ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರಕ್ಕೆ (Meghana Goanker New Movie) ಅನೇಕ ನಟರು ಹೆಸರುವಾಸಿ ಆಗಿದ್ದಾರೆ. ಟೈಗರ್ ಪ್ರಭಾಕರ್ ಪೊಲೀಸ್ ಪಾತ್ರಕ್ಕೆ ಸೈ ಎನಿಸಿಕೊಂಡಿದ್ದರು. ದೇವರಾಜ್ ಅವರಂತೂ ಪೊಲೀಸ್ (Police Role Making Video Release) ಆಫೀಸರ್ ಆಗಿಯೇ ಹೆಚ್ಚಿಗೆ ಕಂಡ್ರು. ಕಿಚ್ಚ ಸುದೀಪ್ ವೀರಮದಕರಿ ಆಗಿಯೆ ಹೊಳೆದರು. ಲೇಡಿ ಪೊಲೀಸ್ ಆಫೀಸರ್ ಅಂತ ಬಂದ್ರೇ ಹೆಸರು ಹೆಚ್ಚೆನೂ ಇಲ್ಲ. ಕನ್ನಡದಲ್ಲಿ ಅತಿ ಹೆಚ್ಚು ಪೊಲೀಸ್ ಆಫೀಸರ್ ಆಗಿಯೇ ಕಾಣಿಸಿಕೊಂಡವ್ರು, ಕನಸಿನ ರಾಣಿ ಮಾಲಾಶ್ರೀ ಅಂತಲೇ ಹೇಳಬೇಕು.ಅವರ ನಂತ್ರ ತುಪ್ಪದ ಬೆಡಗಿ ರಾಗಿಣಿ ಕೂಡ ಪೊಲೀಸ್ ಆಫೀಸರ್ ಪಾತ್ರವನ್ನ ಮಾಡಿದ್ದರು. ಆದರೆ ಇದೀಗ ರಿಟೈರ್ಡ್ ಪೊಲೀಸ್ ಆಫೀಸರ್ (Shivaji Surathkal-2 Movie Updates) ಮಗಳು ನಟಿ ಮೇಘನಾ ಗಾಂವ್ಕರ್ ಪೊಲೀಸ್ ಆಗಿ ಅಭಿನಯಿಸಿದ್ದಾರೆ.
ಶಿವಾಜಿ ಸುರತ್ಕಲ್-2 ದೀಪಾ ಕಾಮತ್ ಪಾತ್ರದ ಮೇಕಿಂಗ್ ಔಟ್
ದೀಪಾ ಕಾಮತ್ ಪಾತ್ರಕ್ಕೆ ಮೇಘನಾ ಸಿಕ್ಕಾಪಟ್ಟೆ ಸಿದ್ದತೆ ಮಾಡಿಕೊಂಡಿದ್ದರು. ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆಗೂ ಚರ್ಚೆ ಮಾಡಿದ್ದರು. ಅಪ್ಪನಿಂದ ಪೊಲೀಸ್ ಇನ್ವೆಸ್ಟಿಕೇಷನ್ ಬಗ್ಗೆ ತಿಳಿದುಕೊಂಡಿದ್ದರು. ಪೊಲೀಸ್ ಸಮವಸ್ತ್ರವನ್ನ ಧರಿಸೋ ಕುರಿತು ತಿಳಿದುಕೊಂಡಿದ್ದರು.
ಇಷ್ಟೆಲ್ಲ ತಯಾರಿ ಆದ್ಮೇಲೆನೆ ದೀಪಾ ಕಾಮತ್ ರೋಲ್‌ಗೆ ಮೇಘನಾ ರೆಡಿ ಆಗಿದ್ದರು. ಆದರೆ ಈ ಪಾತ್ರಕ್ಕೆ ರೆಡಿಯಾದ ರೀತಿ ಮತ್ತು ಯಾರೆಲ್ಲ ಹೆಲ್ಪ್ ಮಾಡಿದ್ರು ಅನ್ನೋದು ಅನೇಕರಿಗೆ ಗೊತ್ತಿಲ್ಲ. ಅದನ್ನ ತಿಳಿಸೋ ಒಂದು ವಿಡಿಯೋ ಇದೀಗ ರಿವೀಲ್ ಆಗಿದೆ.
ದೀಪಾ ಕಾಮತ್ ಪಾತ್ರಕ್ಕೆ ನಾನು ಹೇಗೆ ಸಿದ್ದಗೊಂಡೆ ಗೊತ್ತೇ?
ದೀಪಾ ಕಾಮತ್ ಪಾತ್ರಕ್ಕೆ ನಾನು ಹೇಗೆ ಸಿದ್ದಗೊಂಡೆ ಗೊತ್ತೇ? ಈ ಒಂದು ಪರಿಕಲ್ಪನೆಯ ಮೇಲೇನೆ ಮೇಘನಾ ಗಾಂವ್ಕರ್ ಒಂದು ಸ್ಪೆಷಲ್ ವಿಡಿಯೋ ಮಾಡಿದ್ದಾರೆ. ಟ್ವಿಟರ್‌ನ ತಮ್ಮ ಅಧಿಕೃತ ಪೇಜ್‌ನಲ್ಲಿ ಈ ವಿಡಿಯೋದ ಒಂದು ತುಣುಕು ರಿಲೀಸ್ ಮಾಡಿದ್ದಾರೆ.
ನಾನು ದೀಪಾ ಕಾಮತ್ ಹೇಗಾದೆ ಅನ್ನೋ ವಿಷಯವನ್ನ ಈ ಒಂದು ವಿಡಿಯೋದಲ್ಲಿ ಹೇಳಿದ್ದಾರೆ. ಪೊಲೀಸ್ ಸಮವಸ್ತ್ರವನ್ನ ಧರಿಸೋ ಮುನ್ನ ಹೇಗೆಲ್ಲ ಸಿದ್ದತೆ ಮಾಡಿಕೊಂಡೆ ಅನ್ನುವ ವಿಷಯವನ್ನ ಕೂಡ ಇದೇ ಒಂದು ವಿಡಿಯೋದಲ್ಲಿ ಮೇಘನಾ ತಿಳಿಸುತ್ತಲೇ ಹೋಗ್ತಾರೆ.
ಪೊಲೀಸ್ ರೋಲ್ ತಯಾರಿ ವಿಡಿಯೋ ಶೇರ್ ಮಾಡಿದ ಮೇಘನಾ
ಟ್ವಿಟರ್‌ನಲ್ಲಿ ಚಿಕ್ಕ ವಿಡಿಯೋ ನಿಮಗೆ ಸಿಕ್ಕರೆ, ಅದೇ ಟ್ವಿಟರ್ ಪೋಸ್ಟ್‌ನಲ್ಲಿ ಮೇಘನಾ ಗಾಂವ್ಕರ್ ಯುಟ್ಯೂಬ್ ಚಾನಲ್ ಲಿಂಕ್ ಕೂಡ ಇದೆ. ಇದನ್ನ ಓಪನ್ ಮಾಡಿದ್ರೆ ೯ ನಿಮಿಷದ ಒಂದು ವಿಡಿಯೋ ಸಿಗುತ್ತದೆ. ಇದರಲ್ಲಿ ದೀಪಾ ಕಾಮತ್ ಪಾತ್ರದ ಸಂಪೂರ್ಣ ವಿಡಿಯೋ ಮಾಹಿತಿ ನಿಮಗೆ ಸಿಗುತ್ತದೆ.
ಹೌದು, ದೀಪಾ ಕಾಮತ್ ಪಾತ್ರಕ್ಕೆ ಬೇಕಾಗೋ ತಯಾರಿ ಹೇಗಿತ್ತು ಅನ್ನೋದು ಇದರಲ್ಲಿ ಸಿಗುತ್ತದೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ನಟಿ ರಕ್ಷಿತಾ ಹೀಗೆ ಎಲ್ಲ ಸ್ಟಾರ್ ನಟಿಯರಿಗೆ ಹೇರ್ ಸ್ಟೈಲ್ ಮಾಡಿರೋ ಲತಾ ಅವರು ಇಲ್ಲಿ ನಿಮಗೆ ಪರಿಚಯ ಆಗುತ್ತಾರೆ. ಯಾಕೆಂದ್ರೆ, ಮೇಘನಾ ಅವರಿಗೆ ಇವರೇ ಹೇರ್ ಸ್ಟೈಲ್ ಮಾಡಿದ್ದಾರೆ.
ಪೊಲೀಸ್ ಆಫೀಸರ್ ದೀಪಾ ಕಾಮತ್ ಪಾತ್ರದ ಮೇಕಿಂಗ್ ವಿಡಿಯೋ ರಿಲೀಸ್
ಪೊಲೀಸ್ ಕಾಸ್ಟೂಮ್ ರೆಡಿ ಮಾಡಿರೋ ಕಾಸ್ಟೂಮರ್ ಲೋಕೇಶ್ ಪರಿಚಯವನ್ನ ಕೂಡ ನಟಿ ಮೇಘನಾ ಈ ವಿಡಿಯೋದಲ್ಲಿ ಮಾಡಿಕೊಡುತ್ತಾರೆ. ಇವರೇ ನೋಡಿ ನನ್ನ ಕಾಸ್ಟೂಮರ್ ಅಂತಲೂ ಮೇಘನಾ ಹೇಳುತ್ತಾರೆ. ಪೊಲೀಸ್ ಕಾಸ್ಟೂಮ್ ಧರಿಸಿಕೊಂಡ ಬಳಿಕ, ಬುಲೆಟ್ ಇಲ್ಲದ ಗನ್ ಇಟ್ಟುಕೊಂಡು ಶೂಟಿಂಗ್‌ಗೂ ಹೊರಟು ಹೋಗ್ತಾರೆ.
ಮೇಘನಾ ಗಾಂವ್ಕರ್ ತಮ್ಮ ಈ ವಿಡಿಯೋವನ್ನ ಕ್ಯಾರವಾನ್‌ನಲ್ಲಿಯೇ ಮಾಡಿದ್ದಾರೆ. ಅದನ್ನ ಇದೀಗ ಎಲ್ಲರ ಜೊತೆಗೂ ಹಂಚಿಕೊಂಡಿದ್ದಾರೆ. ಏಪ್ರಿಲ್-14 ರಂದು ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್ ಆಗಿದೆ.
ಇದನ್ನೂ ಓದಿ: Dhanya Ramkumar Movie: ಕೋರ್ಟ್ ರೂಮ್ ಡ್ರಾಮಾ ಸಿನಿಮಾದಲ್ಲಿ ರಾಜ್ ಮೊಮ್ಮಗಳು; ಧನ್ಯಾ ರಾಮ್‌ಕುಮಾರ್ Exclusive ಟಾಕ್!
ಜನರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಪೊಲೀಸ್ ಆಫೀಸರ್ ದೀಪಾ ಕಾಮತ್ ಪಾತ್ರಧಾರಿ ಮೇಘನಾ ಗಾಂವ್ಕರ್ ಕೂಡ ಸಿನಿಮಾದಲ್ಲಿ ತಮ್ಮದೇ ರೀತಿಯಲ್ಲಿ ಮಿಂಚಿದ್ದಾರೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ