• Home
  • »
  • News
  • »
  • entertainment
  • »
  • Milana Nagaraj: ನನಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ, ಮಿಲನಾ ನಾಗರಾಜ್ ಹೀಗೆ ಹೇಳಿದ್ಯಾಕೆ?

Milana Nagaraj: ನನಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ, ಮಿಲನಾ ನಾಗರಾಜ್ ಹೀಗೆ ಹೇಳಿದ್ಯಾಕೆ?

ಮಿಲನಾ ನಾಗರಾಜ್​ಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ

ಮಿಲನಾ ನಾಗರಾಜ್​ಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ

ಫೆಬ್ರವರಿ ತಿಂಗಳು ನನಗೆ ಲಕ್ಕಿಯಾಗಿದೆ. ಇದೆ ತಿಂಗಳಲ್ಲಿಯೇ ನನ್ನ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದು ಖುಷಿ ತಂದಿದೆ ಅಂತಲೂ ಮಿಲನಾ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಲವ್​ ಮಾಕ್ಟೆಲ್ (Love Mocktail) ಸಿನಿಮಾ ಸೂಪರ್ ಹಿಟ್ ಸಿನಿಮಾ. ಇದು ತುಂಬಾ ವಿಶೇಷವಾಗಿದೆ. ಈ ಚಿತ್ರದಲ್ಲಿ ಕಾಣಿಸಿಕೊಂಡ ನಾಯಕ-ನಾಯಕಿಗೂ ಈ ಚಿತ್ರ ತುಂಬಾ (Special) ಸ್ಪೆಷಲ್ ಆಗಿದೆ. ಈ ಸಿನಿಮಾ ಹಿಟ್ ಆದ್ಮೇಲೆ ಚಿತ್ರದ ನಾಯಕ-ನಾಯಕಿ (Real Couple) ರಿಯಲ್ ಲೈಫ್ ಅಲ್ಲಿ ಮದ್ವೆ ಕೂಡ ಆದರು. ಇವರು ಮದುವೆ ಆದ ತಿಂಗಳು ಫೆಬ್ರವರಿನೇ ಆಗಿತ್ತು. ಸಹಜವಾಗಿಯೇ ಈ ಜೋಡಿಗೆ ಫೆಬ್ರವರಿ ತಿಂಗಳು (Favourite) ಫೇವರಿಟ್ ತಿಂಗಳೇ ಆಗಿದೆ. ಆದರೆ ಈ ತಿಂಗಳಲ್ಲಿ ಇನ್ನೂ ಒಂದು ಘಟನೆ ನಡೆದಿದೆ. ಹಾಗೇನೆ ಮತ್ತೊಂದು ಜರಗುವ ಟೈಮ್ ಕೂಡ ಈಗಲೇ ಅನೌನ್ಸ್ ಆಗಿದೆ. ಹಾಗಂತ ನೀವೂ ಬೇರೆ ರೀತಿ ಅರ್ಥ ಮಾಡಿಕೊಳ್ಳಬೇಡಿ. ಈ ಬಗೆಗಿನ ಡಿಟೈಲ್ಸ್ ಇಲ್ಲಿದೆ.


ರೀಲ್ ಲೈಫ್ ಹಿಟ್-ರಿಯಲ್ ಲೈಫ್ ಕೂಡ ಹಿಟ್
ಕನ್ನಡದಲ್ಲಿ ರಿಯಲ್ ಲೈಫ್ ಪೇರ್ ಸಖತ್ ಹಿಟ್ ಆಗಿರೋದು ಕಡಿಮೆ. ಆ ಲೆಕ್ಕದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಆ ಲೆಕ್ಕದಲ್ಲಿ ಫಸ್ಟ್ ಫೇರ್ ಅಂತ ಹೇಳಬಹುದು.


ಇದಾದ್ಮೇಲೆ ಕನ್ನಡದಲ್ಲಿ ಮತ್ತೊಂದು ಪೆರ್ ತೆರೆ ಮೇಲೆ ಬಂತು. ಆಗಿನ್ನೂ ಈ ಜೋಡಿ ಬಗ್ಗೆ ಎಲ್ಲರಿಗೂ ತಿಳಿದಿರಲಿಲ್ಲ. ಕೇವಲ ಗೊತ್ತಿರೋರಿಗೆ ಮಾತ್ರ ಇವರು ಲವರ್ಸ್ ಅನ್ನೋದು ತಿಳಿದಿತ್ತು.


ಲವ್ ಜೊತೆಗೆ ಲೈಫ್ ಮಾಕ್ಟೆಲ್ ಆಗಿ ಹೋಯಿತು
ಲವ್ ಮಾಕ್ಟೆಲ್ ಜೋಡಿ ಬಗ್ಗೇನೆ ನಾವು ಇಲ್ಲಿವರೆಗೂ ಹೇಳಿರೋದು. ಕನ್ನಡದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ರೀಲ್ ಮೇಲೂ ಲವರ್ಸ್ ರಿಯಲ್ ಲೈಫ್ ಅಲ್ಲೂ ಲವರ್ಸ್. ಲವ್ ಮಾಕ್ಟೆಲ್ ಸಿನಿಮಾ ಬಂದ್ಮೇಲೆ ಮದುವೆ ಆದರು, ಅತ್ತ ಸಿನಿಮಾ ಹಿಟ್ ಆಯಿತು. ಇತ್ತ ಲೈಫ್ ಕೂಡ ಜಿಂಗಲಾಲಾ.


Kannada Actress Milana Nagaraj Reveal her Secret about February Month
ರೀಲ್ ಲೈಫ್ ಹಿಟ್-ರಿಯಲ್ ಲೈಫ್ ಕೂಡ ಹಿಟ್


ಹೌದು, ಈ ಜೋಡಿಯ ಲವ್ ಲೈಫ್ ಮತ್ತು ಸಿನಿಮಾ ಲೈಫ್ ಎರಡೂ ಸೂಪರ್ ಆಗಿಯೇ ಇದೆ. ಕನ್ನಡದ ಹಿಟ್ ಪೇರ್​ಗಳ ಪುಟ್ಟ ಪಟ್ಟಿಯಲ್ಲಿ ಈ ಜೋಡಿ ಕೂಡ ಟಾಪ್ ಅಲ್ಲಿಯೇ ನಿಲ್ಲುತ್ತದೆ. ಅದೇ ರೀತಿ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಮದುವೆ ಬಳಿಕವೂ ತಮ್ಮ ತಮ್ಮ ಸಿನಿಮಾ ಪ್ರೋಜೆಕ್ಟ್​​ಗಳನ್ನ ಮಾಡ್ತಾನೇ ಇದ್ದಾರೆ.


ಇದನ್ನೂ ಓದಿ:  Kannada Film Hejjaru: ಜೊತೆ ಜೊತೆಯಲಿ ಸೀರಿಯಲ್ ಟೈಟಲ್ ಟ್ರ್ಯಾಕ್ ರೈಟರ್ ಈಗ ಸಿನಿಮಾ ಡೈರೆಕ್ಟರ್ !


ಅದರಂತೆ ಡಾರ್ಲಿಂಗ್ ಕೃಷ್ಣ ಈಗ ಡೈರೆಕ್ಟರ್ ಶಶಾಂಕ್ ಜೊತೆಗೆ ಕೌಶಲ್ಯ ಸುಪ್ರಜಾ ಸಿನಿಮಾ ಮಾಡುತ್ತಿದ್ದಾರೆ. ಮಿಲನಾ ನಾಗರಾಜ್ ಈಗಾಗಲೇ "F0R REGN" ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.


ಮಿಲನಾ ನಾಗರಾಜ್​ಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ
ಮಿಲನಾ ನಾಗಾರಾಜ್ ಅವರಿಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ ಆಗಿದೆ. ಈ ತಿಂಗಳಲ್ಲಿಯೇ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದ್ವೆ ಆದರು. ಇದೇ ತಿಂಗಳಲ್ಲಿಯೇ ಲವ್ ಮಾಕ್ಟೆಲ್-2 ರಿಲೀಸ್ ಆಯಿತು. ಹಿಟ್ ಆಯಿತು.


ಈಗ ಮಿಲನಾ ನಾಗರಾಜ್ ಅಭಿನಯದ "F0R REGN" ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲಿಯೇ ರಿಲೀಸ್ ಆಗುತ್ತಿದೆ. ಮುಂದಿನ ವರ್ಷ ಫೆಬ್ರವರಿ-10 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ.


Kannada Actress Milana Nagaraj Reveal her Secret about February Month
ನನಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ-ಹೀಗೆ ಮಿಲನಾ ನಾಗರಾಜ್ ಹೇಳಿದ್ಯಾಕೆ?


ಇದೇ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಮಿಲನಾ ನಾಗರಾಜ್ ತಮ್ಮ ಫೇವರಿಟ್ ಲಕ್ಕಿ ಫೆಬ್ರವರಿ ತಿಂಗಳ ಬಗ್ಗೆ ಹೇಳಿಕೊಂಡಿದ್ದಾರೆ. ಫೆಬ್ರವರಿ ತಿಂಗಳು ನನಗೆ ಲಕ್ಕಿಯಾಗಿದೆ. ಇದೆ ತಿಂಗಳಲ್ಲಿಯೇ ನನ್ನ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದು ಖುಷಿ ತಂದಿದೆ ಅಂತಲೂ ಮಿಲನಾ ಹೇಳಿಕೊಂಡಿದ್ದಾರೆ.


ಮಿಲನಾ ನಾಗಾರಾಜ್ ಅವರಿಗೆ ದಿಯಾ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬರ್ ಜೋಡಿಯಾಗಿದ್ದಾರೆ. ನವೀನ್ ದ್ವಾರಕನಾಥ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಬಾಬು ಹಿರಣ್ಣಯ್ಯ, ಸುಧಾ ಬೆಳವಾಡಿ, ತಬಲಾ ನಾಣಿ, ಸಹಿ-ಕಹಿ ಚಂದ್ರು, ರಮೇಶ್ ಭಟ್ ಅಭಿನಯಿಸಿದ್ದಾರೆ.


ಇದನ್ನೂ ಓದಿ: Rishab Shetty-Pragathi Shetty: ರಿಷಬ್ ಶೆಟ್ಟಿ ಫ್ಯಾಮಿಲಿ ಫೋಟೋಶೂಟ್! ಪತ್ನಿ, ಮಕ್ಕಳೊಂದಿಗೆ ಕಾಂತಾರ ಹೀರೋ


ಹರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನವೀನ್ ರಾವ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

First published: