Diganth-Nidhi Subbaiah: ಹಳೆ ಜೋಡಿ ಹೊಸ ಮೋಡಿ! ಪಂಚರಂಗಿ ಬಳಿಕ ಮತ್ತೆ ಒಂದಾಗ್ತಿದ್ದಾರೆ ರೊಮ್ಯಾಂಟಿಕ್ ಕಪಲ್

ನಿಧಿ ಈ ಚಿತ್ರದಲ್ಲಿ ದಿಗಂತ್ ಪಾತ್ರಕ್ಕೆ ಪೇರ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಪಂಚರಂಗಿ ಚಿತ್ರ ಆದ್ಮೇಲೆ ದಿಗಂತ್ ಮತ್ತು ನಿಧಿ ಈಗಲೇ ಒಟ್ಟಿಗೆ ಕಾಣಿಕೊಳ್ಳುತ್ತಿದ್ದಾರೆ.

ದೂದ್ ಪೇಡಾ ದಿಗಂತ್-ನಿಧಿ ಮತ್ತೊಮ್ಮೆ ಜೋಡಿ

ದೂದ್ ಪೇಡಾ ದಿಗಂತ್-ನಿಧಿ ಮತ್ತೊಮ್ಮೆ ಜೋಡಿ

  • Share this:
ಸ್ಯಾಂಡಲ್​ವುಡ್​ನಲ್ಲಿ ಅನೇಕ ಹಿಟ್ (Hit Pair) ಪೇರ್​ಗಳಿವೆ. ಆ ಪೇರ್​ಗಳ ನಟನೆಯನ್ನ ಜನ ಈಗಲೂ ಇಷ್ಟಪಡುತ್ತಾರೆ. ಅಂತಹ ಹಿಟ್ ಪೇರ್​ಗಳಲ್ಲಿ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಜೋಡಿ (Nidhi Subbaiah) ಕೂಡ ಒಂದಿದೆ. ಇವರ ಜೋಡಿಯ ಮೋಡಿ ಈಗಲೂ ಇದೆ. ಭಟ್ಟರ ಸಿನಿಮಾಗಳಲ್ಲಿಯೇ ಅಭಿನಯಿಸಿದ್ದ ಈ ನಾಯಕ-ನಾಯಕಿ ಒಟ್ಟಾಗಿ ನಟಿಸಿ ಬಹಳ ದಿನಗಳೇ ಕಳೆದು ಹೋಗಿದೆ. ಅದನ್ನ ಲೆಕ್ಕಕ್ಕೆ ತೆಗೆದುಕೊಂಡ್ರೆ, ದಿಗಂತ್ (Actor Diganth) ಮತ್ತು ನಿಧಿ ಸುಬ್ಬಯ್ಯ ಅಭಿನಯಿಸಿ ಹೆಚ್ಚು-ಕಡಿಮೆ 12 ವರ್ಷಗಳೇ ಉರುಳಿವೆ. ಆದರೆ ಇದೇ ಜೋಡಿ ಮತ್ತೊಮ್ಮೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಈ ಜೋಡಿಗೆ ಹುಡುಕಿ ಬಂದಿದೆ. ಆ ಚಿತ್ರದ ಹೆಸರು ಎಡಗೈ ಅಪಘಾತಕ್ಕೆ ಕಾರಣ ಅನ್ನೋದು ವಿಶೇಷ.
ಈ ಚಿತ್ರದಲ್ಲಿ ದಿಗಂತ್​ಗೆ ಹೀರೋಯಿನ್​ಗಳ ದೊಡ್ಡ ದಂಡೇ ಇರೋ ಹಂಗೆ ಕಾಣುತ್ತದೆ. ಚಿತ್ರದ ಮುಹೂರ್ತ ಆದಾಗಲೇ ಧನು ಹರ್ಷ ಅನ್ನೋ ನವ ನಾಯಕಿಯ ದಿಗಂತ್​ಗೆ ಜೋಡಿ ಅನ್ನೋದನ್ನ ಸಿನಿಮಾ ತಂಡ ಹೇಳಿಕೊಂಡಿತ್ತು.

ದೂದ್ ಪೇಡಾ ದಿಗಂತ್ ಸಿನಿಮಾಕ್ಕೆ ಆ ನಟಿ ಬಂದೇ ಬಿಟ್ಟರು

ಆದರೆ ಈ ನಿಧಿ ಸುಬ್ಬಯ್ಯ ಸರ್ಪೈಜ್ ಎಂಟ್ರಿ ಬಗ್ಗೆ ಸಿನಿಮಾ ತಂಡ ಈ ಮೊದಲು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ನಾಯಕಿ ಪರಿಚಯದ ವೀಡಿಯೋದಲ್ಲಿ ಈ ಕುರಿತು ಸಣ್ಣ ಝಲಕ್ ಒಂದನ್ನ ಬಿಟ್ಟುಕೊಟ್ಟಿತ್ತು.

Actress Nidhi Subbaiah And Actor Diganth Acted together After 12 Year For New Film
ಪಂಚರಂಗಿ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ಹಾಗೂ ದಿಗಂತ್


ಫೈನಲಿ ನಿಧಿ ಸುಬ್ಬಯ್ಯ ಕಳೆದ ಮೂನ್ನಾಲ್ಕು ದಿನಗಳಿಂದಲೂ ಬೆಂಗಳೂರಿನ ಯಲಹಂಕದ ಒಂದು ಅಪಾರ್ಟ್​ಮೆಂಟ್​ ನಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಚಿತ್ರದಲ್ಲಿ ಒಂದು ಪ್ರಮುಖ ರೋಲ್​ ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

ದಿಗಂತ್ ಚಿತ್ರಕ್ಕೆ ಧನು ಹರ್ಷ ಈ ಚಿತ್ರದ ನಾಯಕಿ ಅಲ್ವೇ?

ಎಡಗೈ ಅಪಘಾತಕ್ಕೆ ಕಾರಣ ಅನ್ನೋ ವಿಶೇಷ ಟೈಟಲ್ ನ ಈ ಚಿತ್ರದಲ್ಲಿ ನಾಯಕಿ ಧನು ಹರ್ಷ ಕೂಡ ಎಡಗೈ ಬಳಕೆ ಮಾಡೋ ಹುಡುಗಿನೇ ಆಗಿದ್ದಾರೆ. ನಿಧಿ ಪಾತ್ರದ ವಿಚಾರದಲ್ಲೂ ಅದು ಮುಂದುವರೆಯುತ್ತದೆಯೇ ಅನ್ನೋ ಪ್ರಶ್ನೆ ಕೂಡ ಇದೆ.

ಇದನ್ನೂ ಓದಿ: Maasthi Dialogues: ಇವ್ರು ಡೈಲಾಗ್​ ಬರೆದ್ರೆ ಸಿನಿಮಾ ಹಿಟ್ ಆಗೋದು ಪಕ್ಕಾ! ಮಾಸ್ತಿ ಜೊತೆ ನೀವೂ ಮಾತಾಡಿ!

ಅದಕ್ಕೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಡೈರೆಕ್ಟರ್ ಗುರುದತ್ ಗಾಣಿಗ ಒಂದಷ್ಟು ವಿಷಯಗಳನ್ನ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ. ಹೌದು, ನಿಧಿ ಸುಬ್ಬಯ್ಯ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನೆ ಮಾಡುತ್ತಿದ್ದಾರೆ. ಆದರೆ ಈ ಚಿತ್ರದ ಹೀರೋಯಿನ್ ಧನು ಹರ್ಷಾನೇ ಆಗಿದ್ದಾರೆ.

ಪಂಚರಂಗಿ ಬಳಿಕ ದಿಗಂತ್-ನಿಧಿ ಸುಬ್ಬಯ್ಯ ಈಗ ಜೋಡಿ-ಮೋಡಿ

ಆದರೂ, ನಿಧಿ ಈ ಚಿತ್ರದಲ್ಲಿ ದಿಗಂತ್ ಪಾತ್ರಕ್ಕೆ ಪೇರ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಪಂಚರಂಗಿ ಚಿತ್ರ ಆದ್ಮೇಲೆ ದಿಗಂತ್ ಮತ್ತು ನಿಧಿ ಈಗಲೇ ಒಟ್ಟಿಗೆ ಕಾಣಿಕೊಳ್ಳುತ್ತಿದ್ದಾರೆ.

12 ವರ್ಷದ ಬಳಿಕ ಈ ಕಲಾವಿದರು ನಮ್ಮ ಚಿತ್ರದ ಮೂಲಕವೇ ಜೋಡಿ ಆಗಿದ್ದಾರೆ ಅನ್ನೋದೇ ವಿಶೇಷ ಅಂತಲೇ ಗುರುದತ್ ಗಾಣಿಗ ಹೇಳಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ಇನ್ನೂ ಒಂದು ಸರ್ಪೈಜ್ ಕ್ಯಾರೆಕ್ಟರ್ ಇದೆ.

Actress Nidhi Subbaiah And Actor Diganth Acted together After 12 Year For New Film
ಪಂಚರಂಗಿ ನಟಿ ನಿಧಿ ಸುಬ್ಬಯ್ಯ


ನಿಧಿ ಸುಬ್ಬಯ್ಯ ಪಾತ್ರದ ಬಗ್ಗೆ ಗುರುದತ್ ಗಾಣಿಗ ಏನ್ ಹೇಳ್ತಾರೆ
ಅದನ್ನ ಈಗಲೇ ರಿವೀಲ್ ಮಾಡೋದಿಲ್ಲ. ಆದರೆ ಒಂದಂತು ಸತ್ಯ, ಈ ಪಾತ್ರವೂ ಕೂಡ ವಿಶೇಷವಾಗಿರಲಿದೆ, ಇಲ್ಲೂ ಕೂಡ ಒಬ್ಬ ಹೆಸರಾಂತ ನಟಿನೇ ಅಭಿನಯಿಸಲಿದ್ದಾರೆ ಅಂತಲೇ ಗುರುದತ್ ಗಾಣಿಗ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:Vijay Deverakonda: ಖುಷಿ ಸಿನಿಮಾದಲ್ಲಿ ಸಮಂತಾ ಸೇರಿ ಇಬ್ಬರ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

ಉಳಿದಂತೆ ಈ ಚಿತ್ರದ ಮುಹೂರ್ತ ಬೆಂಗಳೂರಿನ ದೇವಸ್ಥಾನದಲ್ಲಿ ನೆರವೇರಿದೆ. ಬಳಿಕವೇ ಚಿತ್ರೀಕರಣದಲ್ಲೂ ಸಿನಿಮಾ ತಂಡ ಮಗ್ನವಾಗಿದ್ದು, ನಿಧಿ ಸುಬ್ಬಯ್ಯ ಅವರ ಪಾತ್ರದ ಪ್ರಮುಖ ಸೀನ್​​ಗಳನ್ನ ಲಕ್ಷೂರಿಯಸ್ ಅಪಾರ್ಟ್​ಮೆಂಟ್​ ನಲ್ಲಿ ಚಿತ್ರೀಕರಣ ಮಾಡುತ್ತಿದೆ.

ಸಮರ್ಥ್ ಕಡಕೋಳ ನಿರ್ದೇಶನದ ಈ ಚಿತ್ರದ ತನ್ನ ವಿಶೇಷ ಕಂಟೆಂಟ್​ ಮೂಲಕವೇ ಈಗಲೇ ಕುತೂಹಲ ಹುಟ್ಟಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಪೂರ್ಣಗೊಳ್ಳುವ ಹೊತ್ತಿಗೆ ಇನ್ನು ಏನೆಲ್ಲ Surprise ಗಳನ್ನ ಕೊಡಲು ಚಿತ್ರ ತಂಡ ಪ್ಲಾನ್ ಮಾಡಿದಿಯೋ ನೋಡಬೇಕು.
First published: