ಕನ್ನಡದ ಲವ್ ಮಾಕ್ಟೇಲ್ (Milana Nagaraj New Movie) ಅದ್ಭುತ ಸಿನಿಮಾನೇ ಆಗಿತ್ತು. ಇತ್ತೀಚಿಗೆ ಡೈರೆಕ್ಟರ್ ನಾಗಶೇಖರ್ ಈ ಚಿತ್ರವನ್ನ ತೆಲುಗು ಭಾಷೆಗೂ ರಿಮೇಕ್ ಮಾಡಿದ್ದರು. ಕನ್ನಡದ ಇದೇ ಚಿತ್ರದ ಪಾರ್ಟ್-2 ಕೂಡ ಬಂದಿತ್ತು. ಅದು ಕೂಡ (Milana-Krishna New Movie) ಜನರ ಮನದಲ್ಲಿದೆ. ಇದೇ ಚಿತ್ರದ ನಾಯಕ ಮತ್ತು ನಾಯಕಿ ಈಗೊಂದು ಸಿನಿಮಾ ಮಾಡ್ತಿದ್ದಾರೆ. ಇದರಲ್ಲೂ (Love Birds Movie) ಲವ್ ಇದೆ. ಚಿತ್ರದ ಟೈಟಲ್ ಕೇಳಿದ್ರೇನೆ ಇದು ಕೂಡ ಲವ್ ಸ್ಟೋರಿ ಸಿನಿಮಾ ಅಂತ ಗೊತ್ತಾಗಿ ಬಿಡುತ್ತದೆ. ಇಂತಹ ಚಿತ್ರದ (Love Birds First Look Released) ಫಸ್ಟ್ ಲುಕ್ ಅನ್ನ ಗೋಲ್ಡನ್ ಸ್ಟಾರ್ ಗಣೇಶ್ ರಿಲೀಸ್ ಮಾಡಿದ್ದಾರೆ. ಇಡೀ ಟೀಮ್ಗೂ ವಿಶ್ ತಿಳಿಸಿದ್ದಾರೆ. ಇದರ ಒಂದಷ್ಟು ಮಾಹಿತಿ ಇಲ್ಲಿದೆ
ಲವ್ ಮಾಕ್ಟೇಲ್ ನಿಂದ ಲವ್ ಬರ್ಡ್ಸ್ ವರೆಗೂ ಜೋಡಿ ಪಯಣ!
ಲವ್ ಮಾಕ್ಟೇಲ್ ಜೋಡಿ ಮೋಡಿ ಮಾಡಿರೋದು ಗೊತ್ತೇ ಇದೆ. ರಿಯಲ್ ಲೈಫ್ನ ಈ ಜೋಡಿ ಲವ್ ಮಾಕ್ಟೇಲ್-2 ದಲ್ಲೂ ಮುಂದುವರೆದಿತ್ತು. ಇತ್ತೀಚಿಗೆ ಬಂದ ಮಿಸ್ಟರ್ ಬ್ಯಾಚುಲರ್ ಚಿತ್ರದಲ್ಲೂ ಇಬ್ಬರು ಅಭಿನಯಿಸಿದ್ದರು.
ಆದರೆ ಲವ್ ಮಾಕ್ಟೇಲ್ ರೀತಿ ಇನ್ನೂ ಒಂದು ಸಿನಿಮಾ ಬರಲೇ ಇಲ್ಲ. ಅದ್ಯಾಕೋ ಏನೋ, ಆ ಫೀಲ್ ಬರ್ತಿಲ್ಲ ಅನ್ನೋ ಭಾವನೆ ಕೂಡ ಪ್ರೇಕ್ಷಕರಲ್ಲಿ ಇದ್ದೇ ಇದೆ. ಆ ಒಂದು ನಿರೀಕ್ಷೆಯನ್ನ ಮತ್ತೊಮ್ಮೆ ತಲುಪಲು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಬರ್ತಿದ್ದಾರೆ ಅನಿಸುತ್ತಿದೆ.
ಲವ್ ಬರ್ಡ್ಸ್ ಚಿತ್ರದಲ್ಲಿ ಮಿಲನಾ-ಡಾರ್ಲಿಂಗ್ ಕಷ್ಣ
ಲವ್ ಬರ್ಡ್ಸ್ ಚಿತ್ರದಲ್ಲಿ ಲವ್ ಇದೆ. ಒಂದು ಸುಂದರ ಜೋಡಿನೂ ಇದೆ. ಇದನ್ನ ಸ್ವತಃ ಟೈಟಲ್ ಈಗಲೇ ಹೇಳುತ್ತಿದೆ. ಹಾಗೇ ಈಗಲೇ ಗಮನ ಸೆಳೆಯೋಕೆ ಆರಂಭಿಸಿರೋ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕೂಡ ಇದ್ದಾರೆ. ಅಲ್ಲಿಗೆ ರಿಯಲ್ ಜೋಡಿ ಈಗ ಮತ್ತೊಮ್ಮೆ ತೆರೆ ಮೇಲೆ ಬರೋಕೆ ರೆಡಿ ಆಗಿದೆ.
ಲವ್ ಬರ್ಡ್ಸ್ ಸಿನಿಮಾದ ಹಿಂದೆ ಒಬ್ಬ ಅದ್ಭುತ ನಿರ್ದೇಶಕರೆ ಇದ್ದಾರೆ. ಪಕ್ಕಾ ಪ್ಲಾನ್ ಮಾಡಿಕೊಂಡೇ ಎಲ್ಲವನ್ನೂ ಮಾಡೋದು ಈ ನಿರ್ದೇಶಕರ ರೂಢಿ. ಈ ಹಿಂದಿನ ಅವರ ರೋಮಿಯೋ ಚಿತ್ರವನ್ನೆ ತೆಗೆದುಕೊಂಡ್ರೆ ಸಾಕು, ಅಲ್ಲಿ ನಿಮಗೆ ಅವರ ಕೆಲಸ ವೈಖರಿ ಪರಿಚಯ ಆಗುತ್ತದೆ.
ಲವ್ ಬರ್ಡ್ಸ್ ಚಿತ್ರದ ಹಿಂದೆ ಡೈರೆಕ್ಟರ್ ಪಿ.ಸಿ.ಶೇಖರ್
ಡೈರೆಕ್ಟರ್ ಪಿ.ಸಿ.ಶೇಖರ್ ಕನ್ನಡದಲ್ಲಿ ಅದ್ಭುತ ಚಿತ್ರಗಳನ್ನೆ ಕೊಟ್ಟಿದ್ದಾರೆ. ಒಳ್ಳೆ ಡೈರೆಕ್ಟರ್ ಅನ್ನೋ ಖ್ಯಾತಿನೂ ಇದೆ. ಇದೇ ಪಿ.ಸಿ.ಶೇಖರ್ ಈಗ ಲವ್ ಬರ್ಡ್ಸ್ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ.
ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದಲ್ಲೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಪಿ.ಸಿ.ಶೇಖರ್ ಅವರ ಈ ಮೊದಲಿನ ಸಿನಿಮಾಗಳಿಗೂ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದರು. ಲವ್ ಬರ್ಡ್ಸ್ ಚಿತ್ರದ ವಿಷಯದಲ್ಲೂ ಅದು ಈಗ ಮುಂದುವರೆದಿದೆ.
ಲವ್ ಬರ್ಡ್ಸ್ ಚಿತ್ರದ ಮಿಲನಾ ಪಾತ್ರದ ಫಸ್ಟ್ ಲುಕ್ ರಿವೀಲ್
ಲವ್ ಬರ್ಡ್ಸ್ ಸಿನಿಮಾದಲ್ಲಿ ಮಿಲನಾ ನಾಗರಾಜ್ ಲುಕ್ ಬದಲಾಗಿದೆ. ಚಿತ್ರ ಕಲಾವಿದೆಯ ಪಾತ್ರವನ್ನೆ ಮಿಲನಾ ಇಲ್ಲಿ ಮಾಡ್ತಿದ್ದಾರೆ ಅನಿಸುತ್ತಿದೆ. ವಿಶೇಷ ಪಾತ್ರವೇ ಇದಾಗಿದೆ ಅಂತಲೂ ಈಗಲೇ ಹೇಳಬಹುದೇನೋ.
ಇದೇ ಚಿತ್ರದ ಮಿಲನಾ ಪಾತ್ರದ ಫಸ್ಟ್ ಲುಕ್ ಈಗ ರಿಲೀಸ್ ಆಗಿದೆ. ಸ್ವತಃ ಪಿ.ಸಿ.ಶೇಖರ್ ತಮ್ಮ ಚಿತ್ರದ ನಾಯಕಿ ಫಸ್ಟ್ ಲುಕ್ ಅನ್ನ ಶೇರ್ ಮಾಡಿಕೊಂಡಿದ್ದಾರೆ.
ಪೂಜಾ ಪಾತ್ರದಲ್ಲಿ ಮಿಲನಾ ನಾಗರಾಜ್ ಅಭಿನಯ
ಮಿಲನಾ ನಾಗರಾಜ್ ಈ ಚಿತ್ರದಲ್ಲಿ ಪೂಜಾ ಹೆಸರಿನ ಪಾತ್ರವನ್ನೆ ಮಾಡಿದ್ದಾರೆ. ಪಾತ್ರದ ಹೆಸರನ್ನ ರಿವೀಲ್ ಮಾಡೋ ಮೂಲಕವೇ ಡೈರೆಕ್ಟರ್ ಪಿ.ಸಿ.ಶೇಖರ್ ತಮ್ಮ ಚಿತ್ರD ನಾಯಕಿಯ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: Actor Girish Shivanna: ಕ್ರಿಯೇಟಿವ್ ಡೈರೆಕ್ಟರ್-ಡೈಲಾಗ್ ರೈಟರ್ ಇರೋವರೆಗೂ ಹಾಸ್ಯ ಕಲಾವಿದರು ಜೀವಂತ!
ಕಡ್ಡಿಪುಡಿ ಚಿತ್ರ ಖ್ಯಾತಿಯ ನಟ ಎಂ.ಚಂದ್ರು ಈ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಇಷ್ಟು ಮಾಹಿತಿ ಹೊರ ಬಿದ್ದಿದೆ. ಸಿನಿಮಾ ನಾಯಕನ ಫಸ್ಟ್ ಲುಕ್ ಹೇಗಿರುತ್ತದೆ ಅನ್ನೋ ಕುತೂಹಲವೂ ಈಗ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ