟ್ ಲುಕ್


ನನಗೆ ಹಾಡಲು ಬರೋದಿಲ್ಲ-ಡ್ಯಾನ್ಸ್ ಮಾಡಲು ಹೇಳಿ ಮಾಡಿಬಿಡ್ತಿನಿ
ಡ್ಯಾನ್ಸ್ ತುಂಬಾನೇ ಇಷ್ಟಪಡೋ ನಿಶ್ವಿಕಾ ನಾಯ್ಡು, ನಿಮ್ಮ ವೈರಲ್ ಹಾಡನ್ನ ಒಮ್ಮೆ ಹಾಡು ಅಂದ್ರೆ ಸಾಕು, ನೋ ವೇ ಚಾನ್ಸೆ ಇಲ್ಲ ಬಿಡಿ. ಡಾನ್ಸ್ ಮಾಡು ಅಂದ್ರೆ ಮಾಡ್ತಿನಿ, ಹಾಡಲು ಹೇಳಲೇಬೇಡಿ ಅಂತಲೇ ಹೇಳಿ ಬಿಡ್ತಾರೆ.

ನೃತ್ಯದ ಮೂಲಕ ಅತಿ ಹೆಚ್ಚು ಜನರನ್ನ ಸೆಳೆಯಬಲ್ಲ ನಿಶ್ವಿಕಾ ಸದ್ಯ ಗುರು ಶಿಷ್ಯರು ಚಿತ್ರದ ಪ್ರಮೋಷನ್​ ನಲ್ಲಿಯೇ ಬ್ಯುಸಿಯಿದ್ದಾರೆ. ಎಲ್ಲೆಡೆ ಓಡಾಡಿಕೊಂಡು ಇಡೀ ಟೀಮ್ ಚಿತ್ರವನ್ನ ಪ್ರಚಾರ ಮಾಡುತ್ತಿದೆ. ಅದರಂತೆ ನಿಶ್ವಿಕಾ ನಾಯ್ಡು ಕೂಡ ಟೀಮ್ ಗೆ ಸಾಥ್ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ.

ಗುರು ಶಿಷ್ಯರು ಇದೇ ತಿಂಗಳು 23 ರಂದು ರಿಲೀಸ್ ಆಗುತ್ತಿದೆ. ಇದನ್ನ ಎಲ್ಲರೂ ಥಿಯೇಟರ್​ಗೆ ಬಂದು ನೋಡಿ ಅಂತಲೇ ನಿಶ್ವಿಕಾ ಕೇಳಿಕೊಂಡಿದ್ದಾರೆ.
First published: