Shruti New Movie: ತತ್ಸಮ ತದ್ಭವದಲ್ಲಿ ನಟಿ ಶ್ರುತಿ ಪಾತ್ರ ಏನ್ ಗೊತ್ತಾ! ಸೂಪರ್ ಆಗಿದ್ಯಂತೆ

ತತ್ಸಮ ತದ್ಭವ ಚಿತ್ರದಲ್ಲಿ ಶೃತಿ ಸೂಪರ್ ರೋಲ್

ತತ್ಸಮ ತದ್ಭವ ಚಿತ್ರದಲ್ಲಿ ಶೃತಿ ಸೂಪರ್ ರೋಲ್

ಈ ಚಿತ್ರದ ಪಾತ್ರ ನನಗೆ ತುಂಬಾ ಇಷ್ಟ ಆಗಿದೆ. ಕೇಕ್ ಮೇಲಿನ ಚೆರಿ ತರವೇ ಇಷ್ಟ ಈ ನನ್ನ ಪಾತ್ರ ಅಂತಲೂ ಶೃತಿ ಅವರು ಹೇಳಿದ್ದಾರೆ. ಮೇಘನಾ ರಾಜ್ ಅವರಿಂದಲೇ ಈ ಒಂದು ಪಾತ್ರ ಮಾಡಲು ಸಾಧ್ಯವಾಗಿದೆ ಅಂತಲೂ ಶ್ರುತಿ ಅವರು ತಮ್ಮ ಈ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:
  • published by :

ಕನ್ನಡದ ನಾಯಕಿ ನಟಿ ಶ್ರುತಿ ಮತ್ತೊಂದು (Meghana Raj New Movie) ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಎರಡನೇ ಭಾಗದಲ್ಲಿ ಶ್ರುತಿ ಅವರ ಅಭಿನಯ ಅದ್ಭುತವಾಗಿಯೇ ಇತ್ತು. ಇಡೀ ಸಿನಿಮಾದಲ್ಲಿ ಶ್ರುತಿ (Shruti New Movie) ಅವರ ಗೆಟಪ್‌ ಕೂಡ ಸ್ಪೆಷಲ್ ಆಗಿಯೇ ಇತ್ತು. ಶ್ರುತಿ ಅವರು ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಪ್ರಾಯೋಗಿಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ತತ್ಸಮ ತದ್ಭವ ಚಿತ್ರದಲ್ಲೂ ಶ್ರುತಿ (Meghana Movie Latest Updates) ಅವರು ಒಂದು ಸ್ಪೆಷಲ್ ಪಾತ್ರವನ್ನ ಮಾಡಿದ್ದಾರೆ. ಇಡೀ ಚಿತ್ರಕ್ಕೆ ಈ ಪಾತ್ರ ತುಂಬಾ ಮುಖ್ಯವಾಗಿಯೇ ಇದೆ. ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ (Shruti New Film Updates) ಪನ್ನಗಾ ಭರಣ ಕೆಲವು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.


ತತ್ಸಮ ತದ್ಭವ ಮೇಘನಾ ಚಿತ್ರ ಜೀವನದ ಹೊಸ ಅಧ್ಯಾಯ!


ತತ್ಸಮ ತದ್ಭತ ತುಂಬಾ ಸ್ಪೆಷಲ್ ಆಗಿರೋ ಸಿನಿಮಾ ಆಗಿದೆ. ಈ ಚಿತ್ರದ ಮೂಲಕ ಮೇಘನಾ ರಾಜ್ ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದಾರೆ. ಚಿರು ಹೋದ್ಮೇಲೆ ಮೇಘನಾ ಅಪ್‌ಸೆಟ್ ಆಗಿದ್ದರು. ಚಿರು ನೆನಪಲ್ಲಿ ಇರೋವಾಗ್ಲೇ ರಾಯನ್ ಬಂದದ್ದು ಖುಷಿ ತಂದಿತ್ತು. ಇಡೀ ಜೀವನ ರಾಯನ್ಗೋಸ್ಕರವೇ ಮೀಸಲಿಡಬೇಕು ಅಂತಲೇ ಮೇಘನಾ ರಾಜ್ ಡಿಸೈಡ್ ಮಾಡಿದ್ದರು.


Kannada Actress Meghana Raj New Movie Tatsama Tadbhava Latest Updates
ತತ್ಸಮ ತದ್ಭವ ಚಿತ್ರದ ಕಥೆ ಕೇಳಿ ಖುಷ್ ಆಗಿದ್ದ ಮೇಘನಾ ರಾಜ್


ಆದರೆ ಚಿರು ಗೆಳೆಯರು ಮೇಘನಾ ಅವರನ್ನ ಹಾಗೆ ಬಿಡಲು ಮನಸು ಮಾಡಲಿಲ್ಲ. ಮೇಘನಾ ಅವರನ್ನ ಸಿನಿರಂಗಕ್ಕೆ ವಾಪಸ್ಸು ಕರೆದುಕೊಂಡು ಬಂದರು. ಹಾಗೆ ಬಂದ ಸಿನಿಮಾನೇ ಈ ತತ್ಸಮ ತದ್ಭವ ಆಗಿದೆ. ಈ ಚಿತ್ರದ ಮೂಲಕ ಮೇಘನಾ ಕಮ್‌ ಬ್ಯಾಕ್ ಮಾಡಿದ್ದಾರೆ.




ತತ್ಸಮ ತದ್ಭವ ಚಿತ್ರದಲ್ಲಿ ಮೇಘನಾ ಪಾತ್ರ ಸ್ಪೆಷಲ್!


ಮೇಘನಾ ಈ ಚಿತ್ರದಲ್ಲಿ ಎಲ್ಲ ಮಹಿಳೆಯರ ಪ್ರತಿನಿಧಿಯಂತೆ ಕಾಣಿಸುತ್ತಿದ್ದಾರೆ. ಬದುಕಿನಲ್ಲಿ ಆಗೋ ಏರಿಳಿತಗಳನ್ನ ಈ ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ತೋರಿಸಿದ್ದಾರೆ. ಈ ಚಿತ್ರದ ಚಿತ್ರೀಕರಣದ ಮೊದಲ ದಿನ, ಸ್ವಲ್ಪ ಕಷ್ಟವೂ ಆಗಿದೆ.


ಒಂದು ಕಡಗೆ ಅಭಿನಯ ಇನ್ನೊಂದು ಕಡೆಗೆ ರಾಯನ್ ಚಿಂತೆ ಇತ್ತು. ಎರಡನ್ನೂ ಮ್ಯಾನೇಜ್ ಮಾಡಿಯೇ ಮೇಘನಾ ರಾಜ್ ಸಿನಿಮಾದ ಕೆಲಸ ಮುಗಿಸಿದ್ದಾರೆ. ಮೇಘನಾ ಅವರ ಈ ಎಲ್ಲ ಅನುಭವದ ಮಾತಿನ ಒಂದು ವಿಡಿಯೋವನ್ನ ಚಿತ್ರದ ನಿರ್ಮಾಪಕ ಪನ್ನಗಾ ಭರಣ, ನ್ಯೂಸ್-18 ಕನ್ನಡ ಡಿಜಿಟಲ್‌ಗೂ ಹಂಚಿಕೊಂಡಿದ್ದಾರೆ.


ತತ್ಸಮ ತದ್ಭವ ಚಿತ್ರದ ಕಥೆ ಕೇಳಿ ಖುಷ್ ಆಗಿದ್ದ ಮೇಘನಾ ರಾಜ್


ಡೈರೆಕ್ಟರ್ ವಿಶಾಲ್ ಆತ್ರೇಯ ಒಂದ್ ಒಳ್ಳೆ ಕಥೆ ಮಾಡಿದ್ದರು. ಅದನ್ನ ಕೇಳಿಯೇ ಖುಷಿ ಆಗಿದ್ದ ಪನ್ನಗಾ ಭರಣ, ಮೇಘನಾ ಅವರಿಗೆ ಹೇಳಿದ್ದರು. ಒಂದು ಕಥೆ ಇದೆ ಅದನ್ನ ಕೇಳು ಅಂತ ತಿಳಿಸಿದ್ದರು. ಅದನ್ನ ಕೇಳುತ್ತಿದ್ದ ಮೇಘನಾ ಆ ಒಂದು ಕ್ಯಾರೆಕ್ಟರ್‌ ಅಲ್ಲಿ ತಮ್ಮನ್ನೆ ಕಲ್ಪಿಸಿಕೊಂಡಿದ್ದರು.


ಇದಾದ್ಮೇಲೆ ಪನ್ನಗಾ ಕಥೆ ಹೇಗಿದೆ ಅಂತ ಕೇಳಿದಾಗ ಚೆನ್ನಾಗಿದೆ ಅಂತ ಮೇಘನಾ ಹೇಳಿದ್ದರು. ಆ ಮೇಲೆ ಈ ಸಿನಿಮಾ ನೀವೇ ಮಾಡಿ ಅಂತಲೇ ಮೇಘನಾ ಅವರಿಗೆ ಹೇಳಿದ್ದರು. ಹಾಗೆ ಶುರು ಆದ ತತ್ಸಮ ತದ್ಭವ ಈಗ ಬಹುತೇಕ ಪೂರ್ಣಗೊಂಡಿದೆ.


ತತ್ಸಮ ತದ್ಭವ ಚಿತ್ರದಲ್ಲಿ ಶ್ರುತಿ ಸೂಪರ್ ರೋಲ್


ಇದೇ ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಕೂಡ ಇದ್ದು, ಆ ವಿಶೇಷತೆ ರೂಪದಲ್ಲಿ ನಟಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರವನ್ನ ಮಾಡಿರೋ ಶ್ರುತಿ ಅವರಿಗೂ ಈ ಪಾತ್ರ ತುಂಬಾ ಹಿಡಿಸಿದೆ. ಅದೇ ಖುಷಿಯಲ್ಲಿಯೇ ಶ್ರುತಿ ಅವರು ಈ ಚಿತ್ರದಲ್ಲಿ ಸುಮನ್ ಹೆಸರಿನ ಪಾತ್ರ ಮಾಡಿದ್ದಾರೆ. ಈಗಾಗಲೇ ಶ್ರುತಿ ಅವರ ಪಾತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ.


Kannada Actress Meghana Raj New Movie Tatsama Tadbhava Latest Updates
ತತ್ಸಮ ತದ್ಭವ ಚಿತ್ರದಲ್ಲಿ ಮೇಘನಾ ಪಾತ್ರ ಸ್ಪೆಷಲ್!


ಈ ಚಿತ್ರದ ಪಾತ್ರ ನನಗೆ ತುಂಬಾ ಇಷ್ಟ ಆಗಿದೆ. ಕೇಕ್ ಮೇಲಿನ ಚೆರಿ ತರವೇ ಇಷ್ಟ ಈ ನನ್ನ ಪಾತ್ರ ಅಂತ ಶ್ರುತಿ ಅವರು ಹೇಳಿದ್ದಾರೆ. ಮೇಘನಾ ರಾಜ್ ಅವರಿಂದಲೇ ನಾನು ಈ ಒಂದು ಪಾತ್ರ ಮಾಡಲು ಸಾಧ್ಯವಾಗಿದೆ ಅಂತಲೂ ಶ್ರುತಿ ಅವರು ತಮ್ಮ ಈ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Marathi Sari Movie: ಮರಾಠಿ ಸರಿ ಸಿನಿಮಾ ಕನ್ನಡದ ಯಾವ ಚಿತ್ರದ ರಿಮೇಕ್ ಗೊತ್ತೇ? ಇಲ್ಲಿದೆ ನೋಡಿ!


ಇನ್ನುಳಿದಂತೆ ಚಿತ್ರದ ರಿಲೀಸ್ ಡೇಟ್ ಇನ್ನೂ ಪ್ಲಾನ್ ಆಗಿಲ್ಲ. ಇನ್ನೇನು ಅದು ಕೂಡ ಅಧಿಕೃತವಾಗಿಯೇ ಹೊರ ಬೀಳೋ ಸಾಧ್ಯತೆ ಇದೆ. ಸದ್ಯಕ್ಕೆ ಶ್ರುತಿ ಅವರ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆದಿದೆ.

First published: